ಎಲಿಸ್ಟಾ ಕಂಪೆನಿಯಿಂದ 'ಮೇಡ್‌ ಇನ್‌ ಇಂಡಿಯಾ' ಸ್ಪೀಕರ್‌ ಸಿಸ್ಟಂ ಬಿಡುಗಡೆ!

|

ಭಾರತದ ಟೆಕ್‌ ಮಾರುಕಟ್ಟೆಯಲ್ಲಿ ಎಲಿಸ್ಟಾ ಕಂಪೆನಿ ಜನಪ್ರಿಯ ಸ್ಮಾರ್ಟ್‌-ಹೋಮ್‌ ಅಪ್ಲೈಯನ್ಸ್‌ ತಯಾರಕ ಎನಿಸಿಕೊಂಡಿದೆ. ತನ್ನ ವೈವಿಧ್ಯಮಯ ಹೋಮ್‌ ಅಪ್ಲೈಯನ್ಸ್‌ ಪ್ರಾಡಕ್ಟ್‌ಗಳ ಮೂಲಕ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇದೀಗ ಭಾರತದಲ್ಲಿ ತನ್ನ ಹೊಸ ಮೇಡ್‌ ಇನ್‌ ಇಂಡಿಯಾ ಸ್ಪೀಕರ್‌ಗಳನ್ನು ಲಾಂಚ್‌ ಮಾಡಿದೆ. ಇವುಗಳನ್ನು ಎಲಿಸ್ಟಾ TT 14000AUFB ಟ್ವಿನ್ ಟವರ್ ಎಂದು ಹೆಸರಿಸಲಾಗಿದೆ. ಇನ್ನು ಈ ಸ್ಪೀಕರ್ ಸಿಸ್ಟಮ್ ಅನ್ನು ನೀವು ನಿಮ್ಮ ಸ್ಮಾರ್ಟ್ ಟಿವಿಗಳಿಗೆ ಕನೆಕ್ಟ್‌ ಮಾಡಬಹುದಾಗಿದೆ.

ಎಲಿಸ್ಟಾ

ಹೌದು, ಎಲಿಸ್ಟಾ ಕಂಪೆನಿ ಭಾರತದಲ್ಲಿ ಹೊಸ ಎಲಿಸ್ಟಾ TT 14000AUFB ಟ್ವಿನ್ ಟವರ್ ಸ್ಪೀಕರ್‌ ಸಿಸ್ಟಂ ಅನ್ನು ಪರಿಚಯಿಸಿದೆ. ಇದು ನಿಮ್ಮ ಮನೆಯ ಎಂಟರ್‌ಟೈನ್‌ಮೆಂಟ್‌ ಸಿಸ್ಟಂ ಅನ್ನು ಇನ್ನಷ್ಟು ಅಪ್ಡೇಟ್‌ ಮಾಡಲಿದೆ. ಜೊತೆಗೆ ಮನೆಯಲ್ಲಿ ಪಾರ್ಟಿ ಮಾಡುವಾಗ ಅತ್ಯಗತ್ಯವಾದ ಗ್ಯಾಜೆಟ್‌ ಆಗಿ ಬಳಸಬಹುದಾಗಿದೆ. ಇನ್ನು ಈ ಟ್ವಿನ್‌ ಟವರ್‌ ಸ್ಪೀಕರ್‌ ಸಿಸ್ಟಂ ವಾಯರ್‌ಲೆಸ್‌ ಮೈಕ್‌ ಅನ್ನು ಕೂಡ ಒಳಗೊಂಡಿದೆ. ಇನ್ನುಳಿದಂತೆ ಈ ಹೊಸ ಸ್ಪೀಕರ್‌ ಸಿಸ್ಟಂನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಎಲಿಸ್ಟಾ TT 14000AUFB ಟ್ವಿನ್ ಟವರ್ ಸ್ಪೀಕರ್

ಎಲಿಸ್ಟಾ TT 14000AUFB ಟ್ವಿನ್ ಟವರ್ ಸ್ಪೀಕರ್

ಎಲಿಸ್ಟಾ TT 14000AUFB ಟ್ವಿನ್ ಟವರ್ ಸ್ಪೀಕರ್‌ ಸಿಸ್ಟಂ ಎರಡು ಸ್ಪೀಕರ್‌ಗಳನ್ನು ಹೊಂದಿದ್ದು, 140W ನ ಸಂಯೋಜಿತ ಆಡಿಯೊ ಔಟ್‌ಪುಟ್‌ ನೀಡಲಿದೆ. ಎರಡು ಸ್ಪೀಕರ್‌ಗಳು ಕೂಡ ವಿನ್ಯಾಸದ ವಿಷಯದಲ್ಲಿ ಒಂದಕ್ಕೊಂದು ಹೋಲುತ್ತವೆ. ಇನ್ನು ಈ ಸ್ಪೀಕರ್‌ಗಳ ಬಾಡಿ ಫೀಚರ್ಸ್‌ ವುಡನ್‌ ಫಿನಿಶ್‌ ಅನ್ನು ಹೊಂದಿದೆ. ಆದರೆ ಮುಂಭಾಗದ ಮೇಲ್ಭಾಗವು ಬ್ರೈಟ್‌ನೆಸ್‌, ಡಾರ್ಕ್‌ ಫಿನಿಶ್‌ ಅನ್ನು ಹೊಂದಿದ್ದು, ಇದನ್ನು ಪ್ಲಾಸ್ಟಿಕ್‌ನಿಂದ ಮಾಡಲಾಗಿದೆ.

ಸ್ಪೀಕರ್‌ನ

ಇನ್ನು ಈ ಸ್ಪೀಕರ್‌ನ ಬಲಭಾಗದಲ್ಲಿ, ಬಳಕೆದಾರರು AUX ನಂತಹ ಪವರ್ ಅನ್ನು ಕಾಣಬಹುದು. ಜೊತೆಗೆ ಕನೆಕ್ಟಿವಿಟಿ ಪೋರ್ಟ್‌ಗಳಿಗಾಗಿ ಎಲ್ಲಾ ಆಯ್ಕೆಗಳನ್ನು ಇದರಲ್ಲಿ ನೀಡಲಾಗಿದೆ. ಅಲ್ಲದೆ ಕಂಟ್ರೋಲ್‌ ಪ್ಯಾನ್‌ಲ್‌ನಿಂದ ಬಳಕೆದಾರರು ಬಾಸ್, ಟ್ರಿಬಲ್ ಮತ್ತು ವಾಲ್ಯೂಮ್ ಅನ್ನು ಸಹ ಕಂಟ್ರೋಲ್‌ ಮಾಡಬಹುದಾಗಿದೆ. ಇದರ ಹೊರತಾಗಿ, ಬಾಹ್ಯ ಮೈಕ್ರೊಫೋನ್ ಕನೆಕ್ಟಿವಿಟಿ ಮೂಲಕ ಕರೊಕೆ ನೈಟ್‌ ಅನುಭವಿಸಬಹುದು. ಇದಲ್ಲದೆ ಎಲಿಸ್ಟಾ TT 14000AUFB ಟ್ವಿನ್ ಟವರ್ ಸ್ಪೀಕರ್‌ನೊಂದಿಗೆ ವಾಯರ್‌ಲೆಸ್ ಮೈಕ್ ಅನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

14000AUFB

ಎಲಿಸ್ಟಾ TT 14000AUFB ಟ್ವಿನ್ ಟವರ್ ಸ್ಪೀಕರ್‌ಗಳು ಭಾರವಾಗಿದ್ದು, ಒಟ್ಟು 25 ಕೆ.ಜಿ. ತೂಕವನ್ನು ಹೊಂದಿವೆ. ಇದು ಹೆಚ್ಚು ಸುಧಾರಿತ ಕೋಡೆಕ್‌ಗಳಿಗೆ ಯಾವುದೇ ಬೆಂಬಲವಿಲ್ಲದೆ ಕಾರ್ಯನಿರ್ವಹಿಸುವ ಯಾವುದೇ-ಫ್ರಿಲ್ ಸ್ಪೀಕರ್ ಆಗಿದೆ. ಇದರಲ್ಲಿ ಯಾವುದೇ ರೀತಿಯ ಡಾಲ್ಬಿ ಅಟ್ಮಾಸ್ ಬೆಂಬಲವೂ ಇಲ್ಲ. ಆದರೆ ಈ ಸ್ಪೀಕರ್ನ ಕಟೌಟ್‌ಗಳು ಹೆಚ್ಚು ಆಧುನಿಕ ನೋಟವನ್ನು ನೀಡಲು ದೊಡ್ಡ LED ಲೈಟ್‌ಗಳನ್ನು ಹೊಂದಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಎಲಿಸ್ಟಾ TT 14000AUFB ಟ್ವಿನ್ ಟವರ್ ಸ್ಪೀಕರ್ ಸಿಸ್ಟಂ ಭಾರತದಲ್ಲಿ ಅಧಿಕೃತ ವೆಬ್‌ಸೈಟ್‌ನಲ್ಲಿ 15,999ರೂ. ಬೆಲೆಯನ್ನು ತೋರಿಸುತ್ತಿದೆ. ಆದರೆ ಈ ಸ್ಪೀಕರ್‌ ಸಿಸ್ಟಂ ಅನ್ನು ಬಳಕೆದಾರರು ಕೇವಲ 10,500ರೂ. ಗಳಿಗೆ ಖರೀದಿಸಬಹುದು ಎಂದು ಎಲಿಸ್ಟಾ ಕಂಪೆನಿ ಹೇಳಿಕೊಂಡಿದೆ.

ಸೋನಿ

ಇದಲ್ಲದೆ ಭಾರತದ ಮಾರುಕಟ್ಟೆಯಲ್ಲಿ ನಾನಾ ಮಾದರಿಯ ಸ್ಪೀಕರ್‌ ಸಿಸ್ಟಂಗಳು ಲಭ್ಯವಿದೆ. ಇದರಲ್ಲಿ ಸೋನಿ ಕಂಪೆನಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಸೋನಿ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ತನ್ನ ಹೊಸ ಸೋನಿ HT-S400 ಸೌಂಡ್‌ಬಾರ್ ಸ್ಪೀಕರ್ ಸಿಸ್ಟಮ್ ಪರಿಚಯಿಸಿದೆ. ಇದು 330W ರೇಟ್ ಮಾಡಲಾದ ಸೌಂಡ್‌ ಔಟ್‌ಪುಟ್ ಅನ್ನು ಹೊಂದಿದೆ. ಈ ಸ್ಪೀಕರ್‌ ಸಿಸ್ಟಂ ಸ್ಮಾರ್ಟ್‌ಟಿವಿಗಳು ತಮ್ಮ ಬಿಲ್ಟ್-ಇನ್ ಸ್ಪೀಕರ್‌ಗಳ ಮೂಲಕ ನೀಡುವುದಕ್ಕಿಂತ ಗಣನೀಯವಾಗಿ ಹೆಚ್ಚಿನ ಸೌಂಡ್‌ ನೀಡಲಿದೆ. ಹೀಗಾಗಿ ನಿಮ್ಮ ಹೋಮ್ ಥಿಯೇಟರ್ ಸೌಂಡ್‌ಗೆ ಅಪ್‌ಗ್ರೇಡ್ ಆಗಿರಲಿದೆ.

ಕಂಪೆನಿ

ಸೋನಿ ಕಂಪೆನಿ ಪರಿಚಯಿಸಿರುವ ಸೋನಿ HT-S400 ಸೌಂಡ್‌ಬಾರ್ ಗಾತ್ರದಲ್ಲಿ ದೊಡ್ಡದಾಗಿಲ್ಲ. ಇದು ಪ್ರತ್ಯೇಕ ವಾಯರ್‌ಲೆಸ್ ಸಬ್ ವೂಫರ್‌ನೊಂದಿಗೆ 2.1-ಚಾನೆಲ್ ಕಾನ್ಫಿಗರೇಶನ್ ಅನ್ನು ಹೊಂದಿದೆ. ಇನ್ನು ಈ ಸ್ಪೀಕರ್ ವ್ಯವಸ್ಥೆಯು ಬಾರ್ ಸ್ಪೀಕರ್‌ನಿಂದ ಮಾಡಲ್ಪಟ್ಟಿದೆ. ಇದರಲ್ಲಿ 130W ಸಬ್ ವೂಫರ್ ನೊಂದಿಗೆ ಒಟ್ಟು 200W ನಲ್ಲಿ ಎರಡು ಆಡಿಯೋ ಡ್ರೈವರ್‌ಗಳನ್ನು ರೇಟ್ ಮಾಡಲಾಗಿದೆ.

Best Mobiles in India

Read more about:
English summary
The Elista TT 14000AUFB Twin Tower speaker adheres to the government's made in India initiative.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X