ಜಿಯೋ ಸಲಹೆ: ಫೋನ್‌ನಲ್ಲಿ 'ಗೆಟ್ ಜಿಯೋ ಸಿಮ್' ಕಾಣದಿದ್ದರೆ ಏನು ಮಾಡಬೇಕು?

Written By:

ರಿಲಾಯನ್ಸ್ ಜಿಯೋ ಸಿಮ್ ಅನ್ನು ಇಂದು ಪ್ರತಿಯೊಬ್ಬ ಬಳಕೆದಾರರು ತಮ್ಮ ಫೋನ್‌ನಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಸಿಮ್ ಅನ್ನು ಪಡೆದುಕೊಳ್ಳಲು, ನೀವು 4ಜಿ ಸ್ಮಾರ್ಟ್‌ಫೋನ್ ಅನ್ನು ಹೊಂದಿರಬೇಕು ಮತ್ತು ಮೈಜಿಯೋ ಅಪ್ಲಿಕೇಶನ್‌ನಿಂದ ಅನನ್ಯ ಜಿಯೋ ಬಾರ್ ಕೋಡ್ ಅನ್ನು ನೀವು ರಚಿಸಿಕೊಂಡಿರಬೇಕು.

ಓದಿರಿ: ಬಿಎಸ್‌ಎನ್ಎಲ್ ರೂ 20 ರ ಸಿಮ್‌ನಲ್ಲಿದೆ ಭರ್ಜರಿ ಆಫರ್ಸ್

ಬಾರ್ ಕೋಡ್ ಅನ್ನು ಮೈಜಿಯೋ ಅಪ್ಲಿಕೇಶನ್‌ನಿಂದ ಪಡೆದುಕೊಳ್ಳುವುದು ತುಂಬಾ ಸುಲಭ. ಆದರೆ ಹೆಚ್ಚಿನವರು ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡಿದ್ದರೂ ಬಾರ್ ಕೋಡ್ ಅವರಿಗೆ ದೊರೆಯುತ್ತಿಲ್ಲ. 'ಗೆಟ್ ಜಿಯೋ ಸಿಮ್' ಆಪ್ಶನ್ ಬಳಕೆದಾರರಿಗೆ ದೊರೆಯುತ್ತಿಲ್ಲ ಎಂಬ ದೂರು ಇವರದ್ದಾಗಿದೆ. ಅದಕ್ಕೆಂದೇ ಇಂದಿನ ಲೇಖನದಲ್ಲಿ ಈ ಸಮಸ್ಯೆಯನ್ನು ಪರಿಹರಿಸುವ ಸೂಕ್ತ ಪರಿಹಾರ ವಿಧಾನಗಳೊಂದಿಗೆ ನಾವು ಬಂದಿದ್ದು ಇದು ನಿಮಗೆ ಸಹಕಾರಿಯಾಗಲಿದೆ.

ಓದಿರಿ: ಜಿಯೋಗೆ ಬಿಸಿ ಮುಟ್ಟಿಸಿದ ಬಿಎಸ್‌ಎನ್‌ಎಲ್ ಹೇಗೆ ಅಂತೀರಾ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಬಾರ್ ಕೋಡ್ ಜನರೇಟ್ ಮಾಡಿ

ಜಿಯೋ ಬಾರ್ ಕೋಡ್ ಜನರೇಟ್ ಮಾಡಿ

ಮೊದಲಿಗೆ, ನೀವು ಅಪ್ಲಿಕೇಶನ್ ಸ್ಟೋರ್‌ಗೆ ಹೋಗಿ ಮೈಜಿಯೋ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕು. ಇದು ಇನ್‌ಸ್ಟಾಲ್ ಆದ ನಂತರ ಮೇಲ್ಭಾದಲ್ಲಿ 'ಜಿಯೋ ವೆಲ್‌ಕಮ್ ಆಫರ್' ಅನ್ನು ನೋಡುತ್ತೀರಿ. ಇದನ್ನು ಕ್ಲಿಕ್ ಮಾಡಿ ಮತ್ತು ಅಗತ್ಯವಿರುವ ಮಾಹಿತಿಗಳನ್ನು ಭರ್ತಿ ಮಾಡಿ. ನೀವು ನಮೂದಿಸಿರುವ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಲು ಒಟಿಪಿ ನಿಮಗೆ ದೊರೆಯುತ್ತದೆ ಇಷ್ಟೇ! ಜಿಯೋ ಸಿಮ್ ಅನ್ನು ಪಡೆದುಕೊಳ್ಳುವ ಕೂಪನ್ ಕೋಡ್ ಅಥವಾ ಬಾರ್ ಕೋಡ್ ಅನ್ನು ನೀವು ಪಡೆದುಕೊಳ್ಳುತ್ತೀರಿ.

ಗೋಚರಿಸದೇ ಇರುವ ಜಿಯೋ ಸಿಮ್ ಪಡೆದುಕೊಳ್ಳಿ

ಗೋಚರಿಸದೇ ಇರುವ ಜಿಯೋ ಸಿಮ್ ಪಡೆದುಕೊಳ್ಳಿ

ಕೆಲವು ಸಂದರ್ಭಗಳಲ್ಲಿ, ಜಿಯೋ ಸೂಟ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಮಾಡಿಕೊಂಡ ನಂತರ ಕೂಡ, ಗೆಟ್ ಜಿಯೋ ಸಿಮ್ ಆಪ್ಶನ್ ಒಮ್ಮೊಮ್ಮೆ ಬಳಕೆದಾರರಿಗೆ ಕಾಣುವುದಿಲ್ಲ. ಇದನ್ನು ನೋಡಿದ ಮಾತ್ರವೇ, ಬಾರ್ ಕೋಡ್ ಪಡೆದುಕೊಳ್ಳಲು ನಿಮ್ಮ ಡಿಟೈಲ್ಸ್‌ಗಳನ್ನು ತುಂಬಲು ಸಾಧ್ಯವಾಗುವುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೈಜಿಯೋ ಅಪ್ಲಿಕೇಶನ್ ಎಪಿಕೆ ಡೌನ್‌ಲೋಡ್ ಮಾಡಿ

ಮೈಜಿಯೋ ಅಪ್ಲಿಕೇಶನ್ ಎಪಿಕೆ ಡೌನ್‌ಲೋಡ್ ಮಾಡಿ

ಮೈಜಿಯೋ ಅಪ್ಲಿಕೇಶನ್‌ನ ಹಳೆಯ ಆವೃತ್ತಿಯನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬೇಕು. ಇದನ್ನು ಮಾಡಲು, ಮೈಜಿಯೋ 3.2.05 ಎಪಿಕೆಯನ್ನು ಇಲ್ಲಿ ಕ್ಲಿಕ್ಕಿಸಿ ಡೌನ್‌ಲೋಡ್ ಮಾಡಿಕೊಳ್ಳಿ. ಅಪ್ಲಿಕೇಶನ್‌ನ ಅನುಮತಿಗಳನ್ನು ಪಡೆದುಕೊಳ್ಳಿ ಮತ್ತು ಸೂಟ್‌ನಲ್ಲಿರುವ ಎಲ್ಲಾ ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿ.

ಇಂಟರ್ನೆಟ್ ಬಳಸಬೇಡಿ

ಇಂಟರ್ನೆಟ್ ಬಳಸಬೇಡಿ

ನೀವು ಮೊಬೈಲ್ ಡೇಟಾವನ್ನು ಅಥವಾ ವೈಫೈಯನ್ನು ಈ ಸಂದರ್ಭದಲ್ಲಿ ಬಳಸಬಾರದು. ಹಿನ್ನಲೆಯಲ್ಲಿರುವ ಎಲ್ಲಾ ಅಪ್ಲಿಕೇಶನ್‌ಗಳನ್ನು ಡಿಲೀಟ್ ಮಾಡಿ. ಸೆಟ್ಟಿಂಗ್ಸ್‌ಗೆ ಹೋಗಿ ಮತ್ತು ಮೈಜಿಯೋ ಅಪ್ಲಿಕೇಶನ್‌ನ ಅಪ್ಲಿಕೇಶನ್ ಡೇಟಾವನ್ನು ಕ್ಲಿಯರ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಕೆಲಸ ಮುಗಿದಂತೆಯೇ!

ನಿಮ್ಮ ಕೆಲಸ ಮುಗಿದಂತೆಯೇ!

ನೀವು ಒಮ್ಮೆ ಈ ಹಂತಗಳನ್ನು ಪೂರೈಸಿಕೊಂಡರೆ ಮುಗಿಯಿತು, ನಿಮ್ಮ ಫೋನ್ ಅನ್ನು ರಿಸ್ಟಾರ್ಟ್ ಮಾಡಿಕೊಳ್ಳಬೇಕು ಮತ್ತು ಡೇಟಾ ಇಲ್ಲವೇ ವೈಫೈಯನ್ನು ಆನ್ ಮಾಡಿಕೊಳ್ಳಿ. ಮೈಜಿಯೋ ಅಪ್ಲಿಕೇಶನ್‌ ಅನ್ನು ತೆರೆಯಿರಿ ಮತ್ತು 'ಗೆಟ್ ಜಿಯೋ ಸಿಮ್' ಆಪ್ಶನ್ ಅನ್ನು ನೀವು ಕಾಣುತ್ತೀರಿ. ನೀವು ಇದರ ಮೇಲೆ ಕ್ಲಿಕ್ ಮಾಡಿ ಮತ್ತು ಜಿಯೋ ಸಿಮ್‌ನ ಬಾರ್ ಕೋಡ್ ಅನ್ನು ಪಡೆದುಕೊಳ್ಳುತ್ತೀರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
If you too are experiencing this problem, then you have landed on the right page. We have come up with a simple set of tricks to make it visible and get the unique barcode to get a Reliance Jio 4G SIM. Check out.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot