ಚಂದದಾರರಿಗೊಂದು ಪತ್ರ ಬರೆದ ಏರ್‌ಟೆಲ್‌ ಸಿಇಒ! ಪತ್ರದಲ್ಲಿ ಏನಿದೆ ಗೊತ್ತಾ?

|

ಭಾರತದಲ್ಲಿ 5G ನೆಟ್‌ವರ್ಕ್‌ ಸೇವೆಗಳು ಲಭ್ಯವಾಗುವ ಕಾಲ ಸನ್ನಿಹಿತವಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಎಲ್ಲಾ ಟೆಲಿಕಾಂ ಕಂಪೆನಿಗಳು ಕಾರ್ಯೋನ್ಮುಖವಾಗಿವೆ. ಮುಂಚೂಣಿ ಟೆಲಿಕಾಂ ಆಪರೇಟರ್‌ಗಳಾದ ಏರ್‌ಟೆಲ್‌ ಮತ್ತು ಜಿಯೋ ದೀಪಾವಳಿ ವೇಳೆಗೆಲ್ಲಾ ಭಾರತದಲ್ಲಿ 5G ನೆಟ್‌ವರ್ಕ್‌ ಪ್ರಾರಂಭಿಸುವುದಾಗಿ ಹೇಳಿವೆ. ಇದರ ನಡುವೆ ಏರ್‌ಟೆಲ್‌ ಟೆಲಿಕಾಂ ತನ್ನ ಗ್ರಾಹಕರಿಗೆ ಪತ್ರವೊಂದನ್ನು ಬರೆದಿದೆ ಎಂದು ವರದಿಯಾಗಿದೆ. ಇನ್ನು ಈ ಪತ್ರದಲ್ಲಿ 5G ನೆಟ್‌ವರ್ಕ್‌ ಸೇವೆಯನ್ನ ಬಯಸುವ ಗ್ರಾಹಕರು 5G ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಗ್ರೇಡ್‌ ಆಗುವಂತೆ ಸೂಚನೆ ನೀಡಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಟೆಲಿಕಾಂ ತನ್ನ ಬಳಕೆದಾರರಿಗೆ ಪತ್ರವೊಂದನ್ನು ಬರೆದಿದೆ ಎಂದು ದಿ ಎಕಾನಾಮಿಕ್‌ ಟೈಮ್ಸ್‌ ವರದಿ ಮಾಡಿದೆ. ಈ ವರದಿಯಲ್ಲಿ ಏರ್‌ಟೆಲ್ ಸಿಇಒ ಗೋಪಾಲ್ ವಿಟ್ಟಲ್ ಅವರು ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವವರು 5G ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳನ್ನು ಆಯ್ಕೆ ಮಾಡುವುದು ಉತ್ತಮ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಬಳಕೆದಾರರು ತಮ್ಮ ಸ್ಥಳವು ಏರ್‌ಟೆಲ್‌ನ 5G ಸೇವೆಗಳನ್ನು ಬೆಂಬಲಿಸುತ್ತದೆಯೆ ಎಂದು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ನಲ್ಲಿ ಪರಿಶೀಲಿಸಲು ಸೂಚಿಸಲಾಗಿದೆ. ಹಾಗಾದ್ರೆ ಭಾರತದಲ್ಲಿ 5G ಸೇವೆ ನೀಡುವುದಕ್ಕು ಮುನ್ನ ಏರ್‌ಟೆಲ್‌ ಬರೆದ ಪತ್ರದಲ್ಲಿ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌

ಏರ್‌ಟೆಲ್‌ ಟೆಲಿಕಾಂ ತನ್ನ ಬಳಕೆದಾರರಿಗೆ 5G ಬೆಂಬಲಿಸುವ ಸ್ಮಾರ್ಟ್‌ಫೋನ್‌ಗಳಿಗೆ ಅಪ್‌ಗ್ರೇಡ್‌ ಆಗುವಂತೆ ಸೂಚಿಸಿದೆ. ಈಗಾಗಲೇ ಭಾರತದಲ್ಲಿ 5G ಸೇವೆಗಳನ್ನು ಸದ್ಯದಲ್ಲಿಯೇ ಪ್ರಾರಂಭಿಸುವುದಾಗಿ ಏರ್‌ಟೆಲ್‌ ಹೇಳಿದೆ. ಇದರಿಂದ ಏರ್‌ಟೆಲ್‌ ಬರೆದಿರುವ ಈ ಪತ್ರ ಸಾಕಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ. ಏಕೆಂದರೆ 5G ನೆಟ್‌ವರ್ಕ್‌ನ ಬೆಂಬಲವನ್ನು ಪಡೆದುಕೊಳ್ಳಬೇಕಾದರೆ 5G ಬೆಂಬಲಿಸುವ ಸ್ಮಾರ್ಟ್‌ಫೊನ್‌ ಹೊಂದಿರುವುದು ಬಹುಮುಖ್ಯವಾಗಿದೆ. ಬಹುಶಃ ದೀಪಾವಳಿಗೂ ಮೊದಲು ಏರ್‌ಟೆಲ್‌ 5G ಸೇವೆಗಳು ಪ್ರಾರಂಭವಾಗಲಿದೆ.

5G

ಇನ್ನು ಏರ್‌ಟೆಲ್‌ನ 5G ಸೇವೆಗಳು ಡಿಸೆಂಬರ್ 2022 ರ ವೇಳೆಗೆ ಭಾರತದ ಎಲ್ಲಾ ಪ್ರಮುಖ ಮೆಟ್ರೋಪಾಲಿಟನ್ ನಗರಗಳಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಪ್ರಸ್ತುತ ನಾವು "ಒಂದು ತಿಂಗಳೊಳಗೆ ನಮ್ಮ 5G ಸೇವೆಗಳನ್ನು ಪ್ರಾರಂಭಿಸಲು ನಾವು ನಿರೀಕ್ಷಿಸುತ್ತೇವೆ. ಡಿಸೆಂಬರ್ ವೇಳೆಗೆ, ನಾವು ಪ್ರಮುಖ ಮಹಾನಗರಗಳಲ್ಲಿ 5G ವ್ಯಾಪ್ತಿಯನ್ನು ಹೊಂದಿರಬೇಕು ಎಂದು ಕೊಂಡಿದ್ದೇವೆ. ನಂತರ ನಾವು ಇಡೀ ದೇಶವನ್ನು ಆವರಿಸಲು ವೇಗವಾಗಿ ವಿಸ್ತರಿಸುತ್ತೇವೆ ಎಂದು ಏರ್‌ಟೆಲ್ ಸಿಇಒ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಏರ್‌ಟೆಲ್‌

ಇದಲ್ಲದೆ ಏರ್‌ಟೆಲ್‌ ಗ್ರಾಹಕರಿಗಾಗಿ ಏರ್‌ಟೆಲ್ ಸಿಮ್ ಅನ್ನು ಈಗಾಗಲೇ 5Gಗೆ ಆಕ್ಟಿವ್‌ ಮಾಡಲಾಗಿದೆ. ಆದ್ದರಿಂದ ನಿಮ್ಮ 5G ಸ್ಮಾರ್ಟ್ ಫೋನ್‌ನಲ್ಲಿ 5G ಸಿಮ್‌ ಅನ್ನು ಬಳಸಬಹುದಾಗಿದೆ. ಆದರಿಂದ ನೀವು ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವಾಗ 5G ಸ್ಮಾರ್ಟ್‌ಫೋನ್‌ಗಳನ್ನು ಆಯ್ಕೆ ಮಾಡಿ ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೆ ಮುಂದಿನ ವರ್ಷಗಳಲ್ಲಿ ಇಡೀ ದೇಶದಾದ್ಯಂತ ತಮ್ಮ 5G ಸೇವೆಯನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.

ಏರ್‌ಟೆಲ್‌ 5G ನೆಟ್‌ವರ್ಕ್ ನಿಮ್ಮ ನಗರದಲ್ಲಿ ಲಭ್ಯವಿದೆಯೇ ಅಂತಾ ತಿಳಿಯೋದು ಹೇಗೆ?

ಏರ್‌ಟೆಲ್‌ 5G ನೆಟ್‌ವರ್ಕ್ ನಿಮ್ಮ ನಗರದಲ್ಲಿ ಲಭ್ಯವಿದೆಯೇ ಅಂತಾ ತಿಳಿಯೋದು ಹೇಗೆ?

ಏರ್‌ಟೆಲ್ ಟೆಲಿಕಾಂ ಈ ಮೊದಲೇ ಹೇಳಿದಂತೆ, ಭಾರತದಲ್ಲಿ ತನ್ನ 5G ಸೇವೆಗಳನ್ನು ಹಂತಹಂತವಾಗಿ ಪ್ರಾರಂಭಿಸಲಿದೆ. ಅದರಂತೆ ಮೊದಲಿಗೆ ದೇಶದ ಕೆಲವು ಆಯ್ದ ನಗರಗಳಲ್ಲಿ ಮಾತ್ರ 5G ನೆಟ್‌ವರ್ಕ್‌ ಅನ್ನು ಪರಿಚಯಿಸಲಿದೆ. ನಂತರ ಹಂತಹಂತವಾಗಿ ದೇಶದ ಮೂಲೆ ಮೂಲೆಗೆ 5G ನೆಟ್‌ವರ್ಕ್‌ ತಲುಪಿಸುವ ವ್ಯವಸ್ಥೆ ಮಾಡಲಿದೆ. ಆದರಿಂದ ಏರ್‌ಟೆಲ್ ಬಳಕೆದಾರರು ತಮ್ಮ ನಗರದಲ್ಲಿ 5ಜಿ ನೆಟ್‌ವರ್ಕ್ ಲಭ್ಯತೆಯ ಬಗ್ಗೆ ಏರ್‌ಟೆಲ್ ಥ್ಯಾಂಕ್ಸ್ ಆ್ಯಪ್‌ನಲ್ಲಿ ಪರಿಶೀಲಿಸಬಹುದು. ಈ ಫೀಚರ್‌ 5G ನೆಟ್‌ವರ್ಕ್‌ ಪ್ರಾರಂಭವಾದ ನಂತರ ಏರ್‌ಟೆಲ್‌ ಥ್ಯಾಂಕ್ಸ್‌ ಅಪ್ಲಿಕೇಶನ್‌ನಲ್ಲಿ ಲಭ್ಯವಾಗಲಿದೆ ಎಂದು ಏರ್‌ಟೆಲ್ ಸಿಇಒ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Best Mobiles in India

English summary
Airtel CEO Gopal Vittal has urged users to look for a 5G-enabled smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X