ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಏರ್‌ಟೆಲ್ 5G ಪ್ಲಸ್ ಸೇವೆ ಪ್ರಾರಂಭ!

|

ಏರ್‌ಟೆಲ್ ಟೆಲಿಕಾಂ ಬೆಂಗಳೂರಿಗರಿಗೆ ಗುಡ್‌ ನ್ಯೂಸ್‌ ನೀಡಿದೆ. ಈಗಾಗಲೇ ದೇಶದ ಕೆಲವು ಆಯ್ದ ನಗರಗಳಲ್ಲಿ 5G ಪ್ರಾರಂಭಿಸಿರುವ ಏರ್‌ಟೆಲ್‌, ಇದೀಗ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5G ಪ್ಲಸ್ ಸೇವೆ ಶುರುಮಾಡಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್‌ನಲ್ಲಿ ಏರ್‌ಟೆಲ್ 5G ಪ್ಲಸ್ ಪ್ರಾರಂಭಿಸುವುದಾಗಿ ಘೋಷಿಸಿದೆ. ಇದರಲ್ಲಿ ಟರ್ಮಿನಲ್ 2 ರಲ್ಲಿ ಏರ್‌ಟೆಲ್ 5G ಪ್ಲಸ್ ಸೇವೆ ಲಭ್ಯವಾಗಲಿದೆ ಎಂದು ಘೋಷಿಸಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಟೆಲಿಕಾಂ ಬೆಂಗಳೂರು KIAB / BLR ಏರ್‌ಪೋರ್ಟ್ ನಲ್ಲಿ ಏರ್‌ಟೆಲ್‌ನಲ್ಲಿ 5G ಪ್ಲಸ್ ಸೇವೆ ಪ್ರಾರಂಭಿಸಿದೆ. ಈ ಮೂಲಕ ಅಲ್ಟ್ರಾಫಾಸ್ಟ್ 5G ನೆಟ್‌ವರ್ಕ್‌ ಸೇವೆಗೆ ಪ್ರವೇಶವನ್ನು ಪಡೆಯುವ ಭಾರತದ ಮೊದಲ ವಿಮಾನ ನಿಲ್ದಾಣವಾಗಿ ಗುರುತಿಸಿಕೊಂಡಿದೆ. ಈ ಮೂಲಕ ವಿಮಾನ ನಿಲ್ದಾಣದಲ್ಲಿ 5G ಪ್ಲಸ್ ಸೇವೆಯನ್ನು ಗ್ರಾಹಕರು ಪ್ರವೇಶಿಸಲು ಸಾಧ್ಯವಾಗಲಿದೆ. ತಮ್ಮ 4G ಸಿಮ್‌ನಲ್ಲಿಯೇ 5G ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ಹಾಗಾದ್ರೆ ಏರ್‌ಟೆಲ್‌ 5G ಪ್ಲಸ್‌ ಸೇವೆಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರವೇಶಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಏರ್‌ಟೆಲ್‌

ಏರ್‌ಟೆಲ್‌ ಟೆಲಿಕಾಂ ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 5G ಪ್ಲಸ್‌ ಸೇವೆಯನ್ನು ಪ್ರವೇಶಿಸಬಹುದಾಗಿದೆ. ಇದರಿಂದ ಗ್ರಾಹಕರು ಆಗಮನ ಮತ್ತು ನಿರ್ಗಮನ ಟರ್ಮಿನಲ್‌ಗಳು, ಲಾಂಜ್‌ಗಳು, ಬೋರ್ಡಿಂಗ್ ಗೇಟ್‌ಗಳು, ವಲಸೆ ಮತ್ತು ವಲಸೆ ಪ್ರದೇಶಗಳು, ಭದ್ರತಾ ಗೇಟ್‌ಗಳು, ಬ್ಯಾಗೇಜ್ ಕ್ಲೈಮ್ ಬೆಲ್ಟ್ ಪ್ರದೇಶಗಳಲ್ಲಿ 5G ಪ್ಲಸ್ ಸೇವೆ ಅನುಭವಿಸಬಹುದಾಗಿದೆ. 5G ಸ್ಮಾರ್ಟ್ ಫೋನ್‌ಗಳನ್ನು ಹೊಂದಿರುವ ಎಲ್ಲಾ ಏರ್‌ಟೆಲ್ ಗ್ರಾಹಕರು ತಮ್ಮ ಅಸ್ತಿತ್ವದಲ್ಲಿರುವ ಡೇಟಾ ಯೋಜನೆಗಳಲ್ಲಿ ಹೆಚ್ಚಿನ ವೇಗದ ಏರ್‌ಟೆಲ್ 5G ಪ್ಲಸ್ ಅನ್ನು ಆನಂದಿಸಬಹುದಾಗಿದೆ.

ಏರ್‌ಟೆಲ್

ಇನ್ನು ವಿಮಾನ ನಿಲ್ದಾಣದಲ್ಲಿ ಏರ್‌ಟೆಲ್ 5G ಪ್ಲಸ್‌ ಸೇವೆ ಪಡೆಯುವುದಕ್ಕಾಗಿ ಏರ್‌ಟೆಲ್‌ 4G ಸಿಮ್ 5G ಅನ್ನು ಸಕ್ರಿಯಗೊಳಿಸಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಏರ್‌ಟೆಲ್‌ ಸಿಮ್ ಅನ್ನು ಬದಲಾಯಿಸುವ ಅಗತ್ಯವಿಲ್ಲ. ಇದರಿಂದ ಟರ್ಮಿನಲ್‌ನಲ್ಲಿರುವಾಗ, ಗ್ರಾಹಕರು ಈಗ ಹೈ-ಡೆಫಿನಿಷನ್ ವೀಡಿಯೊ ಸ್ಟ್ರೀಮಿಂಗ್, ಗೇಮಿಂಗ್, ಮಲ್ಟಿಪಲ್ ಚಾಟಿಂಗ್, ಫೋಟೋಗಳ ತ್ವರಿತ ಅಪ್‌ಲೋಡ್ ಮತ್ತು ಹೆಚ್ಚಿನವುಗಳಿಗೆ ಸೂಪರ್‌ಫಾಸ್ಟ್ ಪ್ರವೇಶವನ್ನು ಪ್ರವೇಶಿಸಬಹುದಾಗಿದೆ. ಇದಕ್ಕಾಗಿ BIAL ನ ಅಧಿಕಾರಿಗಳು ಬೆಂಬಲ ನೀಡಿದ್ದಾರೆ ಎಂದು ಏರ್‌ಟೆಲ್‌ ಹೇಳಿಕೊಂಡಿದೆ.

ಡಿಜಿಟಲ್

ಇದೇ ಸಮಯದಲ್ಲಿ ನಾವು ವಿಶ್ವ ದರ್ಜೆಯ ಭೌತಿಕ ಮೂಲಸೌಕರ್ಯವನ್ನು ಒದಗಿಸುವುದರ ಜೊತೆಗೆ, ನಮ್ಮ ಫ್ಲೈಯರ್‌ಗಳಿಗೆ ಅತ್ಯಾಧುನಿಕ ಡಿಜಿಟಲ್ ಮೂಲಸೌಕರ್ಯವನ್ನು ಸಕ್ರಿಯಗೊಳಿಸಲು ನಾವು ಮುಂಚೂಣಿಯಲ್ಲದ್ದೇವೆ ಎಂಬ ಮಾತನ್ನು ಏರ್‌ಟೆಲ್‌ ಹೇಲಿದೆ. ಇದಲ್ಲದೆ ಏರ್‌ಟೆಲ್ 5G ಪ್ಲಸ್ ಸೇವೆಯೊಂದಿಗೆ ವೈರ್ ಮಾಡಲಾದ ದೇಶದ ಮೊದಲ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಬೆಂಗಳೂರು ವಿಮಾನ ನಿಲ್ದಾಣ ಪಾತ್ರವಾಗಿದೆ.

ಏರ್‌ಟೆಲ್‌

ಇನ್ನು ದೇಶದಲ್ಲಿ 5G ಸೇವೆ ಶುರುವಾದ ನಂತರ ಏರ್‌ಟೆಲ್‌ ಸಾಕಷ್ಟು ವೇಗವಾಗಿ 5G ಸೇವೆ ನೀಡುವುದಕ್ಕೆ ಮುಂದಾಗಿದೆ. ಅದರಂತೆ ಏರ್‌ಟೆಲ್ ತನ್ನ ನೆಟ್‌ವರ್ಕ್‌ನಲ್ಲಿ ಒಂದು ಮಿಲಿಯನ್ ಅಧಿಕ ಬಳಕೆದಾರರಿಗೆ 5G ಸೇವೆಯನ್ನು ನೀಡಿದೆ ಎನ್ನಲಾಗಿದೆ. ಇದಲ್ಲದೆ ಈಗಾಗಲೇ ಏರ್‌ಟೆಲ್‌ ಟೆಲಿಕಾಂ ಆಪರೇಟರ್ ಹಂತಹಂತವಾಗಿ 5G ಸೇವೆಗಳನ್ನು ಹೊರತರುತ್ತಿದೆ. ಈ ತಿಂಗಳ ಆರಂಭದಲ್ಲಿ, ಏರ್‌ಟೆಲ್ ದೆಹಲಿ, ಮುಂಬೈ ಚೆನ್ನೈ, ಬೆಂಗಳೂರು, ಹೈದರಾಬಾದ್, ಸಿಲಿಗುರಿ, ನಾಗ್ಪುರ ಮತ್ತು ವಾರಣಾಸಿಯಲ್ಲಿ 5G ಸೇವೆಗಳನ್ನು ಪ್ರಾರಂಭಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ನಗರ ಪ್ರದೇಶಗಳಿಗೆ ವಿಸ್ತರಣೆಯಾಗುವ ಸಾಧ್ಯತೆಯಿದೆ.

ಏರ್‌ಟೆಲ್‌

ಏರ್‌ಟೆಲ್‌ ಕಂಪನಿಯು ಪ್ರಸ್ತುತ ವೇಗಕ್ಕಿಂತ 20 ರಿಂದ 30 ಪಟ್ಟು ಹೆಚ್ಚಿನ ವೇಗವನ್ನು ನೀಡುತ್ತದೆ, ಜೊತೆಗೆ ಅದ್ಭುತ ಧ್ವನಿ ಅನುಭವ ಮತ್ತು ಸೂಪರ್-ಫಾಸ್ಟ್ ಕರೆ ಸಂಪರ್ಕವನ್ನು ನೀಡುತ್ತಿದೆ. ಇದರಿಂದ 5G ಸ್ಮಾರ್ಟ್‌ಫೋನ್‌ಗಳನ್ನು ಹೊಂದಿರುವ ಗ್ರಾಹಕರು ತಮ್ಮ ಅಸ್ತಿತ್ವದಲ್ಲಿರುವ ಡೇಟಾ ಯೋಜನೆಗಳಲ್ಲಿ ಹೆಚ್ಚಿನ ವೇಗದ ಏರ್‌ಟೆಲ್ 5G ಪ್ಲಸ್ ಸೇವೆಗೆ ಪ್ರವೇಶ ಪಡೆಯಬಹುದು. ಮುಂದಿನ ವರ್ಷದ ಅಂತ್ಯದ ವೇಳೆಗೆ ದೇಶದ ಎಲ್ಲಾ ಪ್ರದೇಶಗಳಲ್ಲಿಯೂ 5G ಸೇವೆ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

Best Mobiles in India

English summary
Airtel 5G Plus services launched at Bengaluru airport

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X