ಹಸುಳೆಯನ್ನು ಕಾಪಾಡಿದ ಫೇಸ್‌ಬುಕ್

Written By:

ಮೆಲಿಸ್ಸಾ ಮೆಕೋನ್ಸ್‌ರ ಹದಿನಾರು ಗಂಟೆಯ ಮಗು ವಿಕ್ಟೋರಿಯಾನನ್ನು ದಾದಿ ಧಿರಿಸಿನಲ್ಲಿ ಬಂದ ಮಹಿಳೆ ಅಪಹರಿಸಿದ್ದರು. ಕೂಡಲೇ ಘಟನೆಯ ಗಂಭೀರತೆಯನ್ನು ಮನಗಂಡ ಆಸ್ಪತ್ರೆಯ ಸಿಬ್ಬಂದಿಗಳು ಸುದ್ದಿಯನ್ನು ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿದ್ದಾರೆ.

ಈ ವಾಲ್‌ಪೋಸ್ಟ್ ಅನ್ನು ಗಮನಿಸಿದ ಕೆಲವು ಹುಡುಗಿಯರು ಆ ರಾತ್ರಿಯೇ ಮಗುವನ್ನು ಅಪಹರಿಸಿದ ಕಾರನ್ನು ಹುಡುಕುವ ಸಾಹಸಕ್ಕೆ ಮುಂದಾದರು. ಮಗುವನ್ನು ಅಪಹರಿಸಿದ ದಾದಿಯ ಚಿತ್ರವನ್ನು ಕೂಡಲೇ ಗಮನಿಸಿದ ಈ ಹುಡುಗಿಯರು ತಮ್ಮ ಸ್ನೇಹಿತರಲ್ಲಿ ಹೆಂಗಸಿನ ಅಪಾರ್ಟ್‌ಮೆಂಟನ್ನು ಜಾಲಾಡುವಂತೆ ಸೂಚಿಸಿದರು. ತನ್ನ ಮನೆಯ ಮುಂಭಾಗದಲ್ಲಿ ಕಾರನ್ನು ನಿಲ್ಲಿಸಿದ್ದ ಮಹಿಳೆಯ ಅಪಾರ್ಟ್‌ಮೆಂಟ್ ಇವರಿಗೆ ದೊರೆಯಿತು ಹಾಗೂ ಪೋಲೀಸರಿಗೆ ಈ ಮಾಹಿತಿಯನ್ನು ನೀಡಲಾಯಿತು.

ಹಸುಳೆಯನ್ನು ಕಾಪಾಡಿದ ಫೇಸ್‌ಬುಕ್

ನಮ್ಮ ಈ ಸಣ್ಣ ಕಂದಮ್ಮ ವಿಕ್ಟೋರಿಯಾನನ್ನು ಪ್ರತಿ ಕ್ಲಿಕ್ ಹಾಗೂ ಪ್ರತಿ ಶೇರಿಂಗ್ ರಕ್ಷಿಸಿದೆ. ಅಪಹರಣಕಾರಿ ಮಹಿಳೆಯನ್ನು ಗುರುತಿಸಿದ ನಾಲ್ಕು ಜನರಿಗೆ ನಾವು ಆಭಾರಿಯಾಗಿದ್ದೇವೆ ಎಂದು ಮೆಕೋನ್ಸ್ ತಿಳಿಸಿದ್ದಾರೆ.

ದಾದಿಯ ವೇಷದಲ್ಲಿದ್ದ ಮಹಿಳೆಯು ಮೆಕೋನ್ಸ್ ಇರುವ ಕೊಠಡಿಗೆ ತೆರಳಿರುವುದು ಮತ್ತು ಹದಿನಾರು ಗಂಟೆಗಳ ಪುಟ್ಟ ಕಂದಮ್ಮನನ್ನು ಹಿಡಿದುಕೊಂಡು ಹೊರಗೆ ಬರುವುದನ್ನು ಆಸ್ಪತ್ರೆಯ ಕ್ಯಾಮೆರಾ ದಾಖಲಿಸಿದೆ. ಆದರೆ ಆ ವೇಳೆಗಾಗಲೇ ಅಪಹರಣಕಾರಿ ಹಸುಳೆಯನ್ನು ಹಿಡಿದುಕೊಂಡು ಪರಾರಿಯಾಗಿದ್ದರು. ಈ ಕ್ಲಿಪ್ಪಿಂಗ್ಸ್‌ಗಳೇ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಹರಿದಾಡಿತು.

ಫೇಸ್‌ಬುಕ್ ಮತ್ತು ಅಪಹರಣಕಾರಿಯನ್ನು ಹುಡುಕಲು ಸಹಾಯ ಮಾಡಿದ ಹುಡುಗಿಯರಿಗೆ ಮಗುವನ್ನು ಪಡೆದ ಪೋಷಕರು ಕೃತಜ್ಞರಾಗಿದ್ದಾರೆ.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot