ಫೇಸ್‌ಬುಕ್‌ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿಗಳು

By Ashwath
|

ಫೇಸ್‌ಬುಕ್‌ ನಂಬರ್‌ ಒನ್‌ ಸೋಶಿಯಲ್‌ ನೆಟ್‌ವರ್ಕ್ ಆಗಿ ಈಗಾಗಲೇ ಗುರುತಿಸಿಕೊಂಡಿದೆ. ನಂಬರ್‌ ಒನ್‌ ಸೋಶಿಯಲ್‌ ನೆಟ್‌ವರ್ಕ್, ಹುಟ್ಟಿ 9 ವರ್ಷದಲ್ಲೇ ಫೇಸ್‌ಬುಕ್‌ ಬಿಲಿಯನ್‌ ಡಾಲರ್‌ ಕಂಪೆನಿಯಾಗಿ ರೂಪುಗೊಂಡಿದೆ.ತನ್ನ ಉದ್ಯೋಗಿಗಳಿಗೆ ನೀಡುತ್ತಿರುವ ಅತ್ಯುತ್ತಮ ಗುಣಮಟ್ಟದ ಸೌಲಭ್ಯ,ಕಾಳಜಿಯಿಂದಾಗಿ ಫೇಸ್‌ಬುಕ್‌ ಈಗ ವಿಶ್ವದ ದೊಡ್ಡ ಬಿಲಿಯನೇರ್‌ ಕಂಪೆನಿಯಾಗಿ ಗುರುತಿಸಿಕೊಂಡಿದೆ.

ಕಂಪೆನಿಗಳು ದೊಡ್ಡದಾದ ಮೇಲೆ ಆ ಕಂಪೆನಿಗಳ ಬಗ್ಗೆ ವಿವಿಧ ರೀತಿಯ ಸುದ್ದಿಗಳು ಹರಡುವುದು ಸಾಮಾನ್ಯ.ಹೀಗಾಗಿ ಫೇಸ್‌‌ಬುಕ್‌ ಬಗ್ಗೆ ಅನೇಕ ಸುದ್ದಿಗಳು ಜನರ ಬಾಯಲ್ಲಿ ಹರಿದಾಡುತ್ತಿದೆ. ಇವುಗಳಲ್ಲಿ ಕೆಲವು ಮಾಹಿತಿಗಳು ಸುಳ್ಳಾದ್ರೂ ಕೆಲವೊಂದನ್ನು ನೀವು ನಂಬಲೇಬೇಕು.ಹಾಗಾದ್ರೆ ನಂಬಲೇಬೇಕಾದ ಮಾಹಿತಿ ಯಾವುದು ಎನ್ನುವುದಕ್ಕೆ ಇಲ್ಲಿ ಆ ಮಾಹಿತಿಯನ್ನು ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಇದನ್ನೂ ಓದಿ: ಫೇಸ್‌ಬುಕ್‌ನ ಸುಂದರ ಆಫೀಸ್‌ ನೋಡಿದ್ದೀರಾ?

ಇದನ್ನೂ ಓದಿ: ಫೇಸ್‌ಬುಕ್‌ನ 9 ಕ್ರಿಯೇಟಿವ್‌ ಟೈಮ್‌ಲೈನ್‌ಕವರ್‌‌ಗಳನ್ನು ನೋಡಿದ್ದೀರಾ?

 ಫೇಸ್‌ಬುಕ್‌ ನಾಲ್ಕನೇಯ ಬಳಕೆದಾರ ಮಾರ್ಕ್‌ ಜುಕರ್‌ಬರ್ಗ್‌

ಫೇಸ್‌ಬುಕ್‌ ನಾಲ್ಕನೇಯ ಬಳಕೆದಾರ ಮಾರ್ಕ್‌ ಜುಕರ್‌ಬರ್ಗ್‌

ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಅಧಿಕೃತ ಫೇಸ್‌ಬುಕ್‌ ಅಕೌಂಟ್‌ ವೀಕ್ಷಿಸಬೇಕಿದ್ದಲ್ಲಿ ನಿಮ್ಮ ಯುಆರ್‌ಎಲ್‌ನ ನಂತರ '/4' (https://www.facebook.com/4) ಟೈಪ್‌ ಮಾಡಿ ಎಂಟರ್‌ ಬಟನ್‌ ಹೊಡೆದಲ್ಲಿ ಮಾರ್ಕ್‌ ಜುಕರ್‌ಬರ್ಗ್‌ ಅಧಿಕೃತ ಖಾತೆ ಓಪನ್‌ ಆಗುತ್ತದೆ.

ಫೇಸ್‌ಬುಕ್‌ನ್ನು ಹ್ಯಾಕ್‌ ಮಾಡಿ ಹಣ ಸಂಪಾದಿಸಿ!

ಫೇಸ್‌ಬುಕ್‌ನ್ನು ಹ್ಯಾಕ್‌ ಮಾಡಿ ಹಣ ಸಂಪಾದಿಸಿ!


ಫೇಸ್‌ಬುಕ್‌ನ್ನು ಹ್ಯಾಕ್‌ ಮಾಡಿ ಬಳಕೆದಾರರ ಖಾಸಗಿ ಮಾಹಿತಿ ಕದಿಯದೇ 24 ಗಂಟೆಯೊಳಗೆ ಫೇಸ್‌ಬುಕ್‌ಗೆ ಹ್ಯಾಕ್‌ ಮಾಡಿರುವ ಮಾಹಿತಿ ತಿಳಿಸಿದ್ದಲ್ಲಿ ಫೇಸ್‌ಬುಕ್‌ ನಿಮಗೆ 500 ಡಾಲರ್‍ ನೀಡುತ್ತದೆ.ತನ್ನ ಬಳಕೆರದಾರನಿಗೆ ಮತ್ತಷ್ಟು ಸುರಕ್ಷತೆಯನ್ನು ನೀಡಲು ಫೇಸ್‌ಬುಕ್‌ ಈ ತಂತ್ರವನ್ನು ಹೂಡಿದೆ.

ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್‌ ಮಾಡಬಹುದು: https://www.facebook.com/whitehat/bounty/

ಫೇಸ್‌ಬುಕ್‌ನಲ್ಲಿ ಆಟ ಆಡಿ!

ಫೇಸ್‌ಬುಕ್‌ನಲ್ಲಿ ಆಟ ಆಡಿ!


ಫೇಸ್‌ಬುಕ್‌ನಲ್ಲಿ ಭಾಷೆಯನ್ನು ಸುಲಭವಾಗಿ ಬದಲಾಯಿಸಬಹುದು. ಅದರಲ್ಲೂ ಒಂದು ಇಂಗ್ಲಿಷ್‌"Pirate" ಭಾಷೆಯಿದೆ.ಈ ಭಾಷೆಯನ್ನು ಸೆಲೆಕ್ಟ್‌ ಮಾಡಿ ಫೇಸ್‌‌ಬುಕ್‌ನಲ್ಲಿ ಆಟ ಆಡಬಹುದು! ಈ ಭಾಷೆಯನ್ನು ಸೆಲೆಕ್ಟ್‌ ಮಾಡಿದ್ದಲ್ಲಿ ಲೈಕ್‌, ಶೇರ್‌, ಪೋಸ್ಟ್‌‌ ಪದ ಸೇರಿದಂತೆ ಫೇಸ್‌ಬುಕ್‌ನಲ್ಲಿ ಬಳಕೆಯಾಗುವ ಆಂಗ್ಲ ಭಾಷೆಯ ಪದಗಳಿಗೆ ಹೊಸ ಪದದ ಅರ್ಥದೊಂದಿಗೆ ನಿಮ್ಮ ವಾಲ್‌ ಕಾಣುತ್ತಿರುತ್ತದೆ.
ಹೀಗೆ ಮಾಡಿ: Account ಸೆಟಿಂಗ್ಸ್‌ ಹೋಗಿ 'Languages' ಆಯ್ಕೆಯಲ್ಲಿರುವ"English (Pirate)" ಆಯ್ಕೆ ಆರಿಸಿ.

ಪ್ರೊಫೈಲ್‌ಗೆ ಭೇಟಿ ನೀಡಿದ ಫ್ರೆಂಡ್ಸ್‌ಗಳ ಮಾಹಿತಿ  ಅಸಾಧ್ಯ

ಪ್ರೊಫೈಲ್‌ಗೆ ಭೇಟಿ ನೀಡಿದ ಫ್ರೆಂಡ್ಸ್‌ಗಳ ಮಾಹಿತಿ ಅಸಾಧ್ಯ

ಆರ್ಕೂಟ್‌ನಲ್ಲಿದ್ದಂತೆ ಫೇಸ್‌ಬುಕ್‌ನಲ್ಲಿ ನಮ್ಮ ವೈಯಕ್ತಿಕ ಪ್ರೊಫೈಲ್‌ಗೆ ಯಾರು ಭೇಟಿ ನೀಡಿದ್ದಾರೆ ಎಂದು ತಿಳಿಯಲು ಸಾಧ್ಯವಿಲ್ಲ. ಈ ರೀತಿಯ ಆಪ್‌ಗಳು ಕಂಡು ಬಂದ ಕೂಡಲೇ ಫೇಸ್‌ಬುಕ್‌ ಬ್ಲಾಕ್‌ ಮಾಡುತ್ತದೆ.

41ಸಾವಿರ ಪೋಸ್ಟ್‌,18 ಲಕ್ಷ  ಲೈಕ್‌

41ಸಾವಿರ ಪೋಸ್ಟ್‌,18 ಲಕ್ಷ ಲೈಕ್‌


ಫೇಸ್‌ಬುಕ್‌ನಲ್ಲಿ ಒಂದು ನಿಮಿಷಕ್ಕೆ 41ಸಾವಿರ ಪೋಸ್ಟ್‌ಗಳು 18 ಲಕ್ಷ ಲೈಕ್‌ಗಳು ದಾಖಲಾಗುತ್ತದೆ.

ಫೇಸ್‌ಬುಕ್‌ನಲ್ಲಿ  ಸೆಕ್ಸ್‌ ವ್ಯವಹಾರ

ಫೇಸ್‌ಬುಕ್‌ನಲ್ಲಿ ಸೆಕ್ಸ್‌ ವ್ಯವಹಾರ

ಶೇ.83 ರಷ್ಟು ವೇಶ್ಯೆಯರು ಫೇಸ್‌ಬುಕ್‌ನಲ್ಲಿ ಅಕೌಂಟ್‌ ಹೊಂದಿದ್ದು, ತಮ್ಮ ಗಿರಾಕಿಗಳನ್ನು ಬುಕ್‌ ಮಾಡುತ್ತಿದ್ದಾರೆ ಎಂದು ಕೊಲಂಬಿಯ ವಿಶ್ವವಿದ್ಯಾಲಯದ ಅಧ್ಯಯನ ತಿಳಿಸಿದೆ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X