Subscribe to Gizbot

ಟೆಕ್ಕಿಯನ್ನು ಭಯೋತ್ಪಾದಕಿ ಎಂದರಿತು ನಿರ್ಬಂಧ ಹೇರಿದ ಫೇಸ್‌ಬುಕ್

Written By:

ಭಯೋತ್ಪಾದನೆಯನ್ನು ತೊಡೆದು ಹಾಕುವ ಕ್ರಿಯೆಯಲ್ಲಿ ಫೇಸ್‌ಬುಕ್ ಕೂಡ ಕೈಜೋಡಿಸಿದೆ ಎಂಬುದು ಇತ್ತೀಚಿನ ಘಟನೆಯಿಂದ ನಡೆದಿದೆ. ಫೇಸ್‌ಬುಕ್‌ನಲ್ಲಿ ಖಾತೆಯನ್ನು ನಾವು ಹೊಂದಿದ್ದರೆ ಸ್ವತಃ ನಾವಾಗಿಯೇ ಅದನ್ನು ಬ್ಲಾಕ್ ಮಾಡುವುದು ಸರ್ವೇ ಸಾಮಾನ್ಯ. ಆದರೆ ಫೇಸ್‌ಬುಕ್ ಸ್ವತಃ ಮಹಿಳೆಯ ಖಾತೆಯನ್ನು ಬ್ಲ್ಯಾಕ್ ಮಾಡಿದೆ. ಏಕೆ ಗೊತ್ತೇ ಆಕೆ ಭಯೋತ್ಪಾದಕ ಸಂಸ್ಥೆ ಐಸೀಸ್ ಹೆಸರನ್ನು ಆಕೆ ಹೊಂದಿದ್ದಾಳೆ ಎಂಬುದೇ ಮೂಲ ಕಾರಣವಾಗಿದೆ.

ಓದಿರಿ: ಫೇಸ್‌ಬುಕ್ ವಿಷಯಗಳ ಮೇಲೆ ನಿರ್ಬಂಧ ಹೇರಿದ ಭಾರತ

ಐಸೀಸ್ ಅಂಚಲಿ ಎಂಬುದು ಈಕೆಯ ಹೆಸರಾಗಿದ್ದು, ಮೂಲತಃ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೆಲೆಸಿರುವವರಾಗಿದ್ದಾರೆ. ತನಗೆ ಗೊತ್ತಿಲ್ಲದೇ ಫೇಸ್‌ಬುಕ್ ನನ್ನ ಖಾತೆಯನ್ನು ನಿರ್ಬಂಧಿಸಿದೆ ಎಂಬುದಾಗಿ ಅಂಕಲಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಇದು ತನ್ನ ಹೆಸರಿನಿಂದ ಉಂಟಾಗಿರುವ ಗೊಂದಲದಿಂದಾಗಿದೆ ಎಂಬುದಾಗಿ ಸ್ವತಃ ಆಕೆಯೇ ಹೇಳಿಕೊಂಡಿದ್ದಾರೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ವಿಟ್ಟರ್‌ನಲ್ಲಿ ಅಂಚಲಿ ಫೇಸ್‌ಬುಕ್‌ಗೆ ಪ್ರಶ್ನೆಯನ್ನು ಕೇಳಿರುವುದು

ಅಂಚಲಿ ಅಳಲು

ಫೇಸ್‌ಬುಕ್ ನನ್ನ ಖಾತೆಯನ್ನು ನೀವು ಏಕೆ ನಿಷ್ಕ್ರಿಯಗೊಳಿಸಿದ್ದೀರಿ? ನನ್ನ ನಿಜವಾದ ಹೆಸರು ಐಸೀಸ್ ಅಂಚಲಿ ಎಂಬುದಾಗಿದೆ.

ಟ್ವಿಟ್ಟರ್‌ನಲ್ಲಿ ಅಂಚಲಿ ಫೇಸ್‌ಬುಕ್‌ಗೆ ಪ್ರಶ್ನೆಯನ್ನು ಕೇಳಿರುವುದು

ಅಂಚಲಿ ಅಳಲು

ಫೇಸ್‌ಬುಕ್ ನನ್ನ ಖಾತೆಯನ್ನು ನೀವು ಏಕೆ ನಿಷ್ಕ್ರಿಯಗೊಳಿಸಿದ್ದೀರಿ? ನನ್ನ ನಿಜವಾದ ಹೆಸರು ಐಸೀಸ್ ಅಂಚಲಿ ಎಂಬುದಾಗಿದೆ.

ಪೋಸ್ಟ್ ಮಾಡಿದ್ದಾರೆ

ಫೇಸ್‌ಬುಕ್ ನಿಷ್ಕ್ರಿಯಗೊಳಿಸಿರುವ ಚಿತ್ರ

ಇವರ ಖಾತೆಯನ್ನು ಫೇಸ್‌ಬುಕ್ ನಿಷ್ಕ್ರಿಯಗೊಳಿಸಿರುವ ಚಿತ್ರವನ್ನು ಅಂಚಲಿ ಪೋಸ್ಟ್ ಮಾಡಿದ್ದಾರೆ.

ಅಚಲಿ ಪ್ರಶ್ನೆ

ಪುನಃ ಪುನಃ ಪ್ರಶ್ನೆ ಕೇಳುತ್ತಿರುವುದು

ಫೇಸ್‌ಬುಕ್‌ಗೆ ಈಕೆ ಪುನಃ ಪುನಃ ಪ್ರಶ್ನೆ ಕೇಳುತ್ತಿರುವುದನ್ನು ಆಕೆಯ ಪೋಸ್ಟ್‌ನಲ್ಲಿ ನಿಮಗೆ ಗಮನಿಸಬಹುದಾಗಿದೆ.

ಗೆಳತಿಯಿಂದ ಸಂದೇಶ

ಸ್ಪ್ಯಾಮ್

ಈಕೆಯ ಗೆಳತಿಯೊಬ್ಬರು ಅಂಚಲ್‌ಗೆ ಆಕೆಯ ಸಂದೇಶ ಸ್ಪ್ಯಾಮ್ ಎಂಬುದಾಗಿ ಗುರುತಾಗಿರುವುದನ್ನು ತೋರಿಸಿದ್ದಾರೆ. ನಾನು ಒಬ್ಬ ಭಯೋತ್ಪಾದಕಿ ಎಂದು ಫೇಸ್‌ಬುಕ್ ಆಲೋಚಿಸುತ್ತಿದ್ದು ನನ್ನ ಖಾತೆಯನ್ನು ಈ ಕಾರಣದಿಂದ ಅದು ನಿಷ್ಕ್ರಿಯಗೊಳಿಸಿದೆ ಎಂಬುದಾಗಿ ಆಕೆ ತಿಳಿಸಿದ್ದಾರೆ.

ಎಲ್ಲಾ ಮಾಹಿತಿ

ಅಂಚಲ್ ದೃಢೀಕರಣ

ತನ್ನ ಪಾಸ್‌ಪೋರ್ಟ್, ಆಕೆಯ ಜನನ ಹೆಸರನ್ನು ಅಂಚಲ್ ಸ್ಕ್ರೀನ್ ಶಾಟ್ ತೆಗೆದು ಫೇಸ್‌ಬುಕ್‌ಗೆ ಕಳುಹಿಸಿದ್ದಾರೆ.

ದಾಖಲೆಯ ಪರಿಶೀಲನೆ

ಫೇಸ್‌ಬುಕ್ ಕ್ಷಮಾಪಣೆ

ಇನ್ನು ಕೊನೆಯ ಬಾರಿಗೆ ಅಂಚಲ್ ಫೇಸ್‌ಬುಕ್‌ಗೆ ಮಾಡಿರುವ ದಾಖಲೆಯ ಸ್ವೀಕಾರವನ್ನು ಫೇಸ್‌ಬುಕ್ ಮಾಡಿದ್ದು ಇದಕ್ಕೆ ಫೇಸ್‌ಬುಕ್ ಕ್ಷಮಾಪಣೆಯನ್ನು ಕೇಳಿದೆ.

ಕ್ಷಮಾಪಣೆ ಕೇಳಿದ್ದಾರೆ

ಫೇಸ್‌ಬುಕ್ ರೀಸರ್ಚರ್ ಓಮಿದ್ ಫಾರ್ವಿರ್ ರೀಟ್ವೀಟ್

ಫೇಸ್‌ಬುಕ್ ರೀಸರ್ಚರ್ ಓಮಿದ್ ಫಾರ್ವಿರ್ ಖುದ್ದು ಅಂಚಲ್ ಟ್ವೀಟ್‌ಗೆ ರೀಟ್ವೀಟ್ ಮಾಡಿದ್ದು, ಐಸೀಸ್ ಇದಕ್ಕಾಗಿ ನಾನು ಕ್ಷಮಾಪಣೆಯನ್ನು ಕೇಳುತ್ತಿದ್ದೇನೆ. ಏನು ಸಂಭವಿಸಿತು ಎಂಬುದೇ ನನಗೆ ತಿಳಿದಿಲ್ಲ. ಇದನ್ನು ಸರಿಯಾದ ಜನರ ಗಮನಕ್ಕೆ ನಾನು ತಂದಿದ್ದು, ಆ ತೊಂದರೆ ನಿವಾರಣೆಗಾಗಿ ನಾವು ಪ್ರಯತ್ನಿಸುತ್ತಿದ್ದೇವೆ ಎಂಬುದಾಗಿ ಹೇಳಿದ್ದಾರೆ.

ಬಳಕೆದಾರರ ನೈಜ ಹೆಸರು

ಫೇಸ್‌ಬುಕ್ ಹೊಸ ನೀತಿ

ಈ ವರ್ಷದ ಪ್ರಾರಂಭದಲ್ಲೇ ಫೇಸ್‌ಬುಕ್ ಹೊಸ ನೀತಿಯನ್ನು ಹೊರತಂದಿದ್ದು ತಮ್ಮ ನೈಜ ಹೆಸರುಗಳನ್ನೇ ಖಾತೆದಾರರು ಬಳಸಬೇಕಾಗುತ್ತದೆ. ಯಾವುದೇ ಗುರುತುಗಳು, ಚಿಹ್ನೆಗಳು, ಬೇಡದ ಅಕ್ಷರಗಳನ್ನು ಬಳಕೆದರರು ತಮ್ಮ ಖಾತೆಯ ಹೆಸರಿನಲ್ಲಿ ಬಳಸುವಂತಿಲ್ಲ.

ಆನ್‌ಲೈನ್ ಪಿಟೀಶನ್

ಇಸ್ಲಾಮಿಕ್ ದೇಶ

ಇನ್ನು ಇದೇ ಹೆಸರುಳ್ಳ ಖಾತೆಯೊಂದು ತಮ್ಮ ಹೆಸರನ್ನು ಬಳಸಿ ಇಸ್ಲಾಮಿಕ್ ದೇಶಗಳನ್ನು ಕರೆಯುವುದನ್ನು ನಿಲ್ಲಿಸಿ ಎಂಬುದಾಗಿ ಟ್ವೀಟ್ ಮಾಡಿದೆ. 56,800 ಸಹಿಗಳುಳ್ಳ ಆನ್‌ಲೈನ್ ಪಿಟೀಶನ್ ಅನ್ನು ಹಾಕಿದೆ.

ಐಸೀಸ್

ಮಾಧ್ಯಮಕ್ಕೆ ಮನವಿ

ಇನ್ನು ಐಸೀಸ್ ಹೆಸರುಳ್ಳ ಯಾವುದೇ ವ್ಯಕ್ತಿಯನ್ನು, ಸಂಸ್ಥೆಯನ್ನು ಜರೆಯುವುದು ಸರಿಯಲ್ಲ ಎಂಬುದಾಗಿ ಮಾಧ್ಯಮಕ್ಕೆ ಅದು ಮನವಿ ಮಾಡಿಕೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Isis Anchalee, a San Francisco-based engineer, claims to have had her Facebook account disabled because of her name..
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot