Subscribe to Gizbot

ಶೂ ಮೂಲಕ ಮೊಬೈಲ್‌ ಚಾರ್ಜ್‌ಮಾಡಿ!

Posted By: Staff
ಶೂ ಮೂಲಕ ಮೊಬೈಲ್‌ ಚಾರ್ಜ್‌ಮಾಡಿ!

ಶೂ ಮೂಲಕ ನಿಮ್ಮ ಐಫೋನ್‌ ಅಥವಾ ಐಪ್ಯಾಡ್‌ ಚಾರ್ಜ್‌ ಮಾಡುವ ತಂತ್ರಜ್ಞಾನ ಬಂದಿದೆ ಎಂದರೆ ಯಾರಿಗೆ ತಾನೆ ಆಶ್ಚರ್ಯವಾಗುವುದಿಲ್ಲ ಹೇಳಿ? ಅಂದಹಾಗೆ ಈ ಸುದ್ಧಿ ನಿಜವಾಗಿದ್ದು ಯುಕೆ ಮೂಲದ ದಿಗ್ಗಜ ದೂರಸಂಪರ್ಕ ಸಂಸ್ಥೆಗಳಾದಂತಹ ಆರೆಂಜ್‌ ಹಾಗೂ ಗ್ರಾಂಟ್‌ವಿಂಡ್‌ ಜೊತೆಗೂಡಿ ನೂತನ ಶೂ ಒಂದೊಂದನ್ನು ಆವಿಷ್ಕರಿಸಿದ್ದು ಈ ಶೂ ನೀವು ನಡೆಯುವಾಗ ಅಥವಾ ಡಾನ್ಸ್‌ ಮಾಡುವಾಗ ವಿದ್ಯುತ್‌ ಉತ್ಪಾದನೆ ಮಾಡಬಲ್ಲದ್ದಾಗಿದೆ ಅಲ್ಲದೆ ಈ ವಿದ್ಯುತ್‌ ಮೂಲಕ ನಿವು ನಿಮ್ಮ ಐಫೋನ್‌ ಇಲ್ಲಾ ಐಪ್ಯಾಡ್‌ ಅನ್ನು ಚಾರ್ಜ್‌ ಕೂಡಾ ಮಾಡಿಕೊಳ್ಳ ಬಹುದಾಗಿದೆ.

ವೆಲ್ಲಿಂಗ್‌ಟನ್‌ ಹೆಸರಿನ ಈ ವಿಶೇಷ ಶೂ ಶಾಕವನ್ನು ವಿದ್ಯುತ್‌ ಶಕ್ತಿಯನ್ನಾಗಿ ಪರಿವರ್ತಿಸಬಲ್ಲ ತಂತ್ರಜ್ಞಾನನ ಹೊಂದಿದ್ದು, ಈ ತಂತ್ರಜ್ಞಾನನದ ಮೂಲಕ ಪವರ್‌ ಜನರೇಟ್‌ ಆಗುತ್ತದೆ. ಸಂಸ್ಥೆಯ ಪ್ರಕಾರ ನೀವು 12 ಗಂಟೆಗಳ ಕಾಲ ಈ ಶೂ ಧರಿಸಿದ್ದಲ್ಲಿ ನಿಮ್ಮಲ್ಲಿನ ಆಪಲ್‌ ಸಾಧನವನ್ನು ಸಂಪೂರ್ಣವಾಗಿ ಚಾರ್ಜ್‌ ಮಾಡಿಕೊಳ್ಳ ಬಹುದಾಗಿದೆ. ಅಂದಹಾಗೆ ಭಾರತಕ್ಕೆ ಇನ್ನೂ ಈ ವಿನೂತನ ಶೂ ಕಾಲಿರಿಸಿಲ್ಲ. ಅಲ್ಲದೆ ಈಮೊದಲು ಟಿ ಶರ್ಟ್‌ ಸೇರಿದಂತೆ ವಿವಿಧ ವಸ್ಥುಗಳ ಮೂಲಕ ಐಫೋನ್‌ ಚಾರ್ಜ್‌ ಮಾಡಬಹುದಾದಂತಹ ಉಪಕರಣಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot