ಆಂಡ್ರಾಯ್ಡ್ ಫೋನ್‌ನಲ್ಲಿ 'ಇನ್‌ಸಫೀಶಿಯಂಟ್ ಸ್ಟೋರೇಜ್ ಸಮಸ್ಯೆ'ಗೆ ಪರಿಹಾರ ಹೇಗೆ?

By Shwetha
|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು ಹೆಚ್ಚುಚ್ಚು ಸ್ಮಾರ್ಟ್‌ ಆಗುತ್ತಿವೆ. ಹೊಚ್ಚ ಹೊಸ ಅಪ್ಲಿಕೇಶನ್‌ಗಳನ್ನು ನಿಮಗೆ ಕಂಡುಕೊಳ್ಳಬೇಕು ಎಂದಾದಲ್ಲಿ ಗೂಗಲ್ ಪ್ಲೇ ಸ್ಟೋರ್‌ ಇದಕ್ಕೆ ಉತ್ತಮ ಸ್ಥಳವಾಗಿದೆ. ಆದರೆ ಹೊಸ ಅಪ್ಲಿಕೇಶನ್‌ಗಳನ್ನು ಫೋನ್‌ಗೆ ಇನ್‌ಸ್ಟಾಲ್ ಮಾಡಿಕೊಳ್ಳುವಾಗ ನಾವೆಲ್ಲರೂ ಎದುರಿಸುವ ಸಮಸ್ಯೆ ಸ್ಟೋರೇಜ್‌ನದ್ದಾಗಿದೆ. ಹಾಗಿದ್ದರೆ ನಿಮ್ಮ ಫೋನ್‌ನಲ್ಲಿ ಕಂಡುಬರುವ 'ಇನ್‌ಸಫೀಶಿಯಂಟ್ ಸ್ಟೋರೇಜ್ ಸಮಸ್ಯೆ' ಗೆ ಮುಕ್ತಾಯ ಹಾಡುವುದು ಹೇಗೆ ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳೋಣ.

ಓದಿರಿ: ಜಿಯೋ ಸಲಹೆ: ಫೋನ್‌ನಲ್ಲಿ 'ಗೆಟ್ ಜಿಯೋ ಸಿಮ್' ಕಾಣದಿದ್ದರೆ ಏನು ಮಾಡಬೇಕು?

ಈ ಸಮಸ್ಯೆಯನ್ನು ಪರಿಹರಿಸಿಕೊಂಡು ಯಾವುದೇ ತೊಂದರೆ ಇಲ್ಲದೆ ನಿಮಗೆ ಬೇಕಾದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ಬಿಎಸ್‌ಎನ್ಎಲ್ ರೂ 20 ರ ಸಿಮ್‌ನಲ್ಲಿದೆ ಭರ್ಜರಿ ಆಫರ್ಸ್

ಕ್ಯಾಶ್ ಮೆಮೊರಿ ಕ್ಲಿಯರ್ ಮಾಡಿಕೊಳ್ಳಿ

ಕ್ಯಾಶ್ ಮೆಮೊರಿ ಕ್ಲಿಯರ್ ಮಾಡಿಕೊಳ್ಳಿ

ಪ್ರತೀ ಅಪ್ಲಿಕೇಶನ್‌ಗಳನ್ನು ಆಗಾಗ್ಗೆ ಬಳಸಿಕೊಳ್ಳುವುದರಿಂದ ಟೆಂಪರರಿ ಮೆಮೊರಿಯಲ್ಲಿ ಇದು ಕ್ಯಾಶ್ ಆಗಿ ಸಂಗ್ರಹವಾಗಿರುತ್ತದೆ. ಆದ್ದರಿಂದ ನಿಮ್ಮ ಫೋನ್‌ನಲ್ಲಿ ಕೊಂಚ ಸ್ಥಳಾವಕಾಶವನ್ನು ಕಂಡುಕೊಳ್ಳಲು ಅಪ್ಲಿಕೇಶನ್‌ನ ಕ್ಯಾಶ್ ಮೆಮೊರಿಯನ್ನು ಕ್ಲೀನ್ ಮಾಡಲು ಪ್ರಯತ್ನಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾವುದೇ ದೋಷ

ಯಾವುದೇ ದೋಷ

ಇದನ್ನು ನಿವಾರಿಸಿಕೊಳ್ಳಲು, ಸೆಟ್ಟಿಂಗ್ಸ್ > ಸ್ಟೋರೇಜ್ > ಫೋನ್ ಸ್ಟೋರೇಜ್ > ಅಪ್ಲಿಕೇಶನ್‌ಗೆ ಹೋಗಿ. ಹೆಚ್ಚಿನ ಮೆಮೊರಿಯನ್ನು ಬಳಸಿಕೊಳ್ಳುತ್ತಿರುವ ಅಪ್ಲಿಕೇಶನ್ ಕಂಡುಕೊಳ್ಳಿ ಮತ್ತು ಕ್ಯಾಶ್ ಕ್ಲಿಯರ್ ಮಾಡಿಕೊಳ್ಳಿ. ಇದು ಯಾವುದೇ ದೋಷವಿಲ್ಲದೆ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿಕೊಳ್ಳಲು ನಿಮ್ಮನ್ನು ಅನುಮತಿಸುತ್ತದೆ.

ಗೂಗಲ್ ಪ್ಲೇ ಸರ್ವೀಸ್ ಅಪ್‌ಡೇಟ್‌ಗಳಿಂದ ಮುಕ್ತಿ

ಗೂಗಲ್ ಪ್ಲೇ ಸರ್ವೀಸ್ ಅಪ್‌ಡೇಟ್‌ಗಳಿಂದ ಮುಕ್ತಿ

ಅಪ್ಲಿಕೇಶನ್‌ಗಳನ್ನು ಇನ್‌ಸ್ಟಾಲ್ ಮಾಡಿಕೊಳ್ಳುವಾಗ ಇನ್ನೂ ತೊಂದರೆಗಳನ್ನು ನೀವು ಎದುರಿಸುತ್ತಿದ್ದೀರಿ ಎಂದಾದಲ್ಲಿ, ಗೂಗಲ್ ಪ್ಲೇ ಸರ್ವೀಸ್ ಅಪ್‌ಡೇಟ್ ಅನ್ನು ಅನ್‌ಇನ್‌ಸ್ಟಾಲ್ ಮಾಡಿಕೊಳ್ಳಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅಪ್‌ಡೇಟ್ಸ್

ಅಪ್‌ಡೇಟ್ಸ್

ಇದನ್ನು ನಿರ್ವಹಿಸಲು, ಸೆಟ್ಟಿಂಗ್ಸ್ > ಸ್ಟೋರೇಜ್ > ಫೋನ್ ಸ್ಟೋರೇಜ್ (ಇಂಟರ್ನಲ್ ಸ್ಟೋರೇಜ್, ಬಳಸಿದ ಸ್ಥಳ) ಆಪ್ಸ್ > ಗೂಗಲ್ ಪ್ಲೇ ಸರ್ವೀಸ್ ಇಲ್ಲಿಗೆ ಹೋಗಿ. ನಂತರ ಅನ್‌ಇನ್‌ಸ್ಟಾಲ್ ಅಪ್‌ಡೇಟ್ಸ್ ಮೇಲೆ ಕ್ಲಿಕ್ ಮಾಡಿ. ನೀವು ಅಪ್‌ಡೇಟ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಬೇಕು, ಅಪ್ಲಿಕೇಶನ್ ಅನ್ನು ಅಲ್ಲ ಎಂಬುದನ್ನು ಮರೆಯದಿರಿ.

ಎಸ್‌ಡಿ ಕಾರ್ಡ್‌ಗೆ ಡೇಟಾ ವರ್ಗಾಯಿಸಿ

ಎಸ್‌ಡಿ ಕಾರ್ಡ್‌ಗೆ ಡೇಟಾ ವರ್ಗಾಯಿಸಿ

ಸಾಮಾನ್ಯವಾಗಿ, ಡೌನ್‌ಲೋಡ್ ಮತ್ತು ಇನ್‌ಸ್ಟಾಲ್ ಆಗಿರುವ ಎಲ್ಲಾ ಅಪ್ಲಿಕೇಶನ್‌ಗಳು ಫೋನ್‌ನ ಮೆಮೊರಿಯಲ್ಲಿ ಇರುತ್ತದೆ. ಆದ್ದರಿಂದ ಫೋನ್‌ನಲ್ಲಿ ಸ್ಪೇಸ್ ಸಮಸ್ಯೆಯನ್ನು ನೀವು ಎದುರಿಸುತ್ತಿದ್ದೀರಿ ಎಂದಾದಲ್ಲಿ, ಅಪ್ಲಿಕೇಶನ್‌ಗಳನ್ನು ಎಸ್‌ಡಿ ಕಾರ್ಡ್‌ಗೆ ಸರಿಸಲು ಪ್ರಯತ್ನಿಸಿ ಇದರಿಂದ ಹೊಸ ಅಪ್ಲಿಕೇಶನ್‌ಗಳಿಗೆ ಸ್ಥಳ ದೊರೆಯುತ್ತದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೂವ್ ಟು ಎಸ್‌ಡಿ ಕಾರ್ಡ್

ಮೂವ್ ಟು ಎಸ್‌ಡಿ ಕಾರ್ಡ್

ಎಸ್‌ಡಿ ಕಾರ್ಡ್‌ಗೆ ಅಪ್ಲಿಕೇಶನ್ ಮೂವ್ ಮಾಡುವುದಕ್ಕಾಗಿ, ಸೆಟ್ಟಿಂಗ್ಸ್ > ಅಪ್ಲಿಕೇಶನ್‌ಗೆ ಹೋಗಿ ಅಪ್ಲಿಕೇಶನ್ ಮೇಲೆ ಸ್ಪರ್ಶಿಸಿ ಮತ್ತು ನೀವು ಎಸ್‌ಡಿ ಕಾರ್ಡ್‌ಗೆ ಸರಿಸಬೇಕಾಗಿದೆ ಅಪ್ಲಿಕೇಶನ್ ಇನ್‌ಫೋ ಪುಟಕ್ಕೆ ಲ್ಯಾಂಡ್ ಆಗಿ. ಅಪ್ಲಿಕೇಶನ್ ಇನ್‌ಫೋ ಪುಟದಲ್ಲಿ ಕೆಳಕ್ಕೆ ಸ್ಕ್ರಾಲ್ ಮಾಡುವಾಗ ಮೂವ್ ಟು ಎಸ್‌ಡಿ ಕಾರ್ಡ್ ಆಪ್ಶನ್ ಅನ್ನು ಕಂಡುಕೊಳ್ಳುತ್ತೀರಿ. ಇದರ ಮೇಲೆ ಕ್ಲಿಕ್ ಮಾಡಿ ಮತ್ತು ನೀವು ಮುಂದುವರಿಯಬಹುದಾಗಿದೆ. ಕೆಲವೊಮ್ಮೆ ಎಸ್‌ಡಿ ಕಾರ್ಡ್‌ಗೆ ಸರಿಸಲು ಆಗುವುದಿಲ್ಲ ಎಂಬುದನ್ನು ತೋರಿಸಲು 'ಮೂವ್ ಟು ಎಸ್‌ಡಿ ಕಾರ್ಡ್' ಆಪ್ಶನ್ ಕಂದು ಬಣ್ಣದಲ್ಲಿರುತ್ತದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
here are a few ways to fix this problem and download apps without any niggles.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X