ರೂ 49 ಕ್ಕೆ ಅನ್‌ಲಿಮಿಟೆಡ್ ಲೋಕಲ್ ಕಾಲ್: ಏರ್‌ಟೆಲ್ ಆಫರ್
ಕೊಂಚ ತಡವಾಗಿಯೇ ದೇಶದಲ್ಲಿರುವ ಟೆಲಿಕಾಮ್ ಆಪರೇಟರ್‌ಗಳು ತಮ್ಮ ಅದ್ವಿತೀಯ ಯೋಜನೆಗಳೊಂದಿಗೆ ಬಳಕೆದಾರರನ್ನು ತಲುಪುತ್ತಿವೆ. ಟಾರಿಫ್ ಯೋಜನೆಗಳನ್ನು ತನ್ನ ಬಳಕೆದಾರರಿಗೆ ಏರ್‌ಟೆಲ್ ನೀಡುತ್ತಿದ್ದು ಜಿಯೋ ಸ್ಪರ್ಧೆಯನ್ನು ಎದುರಿಸುವ ಎಲ್ಲಾ ಸನ್ನಾಹವನ್ನು ಏರ್‌ಟೆಲ್ ಮಾಡುತ್ತಿದೆ.
ಓದಿರಿ: ಆಂಡ್ರಾಯ್ಡ್ ಫೋನ್‌ನಲ್ಲಿ 'ಇನ್‌ಸಫೀಶಿಯಂಟ್ ಸ್ಟೋರೇಜ್ ಸಮಸ್ಯೆ'ಗೆ ಪರಿಹಾರ ಹೇಗೆ?
ಪ್ರಸ್ತುತ ಕಂಪೆನಿ ಸೂಪರ್ ಸೇವರ್ ವಾಯ್ಸ್ ಪ್ಯಾಕ್ಸ್ ಅನ್ನು ಘೋಷಿಸಿದ್ದು ಇದು ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳನ್ನು ರೂ 49 ಮತ್ತು ರೂ 99 ಕ್ಕೆ ಬಳಕೆದಾರರಿಗೆ ನೀಡಲಿದೆ. ಬ್ರಾಡ್‌ಬ್ಯಾಂಡ್ ಮತ್ತು ಲ್ಯಾಂಡ್ ಲೈನ್ ಬಳಕೆದಾರರಿಗಿಬ್ಬರಿಗೂ ಈ ಸೂಪರ್ ಸೇವರ್ ವಾಯ್ಸ್ ಪ್ಯಾಕ್ ಲಭ್ಯವಾಗಲಿದ್ದು ಲ್ಯಾಂಡ್ ಲೈನ್ ಅಥವಾ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಅನಿಯಮಿತ ಕರೆಗಳನ್ನು ಬಳಕೆದಾರರು ಮಾಡಬಹುದಾಗಿದೆ. ಈ ಪ್ಯಾಕ್ ಅನ್ನು ನೀವು ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.
ಓದಿರಿ: ಜಿಯೋ ಸಲಹೆ: ಫೋನ್‌ನಲ್ಲಿ 'ಗೆಟ್ ಜಿಯೋ ಸಿಮ್' ಕಾಣದಿದ್ದರೆ ಏನು ಮಾಡಬೇಕು?

ಎರಡು ಪ್ಲಾನ್‌ಗಳಿವೆ
ಮೇಲೆ ತಿಳಿಸಿದಂತೆ ಎರಡು ಯೋಜನೆಗಳಿದ್ದು ಏರ್‌ಟೆಲ್ ನೀಡುತ್ತಿರುವ ವಾಯ್ಸ್ ಪ್ಯಾಕ್ ಇದಾಗಿದೆ. ಒಂದು ರೂ 49 ರದ್ದಾಗಿದ್ದರೆ ಇದು ಅನಿಯಮಿತ ಲೋಕಲ್ ಕರೆಗಳನ್ನು ಒದಗಿಸುತ್ತದೆ. ಇನ್ನೊಂದು ರೂ 99 ರದ್ದಾಗಿದ್ದು ಅನಿಯಮಿತ ಎಸ್‌ಟಿಡಿ ಮತ್ತು ಲೋಕಲ್ ಕರೆಗಳನ್ನು ಬಳಕೆದಾರರು ಮಾಡಬಹುದಾಗಿದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
ಮೊದಲಿಗೆ, ನೀವು ಪ್ರಸ್ತುತ ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಮತ್ತು ಲ್ಯಾಂಡ್ ಲೈನ್ ಬಳಕೆದಾರರು ಎಂಬುದನ್ನು ಸಾಬೀತುಪಡಿಸಲು ಏರ್‌ಟೆಲ್ ವೆಬ್‌ಸೈಟ್‌ಗೆ ನೀವು ಹೋಗಬೇಕು ಮತ್ತು ಲಿಂಕ್ ಅನ್ನು ಕ್ಲಿಕ್ಕಿಸಬೇಕು. ವೆಬ್‌ಸೈಟ್‌ನಲ್ಲಿ ನಿಮಗೆ ದೊರೆಯುವ 'ಬೈ ನೌ' ಆಪ್ಶನ್ ಅನ್ನು ಕ್ಲಿಕ್ಕಿಸಿ.

ಅಗತ್ಯ ವರದಿಗಳು
ಇದಾದ ನಂತರ, ಫಿಕ್ಸ್ಡ್ ಲೈನ್ ನಂಬರ್ ಜೊತೆಗೆ ಎಸ್‌ಟಿಡಿ ಕೋಡ್, ಮೊಬೈಲ್ ಸಂಖ್ಯೆ ಮತ್ತು ರಾಜ್ಯವನ್ನು ಆರಿಸಿ ಮುಖ್ಯ ವರದಿಗಳನ್ನು ಭರ್ತಿ ಮಾಡಿ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮಗೆ ಬೇಕಾದ ಪ್ಯಾಕ್ ಆರಿಸಿ
ನಿಮಗೆ ಬೇಕಾದ ಏರ್‌ಟೆಲ್ ಸೂಪರ್ ಸೇವರ್ ವಾಯ್ಸ್ ಪ್ಯಾಕ್ ಅನ್ನು ಆರಿಸಿ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ಇದು ಇರುತ್ತದೆ. ಅನಿಯಮಿತ ಸ್ಥಳೀಯ ಅಥವಾ ಅನಿಯಮಿತ ಎಸ್‌ಟಿಡಿ ಕರೆಗಳು. ಇದನ್ನು ಆಧರಿಸಿ, ನೀವು ಆಯ್ಕೆಯನ್ನು ಮಾಡಬೇಕು. ಇದನ್ನು ಮಾಡಿದ ನಂತರ, ಸಬ್‌ಮಿಟ್ ಆಪ್ಶನ್ ಅನ್ನು ಕ್ಲಿಕ್ ಮಾಡಿ ಮತ್ತು ಪಾವತಿ ಮಾಡಿ. ಕೆಲವೇ ಸೆಕೆಂಡ್‌ಗಳಲ್ಲಿ ನಿಮ್ಮ ಪ್ಯಾಕ್ ಆಕ್ಟಿವೇಟ್ ಆಗುತ್ತದೆ.

ಎಸ್‌ಎಮ್‌ಎಸ್ ಮೂಲಕ ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ
ಈ ಹೊಸ ಯೋಜನೆಗಳನ್ನು ಸಬ್ ಸ್ಕ್ರೈಬ್ ಮಾಡಲು, ನೀವು ಎಸ್‌ಎಮ್‌ಎಸ್ ಕೋರಿಕೆಯನ್ನು ಕೂಡ ಕಳುಹಿಸಬಹುದಾಗಿದೆ. ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯಿಂದ 53636 ಗೆ UNL49 ಅಥವಾ UNL99 ಕೋರಿಕೆ ಕಳುಹಿಸಿ. ಇದಕ್ಕೆ ರೂ 3 ರ ವೆಚ್ಚವನ್ನು ವಿಧಿಸಲಾಗುತ್ತದೆ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








