ಭಾರತದಲ್ಲಿ ಅಸುಸ್‌ನಿಂದ ವಿಶ್ವದ ಮೊದಲ 17 ಇಂಚಿನ ಫೋಲ್ಡೆಬಲ್‌ ಲ್ಯಾಪ್‌ಟಾಪ್‌ ಅನಾವರಣ!

|

ಅಸುಸ್‌ ಕಂಪೆನಿಯ ಜೆನ್‌ಬುಕ್‌ ಶ್ರೇಣಿಯ ಲ್ಯಾಪ್‌ಟಾಪ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಅದರಂತೆ ಆಸುಸ್‌ ಕಂಪೆನಿ ಕೂಡ ತನ್ನ ಜೆನ್‌ಬುಕ್‌ ಸರಣಿಯಲ್ಲಿ ಹೊಸ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಅಸುಸ್‌ ಹೊಸ ಜೆನ್‌ಬುಕ್‌ 17 ಫೋಲ್ಡ್‌ ಒಎಲ್‌ಇಡಿ ಲ್ಯಾಪ್‌ಟಾಪ್‌ ಲಾಂಚ್‌ ಮಾಡಿದೆ. ಇದು ವಿಶ್ವದ ಮೊದಲ 17 ಇಂಚಿನ ಫೋಲ್ಡೆಬಲ್‌ ಲ್ಯಾಪ್‌ಟಾಪ್‌ ಎಂಬ ಖ್ಯಾತಯನ್ನು ಕೂಡ ಪಡೆದುಕೊಂಡಿದೆ.

ಅಸುಸ್‌

ಹೌದು, ಅಸುಸ್‌ ಕಂಪೆನಿ ವಿಶ್ವದ ಮೊದಲ 17 ಇಂಚಿನ ಫೋಲ್ಡೆಬಲ್‌ ಲ್ಯಾಪ್‌ಟಾಪ್‌ ಅನ್ನು ಭಾರತದಲ್ಲಿ ಪರಿಚಯಿಸಿದೆ. ಇದನ್ನು ಬಳಕೆದಾರರು ಬಿಗ್‌ ಟ್ಯಾಬ್ಲೆಟ್ ಅಥವಾ ಕಾಂಪ್ಯಾಕ್ಟ್ ಮಾನಿಟರ್ ಆಗಿ ಕೂಡ ಬಳಸಬಹುದಾಗಿದೆ. ಇದನ್ನು ತೆರೆದ ರೂಪದಲ್ಲಿ, 12.5 ಇಂಚಿನ ವ್ಯೂ ಡಿಸ್‌ಪ್ಲೇ ಪಡೆದುಕೊಳ್ಳಬಹುದಾಗಿದೆ. ಈ ಲ್ಯಾಪ್‌ಟಾಪ್ ವೈ-ಫೈ 6E, ಡಾಲ್ಬಿ ಸ್ಪೀಕರ್‌ಗಳು, ಎರಡು ಥಂಡರ್‌ಬೋಲ್ಟ್ 4 ಪೋರ್ಟ್‌ಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಲ್ಯಾಪ್‌ಟಾಪ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಸುಸ್ ಜೆನ್‌ಬುಕ್‌ 17

ಅಸುಸ್ ಜೆನ್‌ಬುಕ್‌ 17 ಫೋಲ್ಡ್‌ ಒಎಲ್‌ಇಡಿ ಲ್ಯಾಪ್‌ಟಾಪ್‌ ಫೊಲ್ಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 17.3 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಹಾನಿಕಾರಕ ನೀಲಿ ಬೆಳಕನ್ನು ಕಡಿಮೆ ಮಾಡಲು TUV ರೈನ್ಲ್ಯಾಂಡ್-ಪ್ರಮಾಣೀಕರಿಸಲ್ಪಟ್ಟಿದೆ. ಈ ಡಿಸ್‌ಪ್ಲೇ 4:3 ರಚನೆಯ ಅನುಪಾತದಲ್ಲಿ 2560x1920 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಫೋಲ್ಡ್‌ ಮಾಡಿದಾಗ 3:2 ಅನುಪಾತದೊಂದಿಗೆ 1920x1280 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಬೆಂಬಲಿಸಲಿದೆ.

ಡಿಸ್‌ಪ್ಲೇ

ಇನ್ನು ಡಿಸ್‌ಪ್ಲೇ 100% DCI-P3 ಗ್ಯಾಮಟ್ ಅನ್ನು ಹೊಂದಿದ್ದು, 4:3 ರಚನೆಯ ಅನುಪಾತದೊಂದಿಗೆ ತೆರೆದ ಫಾರ್ಮ್ ಫ್ಯಾಕ್ಟರ್‌ನಲ್ಲಿ ಸ್ಕ್ರೀನ್‌ ರೆಸಲ್ಯೂಶನ್ ನೀಡುತ್ತದೆ ಎಂದು ಹೇಳಲಾಗಿದೆ. ಈ ಲ್ಯಾಪ್‌ಟಾಪ್‌ BOE ನೊಂದಿಗೆ ಡಿಸ್‌ಪ್ಲೇ ಕ್ರಿಯೆಟ್‌ ಮಾಡಿದೆ ಎಂದು ಸ್ಪಷ್ಟಪಡಿಸಿದೆ. ಇದು ಎರ್ಗೋಸೆನ್ಸ್ ಬ್ಲೂಟೂತ್ ಕೀಬೋರ್ಡ್‌ನೊಂದಿಗೆ ಬರುತ್ತದೆ, ಇದು ಕೇವಲ 5.5 ಮಿಮೀ ತೆಳುವಾದ ಮತ್ತು 300 ಗ್ರಾಂ ತೂಕವನ್ನು ಹೊಂದಿದೆ. ಇನ್ನು ಕೀಬೋರ್ಡ್ ಅನ್ನು ಕ್ಲಾಮ್‌ಶೆಲ್ ಓರಿಯಂಟೇಶನ್‌ನಲ್ಲಿ ಮಡಿಸಿದಾಗ ಆಯಸ್ಕಾಂತೀಯವಾಗಿ ಸ್ಕ್ರೀನ್‌ ಮೇಲೆ ಅಂಟಿಕೊಳ್ಳುತ್ತದೆ.

ಜೆನ್‌ಬುಕ್‌

ಇನ್ನು ಈ ಜೆನ್‌ಬುಕ್‌ 17 ಫೋಲ್ಡ್ OLED ಔಟ್‌ಸೈಡ್‌ನಲ್ಲಿ ಕವರ್‌ ಸ್ಕ್ರೀನ್‌ ಹೊಂದಿಲ್ಲ. ಇದು 12 ನೇ-ತಲೆಮಾರಿನ ಇಂಟೆಲ್ ಕೋರ್ i7-1250U ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 1TB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಲ್ಯಾಪ್‌ಟಾಪ್‌ ಐಆರ್‌ನೊಂದಿಗೆ 5-ಮೆಗಾಪಿಕ್ಸೆಲ್ ಕ್ಯಾಮೆರಾ ಮತ್ತು ಕೊರ್ಟಾನಾ ಮತ್ತು ಅಲೆಕ್ಸಾ ವಾಯ್ಸ್‌ ಅಸಿಸ್ಟೆಂಟ್‌ ಫೀಚರ್ಸ್‌ ಬೆಂಬಲವನ್ನು ಸಹ ನೀಡಲಿದೆ.

ಜೆನ್‌ಬುಕ್‌

ಜೆನ್‌ಬುಕ್‌ 17 ಫೋಲ್ಡ್ OLED ಲ್ಯಾಪ್‌ಟಾಪ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಎರಡು ಥಂಡರ್‌ಬೋಲ್ಟ್ 4 ಪೋರ್ಟ್‌ಗಳನ್ನು ಬೆಂಬಲಿಸಲಿದೆ. ಇದರಲ್ಲಿ ಪ್ರತಿಯೊಂದೂ 4K ಡಿಸ್‌ಪ್ಲೇ ಔಟ್‌ಪುಟ್ ಮತ್ತು 40 GB/s ಡೇಟಾ ವರ್ಗಾವಣೆ ವೇಗವನ್ನು ನೀಡುತ್ತವೆ. ಇದರೊಂದಿಗೆ ಟೈಪ್-ಸಿ ಪೋರ್ಟ್‌ಗಳು 65W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತವೆ. ಜೊತೆಗೆ ವೈ-ಫೈ 6E, ಬ್ಲೂಟೂತ್ 5.2, 75WHr ಬ್ಯಾಟರಿಯನ್ನು ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಅಸುಸ್‌ ಜೆನ್‌ಬುಕ್‌ 17 ಫೋಲ್ಡ್ OLED ಲ್ಯಾಪ್‌ಟಾಪ್‌ ಭಾರತದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ 329,990ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಲ್ಯಾಪ್‌ಟಾಪ್‌ ಕಳೆದ ಕೆಲವು ವಾರಗಳಿಂದ 2,84,290ರೂ. ಬೆಲೆಗೆ ಮುಂಗಡ ಬುಕ್ಕಿಂಗ್‌ಗೆ ಅವಕಾಶ ನೀಡಿರುವುದನ್ನು ಕೂಡ ಇಲ್ಲಿ ಗಮನಿಸಬಹುದಾಗಿದೆ. ಇದರ ಕಲರ್‌ ಆಯ್ಕೆಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Best Mobiles in India

Read more about:
English summary
Asus Zenbook 17 Fold OLED launched in India: Details

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X