ಪಾಸ್‌ವರ್ಡ್‌ ಆಗಿ ಬೆವರು:ಸಂಶೋಧಕರಿಂದ ಹೊಸ ತಂತ್ರಜ್ಞಾನ ಅಭಿವೃದ್ಧಿ

By Ashwath
|

ಬೆವರು ಕೆಟ್ಟ ವಾಸನೆ ಎಂದು ಹೇಳಿ ಇನ್ನು ವರಿ ಮಾಡಬೇಕಿಲ್ಲ.ಈ ಬೆವರಿನ ವಾಸನೆ ಭವಿಷ್ಯದಲ್ಲಿ ನಿಮ್ಮ ಗುರುತನ್ನು ಪತ್ತೆ ಹಚ್ಚಲು ಬಳಸಿದರೂ ಆಶ್ಚರ್ಯ‌ವಿಲ್ಲ.

ಇಂಟರ್‌ನೆಟ್‌ನಲ್ಲಿ ಗ್ರಾಹಕರು ತಮ್ಮ ಪಾಸ್‌ವರ್ಡ್‌ ಸುರಕ್ಷತೆಗಾಗಿ ಎಷ್ಟೇ ಕ್ರಮಗಳನ್ನು ಅನುಸರಿಸಿದರೂ ಹ್ಯಾಕರ್‌ಗಳು ಪಾಸ್‌ವರ್ಡ್‌ನ್ನು ಪತ್ತೆ ಮಾಡಿ ಬಳಕೆದಾರರ ಅಕೌಂಟ್‌‌‌ನ್ನು ಹ್ಯಾಕ್‌ ಮಾಡುತ್ತಾರೆ. ಈ ಹ್ಯಾಕರ್‌ಗಳಿಂದ ಮುಕ್ತಿ ಪಡೆಯಲು ವಿಶ್ವದಲ್ಲಿ ವ್ಯಕ್ತಿಯ ಗುರುತನ್ನು ನಿಖರವಾಗಿ ಪತ್ತೆ ಮಾಡಲು ವಿವಿಧ ರೀತಿಯ ಪಾಸ್‌ವರ್ಡ್‌ನ್ನು ಸಂಶೋಧಕರು ಅಭಿವೃದ್ಧಿ ಪಡಿಸುತ್ತಿದ್ದಾರೆ. ಈ ಸಂಶೋಧನೆಗೆ ಹೊಸ ಸೇರ್ಪಡೆಯಾಗಿ ಸಂಶೋಧಕರು ವ್ಯಕ್ತಿಯ ಬೆವರೇ ಆತನ ಗುರುತನ್ನು ಪತ್ತೆ ಹಚ್ಚಲು ಬಳಕೆಯಾಗುವಂತಹ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಮುಂದಾಗುತ್ತಿದ್ದಾರೆ.

ಸ್ಪೇನ್‌ನ Universidad Politecnica de Madrid ವಿವಿ ಸಂಶೋಧಕರು ಟೆಕ್‌ ಸಂಸ್ಥೆ IIia Sistemas SL ಜೊತೆಗೂಡಿ ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ.ಈ ತಂತ್ರಜ್ಞಾನ ವಿಮಾನ ನಿಲ್ದಾಣ,ಗಡಿ ತಪಾಸಣಾ ಕೇಂದ್ರದಲ್ಲಿ,ಪಾಸ್‌ವರ್ಡ್‌‌‌ ಹೆಚ್ಚಿನ ಉಪಯೋಗವಾಗಲಿದ್ದು,ಬೆವರಿನಲ್ಲಿರುವ ವಾಸನೆಯ ಮೂಲಕ ಶೇ.85ರಷ್ಟು ನಿಖರವಾಗಿ ವ್ಯಕ್ತಿಯ ಗುರುತನ್ನು ಪತ್ತೆ ಹಚ್ಚಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ಮುಂದಿನ ಪುಟದಲ್ಲಿ ವಿಶ್ವದಲ್ಲಿ ಬಯೋಮೆಟ್ರಿಕ್ ಪಾಸ್‌ವರ್ಡ್‌ ಸಂಬಂಧಿಸಿದಂತೆ ನಡೆದಿರುವ ಮತ್ತು ನಡೆಯುತ್ತಿರುವ ವಿವಿಧ ರೀತಿಯ ಸಂಶೋಧನೆಗಳ ಕಿರು ಮಾಹಿತಿ ನೀಡಲಾಗಿದೆ.

ಪಾಸ್‌ವರ್ಡ್‌ ಆಗಿ ಬೆವರು:ಸಂಶೋಧಕರಿಂದ ಹೊಸ ತಂತ್ರಜ್ಞಾನ ಅಭಿವೃದ್ಧಿ

ಪಾಸ್‌ವರ್ಡ್‌ ಆಗಿ ಬೆವರು:ಸಂಶೋಧಕರಿಂದ ಹೊಸ ತಂತ್ರಜ್ಞಾನ ಅಭಿವೃದ್ಧಿ


ಫೋನ್‌ ಬ್ಯಾಕಿಂಗ್‌ ವ್ಯವಹಾರದಲ್ಲಿ ಗ್ರಾಹಕರ ಪಿನ್‌ ಮತ್ತು ಪಾಸ್‌ವರ್ಡ್‌ಗಳನ್ನು ಹ್ಯಾಕರ್‌ಗಳು ಕದಿಯುತ್ತಿರುವ ಹಿನ್ನೆಲೆಯಲ್ಲಿ ಫೋನ್ ಬ್ಯಾಂಕಿಂಗ್ ದೃಢೀಕರಿಸಲು ಧ್ವನಿಯಾಧರಿತ ಬಯೋಮೆಟ್ರಿಕ್ಸ್‌‌(voice biometrics) ಪಾಸ್‌ವರ್ಡ್‌ ಅಳವಡಿಸಲು ಬ್ಯಾಂಕ್‌‌ಗಳು ಚಿಂತನೆ ನಡೆಸಿವೆ. ಬೆರಳಚ್ಚು(fingerprint) ಅಥವಾ ಐರಿಸ್ ಗುರುತಿಸುವಿಕೆಗಿಂತಲೂ(iris recognition ) ಧ್ವನಿಯಾಧರಿತ ಬಯೋಮೆಟ್ರಿಕ್ಸ್‌ ಪಾಸ್‌ವರ್ಡ್‌ ಉತ್ತಮ ಎಂದು ನಿರ್ಧಾರಕ್ಕೆ ಬಂದಿರುವ ಬ್ಯಾಂಕ್‌ಗಳು ಈ ಸೇವೆಗಳನ್ನು ಅನುಷ್ಟಾನಗೊಳಿಸಲು ಅಮೆರಿಕದ ನುನಾಸ್ಸ್‌(Nuance) ಸಂಸ್ಢೆಯೊಂದಿಗೆ ಚರ್ಚಿಸಿವೆ.

ಪಾಸ್‌ವರ್ಡ್‌ ಆಗಿ ಬೆವರು:ಸಂಶೋಧಕರಿಂದ ಹೊಸ ತಂತ್ರಜ್ಞಾನ ಅಭಿವೃದ್ಧಿ

ಪಾಸ್‌ವರ್ಡ್‌ ಆಗಿ ಬೆವರು:ಸಂಶೋಧಕರಿಂದ ಹೊಸ ತಂತ್ರಜ್ಞಾನ ಅಭಿವೃದ್ಧಿ


ಮೋಟರೋಲಾ ಕಂಪೆನಿ ಈಗ ಬಳಕೆಯಾಗುತ್ತಿರುವ ಪಾಸವರ್ಡ್ ಬದಲಿಗೆ ಎಲೆಕ್ಟ್ರಾನಿಕ್ ಟ್ಯಾಟೋ ಅಥವಾ ಬಯೋಸ್ಟ್ಯಾಂಪ್‌ ಪಾಸ್‌ವರ್ಡ್‌‌ನ್ನು ಅಭಿವೃದ್ಧಿ ಪಡಿಸುತ್ತಿದೆ.

ಪಾಸ್‌ವರ್ಡ್‌ ಆಗಿ ಬೆವರು:ಸಂಶೋಧಕರಿಂದ ಹೊಸ ತಂತ್ರಜ್ಞಾನ ಅಭಿವೃದ್ಧಿ

ಪಾಸ್‌ವರ್ಡ್‌ ಆಗಿ ಬೆವರು:ಸಂಶೋಧಕರಿಂದ ಹೊಸ ತಂತ್ರಜ್ಞಾನ ಅಭಿವೃದ್ಧಿ


ವ್ಯಕ್ತಿಯ ಚಹರೆ ಗುರುತಿಸಲು ಹೆಚ್ಚು ಬಳಕೆಯಾಗುತ್ತಿರುವ ತಂತ್ರಜ್ಞಾನ. ಹ್ಯಾಕರ್‌‌ಗಳು ಈ ತಂತ್ರಜ್ಞಾನವನ್ನು ಈಗಾಗಲೇ ಹ್ಯಾಕ್‌ ಮಾಡಿದ್ದಾರೆ.ಐಫೋನ್‌ 5 ಎಸ್‌ನಲ್ಲಿ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ನೊಂದಿಗೆ ಬಿಡುಗಡೆಯಾಗಿದ್ದರೂ,ಬಿಡುಗಡೆಯಾದ ಎರಡೇ ವಾರದೊಳಗೆ ಈ ತಂತ್ರಜ್ಞಾನವನ್ನು ಹ್ಯಾಕ್‌ ಮಾಡಿದ್ದಾರೆ.

ಪಾಸ್‌ವರ್ಡ್‌ ಆಗಿ ಬೆವರು:ಸಂಶೋಧಕರಿಂದ ಹೊಸ ತಂತ್ರಜ್ಞಾನ ಅಭಿವೃದ್ಧಿ

ಪಾಸ್‌ವರ್ಡ್‌ ಆಗಿ ಬೆವರು:ಸಂಶೋಧಕರಿಂದ ಹೊಸ ತಂತ್ರಜ್ಞಾನ ಅಭಿವೃದ್ಧಿ


ಇಂದು ಲಭ್ಯವಿರುವ ಎಲ್ಲಾ ಬಯೋಮೆಟ್ರಿಕ್ ಸಾಧನಗಳು ಮತ್ತು ಸ್ಕ್ಯಾನರುಗಳ ಪೈಕಿ, ಕಣ್ಣಿನ ಸ್ಕ್ಯಾನರ್‌ ಉತ್ತಮ ಎಂದು ಹೇಳಲಾಗುತ್ತಿದೆ.ಕಣ್ಣು ಪೊರೆಗಳ ಗುರುತು ಅತ್ಯಂತ ನಿಖರವಾಗಿರುತ್ತದೆ .ವ್ಯಕ್ತಿಯ ದೇಹದಲ್ಲಿ ಯಾವುದೇ ಭಾಗದಲ್ಲಿ ಗಾಯವಾದರೂ ಕಣ್ಣಿಗೆ ಗಾಯವಾಗುವುದು ಬಹಳ ಅಪರೂಪ. ಆಧಾರ್‌ ಕಾರ್ಡ್‌ನಲ್ಲಿ ಬೆರಳಚ್ಚಿನ ಜೊತೆಗೆ ಕಣ್ಣಿನ ಸ್ಕ್ಯಾನರ್‌ ಸಹ ಇದೇ ಕಾರಣಕ್ಕೆ ಮಾಡಲಾಗುತ್ತಿದೆ. ಮುಂದೆ ಬಿಡುಗಡೆಯಾಗಲಿರುವ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಸ್ಮಾರ್ಟ್‌‌ಫೋನ್‌‌‌‌ ಈ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X