ಸ್ಮಾರ್ಟ್‌ಫೋನ್‌ನಲ್ಲಿ ಸ್ಕ್ರೀನ್‌ ಶೇರಿಂಗ್‌ ಪರಿಚಯಿಸಿದ ಫೇಸ್‌ಬುಕ್‌ ಮೆಸೆಂಜರ್‌!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ಗಳಲ್ಲಿ ಫೇಸ್‌ಬುಕ್‌ ಕೂಡ ಒಂದಾಗಿದೆ. ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿರುವ ಫೇಸ್‌ಬುಕ್‌ ಇದೀಗ ಫೇಸ್ಬುಕ್‌ ಮೆಸೆಂಜರ್‌ನಲ್ಲಿ ಸ್ಕ್ರೀನ್‌ ಶೇರಿಂಗ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ. ವೀಡಿಯೊ ಕಾನ್ಫರೆನ್ಸಿಂಗ್ ಅಪ್ಲಿಕೇಶನ್‌ಗಳಲ್ಲಿ ಮಾತ್ರ ಸ್ಕ್ರೀನ್‌ ಶೇರಿಂಗ್‌ ಫೀಚರ್ಸ್‌ ಅನ್ನು ಕಾಣಬಹುದಾಗಿದೆ. ಆದರೆ ಪರ್ಸನಲ್‌ ವೀಡಿಯೊ ಕಾಲಿಂಗ್‌ ಅಪ್ಲಿಕೇಶನ್‌ಗಳಲ್ಲಿ ಇದು ಲಭ್ಯವಾಗುವುದಿಲ್ಲ. ಆದರೆ ಫೇಸ್‌ಬುಕ್ ಇದೀಗ ತನ್ನ ಮೆಸೆಂಜರ್ ವಿಡಿಯೋ ಕಾಲಿಂಗ್‌ ಸೇವೆಗಳನ್ನು ಆಪ್‌ಡೇಟ್‌ ಮಾಡಿದ್ದು, ಸ್ಕ್ರೀನ್‌ ಶೇರಿಂಗ್‌ ಫೀಚರ್ಸ್‌ ಅನ್ನು ಪರಿಚಯಿಸಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ತನ್ನ ಮೆಸೆಂಜರ್‌ನಲ್ಲಿ ವೀಡಿಯೋ ಕಾಲಿಂಗ್‌ ಮಾಡುವಾಗ ಸ್ಕ್ರೀನ್‌ ಶೇರಿಂಗ್‌ ಮಾಡುವ ಫೀಚರ್ಸ್‌ ಅನ್ನು ಪರಿಚಯಿಸಿದೆ. ಸದ್ಯ ಈಗಾಗಲೇ ಡೆಸ್ಕ್‌ಟಾಪ್‌ನಲ್ಲಿರುವ ಫೇಸ್‌ಬುಕ್ ಮೆಸೆಂಜರ್ ನಲ್ಲಿ ಮಾತ್ರ ಅಲ್ಪ ಸಮಯದವರೆಗೆ ಸ್ಕ್ರೀನ್‌ ಶೇರಿಂಗ್‌ ಮಾಡುವ ಅವಕಾಶವನ್ನು ಹಂಚಿಕೊಳ್ಳುವ ಸಾಮರ್ಥ್ಯವನ್ನು ನೀಡಲಾಗಿದೆ. ಆದರೆ ಇದೀಗ ಫೇಸ್‌ಬುಕ್‌ ಮೆಸೆಂಜರ್‌ ನಲ್ಲಿ ಸ್ಕ್ರೀನ್‌ ಶೇರಿಂಗ್‌ ಫಿಚರ್ಸ್‌ ಅನ್ನು ಪರಿಚಯಿಸಲಾಗಿದೆ. ಇದನ್ನು ಇದಕ್ಕೂ ಮುನ್ನ ಕೆಲವು ತಿಂಗಳುಗಳ ಕಾಲ ಬೀಟಾ ವರ್ಷನ್‌ನಲ್ಲಿ ಪರಿಚಯಿಸಲಾಗಿತ್ತು. ಸದ್ಯ ಈ ಸೇವೆ ಇದೀಗ ಎಲ್ಲಾ ಫೇಸ್‌ಬುಕ್‌ ಬಳಕೆದಾರರಿಗಾಗಿ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಲಭ್ಯವಾಗಲಿದೆ. ಅಷ್ಟಕ್ಕೂ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್

ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಇದೀಗ ಸ್ಕ್ರೀನ್ ಶೇರಿಂಗ್‌ ಫೀಚರ್ಸ್‌ ಲಭ್ಯವಾಗಲಿದೆ. ಇನ್ನು ಈ ಫೀಚರ್ಸ್‌ ನೀವು ಹೇಗೆ ನಿರೀಕ್ಷಿಸುತ್ತೀರಿ ಎಂಬುದರ ಮೇಲೆ ಕಾರ್ಯನಿರ್ವಹಿಸುತ್ತದೆ. ಅದರೆ "share your screen" ಆಯ್ಕೆಯನ್ನು ಬಹಿರಂಗಪಡಿಸ ಬೇಕಾದರೆ ನೀವು ಮೆಸೆಂಜರ್‌ ಕಾಲ್‌ನಲ್ಲಿ ಸರಳವಾಗಿ ಸ್ವೈಪ್ ಮಾಡಿದರೆ ಸಾಕು ನಿಮ್ಮ ಸ್ಕ್ರೀನ್‌ ಶೇರ್‌ ಮಾಡಬಹುದಾಗಿದೆ. ಇನ್ನು ಈ ಫೀಚರ್ಸ್‌ ಒನ್-ಒನ್ ವೀಡಿಯೊ ಕರೆಗಳಿಗೆ ಮತ್ತು 8 ಜನರು ಅಥವಾ rooms 16 ಜನರೊಂದಿಗೆ ಗ್ರೂಪ್‌ ಕಾಲ್‌ಗಳಲ್ಲಿ ಲಭ್ಯವಾಗಲಿದೆ. ಸದ್ಯ ಡೆಸ್ಕ್‌ಟಾಪ್‌ನಲ್ಲಿರುವ rooms ಸ್ಕ್ರೀನ್ ಹಂಚಿಕೆಯನ್ನು ಫೇಸ್‌ಬುಕ್ ಲಭ್ಯವಾಗುವಂತೆ ಮಾಡಿದೆ.

ಸ್ಕ್ರೀನ್‌ ಶೇರಿಂಗ್

ಇನ್ನು ನಿವು ನಿಮ್ಮ ಸ್ಕ್ರೀನ್‌ ಶೇರಿಂಗ್‌ ಮಾಡುವುದನ್ನು ಖಚಿತ ಮಾಡುವುದಕ್ಕಾಗಿ ನೀವು ಎರಡು ಭಾರಿ ದೃಡೀಕರಣ ಮಾಡಬೇಕಾಗುತ್ತದೆ. ನಂತರ ಇದನ್ನ ಪ್ರಾರಂಭಿಸಿದ ಮೇಲೆ, ನಿಮ್ಮ ಫೋನ್‌ನ ಸ್ಕ್ರೀನ್‌ನಲ್ಲಿ ಡೈರೆಕ್ಟ್‌ ವ್ಯೂವ್‌ ಮಾಡಬಹುದಾಗಿದೆ. ಇನ್ನು ಹಲವಾರು ಕಾರಣಗಳಿಗಾಗಿ non-work ಸಂಬಂಧಿತ ವೀಡಿಯೊ ಕರೆಗಳಲ್ಲಿ ಸ್ಕ್ರೀನ್‌ ಶೇರಿಂಗ್‌ ಫಿಚರ್ಸ್‌ ಉಪಯುಕ್ತವಾಗಿದೆ. ಇದಕ್ಕಾಗಿ ನಿವು ನಿಮ್ಮ ಕ್ಯಾಮೆರಾ ರೋಲ್ ಅನ್ನು ತೆರೆಯಬಹುದು. ಅಲ್ಲದೆ ನಿಮ್ಮ ಇತ್ತೀಚಿನ ಫೋಟೋಗಳನ್ನು ಸಹ ಇದರಲ್ಲಿ ಪ್ರದರ್ಶಿಸಬಹುದಾಗಿದೆ.

ಫೇಸ್‌ಬುಕ್‌

ಅಲ್ಲದೆ ಈ ಫೇಸ್‌ಬುಕ್‌ ಮೇಸೆಂಜರ್ ಪರಿಚಯಿಸಿರುವ ಸ್ಕ್ರೀನ್‌ ಶೇರಿಂಗ್‌ ಮೂಲಕ ನಿವು ನಿಮ್ಮ ವೆಬ್‌ಸೈಟ್‌ನಲ್ಲಿ ಚಾಟ್‌ ಮಾಡುವಾಗ ನಿಮಗೆ ಉಪಯುಕ್ತವಾಗಲಿದೆ. ಅಲ್ಲದೆ ಯಾರಿಗಾದರೂ ಏನಾದರೂ ತಾಂತ್ರಿಕ ಸಹಾಯ ಬೇಕಾಗಬಹುದು ಮತ್ತು ಅವರ ಪರದೆಯನ್ನು ನೋಡುವುದರಿಂದ ಏನು ಮಾಡಬೇಕೆಂದು ವಿವರಿಸಲು ಸಹ ಸುಲಭವಾಗಲಿದೆ. ಸದ್ಯ ಈ ಫೀಚರ್ಸ್‌ ಅನ್ನು ಆಂಡ್ರಾಯ್ಡ್ ಮತ್ತು ಐಒಎಸ್ ಡಿವೈಸ್‌ಗಳಲ್ಲಿ ಪರಿಚಯಿಸಲಿದ್ದೇವೆ ಎಂದು ಫೇಸ್‌ಬುಕ್‌ ಹೇಳಿಕೊಂಡಿದೆ.

Best Mobiles in India

English summary
Facebook has been updating its Messenger video calling services in recent months and now they are adding screen sharing to the mix.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X