ಫೇಸ್‌ಬುಕ್‌ಗೆ ವೈರಸ್ ಅಟ್ಯಾಕ್!..ಕೂಡಲೇ ಈ ಸೆಟ್ಟಿಂಗ್ಸ್ ಬದಲಾಯಿಸಲು ಬಳಕೆದಾರರಿಗೆ ಸೂಚನೆ!!

|

ಚೀನಾದ ಹುವೈ ಮತ್ತು ಇತರ ಸಂವಹನ ಸಾಧನ ತಯಾರಕರ ಜತೆಗೆ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ಹಂಚಿಕೊಂಡ ಶಾಕಿಂಗ್ ಸುದ್ದಿಯ ಜೊತೆಗೆ, ಫೇಸ್‌ಬುಕ್‌ನ ಸಾಫ್ಟ್‌ವೇರ್‌ನಲ್ಲಿ ವೈರಸ್‌ ಸಮಸ್ಯೆ ಕಾಣಿಸಿಕೊಂಡಿರುವ ಸುದ್ದಿ ಪ್ರಕಟವಾಗಿದೆ. ಫೇಸ್‌ಬುಕ್‌ನ ಸಾಫ್ಟ್‌ವೇರ್‌ನಲ್ಲಿ ವೈರಸ್ ಸಮಸ್ಯೆ ತಲೆದೋರಿರುವುದನ್ನು ಫೇಸ್‌ಬುಕ್ ಸ್ಪಷ್ಟಪಡಿಸಿದೆ.

ಫೇಸ್‌ಬುಕ್‌ನ ಸಾಫ್ಟ್‌ವೇರ್‌ನಲ್ಲಿ ವೈರಸ್ ಸಮಸ್ಯೆ ತಲೆದೋರಿದ್ದರಿಂದ, ತಮ್ಮ ವೈಯಕ್ತಿಕ ಪೋಸ್ಟ್ ಯಾರಿಗೆ ಕಾಣಬೇಕು ಎಂದು ಖಾತೆದಾರರು ಭಾವಿಸಿದ್ದರೋ ಅವರಿಗೆ ಮಾತ್ರವಲ್ಲದೆ ಎಲ್ಲ ಬಳಕೆದಾರರಿಗೂ ಸಿಗುವಂತಾಗಿದೆ. ಕೆಲವು ಫೇಸ್‌ಬುಕ್ ಬಳಕೆದಾರರು ಪ್ರಕಟಿಸಿದ ಎಲ್ಲ ಮಾಹಿತಿ ಬಹಿರಂಗಗೊಂಡಿದೆ ಎಂದು ಫೇಸ್‌ಬುಕ್ ತನ್ನ ಬಳಕೆದಾರರಿಗೆ ತಿಳಿಸಿದೆ.

ಬಳಕೆದಾರರು ಕೂಡಲೇ ಈ ಸೆಟ್ಟಿಂಗ್ಸ್ ಬದಲಾಯಿಸಲು ಬಳಕೆದಾರರಿಗೆ ಸೂಚನೆ!!

ಫೇಸ್‌ಬುಕ್‌ನಲ್ಲಿ ಹಿಂದೆ ಪ್ರಕಟಿಸಿರುವ ಪೋಸ್ಟ್‌ಗಳಿಗೆ ಈ ವೈರಸ್‌ನಿಂದ ತೊಂದರೆ ಆಗಿಲ್ಲ ಎಂದು ಫೇಸ್‌ಬುಕ್‌ನ ಖಾಸಗಿತನ ನೀತಿಯ ಮುಖ್ಯ ಅಧಿಕಾರಿ ಎರಿನ್ ಏಗನ್ ಹೇಳಿದ್ದು, ವೈರಸ್‌ನಿಂದ ತೊಂದರೆ ಆಗಿರುವ ಬಳಕೆದಾರರಿಗೆ ಫೇಸ್‌ಬುಕ್‌ ಸೂಚನೆ ಕಳುಹಿಸಿದೆ. ಈಗಾಗಲೇ ಪ್ರಕಟಿಸಿರುವ ಪೋಸ್ಟ್‌ಗಳನ್ನು ಕೂಡಲೇ ಪರಿಶೀಲಿಸುವಂತೆ ಫೇಸ್‌ಬುಕ್ ತಿಳಿಸಿದೆ.

ಫೇಸ್‌ಬುಕ್ ಟೈಮ್ ಚೆನ್ನಾಗಿಲ್ಲ!

ಫೇಸ್‌ಬುಕ್ ಟೈಮ್ ಚೆನ್ನಾಗಿಲ್ಲ!

ಚೀನಾದ ಹುವೈ ಮತ್ತು ಇತರ ಮೊಬೈಲ್ ತಯಾರಕರ ಜತೆಗೆ ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ಹಂಚಿಕೊಂಡ ಸುದ್ದಿ ಇತ್ತೀಚೆಗೆ ಭಾರಿ ಸುದ್ದಿ ಮಾಡಿತ್ತು. ಅದಕ್ಕೆ ಮೊದಲು, ಬ್ರಿಟನ್‌ನ ದತ್ತಾಂಶ ವಿಶ್ಲೇಷಣಾ ಸಂಸ್ಥೆ ಕೇಂಬ್ರಿಜ್‌ ಅನಲಿಟಿಕಾಕ್ಕೆ ದತ್ತಾಂಶ ನೀಡಿದ್ದು ದೊಡ್ಡ ವಿವಾದವಾಗಿತ್ತು. ಅದರಿಂದ ಚೇತರಿಸಿಕೊಳ್ಳುವ ಮೊದಲೇ ವೈರಸ್‌ ದಾಳಿಯಿಂದ ಫೇಸ್‌ಬುಕ್‌ ತತ್ತರಿಸಿದೆ.

ಸಮಸ್ಯೆ ಏನು?

ಸಮಸ್ಯೆ ಏನು?

ಫೇಸ್‌ಬುಕ್‌ ವ್ಯವಸ್ಥೆಯಲ್ಲಿ ಸೇರಿಕೊಂಡಿರುವ ವೈರಸ್‌, ಹೊಸ ಪೋಸ್ಟ್‌ ಎಲ್ಲರಿಗೂ ಕಾಣಿಸುವಂತೆ ಮಾಡುತ್ತದೆ. ಬಳಕೆದಾರರು ತಮ್ಮ ಪೋಸ್ಟ್‌ಗಳು ‘ಗೆಳೆಯರಿಗೆ ಮಾತ್ರ' ಎಂಬ ಸೆಟಿಂಗ್ ಮಾಡಿಕೊಂಡಿದ್ದರೂ ಅವರು ಪ್ರಕಟಿಸುವ ವಿಚಾರಗಳು ಎಲ್ಲರಿಗೂ ಕಾಣಿಸುತ್ತವೆ. ಇದು ವೈರಸ್‌ನಿಂದಾಗಿ ಸ್ವಯಂಚಾಲಿತವಾಗಿ ಆಗಿರುವ ಬದಲಾವಣೆ ಎಂದು ಫೇಸ್‌ಬುಕ್ ತಿಳಿಸಿದೆ.

ಮೇ 18ರಿಂದ 27ರವರೆಗೆ ಸಮಸ್ಯೆ!

ಮೇ 18ರಿಂದ 27ರವರೆಗೆ ಸಮಸ್ಯೆ!

ಮೇ 18ರಿಂದ 27ರವರೆಗೆ ಫೇಸ್‌ಬುಕ್‌ ಖಾತೆಗಳಲ್ಲಿ ಈ ವೈರಸ್ ಸಮಸ್ಯೆ ಕಾಣಿಸಿಕೊಂಡಿದೆ. ಮೇ 22ರಂದೇ ಈ ಲೋಪವನ್ನು ಸರಿಪಡಿಸಲಾಗಿದೆ. ಆದರೆ ಎಲ್ಲ ಖಾತೆದಾರರ ಖಾಸಗಿ ಸೆಟಿಂಗ್‌ಗಳನ್ನು ಮೂಲ ಸ್ವರೂಪಕ್ಕೆ ತರಲು ಹೆಚ್ಚು ಸಮಯ ಬೇಕಾಗುತ್ತಿದೆ ಎಂದು ಖಾಸಗಿತನ ನೀತಿಯ ಮುಖ್ಯ ಅಧಿಕಾರಿ ಎರಿನ್ ಏಗನ್ ಹೇಳಿದದ್ದಾರೆ.

ಕೂಡಲೇ ಖಾತೆ ಪರಿಶೀಲನೆ!

ಕೂಡಲೇ ಖಾತೆ ಪರಿಶೀಲನೆ!

ಫೇಸ್‌ಬುಕ್‌ನ ಸಾಫ್ಟ್‌ವೇರ್‌ನಲ್ಲಿ ವೈರಸ್ ಸಮಸ್ಯೆ ತಲೆದೋರಿದ್ದರಿಂದ, ಎಲ್ಲ ಖಾತೆದಾರರ ಖಾಸಗಿ ಸೆಟಿಂಗ್‌ಗಳನ್ನು ಮೂಲ ಸ್ವರೂಪಕ್ಕೆ ತರಲು ಹೆಚ್ಚು ಸಮಯ ಬೇಕಾಗುತ್ತಿದೆ. ಹಾಗಾಗಿ, ಬಳಕೆದಾರರೇ ವಯಕ್ತಿಕವಾಗಿ ಫೇಸ್‌ಬುಕ್‌ನಲ್ಲಿ ಸೆಟ್ಟಿಂಗ್ಸ್ ಬದಲಾಯಿಸಿಕೊಂಡು ಫೇಸ್‌ಬುಕ್ ಖಾತೆಯನ್ನು ಪರಿಶೀಲಿಸಿ ಸರಿಪಡಿಸಿಕೊಳ್ಳಲು ಸಲಹೆ ನೀಡಿದೆ.

ಸಮಸ್ಯೆ ಸರಿಪಡಿಸಿಕೊಳ್ಳುವುದು ಹೇಗೆ?

ಸಮಸ್ಯೆ ಸರಿಪಡಿಸಿಕೊಳ್ಳುವುದು ಹೇಗೆ?

ಬಳಕೆದಾರರು ತಮ್ಮ ಪೋಸ್ಟ್‌ಗಳು ಗೆಳೆಯರಿಗೆ ಮಾತ್ರ ಎಂಬ ಸೆಟಿಂಗ್ ಮಾಡಿಕೊಂಡಿದ್ದರೂ ಅವರು ಪ್ರಕಟಿಸುವ ವಿಚಾರಗಳು ಎಲ್ಲರಿಗೂ ಕಾಣಿಸುತ್ತವೆ. ಇದು ವೈರಸ್‌ನಿಂದಾಗಿ ಸ್ವಯಂಚಾಲಿತವಾಗಿ ಆಗಿರುವ ಬದಲಾವಣೆಯಾಗಿದೆ. ಹಾಗಾಗಿ, ಬಳಕೆದಾರರು ತಮ್ಮ ಸೆಟಿಂಗ್ ಅನ್ನು ‘ಖಾಸಗಿ' ಎಂಬುದಾಗಿ ಸ್ವತಃ ಬದಲಾಯಿಸಿದರೆ ಸಮಸ್ಯೆ ನಿವಾರಣೆಯಾಗುತ್ತದೆ.

ನಿಯಮಗಳ ಉಲ್ಲಂಘನೆ?

ನಿಯಮಗಳ ಉಲ್ಲಂಘನೆ?

ಅಮೆರಿಕದ ಗ್ರಾಹಕ ಹಕ್ಕುಗಳ ರಕ್ಷಣಾ ಆಯೋಗ (ಎಫ್‌ಟಿಸಿ) ಫೇಸ್‌ಬುಕ್ ನಿಯಮಗಳ ಉಲ್ಲಂಘನೆಯಂತೆ ತೋರುತ್ತಿದೆ. ಕೊನೆಯ ಪೋಸ್ಟ್‌ ಹಾಕಿದಾಗ ಯಾವ ಸೆಟಿಂಗ್ ಇತ್ತೋ ಮುಂದಿನ ಪೋಸ್ಟ್‌ಗಳಿಗೂ ಅದೇ ಅನ್ವಯ ಆಗಬೇಕು. ಆದರೆ, ಸೆಟಿಂಗ್ ಬದಲಾಗುವುದು ಮತ್ತು ಹಲವು ದಿನಗಳ ಕಾಲ ಮುಂದುವರಿಯುವುದು ತಪ್ಪು ಎಂದು ಅಭಿಪ್ರಾಯಪಡಲಾಗಿದೆ.

ಮೊಬೈಲ್ ಕಂಪೆನಿಗಳ ಜೊತೆ ಸೇರಿ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಮೋಸ ಮಾಡುತ್ತಿದೆ.!!

ಮೊಬೈಲ್ ಕಂಪೆನಿಗಳ ಜೊತೆ ಸೇರಿ ಫೇಸ್‌ಬುಕ್ ತನ್ನ ಬಳಕೆದಾರರಿಗೆ ಮೋಸ ಮಾಡುತ್ತಿದೆ.!!

ದತ್ತಾಂಶ ವಿಶ್ಲೇಷಣಾ ಸಂಸ್ಥೆ ಕೇಂಬ್ರಿಜ್ ಅನಲಿಟಿಕಾಕ್ಕೆ 8.7 ಕೋಟಿ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಅಕ್ರಮವಾಗಿ ಬಳಸಿಕೊಳ್ಳಲು ಅವಕಾಶ ನೀಡಲಾಗಿತ್ತು ಎಂಬ ಆಪಾದನೆ ಎದುರಿಸಿತ್ತಿರುವ ಫೇಸ್‌ಬುಕ್‌ ಮತ್ತೆ ಮೋಸಮಾಡುತ್ತಿದೆ ಎನ್ನಲಾಗಿದೆ. ಈ ಘಟನೆ ನಡೆದ ನಂತರವೂ ಮಾಹಿತಿ ಹಂಚಿಕೆಯ ಮತ್ತೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಹೌದು, ಬಳಕೆದಾರರ ಮಾಹಿತಿಯನ್ನು ಹಂಚಿಕೊಳ್ಳುವುದಕ್ಕೆ ಆಪಲ್‌ ಮತ್ತು ಮೈಕ್ರೊಸಾಫ್ಟ್‌ನಂತಹ ಕಂಪನಿಗಳ ಜತೆ ಫೇಸ್‌ಬುಕ್‌ ಒಪ್ಪಂದ ಮಾಡಿಕೊಂಡಿದೆ. ಫೇಸ್‌ಬುಕ್ ಖಾತೆದಾರರು ಮತ್ತು ಅವರ ಗೆಳೆಯರ ಬಳಗದ ಮಾಹಿತಿಯ ವರ್ಗಾವಣೆಯೂ ಇದರಲ್ಲಿ ಸೇರಿದೆ ಎಂದು ಪ್ರಖ್ಯಾತ ದ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿರುವುದು ಈಗ ಮುನ್ನೆಲೆಗೆ ಬಂದಿದೆ.

ಕೇಂಬ್ರಿಜ್ ಅನಲಿಟಿಕಾವು ಫೇಸ್‌ಬುಕ್‌ ಬಳಕೆದಾರರ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡಿದ್ದ, ಸಾಮಾಜಿಕ ಜಾಲತಾಣ ಕಂಪನಿಯು ಇತ್ತೀಚೆಗೆ ಭಾರಿ ಹಿನ್ನಡೆ ಅನುಭವಿಸಿತ್ತು. ಅದರ ಬೆನ್ನಿಗೇ ಈ ವರದಿ ಬಿಡುಗಡೆಯಾಗಿ ಮತ್ತೆ ಶಾಕ್ ನೀಡಿದೆ. ಹಾಗಾದರೆ, ಫೇಸ್‌ಬುಕ್ ಮೇಲಿರುವ ಏನಿದು ಮಾಹಿತಿ ಹಂಚಿಕೆಯ ಮತ್ತೊಂದು ಪ್ರಕರಣ ಎಂಬುದನ್ನು ಮುಂದೆ ತಿಳಿಯಿರಿ.

ದತ್ತಾಂಶವು ಫೇಸ್‌ಬುಕ್‌ನಲ್ಲಿ ಸುರಕ್ಷಿತವಲ್ಲ!!

ದತ್ತಾಂಶವು ಫೇಸ್‌ಬುಕ್‌ನಲ್ಲಿ ಸುರಕ್ಷಿತವಲ್ಲ!!

ಫೇಸ್‌ಬುಕ್ ಬಳಕೆದಾರರ ದತ್ತಾಂಶವು ಫೇಸ್‌ಬುಕ್‌ನಲ್ಲಿ ಸುರಕ್ಷಿತವಲ್ಲ, ಸಂವಹನ ಸಾಧನಗಳನ್ನು ತಯಾರಿಸುವ ವಿವಿಧ ಕಂಪನಿಗಳ ಜತೆಗೆ ಫೇಸ್‌ಬುಕ್‌ ಬಳಕೆದಾರರ ದತ್ತಾಂಶವನ್ನು ಹಂಚಿಕೊಂಡಿದೆ ಎಂದು ದ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ. ಇದು ಫೇಸ್‌ಬುಕ್ ಮತ್ತು ಮೊಬೈಲ್ ತಯಾರಕರ ಮೇಲೆ ಅನುಮಾನ ಮೂಡುವಂತೆ ಮಾಡಿದೆ.

ತಯಾರಕರು ನಂಬಿಕಸ್ಥರು ಅಲ್ಲವೇ ಅಲ್ಲ!!

ತಯಾರಕರು ನಂಬಿಕಸ್ಥರು ಅಲ್ಲವೇ ಅಲ್ಲ!!

ನ್ಯೂಯಾರ್ಕ್‌ ಟೈಮ್ಸ್‌ ವರದಿಯಲ್ಲಿ ‘ಫೇಸ್‌ಬುಕ್‌ ಅಥವಾ ಸಂವಹನ ಸಾಧನ ತಯಾರಕರು ನಂಬಿಕಸ್ಥರು ಎಂದು ನೀವು ಭಾವಿಸಿರಬಹುದು. ಆದರೆ, ಆಪ್‌ಗಳ ಮೂಲಕ ದತ್ತಾಂಶವನ್ನು ಪಡೆದುಕೊಳ್ಳಲು ಅವಕಾಶ ಇದ್ದರೆ ಅದು ಖಾಸಗಿ ಮಾಹಿತಿಗಳಿಗೆ ಗಂಭೀರ ಅಪಾಯವನ್ನು ಒಡ್ಡುತ್ತದೆ ಎಂದು ಸಂಶೋಧಕ ಸರ್ಗೆ ಎಗೆಲ್‌ಮನ್‌ ಹೇಳಿದ್ದಾರೆ.

ದತ್ತಾಂಶ ಒಪ್ಪಂದದ ಉದ್ದೇಶ ಏನಿತ್ತು?

ದತ್ತಾಂಶ ಒಪ್ಪಂದದ ಉದ್ದೇಶ ಏನಿತ್ತು?

ಮೊಬೈಲ್ ಅಥವಾ ಸ್ಮಾರ್ಟ್‌ಫೋನ್‌ಗಳಲ್ಲಿ ಫೇಸ್‌ಬುಕ್‌ ಆಪ್‌ಗಳು ಲಭ್ಯವಾಗುತ್ತಿರುವ ಮೊದಲಿನ ದಿನಗಳಲ್ಲಿ ಫೇಸ್‌ಬುಕ್‌ ಅಥವಾ ಸಂವಹನ ಸಾಧನ ತಯಾರಕರ ನಡುವೆ ದತ್ತಾಂಶ ಹಂಚಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದಿಂದಾಗಿ ಫೇಸ್‌ಬುಕ್‌ಗೆ ತನ್ನ ಜನಪ್ರಿಯತೆ ಮತ್ತು ವಿಸ್ತಾರವನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯವಾಗಿದೆ.!

ನಮ್ಮ ಮಾಹಿತಿಗೆ ರಕ್ಷಣೆಯಿಲ್ಲ.!!

ನಮ್ಮ ಮಾಹಿತಿಗೆ ರಕ್ಷಣೆಯಿಲ್ಲ.!!

ಅಮೆರಿಕದ ಗ್ರಾಹಕ ಹಕ್ಕುಗಳ ರಕ್ಷಣಾ ಆಯೋಗ ಮಾಡಿರುವ ಘೋಷಣೆಯನ್ನು ಫೇಸ್‌ಬುಕ್ ಅನುಸರಿಸುತ್ತಿದೆಯೇ ಎಂಬ ಬಗ್ಗೆ ಅನುಮಾನ ಮೂಡಿದೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ವರದಿಯಲ್ಲಿ ಹೇಳಲಾಗಿದೆ. ಹಾಗಾಗಿ, ಫೇಸ್‌ಬುಕ್‌ ಅಳವಡಿಸಿಕೊಂಡಿರುವ ಖಾಸಗಿ ಮಾಹಿತಿ ರಕ್ಷಣೆ ನೀತಿಯ ಬಗ್ಗೆಯೇ ಗಂಭೀರ ಪ್ರಶ್ನೆಗಳು ಎದ್ದಿವೆ.

Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!
ನಿರಾಕರಿಸಿದವರ ಮಾಹಿತಿ ಸಹ ಬಿಟ್ಟಿಲ್ಲ!!

ನಿರಾಕರಿಸಿದವರ ಮಾಹಿತಿ ಸಹ ಬಿಟ್ಟಿಲ್ಲ!!

ವೈಯಕ್ತಿಕ ಮಾಹಿತಿಯನ್ನು ಬೇರೆಯವರಿಗೆ ನೀಡುವುದನ್ನು ನಿರಾಕರಿಸಿದವರ ಹಾಗೂ ಬಳಕೆದಾರರ ಗೆಳೆಯರ ಮಾಹಿತಿಯನ್ನು ಅವರ ಒಪ್ಪಿಗೆ ಪಡೆದುಕೊಳ್ಳದೆಯೇ ಮತ್ತು ಇತರ ಕಂಪನಿಗಳೊಂದಿಗೆ ಹಂಚಿಕೊಳ್ಳಲಾಗಿದೆ. ಮಾಹಿತಿಯನ್ನು ಬೇರೆಯವರ ಜತೆಗೆ ಹಂಚಿಕೊಳ್ಳುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ ನಂತರವೂ ಇದು ನಡೆದಿದೆ ಎನ್ನಲಾಗಿದೆ.

ಫೇಸ್‌ಬುಕ್‌ ಸಮರ್ಥನೆ

ಫೇಸ್‌ಬುಕ್‌ ಸಮರ್ಥನೆ

ಇತೆರೆ ಕಂಪನಿಗಳ ಜತೆಗೆ ದತ್ತಾಂಶ ಹಂಚಿಕೆ ಒಪ್ಪಂದ ಮಾಡಿಕೊಂಡಿರುವುದನ್ನು ಫೇಸ್‌ಬುಕ್‌ ಕಂಪನಿ ಸಮರ್ಥಿಸಿಕೊಂಡಿದೆ. ಖಾಸಗಿತನ ನೀತಿ ಮತ್ತು ಎಫ್‌ಟಿಸಿ ಒಪ್ಪಂದವನ್ನು ಉಲ್ಲಂಘಿಸಿಲ್ಲ ಎಂದು ಫೇಸ್‌ಬುಕ್‌ ಹೇಳಿದೆ. ಆದರೆ, ತಮ್ಮ ಮಾಹಿತಿ ಸುರಕ್ಷಿತ ಎಂದು ಖಾತೆದಾರರು ಭಾವಿಸಿಕೊಂಡಿರುತ್ತಾರೆ. ಆದರೆ ವಾಸ್ತವದಲ್ಲಿ ಹಾಗೆ ಇಲ್ಲ ಎಂದು ವರದಿ ಹೇಳಿದೆ.

Best Mobiles in India

English summary
Facebook admits as many as 14 millions of its users who thought they're sharing content privately with only friends may have inadvertently shared their posts with everyone because of a software bug. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X