ಮತ್ತೇ ವಿವಾದದಲ್ಲಿ ಸಾಮಾಜಿಕ ಜಾಲತಾಣದ ದೈತ್ಯ...ಫೀಚರ್ಸ್ ನಕಲು ಮಾಡುತ್ತಿದೆ ಫೇಸ್ ಬುಕ್...!

By Avinash
|

ಇತ್ತೀಚಿಗಷ್ಟೇ ಬಳಕೆದಾರರ ಮಾಹಿತಿ ಹಂಚಿಕೆ, ಪ್ರೈವೆಸಿ ಸೆಟ್ಟಿಂಗ್ಸ್ ಬದಲಿನಂತಹ ಅನೇಕ ವಿವಾದಗಳಿಂದ ಸುದ್ದಿಯಾಗಿದ್ದ ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದು, ಜನರಲ್ಲಿನ ನಂಬಿಕೆಯನ್ನು ಹಂತ ಹಂತವಾಗಿ ಕಳೆದುಕೊಳ್ಳುತ್ತಿದೆ. ಹೌದು, ಸದ್ಯ ಫೇಸ್ ಬುಕ್ ಸುದ್ದಿಯಲ್ಲಿರುವುದು ಬೇರೆ ಸೋಷಿಯಲ್ ನೆಟ್ ವರ್ಕ್ ಪ್ಲಾಟ್ ಫಾರ್ಮನ ಫೀಚರ್ ಅನ್ನು ತನ್ನದೆಂದು ಹೇಳಿಕೊಂಡು ಭಾರತದಲ್ಲಿ ಪರಿಚಯಿಸಿರುವುದು.

<strong>ಶಿಯೋಮಿಯ ಮತ್ತೊಂದು ಸ್ಮಾರ್ಟ್ ಪೋನ್ ರೆಡ್ ಮಿ 6 ಲಾಂಚ್... ಬಜೆಟ್ ಪೋನ್ ನಲ್ಲಿ ಏನೇಲ್ಲಾ ಇದೆ..?</strong>ಶಿಯೋಮಿಯ ಮತ್ತೊಂದು ಸ್ಮಾರ್ಟ್ ಪೋನ್ ರೆಡ್ ಮಿ 6 ಲಾಂಚ್... ಬಜೆಟ್ ಪೋನ್ ನಲ್ಲಿ ಏನೇಲ್ಲಾ ಇದೆ..?

ಇತ್ತೀಚೆಗೆ ತಾನೇ ಫೇಸ್ ಬುಕ್ ಭಾರತೀಯ ಬಳಕೆದಾರರಿಗೆ ಆಡಿಯೋ ಒನ್ಲಿ ಪೋಸ್ಟ್ ಫೀಚರ್ ಅನ್ನು ಪರಿಚಯಿಸಿತ್ತು. ಆದರೆ, ಇದು ಈಗಾಗಲೇ ಬೇರೆ ಕಂಪನಿಯಿಂದ ಪರಿಚಿತವಾದ ಫೀಚರ್ ಆಗಿದ್ದು, ಫೇಸ್ ಬುಕ್ ತನ್ನದೆಂದು ಹೇಳಿಕೊಂಡಿದೆ. ಆಡಿಯೋ ಒನ್ಲಿ ಪೋಸ್ಟ್ ಏನು, ಯಾವ ಕಂಪನಿ ಇದನ್ನು ಮೊದಲೇ ಬಳಸಿತ್ತು ಮತ್ತು ಫೇಸ್ ಬುಕ್ ಯಾವ ರೀತಿ ಫೀಚರ್ಸ್ ಅನ್ನು ನಕಲು ಮಾಡುತ್ತೇ ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.

ಫೀಚರ್ಸ್ ನಕಲು ಮಾಡುತ್ತಿದೆ ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್...!

ಸಿಂಗಪುರ ನಿರ್ಮಿತ ಫೀಚರ್

ಸಿಂಗಪುರ ನಿರ್ಮಿತ ಫೀಚರ್

ಫೇಸ್ ಬುಕ್ ಪರಿಚಯಿಸಿರುವ ಆಡಿಯೋ ಒನ್ಲಿ ಪೋಸ್ಟ್ ಸಿಂಗಪುರ ಮೂಲದ ಸಾಮಾಜಿಕ ಜಾಲತಾಣ ವೇದಿಕೆ VoxWeb ನದ್ದಾಗಿದೆಯಂತೆ. VoxWeb ತಿಳಿಸಿರುವಂತೆ ಫೇಸ್ ಬುಕ್ ಆಡಿಯೋ ಒನ್ಲಿ ಪೋಸ್ಟ್ ಫೀಚರ್ ಅನ್ನು ನಮ್ಮಿಂದ ನಕಲು ಮಾಡಿದೆ ಎಂದು ತಿಳಿಸಿದೆ.

VoxWebನ ಸ್ಪೀಕಿಂಗ್ ಪಿಕ್

VoxWebನ ಸ್ಪೀಕಿಂಗ್ ಪಿಕ್

ಫೇಸ್ ಬುಕ್ ಪರಿಚಯಿಸಿರುವ ಆಡಿಯೋ ಒನ್ಲಿ ಪೋಸ್ಟ್ VoxWebನ ಸ್ಪೀಕಿಂಗ್ ಪಿಕ್ ಅಥವಾ ವಾಯ್ಸ್ ಅಗ್ಮೆಂಟೆಡ್ ಪೋಟೋಸ ಎಂಬ ಫೀಚರ್ ನಿಂದ ಕದ್ದಿರುವುದಾಗಿದೆ. ಈ ಫೀಚರ್ ಬಳಕೆದಾರರಿಗೆ ಒಂದು ಪೋಟೋ ಆಯ್ಕೆ ಮಾಡಿಕೊಂಡು ಅದರೊಂದಿಗೆ ಆಡಿಯೋ ರೆಕಾರ್ಡ್ ಮಾಡುವ ಅವಕಾಶ ನೀಡಿತ್ತು. ಅದಲ್ಲದೇ ಎಮೋಜಿ, ಟೆಕ್ಸ್ಟ್, ಡೂಡಲ್ಸ್ ಅನ್ನು ಸೇರಿಸುವ ಅವಕಾಶ VoxWeb ನೀಡಿತ್ತು.

ಫೇಸ್ ಬುಕ್ ಗಿಂತಲೂ ಮೊದಲು ಪರಿಚಯಿಸಿದ್ದು VoxWeb

ಫೇಸ್ ಬುಕ್ ಗಿಂತಲೂ ಮೊದಲು ಪರಿಚಯಿಸಿದ್ದು VoxWeb

ವೋಕ್ಸ್ ವೆಬ್ ಜನವರಿ 2016ರಲ್ಲಿ ಲಾಂಚ್ ಆಯಿತು. ಆಡಿಯೋ ಒನ್ಲಿ ಪೋಸ್ಟ್ ಫೀಚರ್ ಅನ್ನು ನಾವೇ ಮೊದಲು ಪರಿಚಯಿಸಿದ್ದು, ನಮ್ಮ ಐಡಿಯಾವನ್ನು ಫೇಸ್ ಬುಕ್ ತೆಗೆದುಕೊಂಡಿದೆ ಅಂತ VoxWeb ಹೇಳುತ್ತಿದೆ. 2.5 ಮಿಲಿಯನ್ ಬಳಕೆದಾರರನ್ನು ಹೊಂದಿರುವ VoxWeb, 1.3 ಬಿಲಿಯನ್ ಬಳಕೆದಾರರನ್ನು ಹೊಂದಿರುವ ಫೇಸ್ ಬುಕ್ ಮೇಲೆ ಸಾಕ್ಷಿ ಸಮೇತ ಆರೋಪ ಮಾಡಿದೆ.

ಫೇಸ್ ಬುಕ್ ನ ಆಡಿಯೋ ಒನ್ಲಿ ಪೋಸ್ಟ್ ನಲ್ಲೇನಿದೆ..?

ಫೇಸ್ ಬುಕ್ ನ ಆಡಿಯೋ ಒನ್ಲಿ ಪೋಸ್ಟ್ ನಲ್ಲೇನಿದೆ..?

ಫೇಸ್ ಬುಕ್ ಭಾರತೀಯ ಬಳಕೆದಾರರಿಗಾಗಿ ಪರಿಚಯಿಸಿರುವ, ನಕಲು ಎನ್ನಲಾಗುತ್ತಿರುವ ಆಡಿಯೋ ಒನ್ಲಿ ಪೋಸ್ಟ್ VoxWebನ ಸ್ಪೀಕಿಂಗ್ ಪಿಕ್ ನಂತೆ ಕಾರ್ಯನಿರ್ವಹಿಸುತ್ತದೆ. ಇದರೊಂದಿಗೆ ಫೇಸ್ ಬುಕ್ ನ ಆಡಿಯೋ ಒನ್ಲಿ ಪೋಸ್ಟ್ ನಲ್ಲಿ ಬ್ಯಾಕ್ ಗ್ರೌಂಡ್ ಬಣ್ಣದ ಆಯ್ಕೆಯಿದೆ. ಇಮೇಜ್ ಮತ್ತು ಸ್ಟಿಕ್ಕರ್ ಅಳವಡಿಸುವ ಫೀಚರ್ ನೀಡಲಾಗಿದೆ. 20 ಸೆಕೆಂಡ್ ಗಳ ವಾಯ್ಸ್ ಅನ್ನು ರೆಕಾರ್ಡ್ ಮಾಡಿ ಸ್ಟೋರಿ ಮತ್ತು ನ್ಯೂಸ್ ಫೀಡ್ ನಲ್ಲಿ ಶೇರ್ ಮಾಡಬಹುದಾಗಿದೆ.

ಪ್ರತಿಕ್ರಿಯೆ ನೀಡದ ಫೇಸ್ ಬುಕ್

ಪ್ರತಿಕ್ರಿಯೆ ನೀಡದ ಫೇಸ್ ಬುಕ್

ಫೇಸ್ ಬುಕ್ VoxWebನ ಯಾವುದೇ ಪ್ರಶ್ನೆಗಳಿಗೂ ಉತ್ತರಿಸುತ್ತಿಲ್ಲ. ಹೀಗಾಗಲೆ ಕಂಪನಿ ಯುಎಸ್ ನಲ್ಲಿ ತನ್ನ ಫೀಚರ್ ಗಾಗಿ ಪೇಟೆಂಟ್ ಸಲ್ಲಿಸಿದ್ದು, ಫೇಸ್ ಬುಕ್ ಮೇಲೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುವ ಉದ್ದೇಶ ಇಲ್ಲ ಎಂದು ಹೇಳಿದೆ.

ಏಷ್ಯಾದಲ್ಲಿಯೇ ಇದ್ದಾರೆ ಬಹಳಷ್ಟು ಬಳಕೆದಾರರು

ಏಷ್ಯಾದಲ್ಲಿಯೇ ಇದ್ದಾರೆ ಬಹಳಷ್ಟು ಬಳಕೆದಾರರು

VoxWeb ಹೇಳುವಂತೆ ನಮ್ಮ ಆಪ್ ಗೆ ಏಷ್ಯಾದಲ್ಲಿಯೇ ಹೆಚ್ಚು ಜನರು ಬಳಕೆದಾರರಿದ್ದಾರೆ. ಆದರೆ, ಭಾರತದಲ್ಲಿ ಎಷ್ಟು ಜನ ನಮ್ಮ ಆಪ್ ಬಳಸುತ್ತಿದ್ದಾರೆ ಎಂಬ ಸಂಖ್ಯೆ ನಿಖರವಾಗಿ ತಿಳಿದಿಲ್ಲ. ಅದಕ್ಕೋಸ್ಕರ ಫೇಸ್ ಬುಕ್ ಭಾರತದಲ್ಲಿ ಹೊಸ ಫೀಚರ್ ಅನ್ನು ನಾವೇ ಮೊದಲು ಪರಿಚಯಿಸುತ್ತಿದ್ದೇವೆ ಎಂದು ಹೇಳಿರಬಹುದು ಎಂದು ಕಂಪನಿ ಹೇಳಿಕೊಂಡಿದೆ.

ಫೀಚರ್ ಉಳಿಸಿಕೊಳ್ಳಲು ಹೊಸ ವಿಧಾನ

ಫೀಚರ್ ಉಳಿಸಿಕೊಳ್ಳಲು ಹೊಸ ವಿಧಾನ

VoxWebನ ಸ್ಥಾಪಕ ಮತ್ತು ಸಿಇಒ ಯಶ್ ಮಿಶ್ರಾ ಹೇಳುವಂತೆ ಇನೋವೇಟಿವ್ ಫೀಚರ್ ಗಳನ್ನು ಮುಂದಿನ 48 ತಿಂಗಳುಗಳವರೆಗೆ ಮುಂದಕ್ಕಿಟ್ಟು ಅಭಿವೃದ್ಧಿಪಡಿಸಲಾಗುತ್ತದೆ. ಮತ್ತು ತಾವು ಪರಿಚಯಿಸಿದ ಫೀಚರ್ ಗಳನ್ನು ಭವಿಷ್ಯದ ಸಾಕ್ಷಿಯೊಂದಿಗೆ ಇಟ್ಟುಕೊಳ್ಳಬಹುದಾದ ವಿಧಾನವಾಗಿದೆ ಎಂದು ಹೇಳಿದ್ದಾರೆ.

ಫೀಚರ್ಸ್ ನಕಲು ಮಾಡುತ್ತಿದೆ ಫೇಸ್ ಬುಕ್

ಫೀಚರ್ಸ್ ನಕಲು ಮಾಡುತ್ತಿದೆ ಫೇಸ್ ಬುಕ್

ಆಡಿಯೋ ಒನ್ಲಿ ಪೋಸ್ಟ್ ಅಷ್ಟೇ ಅಲ್ಲದೇ ಫೇಸ್ ಬುಕ್ ಅನೇಕ ಫೀಚರ್ ಗಳನ್ನು ನಕಲು ಮಾಡಿ ಸಿಕ್ಕಿಬಿದ್ದಿದೆ. ತನ್ನ ವಾಟ್ಸ ಆಪ್ ಮತ್ತು ಇನ್ಸ್ಟಾಗ್ರಾಮ್ ಆಪ್ ಗಳಲ್ಲಿ ಸ್ನಾಪಚಾಟ್ ತರಹದ ಫೀಚರ್ ಅನ್ನು ಪರಿಚಯಿಸಿತ್ತು. ಸ್ಟೋರಿ ಫೀಚರ್ ಪರಿಚಯಿಸಿದ್ದ ಫೇಸ್ ಬುಕ್ ತನ್ನ ಮಾಲೀಕತ್ವದ ವಾಟ್ಸ ಆಪ್ ಮತ್ತು ಇನ್ಸ್ಟಾಗ್ರಾಮ್ ಆಪ್ ಗಳಲ್ಲಿ ಅಳವಡಿಸಿದ್ದಲ್ಲದೇ ತಾನು ಸಹ ಅಳವಡಿಸಿಕೊಂಡಿತು. ವಾಟ್ಸ ಆಪ್ ಮತ್ತು ಇನ್ಸ್ಟಾಗ್ರಾಮ್ ಆಪ್ ಗಳಲ್ಲಿ ದೈನದಿಂನವಾಗಿ 450 ಮಿಲಿಯನ್ ಆಕ್ಟಿವ್ ಬಳಕೆದಾರರಿರುವುದು ವಿಶೇಷ.

Best Mobiles in India

English summary
Facebook accused of copying feature from another social network and it’s not Snapchat. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X