ರೋಮಿಂಗ್‌ ಇಲ್ಲ ಅದ್ರೂ ಕಾಲ್‌ ರೇಟ್‌ ಜಾಸ್ತಿ

Posted By: Staff

ಈ ವರ್ಷ ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಒಂದು ಹೊಸ ಕ್ರಾಂತಿಯೆ ಆಗಲಿದೆ. ಈಗಾಗ್ಲೇ ಕೇಂದ್ರ ಸರ್ಕಾರ ಟೆಲಿಕಾಂ ಕ್ಷೇತ್ರದಲ್ಲಿ ರೋಮಿಂಗ್‌ ತೆಗೆದು ಹಾಕುವುದಾಗಿ ಪ್ರಕಟಿಸಿದೆ. ಆದ್ರೆ ಮೊಬೈಲ್‌ ಕರೆ ದರ ಹೆಚ್ಚಾಗುವ ಸಾಧ್ಯತೆ ಇದೆ. ಇದಲ್ಲದೇ ಇನ್ನು ಕೆಲ ಟ್ರೆಂಡ್‌ಗಳು ಸಹ ಬದಲಾವಣೆಯಾಗಲಿದೆ. ಟೆಲಿಕಾಂ ಕ್ಷೇತ್ರದಲ್ಲಿ ಏನೇನಾಗುತ್ತದೆ ಎಂಬುದನ್ನು ಒಂದೊಂದಾಗಿ ನೋಡೋಣ.

 

 ರೋಮಿಂಗ್‌ ಇಲ್ಲ ಅದ್ರೂ ಕಾಲ್‌ ರೇಟ್‌ ಜಾಸ್ತಿ

 

ರೋಮಿಂಗ್‌ಗೆ ಗುಡ್‌ ಬೈ :

ನಾವು ನಮ್ಮ ರಾಜ್ಯ ಬಿಟ್ಟು ಬೇರೆ ರಾಜ್ಯಕ್ಕೆ ಹೋದರೆ ಸಾಕು ರೋಮಿಂಗ್‌ ಕಿರಿಕಿರಿ ಇತ್ತು. ಆದರೆ ಇನ್ನು ಮುಂದೆ ಈ ಸಮಸ್ಯೆ ಇರುವುದಿಲ್ಲ. ಇದೇ ಮಾರ್ಚ್‌ನಿಂದ ದೇಶಲ್ಲಿ ರೋಮಿಂಗ್ ದರವನ್ನು ಕೇಂದ್ರ ಸರ್ಕಾರ ತೆಗೆದು ಹಾಕಲಿದೆ. ನಾವು ಎಲ್ಲಿಯೂ ಮಾತನಾಡಿದರೂ ಒಂದೇ ದರದಲ್ಲಿ ಮಾತನಾಡಬಹುದು. ರಾಷ್ಟೀಯ ದೂರಸಂಪರ್ಕ ನೀತಿಯ ಆಡಿಯಲ್ಲಿ ಕೇಂದ್ರ ಸರ್ಕಾರ ಬದಲಾವಣೆ ಮಾಡಲಿದ್ದು, ಕಳೆದ ವರ್ಷವೇ ಈ ನೀತಿಯನ್ನು ಘೋಷಿಸಿತ್ತು.

ಮೊಬೈಲ್‌ ಕರೆ ದರ ಏರಿಕೆ:

ಈ ವರ್ಷ ನಮೆಗೆಲ್ಲಾ ಬ್ಯಾಡ್‌ ನ್ಯೂಸ್‌ ಏನಪ್ಪ ಅಂದ್ರೆ ಮೊಬೈಲ್‌ ಕರೆ ದರದಲ್ಲಿ ಏರಿಕೆಯಾಗಲಿದೆ. ವಿಶ್ವದಲ್ಲೇ ಭಾರತದಲ್ಲೇ ಅತಿ ಕಡಿಮೆ ಕರೆ ದರ ಇದೆ. ಕೆಲ ಕಂಪೆನಿಗಳಿಗೆ ಈಗಾಗ್ಲೇ ಕೇದ್ರ ಸರ್ಕಾರಕ್ಕೆ ದರ ಏರಿಕೆಯ ಪ್ರಸ್ತಾವವನ್ನು ಕಳುಹಿಸಿದ್ದಾರೆ. ಇದರ ಜೊತೆಯಲ್ಲೇ ಮಾರ್ಚ್‌ನಲ್ಲಿ ರೋಮಿಂಗ್‌ ದರವನ್ನು ಕೇಂದ್ರ ಸರ್ಕಾರ ತೆಗೆಯಲಿದ್ದು ಇದು ಟೆಲಿಕಾಂ ಕಂಪೆನಿಗಳಿಗೆ ಮತ್ತಷ್ಟು ಹೊಡೆತ ನೀಡಲಿದೆ. ಹಾಗಾಗಿ ನಮ್ಮ ಮೊಬೈಲ್‌ ದರಗಳು ಏರಿಕೆಯಾಗುವ ಸಾಧ್ಯತೆಯಿದೆ.

3G ದರದಲ್ಲಿ ಇಳಿಕೆ :

ಕರೆ ದರ ಹೆಚ್ಚಳವಾದ್ರೂ ಈ ವರ್ಷ 3G ದರಲ್ಲಿ ಇಳಿಕೆಯಾಗಲಿದೆ. 3G ಸೇವೆ ನಮಗೆ ಮತ್ತಷ್ಟು ಕಡಿಮೆ ದರದಲ್ಲಿ ಸಿಗಲಿದ್ದು. ಎಲ್ಲಾ ನಗರಗಳಿಗೂ 3G ಸಂಪರ್ಕ ಸಿಗಲಿದೆ. ಕಂಪೆನಿಗಳು ಆಕರ್ಷಕ 3G ಪ್ಯಾಕ್‌ಗಳನ್ನು ನೀಡುವ ಸಾಧ್ಯತೆಯಿದೆ.

ರಾಷ್ಟ್ರವ್ಯಾಪಿ ಒಂದೇ ಮೊಬೈಲ್‌ ನಂ:

ಇಲ್ಲಿಯವರಗೆ ನಾವು ಕೇವಲ ಒಂದು ರಾಜ್ಯದಲ್ಲಿದ್ದರೆ ಮಾತ್ರ ಮೊಬೈಲ್‌ ನಂಬರನ್ನು ಬೇರೆ ಕಂಪೆನಿಗೆ ವರ್ಗಾಯಿಸಬಹುದಿತ್ತು. ನಮ್ಮ ರಾಜ್ಯ ಬಿಟ್ಟು ಬೇರೆ ರಾಜ್ಯದಲ್ಲಿ ವಾಸ್ತವ್ಯ ಹೂಡಿದ್ರೆ ಈ ರೀತಿ ನಂಬರ್‌ನ್ನು ಬದಲಾಯಿಸಲು ಅವಕಾಶವಿರಲಿಲ್ಲ. ಆದರೆ ಇನ್ನು ಮುಂದೆ ನಾವು ಕರ್ನಾಟಕದಿಂದ ದೆಹಲಿಗೆ ವಾಸ್ತವ್ಯ ಬದಲಾಯಿಸಿದ್ದರೂ ನಾವು ನಮ್ಮ ರಾಜ್ಯದಲ್ಲಿ ಹೊಂದಿರುವ ನಂಬರನ್ನೇ ಬಳಸಬಹುದು.

4G ಸಂಪರ್ಕ ವಿಸ್ತರಣೆ:

ದೇಶದ ಮಹಾನಗರಗಳಿಗೆ ಈ ವರ್ಷ 4G ಸಂಪರ್ಕ ವಿಸ್ತರಣೆಯಾಗಲಿದೆ. ಇದರಿಂದ ಗ್ರಾಹಕರು ಹೆಚ್ಚಿನ ವೇಗದಲ್ಲಿ ಇಂಟರ್‌ನೆಟ್‌ನ್ನು ಬಳಸಬಹುದಾಗಿದೆ.ಏರ್‌ಟೆಲ್‌ ಕಂಪೆನಿ ಬೆಂಗಳೂರು, ಪುಣೆ, ಕೋಲ್ಕತ್ತಾದ ಜನತೆಗೆ 4G ಸಂಪರ್ಕ ನೀಡಿದೆ. ಕೆಲವೊಂದು ವದಂತಿಗಳ ಪ್ರಕಾರ ಏರ್‌ಸೆಲ್‌ ಕಂಪೆನಿಗಳು ಚೆನ್ನೈನಲ್ಲಿ 4G ಸಂಪರ್ಕ ನೀಡುವ ಸಾಧ್ಯತೆಯಿದೆ.

ಫೇಸ್‌ಬುಕ್‌ ಆಫೀಸ್‌ ಒಳನೋಟ ನೋಡಿ

ಗೂಗಲ್‌ ಕಚೇರಿಗಳ ಒಳನೋಟ ಹೀಗಿದೆ ನೋಡಿ!

 

 

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot