ಆಪಲ್‌ ಐಫೋನ್‌4 15 ಸಾವಿರ ಬೆಲೆಯಲ್ಲಿ ಬಿಡುಗಡೆ!

By Ashwath
|

ದೇಶೀಯ ಮೊಬೈಲ್‌ ತಯಾರಕ ಕಂಪೆನಿಗಳ ಕಡಿಮೆ ಬೆಲೆಯ ಸ್ಮಾರ್ಟ್‌‌‌ಫೋನ್‌ ಮಧ್ಯೆ ಬೇಡಿಕೆ ಕಳೆದುಕೊಂಡಿರುವ ಐಫೋನಿಗೆ ಮತ್ತೆ ಜನರಿಂದ ಬೇಡಿಕೆ ಸೃಷ್ಟಿಸಲು ಆಪಲ್‌‌ ಮುಂದಾಗುತ್ತಿದ್ದು, ಸದ್ಯದಲ್ಲೇ ಐಫೋನ್‌4ನ್ನು ಭಾರತದ ಮಾರುಕಟ್ಟೆಗೆ ಮತ್ತೆ ಬಿಡುಗಡೆ ಮಾಡುವ ಸಾಧ್ಯತೆಯಿದೆ.

ಐಫೋನ್‌ 4ನ್ನು ಆಪಲ್‌ ವಿಶ್ವದ ಮಾರುಕಟ್ಟೆಗೆ 2010ರಲ್ಲಿ ಪರಿಚಯಿಸಿದ್ದು, ಭಾರತದಲ್ಲಿ 8ಜಿಬಿ ಆಂತರಿಕ ಮೆಮೊರಿಯ ಐಫೋನನ್ನು ಆಪಲ್‌ 26,500 ಬೆಲೆಯಲ್ಲಿ ಬಿಡುಗಡೆ ಮಾಡಿತ್ತು.ಈಗ ಇದೇ ಐಫೋನಿಗೆ ಹತ್ತು ಸಾವಿರ ರೂಪಾಯಿ ಕಡಿಮೆ ಮಾಡಿ 15 ಸಾವಿರ ರೂಪಾಯಿ ಬೆಲೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ದೇಶೀಯ ಟೆಕ್‌ ವೆಬ್‌ಸೈಟ್‌ಗಳು ವರದಿ ಮಾಡಿವೆ.

ಅಮೆರಿಕ ಮತ್ತು ಯುರೋಪ್‌ ದೇಶದ ಈಗಾಗಲೇ ಐಫೋನ್‌ 4 ಮಾರಾಟವನ್ನು ಆಪಲ್‌ ಸ್ಥಗಿತಗೊಳಿಸಿದ್ದು, ಭಾರತದಲ್ಲಿ ಈಗಲೂ ಐಫೋನ್‌ 4 ಬೇಡಿಕೆ ಇರುವುದರಿಂದ ಮತ್ತೆ ಪುನಃ ಬಿಡುಗಡೆ ಮಾಡಲು ಆಪಲ್‌ ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಆಪಲ್‌ ಕಳೆದ ದೀಪಾವಳಿಯಲ್ಲಿ ಭಾರತದ ಮಾರುಕಟ್ಟೆಗೆ ಐಫೋನ್‌ 5ಎಸ್‌,5ಸಿ ಬಿಡುಗಡೆ ಮಾಡಿತ್ತು.ಈ ಎರಡು ಸ್ಮಾರ್ಟ್‌ಫೋನ್‌ಲ್ಲಿ ಐಫೋನ್‌ 5ಎಸ್‌ಗೆ ಈಗಲೂ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ.

ಭಾರತದ ಸೇರಿದಂತೆ ಏಷ್ಯಾದ ರಾಷ್ಟ್ರಗಳಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಜನ ಹೆಚ್ಚು ಖರೀದಿಸುತ್ತಿರುವ ಹಿನ್ನೆಲೆಯಲ್ಲಿ ಆ ಗ್ರಾಹಕರನ್ನು ಸೆಳೆಯಲು ಆಪಲ್‌ ಐಫೋನ್‌ 5ಸಿ ಯನ್ನು ಬಿಡುಗಡೆ ಮಾಡಿತ್ತು. ಆದರೆ ಆದರೆ ಕಡಿಮೆ ಬೆಲೆಯ ಐಫೋನ್‌ 5ಸಿ ಭಾರತದ ಮಾರುಕಟ್ಟೆಯಲ್ಲಿ ದುಬಾರಿಯಾಗಿದ್ದು, ಆಪಲ್‌ ನಿರೀಕ್ಷಿಸಿದಷ್ಟು ಐಫೋನ್‌‌ ಸಿ ಮಾರಾಟವಾಗದ ಕಾರಣ ಇದರ ಉತ್ಪಾದನೆಯನ್ನು ನಿಲ್ಲಿಸಿದೆ.

ತನ್ನ ಯೋಜನೆ ವಿಫಲವಾದ ಹಿನ್ನೆಲೆಯಲ್ಲಿ ಆಪಲ್‌‌ ಐಫೋನ್‌ 4, ಐಓಎಸ್‌ 4 ಒಳಗೊಂಡಿದ್ದರೂ,ಐಓಎಸ್‌ 7 ಅಪ್‌ಗ್ರೇಡ್‌ ಮಾಡಬಹುದಾಗಿರುವುದರಿಂದ ಬಿಡುಗಡೆ ಮಾಡಲು ಮುಂದಾಗಿದೆ. ಜೊತೆಗೆ ಗೂಗಲ್‌ನ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಮೋಟೋ ಜಿ ಸಹ ಜನವರಿ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇರುವುದರಿಂದ, ಭಾರತದಲ್ಲಿ ತನ್ನ ಬ್ರ್ಯಾಂಡ್‌ ಹೆಸರನ್ನು ಉಳಿಸಲು ಆಪಲ್‌ ಜನವರಿ 26ರ ಒಳಗೆ ಐಫೋನ್‌ 4ನ್ನು ಮತ್ತೆ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

 ಆಪಲ್‌ ಐಫೋನ್‌4 15 ಸಾವಿರ  ಬೆಲೆಯಲ್ಲಿ ಬಿಡುಗಡೆ!

ಐಫೋನ್‌ 4
ವಿಶೇಷತೆ:
ಸಿಂಗಲ್‌ ಸಿಮ್‌
3.5 ಇಂಚಿನ ಐಪಿಎಸ್‌ ಎಲ್‌ಸಿಡಿ ಸ್ಕ್ರೀನ್‌(640 x 960 ಪಿಕ್ಸೆಲ್‌)
ಐಓಎಸ್‌ 4
ಆಪಲ್‌ ಎ4 1 GHz ಕಾರ್ಟೆ‌ಕ್ಸ್‌ ಪ್ರೊಸೆಸರ್‌
512 ಎಂಬಿ ರ್‍ಯಾಮ್‌
8/16/32 ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
3ಜಿ,ಜಿಪಿಎಸ್‌‌,ವೈಫೈಬ್ಲೂಟೂತ್‌
1420 mAh ಬ್ಯಾಟರಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X