ಜಿಯೋ ಗೆ ಸ್ಪರ್ಧೆಯೊಡ್ಡಲು ಏರ್ ಟೆಲ್ ನಿಂದ VoLTE-ಅನೇಬಲ್ಡ್ ಸ್ಮಾರ್ಟ್ ಫೋನ್ ಬಿಡುಗಡೆಗೆ ಪ್ರಯತ್ನ

|

ಜಿಯೋ ಭಾರತೀಯ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಬ್ಯುಸಿನೆಸ್ ನ ರೂಪುರೇಷೆಯನ್ನೇ ಬದಲಾಯಿಸಿಬಿಟ್ಟಿದೆ. ಇದರ ಕೈಗೆಟುಕುವ ಬೆಲೆಯ ಡಾಟಾ ಪ್ಲಾನ್ ಗಳು ಮತ್ತು ಅನಿಯಮಿತ ಕರೆಗಳ ಬೆನಿಫಿಟ್ ಗಳು ಕೆಲವು ಇತರೆ ಟೆಲಿಕಾಂ ಕಂಪೆನಿಗಳು ದೊಡ್ಡ ಮಟ್ಟದ ಗಂಭೀರ ಸ್ಪರ್ಧೆಯನ್ನುಂಟುಮಾಡಿದೆ. ಏರ್ ಟೆಲ್, ವಡಾಫೋನ್ ನಂತಹ ಕಂಪೆನಿಗಳ ವಿರುದ್ಧ ರಿಲಯನ್ಸ್ ಜಿಯೋ ಹೈಯರ್ ರೆವಿನ್ಯೂ ಪರ್ ಯ್ಯೂಸರ್ (ARPU ) ಅಂದರೆ ವ್ಯಕ್ತಿಗತ ಆದಾಯವನ್ನು ಅಧಿಕಗೊಳಿಸಿಕೊಳ್ಳಲು ಇದು ನೆರವಾಗಿದೆ.

ಜಿಯೋಗೆ ಸ್ಪರ್ಧೆಯೊಡ್ಡಲು ಸಜ್ಜಾದ ಏರ್ ಟೆಲ್ ವೋಲ್ಟ್ ಫೋನ್:

ಜಿಯೋಗೆ ಸ್ಪರ್ಧೆಯೊಡ್ಡಲು ಸಜ್ಜಾದ ಏರ್ ಟೆಲ್ ವೋಲ್ಟ್ ಫೋನ್:

ಏರ್ ಟೆಲ್ ಇದಗ 4ಜಿ ರೇಸ್ ನಲ್ಲಿ ಜಿಯೋವನ್ನು ಹಿಂದಿಕ್ಕಬೇಕು ಎಂದು ನಿರ್ಧರಿಸಿದೆ. ಹಾಗಾಗಿ ಏರ್ ಟೆಲ್ ಭಾರತದಲ್ಲಿ ಸಸ್ತಾವಾಗಿರುವ VoLTE ಫೋನ್ ಗಳನ್ನು ಬಿಡುಗಡೆಗೊಳಿಸಲು ಪ್ಲಾನ್ ಮಾಡುತ್ತಿದೆ.

150 ಮಿಲಿಯನ್ ಚಂದಾದಾರರು 4ಜಿಯೆಡೆಗೆ:

150 ಮಿಲಿಯನ್ ಚಂದಾದಾರರು 4ಜಿಯೆಡೆಗೆ:

ಈ ಹೆಜ್ಜೆಯು ಕಂಪೆನಿಯ ಸುಮಾರು 150 ಮಿಲಿಯನ್ 2ಜಿ ಚಂದಾದಾರರನ್ನು 4ಜಿಯೆಡೆಗೆ ಕರೆದುಕೊಂಡು ಬರುವ ಯೋಜನೆಯಾಗಿದೆ ಮತ್ತು ಇದು ಉಚಿತ 900 MHz ಬ್ಯಾಂಡ್ ಸ್ಪೆಕ್ಟ್ರಮ್ ನ್ನು ಹೈ ಸ್ಪೀಡ್ 4ಜಿ ಸೇವೆಯಲ್ಲಿ ಬಳಸುತ್ತದೆ ಎಂದು ದಿ ಫೈನಾನ್ಶಿಯಲ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಫೋನ್ ತಯಾರಿಕಾ ಕಂಪೆನಿಗಳಿಂದ ಏರ್ ಟೆಲ್ ಸಂಪರ್ಕ:

ಫೋನ್ ತಯಾರಿಕಾ ಕಂಪೆನಿಗಳಿಂದ ಏರ್ ಟೆಲ್ ಸಂಪರ್ಕ:

ಈ ವರದಿಯು ಹೇಳುವಂತೆ ಈಗಾಗಲೇ ಹಲವಾರು ಫೋನ್ ತಯಾರಕಾ ಕಂಪೆನಿಗಳು ಈ ನಿಟ್ಟಿನಲ್ಲಿ ಏರ್ ಟೆಲ್ ನ್ನು ಸಂಪರ್ಕಿಸಿವೆಯಂತೆ. ಸಸ್ತಾವಾಗಿರುವ VoLTE ಫೋನ್ ಗಳ ತಯಾರಿಕೆಗೆ ಫೋನ್ ತಯಾರಿಕಾ ಕಂಪೆನಿಗಳು ಕೂಡ ಆಸಕ್ತಿವಹಿಸಿರುವುದು ಇದರಿಂದ ಸ್ಪಷ್ಟವಾಗುತ್ತದೆ.

ಸಬ್ಸಿಡಿ ಇಲ್ಲ, ಕ್ಯಾಷ್ ಬ್ಯಾಕ್ ಲಭ್ಯ:

ಸಬ್ಸಿಡಿ ಇಲ್ಲ, ಕ್ಯಾಷ್ ಬ್ಯಾಕ್ ಲಭ್ಯ:

ಸದ್ಯಕ್ಕೆ ಭಾರತದಲ್ಲಿ 4ಜಿ ಅನೇಬಲ್ಡ್ ಆಗಿರುವ ಏಕಮಾತ್ರ ಕಂಪೆನಿ ಅಂದರೆ ಅದು ಜಿಯೋ.ಏರ್ ಟೆಲ್ ನ ಅಗ್ಗದ VoLTE ಫೋನ್ ಗಳು ರಿಲಯನ್ಸ್ ಜಿಯೋ 4ಜಿ ಫೀಚರ್ ಫೋನ್ ಗಳಾದ ಜಿಯೋಫೋನ್ ಮತ್ತು ಜಿಯೋಫೋನ್ 2 ಗಳ ಜೊತೆ ಸ್ಪರ್ಧೆಯೊಡ್ಡಲಿದೆ.ಈ ವರದಿಯು ಹೇಳುವ ಪ್ರಕಾರ ಫೋನ್ ತಯಾರಕರಿಗೆ ಏರ್ ಟೆಲ್ ಯಾವುದೇ ರೀತಿಯ ಸಬ್ಸಿಡಿ ಅಥವಾ ಇನ್ಸೆಂಟೀವ್ ಗಳನ್ನು ನೀಡುವ ಬಗ್ಗೆ ಹೇಳಿಲ್ಲ. ಇದರ ಬದಲಾಗಿ ಟೆಲ್ಕೋ ಓಇಎಂಗಳ ಜೊತೆಗೆ ಕೈಜೋಡಿಸಿದ್ದು ಯಾರು ಈ ಫೋನ್ ಗಳನ್ನು ಖರೀದಿಸುತ್ತಾರೋ ಅವರಿಗೆ ಕ್ಯಾಷ್ ಬ್ಯಾಕ್ ಗಳು ಲಭ್ಯವಾಗುತ್ತದೆ ಮತ್ತು ಇದು ಫೋನಿನ ಬೆಲೆಯನ್ನು ಕಡಿಮೆ ಮಾಡುತ್ತದೆ.

ಏರ್ ಟೆಲ್ ದು ಫೀಚರ್ ಫೋನ್ ಅಲ್ಲ ಬದಲಾಗಿ ಸ್ಮಾರ್ಟ್ ಫೋನ್:

ಏರ್ ಟೆಲ್ ದು ಫೀಚರ್ ಫೋನ್ ಅಲ್ಲ ಬದಲಾಗಿ ಸ್ಮಾರ್ಟ್ ಫೋನ್:

ಜಿಯೋಫೋನ್ ಗಳು ಪರಿಶುದ್ಧ 4ಜಿ ಫೀಚರ್ ಫೋನ್ ಗಳಾಗಿದೆ ಆದರೆ ಏರ್ ಟೆಲ್ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಜಿಯೋಫೋನ್ ಮತ್ತು ಜಿಯೋಫೋನ್ 2 ಎರಡೂ ಕೂಡ ಪ್ರಮುಖವಾಗಿ ಫೀಚರ್ ಫೋನ್ ಗಳು ಆದರೆ ಏರ್ ಟೆಲ್ ಆಂಡ್ರಾಯ್ಡ್ ನಿಂದ ರನ್ ಆಗುವ ಪ್ರಾಪರ್ ಸ್ಮಾರ್ಟ್ ಫೋನ್ ಬಿಡುಗಡೆಗೊಳಿಸಲು ಯೋಜಿಸಿದೆ.

ಏರ್ ಟೆಲ್ ವಕ್ತಾರರು ತಿಳಿಸುವಂತೆ ಏರ್ ಟೆಲ್ ನ 4ಜಿ ಫೋನ್ ಗಳು 2000-2500 ರುಪಾಯಿ ಬೆಲೆಬಾಳಲಿವೆ ಮತ್ತು ಕ್ಯಾಷ್ ಬ್ಯಾಕ್ ಅಪ್ಲೈ ಮಾಡಿದಾಗ ಕೇವಲ 1000 ರುಪಾಯಿಗೆ ಈ ಫೋನ್ ಗಳು ಗ್ರಾಹಕರ ಕೈಗೆಟುಕಲಿದೆ.

ವಾಯ್ಸ್ ಟ್ರಾಫಿಕ್ 30% ರಿಂದ 50% ಕ್ಕೇರಿಸುವ ಪ್ರಯತ್ನ:

ವಾಯ್ಸ್ ಟ್ರಾಫಿಕ್ 30% ರಿಂದ 50% ಕ್ಕೇರಿಸುವ ಪ್ರಯತ್ನ:

ಸದ್ಯಕ್ಕೆ ಶೇಕಡಾ 30 ರಷ್ಟು ಏರ್ ಟೆಲ್ ನ ವಾಯ್ಸ್ ಟ್ರಾಫಿಕ್ VoLTE ನೆಟ್ ವರ್ಕ್ ನಲ್ಲಿ ರನ್ ಆಗುತ್ತದೆ. ಇದನ್ನು ಕಂಪೆನಿಯು ಮುಂದಿನ ವರ್ಷದಲ್ಲಿ ಶೇಕಡಾ 50 ಕ್ಕೆ ಏರಿಸಲು ಚಿಂತನೆ ನಡೆಸಿದೆ. VoLTE ಫೋನ್ ಗಳ ಬಿಡುಗಡೆಯು ಟ್ರಾಫಿಕ್ ನ್ನು ಹೆಚ್ಚಿಸಿಕೊಳ್ಳಲು ಕಂಪೆನಿಗೆ ನೆರವು ನೀಡಲಿದೆ ಮತ್ತು ನಂತರದ ದಿನಗಳಲ್ಲಿ ಅಂದರೆ ಮುಂದಿನ ನಾಲ್ಕು ವರ್ಷಗಳಲ್ಲಿ 2ಜಿ ಮತ್ತು 3ಜಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಕ್ಕೆ ಕಂಪೆನಿ ಯೋಜಿಸಿದೆ.

ಭವಿಷ್ಯದಲ್ಲಿ ಸ್ಥಗಿತಗೊಳ್ಳಲಿರುವ 2ಜಿ ಮತ್ತು 3ಜಿ:

ಭವಿಷ್ಯದಲ್ಲಿ ಸ್ಥಗಿತಗೊಳ್ಳಲಿರುವ 2ಜಿ ಮತ್ತು 3ಜಿ:

2020 ರ ಮಾರ್ಚ್ ವೇಳೆ 3ಜಿ ಸ್ಥಗಿತಗೊಳಿಸುವಿಕೆಯು ಏರ್ ಟೆಲ್ ನಿಂದ ಸಾಧ್ಯವಾಗಲಿದೆ ಎಂದು ವರದಿ ಹೇಳುತ್ತಿದೆ ಮತ್ತು ಕಂಪೆನಿಯು ಈಗಾಗಲೇ 2100 MHz 3G ಸ್ಪೆಕ್ಟ್ರಮ್ ನ್ನು 4G ಸೇವೆಗಳಿಗೆ ಬಳಸಲು ಪ್ರಾರಂಭಿಸಿದೆ.

ಏರ್ ಟೆಲ್ ಕಳೆದ ವರ್ಷ 4ಜಿ ಸ್ಮಾರ್ಟ್ ಫೋನ್ ನ್ನು ಮೊಬೈಲ್ ತಯಾರಿಕಾ ಸಂಸ್ಥೆ ಸೆಲ್ಕೋನ್ ಜೊತೆ ಕೈಜೋಡಿಸಿ ಅತ್ಯಂತ ಕಡಿಮೆ ಬೆಲೆಗೆ ಅಂದರೆ ರುಪಾಯಿ 1349 ಕ್ಕೆ ಬಿಡುಗಡೆಗೊಳಿಸಿತ್ತು. ಈ ಪಾರ್ಟ್ನರ್ ಶಿಪ್ ಏರ್ ಟೆಲ್ ನ ಮೇರಾ ಪೆಹ್ಲಾ ಸ್ಮಾರ್ಟ್ ಫೋನ್ ನ ಅಡಿಯಲ್ಲಿ ನಡೆದಿತ್ತು ಮತ್ತು ಇದು ಏರ್ ಟೆಲ್ ಫೀಚರ್ ಫೋನ್ ಬಿಡುಗಡೆಗಾಗಿ ನಡೆಸಿದ ಮೊದಲ ಪ್ರಯತ್ನವಾಗಿತ್ತು.

ಹಳೆಯ ಒಡಂಬಡಿಕೆ:

ಹಳೆಯ ಒಡಂಬಡಿಕೆ:

ಈ 4ಜಿ ಸ್ಮಾರ್ಟ್ ಫೋನ್ ಆಫರ್ ನ್ನು ಪಡೆಯಲು ಗ್ರಾಹಕರು Rs 2849 ಡೌನ್ ಪೇಮೆಂಟ್ ನ್ನು ಮಾಡಬೇಕಿತ್ತು ಮತ್ತು ನಂತರದ 36 ತಿಂಗಳ ನಿರಂತರ 169 ರುಪಾಯಿ ರೀಚಾರ್ಜ್ ಮಾಡಿಸಿಕೊಳ್ಳಬೇಕು. ಅವನು ಅಥವಾ ಅವಳು 18 ತಿಂಗಳ ನಂತರ 500 ರುಪಾಯಿಯ ಮೊದಲ ರೀಫಂಡ್ ಪಡೆಯುತ್ತಾರೆ ಮತ್ತೊಂದು 36 ನೇ ತಿಂಗಳಿಗೆ 1000 ರುಪಾಯಿ ರೀಫಂಡ್ ಸಿಗಲಿದೆ. ಅಂದರೆ ಒಟ್ಟು 1500 ರುಪಾಯಿ ಕ್ಯಾಷ್ ಬ್ಯಾಕ್ ಸಿಗಲಿದೆ. ಈ ಫೋನ್ 169 ರುಪಾಯಿ ಪ್ಲಾನ್ ನ ಬಂಡಲ್ ನೊಂದಿಗೆ ಮಾತ್ರವೇ ಲಭ್ಯವಾಗುತ್ತಿತ್ತು.

Best Mobiles in India

English summary
Airtel plans to take on Jio with affordable VoLTE-enabled smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X