ಬಿಎಸ್‌ಎನ್ಎಲ್ ರೂ 20 ರ ಸಿಮ್‌ನಲ್ಲಿದೆ ಭರ್ಜರಿ ಆಫರ್ಸ್

By Shwetha
|

ಬಿಎಸ್‌ಎನ್‌ಎಲ್ ರಾಜ್ಯ ಮಾಲೀಕತ್ವದ ಕಂಪೆನಿ ಎಂದೆನಿಸಿದ್ದು ದೆಹಲಿಯಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿದೆ. ದೇಶದ ಹಳೆಯ ಟೆಲಿಕಾಂ ಸರ್ವೀಸ್ ಪ್ರೊವೈಡರ್ ಎಂದೆನಿಸಿದ್ದು 95 ಮಿಲಿಯನ್ ಬಳಕೆದಾರರನ್ನು ಪ್ರಸ್ತುತ ಬಿಎಸ್‌ಎನ್‌ಎಲ್ ಹೊಂದಿದೆ. ಅತಿ ಹಿರಿಯ ಟೆಲಿಕಾಂ ಸಂಸ್ಥೆ ಎಂದೆನಿಸಿರುವ ಬಿಎಸ್‌ಎನ್‌ಎಲ್ ಹೊಸ ಹೊಸ ಯೋಜನೆಗಳನ್ನು ದೇಶದಲ್ಲಿ ಮೊದಲು ಆರಂಭಿಸಿದ ಸಂಸ್ಥೆ ಎಂದೆನಿಸಿದೆ

ಓದಿರಿ: ಜಿಯೋಗೆ ಬಿಸಿ ಮುಟ್ಟಿಸಿದ ಬಿಎಸ್‌ಎನ್‌ಎಲ್ ಹೇಗೆ ಅಂತೀರಾ?

ಅದಾಗ್ಯೂ ಇತರ ಟೆಲಿಕಾಂ ಸಂಸ್ಥೆಗಳ ಭರ್ಜರಿ ಪೈಪೋಟಿಯಿಂದಾಗಿ ಬಿಎಸ್‌ಎನ್‌ಎಲ್ ಮೂಲೆಗುಂಪಾಗಿದ್ದರೂ ಸೋಲೊಪ್ಪಿಕೊಳ್ಳದೇ ತನ್ ಹೊಸ ಹೊಸ ಆಫರ್‌ಗಳ ಮೂಲಕ ಬಳಕೆದಾರರನ್ನು ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನದಲ್ಲಿದೆ. ಅದಾಗ್ಯೂ ನೀವು ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಬದಲಾವಣೆಯನ್ನು ಮಾಡಿಕೊಳ್ಳಬೇಕೆಂದಿರುವಾಗ ಇಲ್ಲವೇ ಬಿಎಸ್‌ಎನ್‌ಎಲ್ ಸಿಮ್ ಅನ್ನು ಖರೀದಿ ಮಾಡಬೇಕು ಎಂದಿದ್ದಲ್ಲಿ ನಾವು ಕೆಲವೊಂದು ಕಿವಿ ಮಾತುಗಳನ್ನು ಇಂದಿಲ್ಲಿ ಹೇಳಲಿದ್ದೇವೆ.

ಓದಿರಿ: ಅರಿಯಲೇಬೇಕಾಗಿರುವ 'ಮೈ ಏರ್‌ಟೆಲ್ ಅಪ್ಲಿಕೇಶನ್‌'ನ ಐದು ಮಹತ್ವಗಳು

ಸಿಮ್ ಕಾರ್ಡ್ ಬೆಲೆ ರೂ 20

ಸಿಮ್ ಕಾರ್ಡ್ ಬೆಲೆ ರೂ 20

ಇತರ ಟೆಲಿಕಾಂ ಸೇವೆಗಳಂತೆ ಹೆಚ್ಚಿನ ದರವನ್ನು ಸಿಮ್ ಕಾರ್ಡ್‌ಗೆ ವಿಧಿಸದೆ ಬಿಎಸ್‌ಎನ್‌ಎಲ್ ರೂ 20 ಅನ್ನು ತನ್ನ ಸಿಮ್ ಕಾರ್ಡ್‌ಗೆ ವಿಧಿಸಲಿದೆ. ಅದೂ 24 ಗಂಟೆಗಳಲ್ಲಿ ಆಕ್ಟಿವೇಶನ್ ಅನ್ನು ಪಡೆದುಕೊಳ್ಳಲಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಸಂಖ್ಯೆಯನ್ನು ಆನ್‌ಲೈನ್‌ನಲ್ಲೇ ಆರಿಸಿ

ನಿಮ್ಮ ಸಂಖ್ಯೆಯನ್ನು ಆನ್‌ಲೈನ್‌ನಲ್ಲೇ ಆರಿಸಿ

ಆನ್‌ಲೈನ್‌ನಲ್ಲೇ ನಿಮ್ಮ ಸಂಖ್ಯೆಯನ್ನು ಆರಿಸುವ ವ್ಯವಸ್ಥೆಯನ್ನು ಬಿಎಸ್‌ಎನ್‌ಎಲ್ ಬಳಕೆದಾರರಿಗೆ ನೀಡಲಿದ್ದು ನಿಮ್ಮ ದಾಖಲೆಗಳನ್ನು ನೀವು ಸನಿಹದ ಬಿಎಸ್‌ಎನ್‌ಎಲ್ ಸ್ಟೋರ್‌ಗೆ ನೀಡಿ ಸಿಮ್ ಕಾರ್ಡ್ ಅನ್ನು ಪಡೆದುಕೊಳ್ಳಬೇಕು.

ಆಯ್ಕೆಮಾಡಿದ ಸ್ಥಳಗಳಲ್ಲಿ ಮಾತ್ರ 4ಜಿ ಸೇವೆ

ಆಯ್ಕೆಮಾಡಿದ ಸ್ಥಳಗಳಲ್ಲಿ ಮಾತ್ರ 4ಜಿ ಸೇವೆ

ದೇಶಾದ್ಯಂತ ಬಿಎಸ್ಎನ್‌ಎಲ್ 4ಜಿ ಪರವಾನಗಿಯನ್ನು ಹೊಂದಿಲ್ಲ ಎಂಬುದನ್ನು ಗಮನಿಸಿಕೊಳ್ಳಿ. ಇದರಿಂದಾಗಿ ನೀವು ಕೆಲವೊಮ್ಮೆ ನೆಟ್‌ವರ್ಕ್ ವಿಫಲತೆ ಮತ್ತು ಕರೆ ವಿಫಲತೆ ಸಮಸ್ಯೆಗಳನ್ನು ಎದುರಿಸಬಹುದಾಗಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜಿಯೋದೊಂದಿಗೆ 4ಜಿ ಬೆಂಬಲ

ಜಿಯೋದೊಂದಿಗೆ 4ಜಿ ಬೆಂಬಲ

ಇತ್ತೀಚೆಗೆ ತಾನೇ, ಕಂಪೆನಿ ಒಂದು ಘೋಷಣೆಯನ್ನು ಮಾಡಿದ್ದು ಇದರ ಅನುಸಾರವಾಗಿ ಉತ್ತಮ ನೆಟ್‌ವರ್ಕ್ ವ್ಯವಸ್ಥೆಗಾಗಿ ಇದು ರೋಮಿಂಗ್ ಸ್ಥಳಗಳಲ್ಲಿ ರಿಲಾಯನ್ಸ್ ಜಿಯೋ 4ಜಿ ಸೇವೆಯನ್ನು ಬಳಸಿಕೊಳ್ಳಲಿದೆ ಎಂದಾಗಿದೆ. ಜಿಯೋ ಬಿಎಸ್‌ಎನ್‌ಎಲ್‌ನ 2ಜಿ ಡೇಟಾ ಸೇವೆಯನ್ನು ಬಳಸಿಕೊಳ್ಳಲಿದ್ದು ಡೇಟಾ ಸಂಪರ್ಕ ಇಲ್ಲದಿರುವಾಗ ವಾಯ್ಸ್ ಕರೆಗಳ ವ್ಯವಸ್ಥೆಯನ್ನು ಬಳಕೆದಾರರಿಗೆ ಒದಗಿಸಲಿದೆ.

ಸಿಮ್ ಆಕ್ಟಿವೇಶನ್

ಸಿಮ್ ಆಕ್ಟಿವೇಶನ್

ಬಿಎಸ್‌ಎನ್‌ಎಲ್ ಸಿಮ್ ಕಾರ್ಡ್ ಆಕ್ಟಿವೇಶನ್ ತುಂಬಾ ಸುಲಭ ಪ್ರಕ್ರಿಯೆಯಾಗಿದೆ. ನಿಮ್ಮ ಕೈಗೆ ಸಿಮ್ ಬಂದೊಡನೆ ಸಿಮ್ ಕಾರ್ಡ್ 24 ಗಂಟೆಗಳಲ್ಲಿ ಆಕ್ಟಿವೇಟ್‌ಗೊಳ್ಳಲಿದೆ. ಟಿಆರ್‌ಎಐ ರೆಗ್ಯುಲೇಶನ್ ಪ್ರಕಾರ ಟೆಲಿ ವೆರಿಫಿಕೇಶನ್ ಅನ್ನು ಮಾಡಲಾಗುತ್ತದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Are you planning to switch over to BSNL network? Or Are you getting a new BSNL SIM card? Here are the five things you should know about the telecom network before becoming a member.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X