Home
ಸುದ್ದಿಜಾಲ

29ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಜುಕರ್‌ಬರ್ಗ್‌

By Ashwath

ವಿಶ್ವದ ನಂಬರ್‌ ಒನ್‌ ಸೋಶಿಯಲ್‌ ನೆಟ್‌ವರ್ಕ್ ಫೇಸ್‌ಬುಕ್‌ನ್ನು ಹುಟ್ಟು ಹಾಕಿದ ಮಾರ್ಕ್ ಜುಕರ್‌ಬರ್ಗ್‌ ಅವರಿಗೆ ಇಂದು(ಮೇ.14) 29 ವರ್ಷದ ಹುಟ್ಟುಹಬ್ಬದ ಸಂಭ್ರಮ. ಅಮೆರಿಕದ ವೈಟ್‌ ಪ್ಲೈನ್‌ಲ್ಲಿ 1984ರಲ್ಲಿ ಜನಿಸಿದ ಜುಕರ್‌ಬರ್ಗ್ ಇಂದು ತಮ್ಮ ಸಾಧನೆಯಿಂದಾಗಿ ವಿಶ್ವದ ಕಿರಿಯ ಬಿಲಿಯನೇರ್‌ ಪಟ್ಟವನ್ನುಗಳಿಸಿದ್ದಾರೆ. ಫೇಸ್‌ಬುಕ್ ಹೇಗೆ ಇಂದು ಜನಪ್ರಿಯವಾಗಿದೆಯೋ ಅದೇರೀತಿಯಾಗಿ ಜುಕರ್‌ಬರ್ಗ್‌ ಸಹ ಇಂದು ವಿಶ್ವದಲ್ಲೇ ಜನಪ್ರಿಯ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ.

ವ್ಯಕ್ತಿಯ ಜನಪ್ರಿಯತೆ ಹೆಚ್ಚಿದಂತೆ ಅವರ ಕುರಿತಾದ ಅಪಪ್ರಚಾರಗಳೂ ಹಾಗೂ ಸುಳ್ಳು ವದಂತಿಗಳು ಕೂಡಾ ಹೆಚ್ಚುತ್ತಾ ಹೋಗುವುದು ಸಾಮಾನ್ಯ. ಈ ರೀತಿಯ ಸುಳ್ಳು ವದಂತಿಗಳು ಜುಕರ್‌ಬರ್ಗ್‌ ಕುರಿತಾಗಿ ವಿಶ್ವದೆಲ್ಲೆಡೆ ಹರಡಿದೆ. ಜುಕರ್‌ಬರ್ಗ್ ಕುರಿತಾಗಿ ಸಾಕಷ್ಟು ಮಿಥ್‌ಗಳು ಇಂದು ತಲೆ ಎತ್ತಿವೆ.ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಜುಕರ್‌ಬರ್ಗ್‌ ಕುರಿತಾಗಿ ಹರಡಿರುವಂತಹ ಮಿಥ್‌ ಮತ್ತು ಅವರ ಕುರಿತಾದ ಇಂಟರೆಸ್ಟಿಂಗ್‌ ಸುದ್ದಿಗಳನ್ನು ತಂದಿದೆ.ಒಂದೊಂದೆ ಪುಟ ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ : ಫೇಸ್‌ಬುಕ್‌ ನಂ.1 ಸೋಷಿಯಲ್‌ ನೆಟ್‌ವರ್ಕ್‌ ಆಗಿದ್ದು ಹೇಗೆ?

1

1

ಮಾರ್ಕ್‌ ಜುಕರ್‌ಬರ್ಗ್‌ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂದು ಕರೆಯಲಾಗುತ್ತದೆ. ಆದರೆ ವಾಸ್ತವದಲ್ಲಿ ಮಾರ್ಕ್‌ ಜುಕರ್‌ಬರ್ಗ್‌ ವಿಶ್ವದ ಅದರಲ್ಲಿಯೂ ತಾಂತ್ರಿಕ ಲೋಕದ ಯುವ ಕೋಟ್ಯಾಧಿಪತಿಗಳ ಸಾಲಿನಲ್ಲಿ ಮಾತ್ರವಷ್ಟೇ ಅಗ್ರಪಟ್ಟಿಯಲ್ಲಿ ಕಾಣಸಿಗುತ್ತಾರೆ.2012 ರಲ್ಲಿ ಅತ್ಯಧಿಕ ಆದಾಯ ಪಡೆದಿರುವ ಸಿಇಓಗಳ ಪಟ್ಟಿಯಲ್ಲಿ ಜುಕರ್‌ಬರ್ಗ್‌ ನಂಬರ್‌ ಒನ್‌ ಸ್ಥಾನಪಡೆದಿದ್ದಾರೆ.

2

2

ಮಾರ್ಕ್ ಜುಕರ್‌ಬರ್ಗ್‌ ಕುರಿತಾಗಿ ಹಬ್ಬಿರುವ ಮತ್ತೊಂದು ವದಂತಿ ಆತ ಮಾಹಾನ್‌ ದುರಹಂಕಾರಿ ಹಾಗೂ ಹಟವಾದಿ.ಆದರೆ ವಾಸ್ತವದಲ್ಲಿ ಜುಕರ್‌ಬರ್ಗ್‌ ಈ ಸ್ವಭಾವ ಹೊಂದಿಲ್ಲ. ಕಾಲೇಜು ಸಹಪಾಟಿಗಳ ಪ್ರಕಾರ ಜುಕರ್‌ಬರ್ಗ್‌ ತೀರಾ ಸೌಮ್ಯ ಸ್ವಭಾವದ ವ್ಯಕ್ತಿ ಎಂದು ಹೆಸರುವಾಸಿಯಾಗಿದ್ದಾರೆ.

3

3

ಮಾರ್ಕ್‌ ಜುಕರ್‌ಬರ್ಗ್‌ ಮೊದಲಿನಿಂದಲೂ ಓರ್ವ ಉದ್ಯಮಿ ಯಾಗಿದ್ದರು ಎಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ ಜುಕರ್‌ಬರ್ಗ್‌ ಓರ್ವ ಸಾಮಾನ್ಯ ವಿದ್ಯಾರ್ಥಿ ಆಗಿದ್ದರು ಫೇಸ್‌ಬುಕ್‌ ಸಂಸ್ಥೆಯ ಯಶಸ್ಸಿನ ಬಳಿಕವಷ್ಟೇ ಅವರು ಶ್ರೀಮಂತ ಉದ್ಯಮಿಯಾಗಿ ಪ್ರಸಿದ್ದರಾಗಿದ್ದಾರೆ.

4

4

ಜುಕರ್‌ಬರ್ಗ್‌ ಸಾಮಾನ್ಯವಾಗಿ ಯಾರೊಂದಿಗೂ ಹೆಚ್ಚಿನ ಬಾಂಧವ್ಯ ಇಟ್ಟು ಕೊಳ್ಳದ ವ್ಯಕ್ತಿ ಎನ್ನುವ ಮಾತಿದೆ. ಆದರೆ ಇದು ಶುದ್ಧ ಸುಳ್ಳು. ಜುಕರ್‌ಬರ್ಗ್‌ ತಮ್ಮ ಕಾಲೇಜು ವಿದ್ಯಾಭ್ಯಾಸದ ಸಮಯದಲ್ಲಿ ದೊಡ್ಡ ಪ್ರಮಾಣದ ಗೆಳೆಯರನ್ನು ಹೊಂದಿದ್ದರು ಹಾಗೂ ತರಲೇ ಸ್ವಭಾವದ ವ್ಯಕ್ಯಿಯಾಗಿದ್ದರು.

5

5

ಹಾವಾರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಕಲಿಯುತ್ತಿರುವಾಗ ಅರ್ಧದಲ್ಲಿ ಗುಡ್‌ಬೈ. ಕಾಲೇಜ್‌ ಬಿಟ್ಟ ನಂತರ ಸ್ನೇಹಿತ ಡಸ್ಟಿನ್‌ ಜೊತೆ ಸೇರಿ ಫೇಸ್‌ಬುಕ್‌ ಸ್ಥಾಪನೆ. ಕಳೆದ ವರ್ಷದ ಜುಕರ್‌ಬರ್ಗ್ ಆದಾಯ 13.3 ಬಿಲಿಯನ್‌ ಡಾಲರ್‌

6

6

ನೀವು ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ ಬರ್ಗ್‌ಗೆ ಸಂದೇಶ ಕಳುಹಿಸಬಹುದು. ನೂರು ಡಾಲರ್‌ ಖರ್ಚು ಮಾಡಿ ಜುಕರ್‌ಬರ್ಗ್‌ ಇನ್‌ಬಾಕ್ಸ್‌ಗೆ ಸಂದೇಶ ಕಳುಹಿಸಬಹುದು. ಅಮೆರಿಕದ ಜನತೆಗೆ ಮಾತ್ರ ಈ ಅವಕಾಶ ಲಭ್ಯವಿದೆ.

7

7

ಉದ್ಯೋಗ ಮತ್ತು ಉದ್ಯೋಗ ಸ್ಥಳಗಳನ್ನು ಅಧ್ಯಯನ ಮಾಡುವ ಆನ್‌ಲೈನ್‌ ತಾಣ ಗ್ಲಾಸ್‌ಡೂರ್‌ ಈ ವರ್ಷದ ಅತ್ಯುತ್ತಮ ಬಾಸ್‌ ಪಟ್ಟ ಮಾರ್ಕ್ ಜುಕರ್‌ರ್ಗ್‌ಗೆ ಒಲಿದಿದೆ. ಫೇಸ್‌ಬುಕ್‌ನ ಶೇ.99 ರಷ್ಟು ಉದ್ಯೋಗಿಗಳು ಜ್ಯುಕರ್‌ಬರ್ಗ್ ಬಾಸ್‌ ಸ್ಥಾನಕ್ಕೆ ಸರಿಯಾದ ವ್ಯಕ್ತಿ ಎಂದು ಹೇಳಿದ್ದಾರೆ.

8

8

ಪ್ರತಿ ಶುಕ್ರವಾರ ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಉದ್ಯೋಗಿಗಳ ಜೊತೆ ಸಂವಾದ ನಡೆಸಿ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಉದ್ಯೋಗಿಗಳು ತಮ್ಮ ಅಭಿಪ್ರಾಯವನ್ನು ಜುಕರ್‌ಬರ್ಗ್ ಜೊತೆ ಹೇಳುತ್ತಾರೆ.

9

9

ಫೇಸ್‌ಬುಕ್‌ನಲ್ಲಿರುವ ಮಾರ್ಕ್‌ ಜುಕರ್‌ಬರ್ಗ್ ಅಧಿಕೃತ ಖಾತೆಯನ್ನು 17,930,812 ಮಂದಿ ಫಾಲೋ ಮಾಡುತ್ತಿದ್ದಾರೆ

10

10

ಮಾರ್ಕ್ ಜುಕರ್‌ಬರ್ಗ್ ಮದುವೆಯ ವಿಚಾರ ಯಾರಿಗೂ ತಿಳಿಸಿದೇ ಕೊನೆ ಕ್ಷಣದಲ್ಲಿ ಪಾರ್ಟಿಯಲ್ಲಿ ಕಾಲೇಜ್‌ ಗೆಳತಿ ಪ್ರಿಸಿಲ್ಲಾ ಚಾನ್ಳನ್ನು ವಿವಾಹವಾಗಿದ್ದರು. ಪ್ರೈವೆಸಿ ಸೆಟ್ಟಿಂಗ್ಸನಲ್ಲಿ ಬದಲಾವಣೆ ಮಾಡಿಕೊಂಡು ಜುಕರ್‌ಬರ್ಗ್ ಮದುವೆಯ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಅಪ್‌ಡೇಟ್‌ ಮಾಡಿದ್ದರು. ಈ ರೀತಿ ಯಾರಿಗೂ ತಿಳಿಸದೇ ಮದುವೆಯಾಗಿದ್ದು ವಿಶ್ವದಲ್ಲಿ ಚರ್ಚೆಯಾಗಿತ್ತು.

11

11

ಪ್ಯಾಲೆಸ್ಟೈನ್‌ ಖಾಲಿ ಶ್ರೀಥ್‌(Khalil Shreateh) ಎನ್ನುವ ಹ್ಯಾಕರ್‌ ಫೇಸ್‌ಬುಕ್‌ನಲ್ಲಿ ಬಳಕೆದಾರರ ಅಕೌಂಟ್‌ ಹ್ಯಾಕ್‌ ಮಾಡಿ ಅವರ ವಾಲ್‌ನಲ್ಲಿ ಬೇರೊಬ್ಬರು ಮಾಹಿತಿಯನ್ನು ಪೋಸ್ಟ್‌ ಮಾಡಬಹುದು ಎಂದು ಫೇಸ್‌ಬುಕ್‌ಗೆ ತಿಳಿಸಿದ್ದ.


ಈ ಹ್ಯಾಕಿಂಗ್‌ ಮಾಹಿತಿ ತಿಳಿಸಿದ್ದಕ್ಕೆ ಫೇಸ್‌ಬುಕ್‌ ತನಗೆ 500 ಡಾಲರ್‍ ನೀಡಿ ಅಭಿನಂದಿಸುತ್ತದೆ ಎಂದು ಯೋಚಿಸುತ್ತಿದ್ದ ಖಾಲಿಗೆ ಫೇಸ್‌ಬುಕ್‌ 'ಈ ಕೋಡ್‌ನಲ್ಲಿ ಯಾವುದೇ ಎರರ್‌ ಇಲ್ಲ' ಎಂದು ಪ್ರತಿಕ್ರಿಯಿಸಿ ಬಹುಮಾನ ನೀಡದೇ ನಿರಾಸೆ ಮಾಡಿದ್ದಕ್ಕೆ ಈ ಹ್ಯಾಕರ್‌ ಜುಕರ್‌ಬರ್ಗ್‌ನ ಅಕೌಂಟ್‌ನ್ನೇ ಹ್ಯಾಕ್‌ ಮಾಡುವ ಮೂಲಕ ಫೇಸ್‌ಬುಕ್‌ಗೆ ಬಿಸಿ ಮುಟ್ಟಿಸಿದ್ದ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+