ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಸೇಲ್‌: ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್‌!

|

ಜನಪ್ರಿಯ ಇ-ಕಾಮರ್ಸ್‌ ತಾಣ ಅಮೆಜಾನ್‌ ವಿಶೇಷ ದಿನಗಳಂದು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವಿಶೇಷ ಸೇಲ್‌ ಅನ್ನು ಆಯೋಜಿಸುತ್ತಲೇ ಬಂದಿದೆ. ಆನ್‌ಲೈನ್‌ ಗ್ರಾಹಕರನ್ನು ಸೆಳೆಯುವ ಉದ್ದೇಶದಿಂದ ಆಕರ್ಷಕ ರಿಯಾಯಿತಿಗಳನ್ನು ನೀಡುತ್ತಿದೆ. ಸದ್ಯ ಇದೀಗ ಇದೇ ಫೆಬ್ರವರಿ 22 ರಂದು ಅಮೆಜಾನ್ ಭಾರತದಲ್ಲಿ ಮತ್ತೊಂದು 'ಫ್ಯಾಬ್ ಫೋನ್ ಫೆಸ್ಟ್ ಸೇಲ್' ಅನ್ನು ಆಯೋಜಿಸಲು ಸಜ್ಜಾಗಿದೆ. ಈ ಸಮಯದಲ್ಲಿ, ಇ-ಕಾಮರ್ಸ್ ದೈತ್ಯ ಇತ್ತೀಚೆಗೆ ಬಿಡುಗಡೆಯಾದ ಮಧ್ಯ ಶ್ರೇಣಿಯ ಮತ್ತು ಸ್ಯಾಮ್‌ಸಂಗ್ ಸೇರಿದಂತೆ ಪ್ರಮುಖ ಬ್ರಾಂಡ್‌ಗಳ ಬಜೆಟ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ನೀಡಲಿದೆ.

ಅಮೆಜಾನ್‌

ಹೌದು, ಅಮೆಜಾನ್‌ ತನ್ನ ಆನ್‌ಲೈನ್‌ ಗ್ರಾಹಕರಿಗೆ ಫ್ಯಾಬ್ ಫೋನ್ ಫೆಸ್ಟ್ ಸೇಲ್ ಅನ್ನು ಇದೇ ಫೆಬ್ರವರಿ 22 ರಂದು ಆಯೋಜಿಸಿದೆ. ಇನ್ನು ಈ ಸೇಲ್‌ನಲ್ಲಿ ಹಲವಾರು ರಿಯಾಯಿತಿಗಳಲ್ಲಿ, ಶಿಯೋಮಿಯ ರೆಡ್‌ಮಿ ಸರಣಿಯ ಹ್ಯಾಂಡ್‌ಸೆಟ್‌ಗಳ ಮೇಲೆ ಆಕರ್ಷಕ ರಿಯಾಯಿತಿಯನ್ನು ನೀಡುತ್ತಿದೆ. ಹಾಗಾದ್ರೆ ಈ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ 2021

ಅಮೆಜಾನ್ ತನ್ನ ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ 2021ನಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ರಿಯಾಯಿತಿ ಮತ್ತು ಬೆಲೆ ಕಡಿತವನ್ನು ತಂದಿದೆ. ಶಿಯೋಮಿ ರೆಡ್ಮಿ, ಸ್ಯಾಮ್ಸಂಗ್, ಒಪ್ಪೊ ಸೇರಿದಂತೆ ಹೆಚ್ಚು ಮಾರಾಟವಾಗುವ ಬ್ರಾಂಡ್‌ಗಳ ಮೇಲೆ ರಿಯಾಯಿತಿ ಕೊಡುಗೆಗಳನ್ನು ನೀಡಲಿದೆ. ವೆಬ್ ಪೋರ್ಟಲ್ ಅಥವಾ ಅಮೆಜಾನ್ ಅಪ್ಲಿಕೇಶನ್‌ನಲ್ಲಿ ರಿಯಾಯಿತಿ ಕೊಡುಗೆಗಳನ್ನು ನೀವು ಪರಿಶೀಲಿಸಬಹುದು. ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ 2021 ಹಲವಾರು ಸ್ಮಾರ್ಟ್‌ಫೋನ್‌ಗಳಲ್ಲಿ ಭಾರಿ ಬೆಲೆ ಕಡಿತವನ್ನು ಹೊಂದಿದೆ. ಈ ಪಟ್ಟಿಯಲ್ಲಿ ಶಿಯೋಮಿಯ ಉಪ-ಬ್ರಾಂಡ್ ರೆಡ್‌ಮಿಯ ಸ್ಮಾರ್ಟ್‌ಫೋನ್‌ಗಳು ಸೇರಿವೆ.

ಅಮೆಜಾನ್

ಇನ್ನು ಅಮೆಜಾನ್ ಪ್ರಕಟಿಸಿದ ಮಾರಾಟ ಪುಟದ ಪ್ರಕಾರ, 42,999 ರೂ ಮೂಲ ಬೆಲೆಯನ್ನು ಹೊಂದಿರುವ ಒನ್‌ಪ್ಲಸ್ 8T ರಿಯಾಯಿತಿ ದರದಲ್ಲಿ 36,999 ರೂಗ ಬೆಲೆಗೆ ಲಭ್ಯವಿರುತ್ತದೆ. ಒನ್‌ಪ್ಲಸ್ 8T ಯಲ್ಲಿ ನಿಮಗೆ 6,000 ರೂ ರಿಯಾಯಿತಿ ಸಿಗಲಿದೆ. ಜೊತೆಗೆ ಅಮೆಜಾನ್ ನಿಮಗೆ 3,000 ರೂ ರಿಯಾಯಿತಿ ಕೂಪನ್ ಮತ್ತು ಬ್ಯಾಂಕ್ ಆಫರ್ ನೀಡಲಿದ್ದು, ಇದು ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ ಪುಟದ ಪ್ರಕಾರ ಬೆಲೆಯನ್ನು 36,999 ರೂಗಳಿಗೆ ಇಳಿಸುತ್ತದೆ.

ಸ್ಯಾಮ್‌ಸಂಗ್

ಅಲ್ಲದೆ, ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 20 ಅಲ್ಟ್ರಾ 5G ಶೇ 9 ರಷ್ಟು ರಿಯಾಯಿತಿ ಪಡೆಯುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ 2021 ನಲ್ಲಿ ಶೇಕಡಾ 38 ರಷ್ಟು ಬೆಲೆ ಕಡಿತವನ್ನು ಪಡೆಯುತ್ತದೆ. ಇದಲ್ಲದೆ ಹೊಸದಾಗಿ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 21 ಪ್ಲಸ್ 5G 18% ರಿಯಾಯಿತಿಯನ್ನು ಪಡೆದುಕೊಂಡಿದೆ. ಇದಲ್ಲದೆ ಹೆಚ್ಚುವರಿಯಾಗಿ, ಅಮೆಜಾನ್ ಫ್ಯಾಬ್ ಫೋನ್ಸ್ ಫೆಸ್ಟ್ 2021 ನಲ್ಲಿ ಒಪ್ಪೊ ಎ 31 ಮತ್ತು ಪ್ರೀಮಿಯಂ ಒಪ್ಪೊ ಎಫ್ 17 ಪ್ರೊ ಸ್ಮಾರ್ಟ್‌ಫೋನ್‌ಗಳ ಮೇಲೆ ಕೂಡ ಭಾರಿ ಡಿಸ್ಕೌಂಟ್‌ ಅನ್ನು ಪಡೆದುಕೊಳ್ಳಬಹುದಾಗಿದೆ.

Most Read Articles
Best Mobiles in India

English summary
Check Out Amazon Fab Phones Fest Offers On Smartphones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X