Subscribe to Gizbot

ಜಾಲತಾಣದಲ್ಲಿ ಸುಂಟರಗಾಳಿಯ ಎಬ್ಬಿಸಿದ ಸುಂದರಿ ಸಾಯಾ

Written By:

ಪ್ರಥಮ ನೋಟದಲ್ಲಿ ಈಕೆ ಸಾಮಾನ್ಯ ಶಾಲಾ ಹುಡುಗಿಯಂತೆ ಕಾಣುತ್ತಾಳೆ. ಆದರೆ ಆಕೆ ಸಾಮಾನ್ಯಳಲ್ಲಿ ಅಸಾಮಾನ್ಯಳು. ಕಂಪ್ಯೂಟರ್ ಅನಿಮೇಶನ್ ತಂತ್ರಗಳಿಂದ ಜೀವತಳೆದ ಕಂಪ್ಯೂಟರ್ ನಿರ್ಮಿತ ಚಿತ್ರಗಳಿಂದ ಮೈದಳೆದಿರುವ ರೂಪಸಿಯಾಗಿದ್ದಾಳೆ ಸಾಯ.

ಓದಿರಿ: ರಶ್ಯಾದಲ್ಲಿ ದೊರಕಿದ ಏಲಿಯನ್ ಮೃತದೇಹ

ಇಂತಹ ಚೆಲುವು, ಈಕೆಯಲ್ಲಿ ತುಂಬಿಕೊಂಡದ್ದಾದರೂ ಹೇಗೆ? ಮನುಷ್ಯಳಂತೆ ಕಾಣುವ ಈಕೆಯ ನಿರ್ಮಾಣವನ್ನು ಮಾಡಿದವರಾದರೂ ಯಾರು ಎಂಬ ಪ್ರಶ್ನೆಗಳು ನಿಮ್ಮ ಮನದಲ್ಲಿ ಉಂಟಾಗಿದ್ದರೆ ಇಂದಿನ ಲೇಖನದಲ್ಲಿ ನೀವು ಅದಕ್ಕೆ ಉತ್ತರಗಳನ್ನು ಪಡೆದುಕೊಳ್ಳಲಿರುವಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
3 ಡಿ ಕಂಪ್ಯೂಟರ್ ಗ್ರಾಫಿಕ್ಸ್

3 ಡಿ ಕಂಪ್ಯೂಟರ್ ಗ್ರಾಫಿಕ್ಸ್

ಫ್ರಿಲಾನ್ಸ್ 3 ಡಿ ಕಂಪ್ಯೂಟರ್ ಗ್ರಾಫಿಕ್ಸ್ ಕಲಾವಿದರಾದ ತೆರ್ಯೂಕಿ ಮತ್ತು ಯೂಕಿ ಇಶಿಕಾವಾ ದಂಪತಿಗಳ ನಿರ್ಮಾಣವೇ ಸಾಯ.
ಚಿತ್ರಕೃಪೆ:Teruyki & Yuki ishikawa

ಆನ್‌ಲೈನ್‌ ಪೋಸ್ಟ್

ಅದ್ಭುತ ಪ್ರತ್ಯುತ್ತರ

ಈ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಅವರು ಪೋಸ್ಟ್ ಮಾಡಿ ಅದ್ಭುತ ಪ್ರತ್ಯುತ್ತರಗಳನ್ನು ಪಡೆದುಕೊಂಡಿದ್ದಾರೆ. ಇವರು ನಿಜವಾದ ಹುಡುಗಿಯನ್ನೇ ಫೋಟೋ ತೆಗೆದಿದ್ದಾರೆ ಎಂದೇ ಈ ಫೋಟೋ ವಿಕ್ಷಣೆ ಮಾಡಿದ ಎಲ್ಲರೂ ಭಾವಿಸಿದ್ದರು.
ಚಿತ್ರಕೃಪೆ:Teruyki & Yuki ishikawa

ಬಿಡುವಿನ ವೇಳೆ

ಕಂಪ್ಯೂಟರ್ ಗ್ರಾಫಿಕ್ಸ್

ಕಂಪ್ಯೂಟರ್ ಗ್ರಾಫಿಕ್ಸ್ ಇಂಡಸ್ಟ್ರಿಯಲ್ಲಿ ಹೆಸರು ಮಾಡಿರುವ ಈ ದಂಪತಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಸಾಯಾಳನ್ನು ನಿರ್ಮಿಸಿದ್ದಾರೆ.
ಚಿತ್ರಕೃಪೆ:Teruyki & Yuki ishikawa

ಸಾಯಾ ಪ್ರಾಜೆಕ್ಟ್‌

ಸಾಯಾ ಪ್ರಾಜೆಕ್ಟ್‌

ಇಶಿಕಾವಾ ಆರ್ಮರ್ ಮತ್ತು ಇತರ ಉಪಕರಣಗಳನ್ನು ಸಾಯಾ ಪ್ರಾಜೆಕ್ಟ್‌ಗಾಗಿ ನಿರ್ಮಿಸುತ್ತಿದ್ದಾರೆ.
ಚಿತ್ರಕೃಪೆ:Teruyki & Yuki ishikawa

ಹೆಚ್ಚು ಕಷ್ಟಕರ

ನಿರ್ಮಾಣ ಕೆಲಸ

ಸಾಯಾಳ ನಿರ್ಮಾಣ ಕೆಲಸ ಹೆಚ್ಚು ಕಷ್ಟಕರವಾದುದು ಎಂಬುದಾಗಿ ಇಶಿಕಾವಾ ತಿಳಿಸಿದ್ದಾರೆ.
ಚಿತ್ರಕೃಪೆ:Teruyki & Yuki ishikawa

ಹೆಚ್ಚು ಕಷ್ಟಕರವಾದ ಕೆಲಸ

ಹೆಚ್ಚು ಕಷ್ಟಕರವಾದ ಕೆಲಸ

ಚರ್ಮಕ್ಕೆ ಮೃದುತ್ವ, ಎಳಸುತನವನ್ನು ತರುವುದೇ ಹೆಚ್ಚು ಕಷ್ಟಕರವಾದ ಕೆಲಸವಾಗಿದೆ ಎಂಬುದು ಆಕೆಯ ಮಾತಾಗಿದೆ.
ಚಿತ್ರಕೃಪೆ:Teruyki & Yuki ishikawa

ಕೂದಲಿನ ಸುಧಾರಣೆ

ಇನ್ನಷ್ಟು ಪ್ರಗತಿ

ಸಾಯಾ ಮಾಡೆಲ್ ಅನ್ನು ಅವರು ಇನ್ನೂ ಅಭಿವೃದ್ಧಿಡಪಡಿಸುತ್ತಿದ್ದು, ಚರ್ಮ ಮತ್ತು ಕೂದಲಿನ ಸುಧಾರಣೆಯಲ್ಲಿ ಇನ್ನಷ್ಟು ಪ್ರಗತಿಯನ್ನು ಇವರು ಮಾಡಬೇಕಾಗಿದೆ.
ಚಿತ್ರಕೃಪೆ:Teruyki & Yuki ishikawa

3ಡಿ ಮಾಡೆಲಿಂಗ್

ಮತ್ಯಾ ಪರಿಕರ

ಚಲನಚಿತ್ರಗಳಲ್ಲಿ ಇಫೆಕ್ಟ್‌ಗಳನ್ನು ಉಂಟುಮಾಡಲು ಬಳಸಲಾದ ಮತ್ಯಾ ಪರಿಕರಗಳಾದ 3ಡಿ ಮಾಡೆಲಿಂಗ್ ಶ್ರೇಣಿಗಳನ್ನು ಬಳಸಿಕೊಂಡು ಸಾಯಾಳನ್ನು ನಿರ್ಮಿಸಲಾಗಿದೆ.

ಸಿಜಿ ಪಾತ್ರ

ಸ್ವಯಂ ನಿರ್ಮಾಣದ ಚಿತ್ರ

ಇವರದ್ದೇ ಸ್ವಯಂ ನಿರ್ಮಾಣದ ಚಿತ್ರದಲ್ಲಿ ಸಾಯಾಳನ್ನು ಸಿಜಿ ಪಾತ್ರವನ್ನಾಗಿ ದಂಪತಿಗಳು ತೋರಿಸಲಿದ್ದಾರೆ. ಇನ್ನು ಚಿತ್ರಕ್ಕಾಗಿ ಆಕೆಯನ್ನು ಇನ್ನಷ್ಟು ಪ್ರಗತಿಪರವಾಗಿ ನಿರ್ಮಿಸಬೇಕಾಗಿದೆ ಎಂಬುದು ಇವರುಗಳ ಮಾತಾಗಿದೆ.

ಮನಸೋಲದವರು

ಆಕೆಯ ಅದ್ಭುತ ಸೌಂದರ್ಯ

ಅಂತೂ ಸಾಯಾ ಚಿತ್ರದಲ್ಲಿ ಬರುತ್ತಾಳೆಂದರೆ ಆಕೆಯ ಅದ್ಭುತ ಸೌಂದರ್ಯಕ್ಕೆ ಮನಸೋಲದವರು ಯಾರೂ ಇಲ್ಲವೆಂದೇ ಹೇಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Do YOU notice anything unusual about Saya, the Japanese girl taking the internet by storm.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot