ಬ್ಲೂಟೂತ್‌ ಕಾಲಿಂಗ್‌ ಬೆಂಬಲಿಸುವ ಸ್ಮಾರ್ಟ್‌ವಾಚ್‌ ಪರಿಚಯಿಸಿದ ಬೋಟ್‌!

|

ಸ್ಮಾರ್ಟ್‌ ವೆರಿಯಬೆಲ್ಸ್‌ ಮಾರುಕಟ್ಟೆಯಲ್ಲಿ ಬೋಟ್‌ ಕಂಪೆನಿ ಡಿವೈಸ್‌ಗಳಿಗೆ ಉತ್ತಮ ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಬೋಟ್‌ ಕಂಪೆನಿ ಕೂಡ ವಿವಿಧ ಮಾದರಿಯ ಸ್ಮಾರ್ಟ್‌ ವೆರಿಯೆಬಲ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇದರಲ್ಲಿ ಸ್ಮಾರ್ಟ್‌ವಾಚ್‌ಗಳು ಕೂಡ ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಇದೀಗ ಬೋಟ್‌ ಕಂಪೆನಿ ಭಾರತದಲ್ಲಿ ಬ್ಲೂಟೂತ್‌ ಕಾಲಿಂಗ್‌ ಬೆಂಬಲಿಸುವ ಹೊಸ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಇದಕ್ಕೆ ಬೋಟ್‌ ವೇವ್‌ ಅಲ್ಟಿಮಾ ಎಂದು ಹೆಸರಿಸಲಾಗಿದೆ.

ಬೋಟ್‌

ಹೌದು, ಬೋಟ್‌ ಕಂಪೆನಿ ಭಾರತದಲ್ಲಿ ಹೊಸ ಬೋಟ್‌ ವೇವ್‌ ಅಲ್ಟಿಮಾ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಬಿಗ್‌ ಸೂಪರ್-ಬ್ರೈಟ್ ಕ್ರ್ಯಾಕ್-ರೆಸಿಸ್ಟೆಂಟ್ ಕರ್ವ್ ಆರ್ಕ್ ಡಿಸ್‌ಪ್ಲೇ ಒಳಗೊಂಡಿದೆ. ಇದರಲ್ಲಿ ನೀವು ಪ್ರಮಾಣಿತ ಹೆಲ್ತ್‌ ಆಂಡ್‌ ಫಿಟ್‌ನೆಸ್ ಫೀಚರ್ಸ್‌ಗಳನ್ನು ನೀಡಲಾಗಿದೆ. ಇದರಲ್ಲಿ ನೀಡಲಾಗಿರುವ ಫಿಚರ್ಸ್‌ಗಳು ಯಾವುದೇ ಬ್ರ್ಯಾಂಡ್‌ ಕೂಡ ನೀಡಿಲ್ಲ ಎಂದು ಬೋಟ್‌ ಕಂಪೆನಿ ಹೇಳಿಕೊಂಡಿದೆ. ಹಾಗಾದ್ರೆ ಬೋಟ್‌ ವೇವ್‌ ಅಲ್ಟಿಮಾ ಸ್ಮಾರ್ಟ್‌ವಾಚ್‌ನಲ್ಲಿ ಏನೆಲ್ಲಾ ಫೀಚರ್ಸ್‌ಗಳನ್ನು ನೀಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ವಾಚ್‌

ಬೋಟ್‌ ವೇವ್‌ ಅಲ್ಟಿಮಾ ಸ್ಮಾರ್ಟ್‌ವಾಚ್‌ 1.8-ಇಂಚಿನ ಬಾಗಿದ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 500 ನಿಟ್ಸ್ ಬ್ರೈಟ್‌ನೆಸ್‌ ಒಳಗೊಂಡಿದೆ. ಇದು ಎಡ್ಜ್-ಟು-ಎಡ್ಜ್ ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಫೀಚರ್ಸ್‌ ಹೊಂದಿದೆ. ಈ ಸ್ಮಾರ್ಟ್‌ವಾಚ್‌ ಇನ್‌ಬಿಲ್ಟ್‌ HD ಸ್ಪೀಕರ್ ಅನ್ನು ಹೊಂದಿದ್ದು, ಇದು ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಬೆಂಬಲಿಸಲಿದೆ. ಇದರಲ್ಲಿರುವ ಆನ್‌ಬೋರ್ಡ್ ಕನೆಕ್ಟಿವಿಟಿಗಳ ಮೂಲಕ ಯಾವುದೇ ಸಮಯದಲ್ಲಿ, ಎಲ್ಲಿಯಾದರೂ ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸಂಪರ್ಕ ಸಾಧಿಸಬಹುದು.

ಸ್ಮಾರ್ಟ್‌ವಾಚ್‌

ಬೋಟ್‌ ವೇವ್‌ ಅಲ್ಟಿಮಾ ಸ್ಮಾರ್ಟ್‌ವಾಚ್‌ ಸೂಪರ್-ಸೆನ್ಸಿಟಿವ್ ಮೈಕ್ರೊಫೋನ್ ಒಳಗೊಂಡಿರುವುದರಿಂದ, ನಿಮ್ಮ ಸುತ್ತಲಿನ ವಾತಾವರಣದಲ್ಲಿನ ಗದ್ದಲದಿಂದ ದೂರವಿರಲು ಸಹಾಯ ಮಾಡಲಿದೆ. ಇದಲ್ಲದೆ ನಿಮ್ಮ ಆಂಬಿಯೆಂಟ್‌ ವಾತಾವರಣವನ್ನು ಮೇಲ್ವಿಚಾರಣೆ ಮಾಡಲು ನಾಯ್ಸ್‌ ಸೆನ್ಸಾರ್‌ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ. ನೀವು ಫಿಟ್ ಮತ್ತು ಆರೋಗ್ಯಕರವಾಗಿರಲು ಸಹಾಯ ಮಾಡಲು ಹಲವು ಸೆನ್ಸರ್‌ಗಳನ್ನು ಕೂಡ ಅಳವಡಿಸಲಾಗಿದೆ.

ಸ್ಮಾರ್ಟ್‌ವಾಚ್‌

ಇನ್ನು ಈ ಸ್ಮಾರ್ಟ್‌ವಾಚ್‌ ಆಟೋ ವರ್ಕ್-ಔಟ್ ಡಿಟೆಕ್ಷನ್‌ ಮತ್ತು ವಾಕಿಂಗ್, ರನ್ನಿಂಗ್‌, ಸ್ವಿಮ್ಮಿಂಗ್‌, ಯೋಗ ಸೇರಿದಂತೆ 100+ ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ. ಬೋಟ್‌ನ ಈ ಸ್ಮಾರ್ಟ್‌ವಾಚ್‌ ಹಸ್ಲ್ ಅನ್ನು ಟ್ರ್ಯಾಕ್ ಮಾಡಲು ನಿಮಗೆ ಅನುಮತಿಸುತ್ತದೆ. ಇದು ಹೃದಯ ಬಡಿತ ಮತ್ತು SpO2 ಮಾನಿಟರಿಂಗ್‌ ಮೂಲಕ ಪ್ರಯಾಣದಲ್ಲಿರುವಾಗ ನಿಮ್ಮ ಹೃದಯ ಬಡಿತ ಮತ್ತು ರಕ್ತದ ಆಮ್ಲಜನಕದ ಮಟ್ಟವನ್ನು ಟ್ರ್ಯಾಕ್‌ ಮಾಡಲಿದೆ. ಇದು ನಿಮ್ಮ ಪ್ರಸ್ತುತ ಒತ್ತಡದ ಮಟ್ಟವನ್ನು ಟ್ರ್ಯಾಕ್ ಮಾಡುವ ಒತ್ತಡದ ಮಾನಿಟರಿಂಗ್ ಅನ್ನು ಸಹ ಒಳಗೊಂಡಿದೆ.

ಅಲ್ಟಿಮಾ

ಬೋಟ್‌ ವೇವ್‌ ಅಲ್ಟಿಮಾ ಸ್ಮಾರ್ಟ್‌ವಾಚ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್ v5.3 ಅನ್ನು ಬೆಂಬಲಿಸುತ್ತದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ IP68 ಧೂಳು, ಬೆವರು ಮತ್ತು ಸ್ಪ್ಲಾಶ್ ಪ್ರೂಫ್‌ ಅನ್ನು ಹೊಂದಿದೆ. ಇದು 10 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಈ ಸ್ಮಾರ್ಟ್‌ವಾಚ್‌ ಬೋಟ್‌ ಕಂಪೆನಿಯ ಕರ್ವ್ಡ್‌ ಡಿಸ್‌ಪ್ಲೇಯನ್ನು ಹೊಂದಿರುವ ಕಂಪನಿಯ ಮೊದಲ ಸ್ಮಾರ್ಟ್ ವಾಚ್‌ ಆಗಿದ್ದು, ಬಿಗ್‌ ಸೂಪರ್-ಬ್ರೈಟ್ ಕ್ರ್ಯಾಕ್-ರೆಸಿಸ್ಟೆಂಟ್ ಕರ್ವ್ ಆರ್ಕ್ ಡಿಸ್‌ಪ್ಲೇ ಒಳಗೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಬೋಟ್‌ ವೇವ್‌ ಅಲ್ಟಿಮಾ ಸ್ಮಾರ್ಟ್‌ವಾಚ್‌ ಭಾರತದಲ್ಲಿ 2,999 ರೂ. ಬೆಲೆಯಲ್ಲಿ ಬರಲಿದೆ. ಈ ಸ್ಮಾರ್ಟ್‌ ವಾಚ್ ರೇಜಿಂಗ್ ರೆಡ್, ಆಕ್ಟಿವ್ ಬ್ಲ್ಯಾಕ್ ಮತ್ತು ಟೀಲ್ ಗ್ರೀನ್ ಸೇರಿದಂತೆ ಮೂರು ವಿಭಿನ್ನ ಸ್ಟ್ರಾಪ್ ಆಯ್ಕೆಗಳಲ್ಲಿ ಬರುತ್ತದೆ. ಇದು ಬೋಟ್‌ ಮತ್ತು ಫ್ಲಿಪ್‌ಕಾರ್ಟ್‌ನ ಅಧಿಕೃತ ವೆಬ್‌ಸೈಟ್‌ ಮೂಲಕ ಖರೀದಿಸಬಹುದಾಗಿದೆ.

Best Mobiles in India

English summary
boAt Wave Ultima with large display launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X