ಜಿಮೇಲ್ ನ ಈ 10 ಸೆಟ್ಟಿಂಗ್ಸ್ ಗಳನ್ನು ನೀವು ಮಾಡಿಕೊಂಡಿದ್ದೀರಾ?

By Gizbot Bureau
|

ಕಳೆದ ಒಂದು ವರ್ಷದಲ್ಲಿ ಗೂಗಲ್ ವಿಶ್ವದ ಪ್ರಸಿದ್ಧ ಇಮೇಲೆ ಸೇವೆ ಜಿಮೇಲ್ ಗೆ ಸಾಕಷ್ಟು ಹೊಸ ಫೀಚರ್ ಗಳನ್ನು ಸೇರಿಸಿದೆ. ಇದೀಗ ನೀವು ಸೆಲ್ಫ್ ಡಿಸ್ಟ್ರಕ್ಟಿಂಗ್ ಇಮೇಲ್ ಗಳನ್ನು ಕಳಿಸಬಹುದು, ನೀವು ಕಳಿಸುವ ರಿಪ್ಲೈಗಳಿಗೆ ಪಾಸ್ ಕೋಡ್ ಗಳನ್ನು ಸೆಟ್ ಮಾಡಬಹುದು ಮತ್ತು ಇತ್ಯಾದಿ ಫೀಚರ್ ಗಳಿವೆ. ಜಿಮೇಲ್ ಬಗ್ಗೆ ನೀವು ತಿಳಿದುಕೊಂಡಿರದ ಕೆಲವು ಅಂಶಗಳು ಇಲ್ಲಿವೆ ನೋಡಿ.

ಇಮೇಲ್ ರೀಕಾಲ್ ಸಮಯವನ್ನು ಹೆಚ್ಚಿಸುವುದು

ಇಮೇಲ್ ರೀಕಾಲ್ ಸಮಯವನ್ನು ಹೆಚ್ಚಿಸುವುದು

ಏನಿದರ ಉಪಯೋಗ? ನೀವು ಇಮೇಲ್ ನ್ನು ಡ್ರಾಫಿಂಗ್ ಪ್ರೊಸೆಸ್ ನಲ್ಲಿರುವಾಗಲೇ ಸೆಂಡ್ ಮಾಡಿದ ಸಂದರ್ಬದಲ್ಲಿ ಇದು ನಿಮಗೆ ಬಳಕೆಗೆ ಬರುತ್ತದೆ ಅಥವಾ ನೀವಿನ್ನು ಮೆಸೇಜ್ ಕಳಿಸುವುದಕ್ಕೆ ಖಾತ್ರಿಯಾಗಿರದೇ ಇದ್ದಾಗ ಮೆಸೇಜ್ ಸೆಂಡ್ ಆದ ಸಂದರ್ಬದಲ್ಲಿ ಸಹಾಯಕ್ಕೆ ಬರುತ್ತದೆ. ಅಂಡೂ ಸಮಯವನ್ನು 30 ಸೆಕೆಂಡಿಗೆ ಹೆಚ್ಚಿಸಿಕೊಳ್ಳುವುದರಿಂದಾಗಿ ನಿಮಗೆ ಅಂಡೂ ಮಾಡುವುದಕ್ಕೆ ಸಮಯ ಸಿಗುತ್ತದೆ ಮತ್ತು ಇಮೇಲ್ ನ್ನು ನಿಮ್ಮ ಇನ್ ಬಾಕ್ಸ್ ಗೆ ಪುನಃ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಜಿಮೇಲ್ ನ ಸೆಟ್ಟಿಂಗ್ಸ್ ಟ್ಯಾಬ್ ನಲ್ಲಿ ಈ ಆಯ್ಕೆ ಲಭ್ಯವಾಗುತ್ತದೆ.

ಸೆಲ್ಫ್- ಡಿಸ್ಟ್ರಕ್ಟಿಂಗ್ ಇಮೇಲ್ ಕಳುಹಿಸಿ

ಸೆಲ್ಫ್- ಡಿಸ್ಟ್ರಕ್ಟಿಂಗ್ ಇಮೇಲ್ ಕಳುಹಿಸಿ

ಕಳೆದ ಈ ಫೀಚರ್ ನ್ನು ಜಿಮೇಲ್ ನಲ್ಲಿ ಪರಿಚಯಿಸಲಾಯಿತು. ಇದು ನಿಮಗೆ ಇಮೇಲ್ ಕಳುಹಿಸುವುದಕ್ಕೆ ಟೈಮರ್ ಸೆಟ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಈ ಟೈಮರ್ ವಿಸಿಬಲ್ ಆಗಿರುವುದಿಲ್ಲ. ರಿಸೀವ್ ಮಾಡಿದವರು ಓಪನ್ ಮಾಡಿದಾಗ ತೆರೆದುಕೊಳ್ಳುತ್ತದೆ. ಸ್ವಲ್ಪ ಸಮಯದ ನಂತರ ಅವರು ಈ ಇಮೇಲ್ ನ್ನು ಪುನಃ ತೆರೆಯುವುದಕ್ಕೆ ಅವಕಾಶವಿರುವುದಿಲ್ಲ. ಈ ಆಯ್ಕೆಯು ಇಮೇಲ್ ಕಂಪೋಸ್ ಮಾಡುವ ಜಾಗದ ಕೆಳಗಿನ ಲಾಕ್ ಐಕಾನ್ ನಲ್ಲಿ ಗಮನಿಸಬಹುದು.

ಇಮೇಲ್ ಗೆ ಎಸ್ಎಂಎಸ್ ಪಾಸ್ ಕೋಡ್ ಸೆಟ್ ಮಾಡುವುದು

ಇಮೇಲ್ ಗೆ ಎಸ್ಎಂಎಸ್ ಪಾಸ್ ಕೋಡ್ ಸೆಟ್ ಮಾಡುವುದು

ಇನ್ನೊಂದು ಲೇಯರ್ ಹೆಚ್ಚಿನ ಭದ್ರತೆಯನ್ನು ನೀವು ನಿಮ್ಮ ಜಿಮೇಲ್ ಅಕೌಂಟಿಗೆ ಸೆಟ್ ಮಾಡಿಕೊಳ್ಳಬಹುದು ಕಂಪೋಸ್ ಇಮೇಲ್ ನ ಲಾಕ್ ಐಕಾನ್ ನ್ನು ಟ್ಯಾಪ್ ಮಾಡುವ ಮೂಲಕವೇ ನೀವು ಈ ಆಯ್ಕೆಯನ್ನು ಗಮನಿಸಬಹುದು. ಎಸ್ಎಂಎಸ್ ಪಾಸ್ ಕೋಡ್ ಆಯ್ಕೆಯನ್ನು ಕ್ಲಿಕ್ಕಿಸಿ ಮತ್ತು ಈ ಆಯ್ಕೆಯು ಡೀಫಾಲ್ಟ್ ಆಗಿ "ನೋ ಎಸ್ಎಂಎಸ್ ಪಾಸ್ ಕೋಡ್" ನಲ್ಲಿ ಸೆಟ್ ಆಗಿರುತ್ತದೆ.

ಅನಗತ್ಯ ಇಮೇಲ್ ಚೈನ್ ಸಂವಾದವನ್ನು ಮ್ಯೂಟ್ ಮಾಡಿ

ಅನಗತ್ಯ ಇಮೇಲ್ ಚೈನ್ ಸಂವಾದವನ್ನು ಮ್ಯೂಟ್ ಮಾಡಿ

ಕೆಲವರು ಒಂದು ಮೇಲ್ ನಲ್ಲಿ ನಿಮ್ಮನ್ನು ಟ್ಯಾಗ್ ಮಾಡಿ ಬಿಡುತ್ತಾರೆ ಮತ್ತು ಇತರರು ಆ ಇಮೇಲ್ ಗೆ ರಿಪ್ಲೈ ಮಾಡಲು ಪ್ರಾರಂಭಿಸಿ ಬಿಡುತ್ತಾರೆ. ಪ್ರತಿ ಬಾರಿ ಹೊಸ ಇಮೇಲ್ ಬಂದಾಗಲೂ ಕೂಡ ಅದು ನಿಮಗೆ ಕಿರಿಕಿರಿ ಉಂಟು ಮಾಡುತ್ತದೆ. ಇಂತಹ ಅನಗತ್ಯ ಇಮೇಲ್ ಗಳನ್ನು ನೀವು ಮ್ಯೂಟ್ ಮಾಡುವುದಕ್ಕೆ ಜಿಮೇಲ್ ನಲ್ಲಿ ಅವಕಾಶವಿರುತ್ತದೆ.

ಒಂದೇ ಸಂವಾದದಲ್ಲಿ ನೋಡುವ ಬದಲು ಸಪರೇಟ್ ಆಗಿ ಇಮೇಲ್ ನೋಡಲು ಅವಕಾಶ

ಒಂದೇ ಸಂವಾದದಲ್ಲಿ ನೋಡುವ ಬದಲು ಸಪರೇಟ್ ಆಗಿ ಇಮೇಲ್ ನೋಡಲು ಅವಕಾಶ

ನೀವು ಇಮೇಲ್ ಥ್ರೆಡ್ ನ್ನು ಆಫ್ ಮಾಡಿ ಇಡುವುದಕ್ಕೆ ಅವಕಾಶವಿರುತ್ತದೆ ಮತ್ತು ಅವುಗಳನ್ನು ಸಪರೇಟ್ ಆಗಿ ನೋಡಬಹುದು. ಅದಕ್ಕಾಗಿ ಸೆಟ್ಟಿಂಗ್ಸ್ ನ > ಜನರಲ್ > ಕಾನ್ವರ್ಜೇಷನ್ ವ್ ನಲ್ಲಿ ಕಾಣಬಹುದು.

ಆಫ್ ಲೈನ್ ನಲ್ಲಿ ಅಂದರೆ ಇಂಟರ್ನೆಟ್ ಕನೆಕ್ಷನ್ ಇಲ್ಲದೇ ಇದ್ದಾಗಲೂ ಜಿಮೇಲ್ ಬಳಸಿ

ಆಫ್ ಲೈನ್ ನಲ್ಲಿ ಅಂದರೆ ಇಂಟರ್ನೆಟ್ ಕನೆಕ್ಷನ್ ಇಲ್ಲದೇ ಇದ್ದಾಗಲೂ ಜಿಮೇಲ್ ಬಳಸಿ

ನಿಮಗೆ ಈ ವಿಚಾರ ತಿಳಿಯದೇ ಇದ್ದಲ್ಲಿ ಇದೀಗ ಆಫ್ ಲೈನ್ ನಲ್ಲೂ ಕೂಡ ಜಿಮೇಲ್ ಬಳಸುವುದಕ್ಕೆ ಅವಕಾಶವಿರುತ್ತದೆ. ನಿಜವಾದ ಕೆಲಸವು ಡಿವೈಸ್ ಇಂಟರ್ನೆಟ್ ಕನೆಕ್ಷನ್ ನಲ್ಲಿ ಇದ್ದಾಗ ಮಾತ್ರವೇ ಆಗುತ್ತದೆ ಎಂಬುದು ದಿಟವೇ ಆಗಿದೆ. ಆದರೆ ಒಂದು ವೇಳೆ ಆಫ್ ಲೈನ್ ಮೋಡ್ ಸ್ವಿಚ್ ಆನ್ ಆಗಿದ್ದಾಗ ಜಿಮೇಲ್ ಆಕ್ಸಿಸ್ ಮಾಡುವುದಕ್ಕೆ ಅವಕಾಶವಿರುತ್ತದೆ. ಇಮೇಲ್ ಕಂಪೋಸ್ ಮಾಡಿ ಸೇವ್ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಈ ಆಯ್ಕೆಯನ್ನು ನೀವು ಸೆಟ್ಟಿಂಗ್ಸ್ ನ > ಯಲ್ಲಿ ಗಮನಿಸಬಹುದು.

ಜಿಮೇಲ್ ನಲ್ಲಿ ಇಮೇಲ್ ಪ್ರಿವ್ಯೂ

ಜಿಮೇಲ್ ನಲ್ಲಿ ಇಮೇಲ್ ಪ್ರಿವ್ಯೂ

ಔಟ್ ಲುಕ್ ನಲ್ಲಿ ಇರುವಂತೆಯೇ ಜಿಮೇಲ್ ನಲ್ಲೂ ಕೂಡ ಇಮೇಲ್ ಪ್ರಿವ್ಯೂ ನೋಡುವುದಕ್ಕೆ ಅವಕಾಶವಿರುತ್ತದೆ. ಅದಕ್ಕಾಗಿ ನೀವು ವ್ಯೂ ಸೆಟ್ಟಿಂಗ್ಸ್ ನ್ನು ಚೇಂಜ್ ಮಾಡಬೇಕು. ಅದನ್ನು ಆಕ್ಟಿವೇಟ್ ಮಾಡುವುದಕ್ಕಾಗಿ ಸೆಟ್ಟಿಂಗ್ಸ್ > ಅಡ್ವಾನ್ಸ್ಡ್ > ಅನೇಬಲ್ ಪ್ರಿವ್ಯೂ ಪೇನ್ ಮತ್ತು ಸೇವ್ ಚೇಂಜಸ್ ಎಂದು ಮಾಡಿ. ನಂತರ ಇನ್ ಬಾಕ್ಸ್ ಗೆ ತೆರಳಿ ಮತ್ತು ಮೇಲ್ಬಾಗದ ಕಾರ್ನರ್ ನಲ್ಲಿರುವು ವ್ಯೂ ಸೆಟ್ಟಿಂಗ್ಸ್ ನ್ನು ಕ್ಲಿಕ್ಕಿಸಿ.ಸೆಟ್ಟಿಂಗ್ಸ್ ನ್ನು ಆಕ್ಸಿಸ್ ಮಾಡಿದ ಜಾಗದಲ್ಲಿಯೇ ಇದು ಇರುತ್ತದೆ.

ಕ್ಲಸ್ಟರ್ ನ್ನು ಸರ್ಚ್ ಮಾಡಿ ಮತ್ತು ಡಿಲೀಟ್ ಮಾಡಿ ಮತ್ತು ಹೆಚ್ಚು ಜಾಗವನ್ನು ಸೃಷ್ಟಿಸಿ

ಕ್ಲಸ್ಟರ್ ನ್ನು ಸರ್ಚ್ ಮಾಡಿ ಮತ್ತು ಡಿಲೀಟ್ ಮಾಡಿ ಮತ್ತು ಹೆಚ್ಚು ಜಾಗವನ್ನು ಸೃಷ್ಟಿಸಿ

ಜಿಮೇಲ್ ನಲ್ಲಿ ಇಮೇಜ್ ನ್ನು ಹುಡುಕಾಡುವುದು ಮತ್ತು ಡಿಲೀಟ್ ಮಾಡುವುದು ಬಹಳ ಸುಲಭ. ನೀವು ಸರ್ಚ್ ಬಾರ್ ನ್ನು ಟ್ಯಾಪ್ ಮಾಡಿ ಮತ್ತು ಅಗತ್ಯ ಮಾಹಿತಿಯನ್ನು ಫಿಲ್ಟರ್ ನಲ್ಲಿ ಹಾಕಿ. ಆ ಮಾಹಿತಿಯ ಅನುಸಾರದಲ್ಲಿ ನೀವು ಇಮೇಲ್ ನ್ನು ಹುಡುಕಾಡಬಹುದು. ಯಾರು ಕಳುಹಿಸಿದ್ದು ಅಥವಾ ಇಮೇಲ್ ಸೈಜ್ ಇತ್ಯಾದಿಗಳ ಆಧಾರದಲ್ಲಿ ಹುಡುಕಾಟ ನಡೆಸಬಹುದು ಮತ್ತು ಸುಲಭದಲ್ಲಿ ಅವುಗಳನ್ನು ಡಿಲೀಟ್ ಮಾಡುವುದಕ್ಕೆ ಸಾಧ್ಯವಿದೆ. ಹಾಗಾಗಿ ಹೆಚ್ಚು ಜಾಗವನ್ನು ಸೃಷ್ಟಿ ಮಾಡಿಕೊಳ್ಳಬಹುದು.

ಪ್ರಿ-ಸೆಟ್ ರಿಪ್ಲೈ ಗಳನ್ನು ಸೆಂಡ್ ಮಾಡಿ

ಪ್ರಿ-ಸೆಟ್ ರಿಪ್ಲೈ ಗಳನ್ನು ಸೆಂಡ್ ಮಾಡಿ

ಒಂದೇ ರಿಪ್ಲೈಯನ್ನು ಹಲವು ಮಂದಿಗೆ ಕಳುಹಿಸುವ ಅಗತ್ಯತೆ ನಿಮಗಿದ್ದಲ್ಲಿ ಪ್ರಿಸೆಟ್ ರಿಪ್ಲೈ ಗಳನ್ನು ಸೆಟ್ ಮಾಡಿ ಇಡುವುದಕ್ಕೆ ಅವಕಾಶವಿರುತ್ತದೆ. ಇದು ಒಂದು ಸಲ ಸೆಟ್ ಮಾಡಿ ಇಡಬಹುದಾದ ಫೀಚರ್ ಆಗಿರುತ್ತದೆ. ಸೆಟ್ಟಿಂಗ್ಸ್- ಅಡ್ವಾನ್ಸ್ಡ್, ಕ್ಯಾನ್ಡ್ ರೆಸ್ಪಾನ್ಸ್ ನಲ್ಲಿ ನೀವು ಅಗತ್ಯವಾಗಿರುವುದನ್ನು ಟೈಪ್ ಮಾಡಿ ಸೆಟ್ ಮಾಡಬಹುದು.

ಸೋಷಿಯಲ್ ಮತ್ತು ಪ್ರಮೋಷನ್ ಟ್ಯಾಬ್ ನ್ನು ರಿಮೂವ್ ಮಾಡಿ

ಸೋಷಿಯಲ್ ಮತ್ತು ಪ್ರಮೋಷನ್ ಟ್ಯಾಬ್ ನ್ನು ರಿಮೂವ್ ಮಾಡಿ

ವಿಭಿನ್ನ ಇಮೇಲ್ ಗಳು ಒಂದೇ ಇಮೇಲ್ ಆಗಿ ಸಿಗುವಂತೆ ಸೆಟ್ ಮಾಡಬಹುದು. ನೀವು ವಿಭಿನ್ನ ಟ್ಯಾಬ್ಸ್ ಗಳನ್ನು ರಿಮೂವ್ ಮಾಡಬಹುದು ಮತ್ತು ಪ್ರತಿ ಟ್ಯಾಬ್ ನ್ನು ಕ್ಲಿಕ್ಕಿಸಿ ಸಪರೇಟ್ ಆಗಿ ಇಮೇಲ್ ಗಳನ್ನು ಡಿಲೀಟ್ ಮಾಡುವ ಅಗತ್ಯವಿಲ್ಲ. ಕೆಲವೊಮ್ಮೆ ಇದು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಸೆಟ್ಟಿಂಗ್ಸ್- ಕಾನ್ಫಿಗರ್ ಇನ್ಬಾಕ್ಸ್ ಆಪ್ಶನ್ ನಲ್ಲಿ ಈ ಆಯ್ಕೆಯನ್ನು ನೀವು ಗಮನಿಸಬಹುದು.

Best Mobiles in India

English summary
10 things you didn't know you can do on Gmail

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X