ತನ್ನದೇ ಆದ ಮ್ಯೂಸಿಕ್ ವಿಡಿಯೋ ಅಪ್ಲಿಕೇಶನ್ ಪ್ರಾರಂಭಿಸಲು ಫೇಸ್‌ಬುಕ್ ಸಿದ್ದತೆ!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಅಪ್ಲಿಕೇಶನ್‌ ಆಗಿರುವ ಫೇಸ್‌ಬುಕ್‌ ಬಳಕೆದಾರರ ಸ್ನೇಹಿ ಆಗಿ ಗುರುತಿಸಿಕೊಂಡಿದೆ. ಈಗಾಗಳೇ ಹಲವು ಅನುಕೂಲಕರ ಫೀಚರ್ಸ್‌ಗಳನ್ನ ಪರಿಚಯಿಸಿ ಬಳಕೆದಾರರಿಗೆ ಅನುಕೂಲ ಮಾಡಿಕೊಟ್ಟಿದೆ. ಸದ್ಯ ಇದೀಗ ಫೇಸ್‌ಬುಕ್‌ ಮ್ಯೂಸಿಕ್‌ ವಿಡಿಯೋ ಪ್ಲಾರ್ಟ್‌ಫಾರ್ಮ್‌ ಅನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಮುಂದಿನ ದಿನಗಳಲ್ಲಿ ತನ್ನದೇ ಆದ ಮ್ಯೂಸಿಕ್‌ ವೀಡಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಪರವಾನಗಿ ಪಡೆದ ಮ್ಯೂಸಿಕ್‌ ವೀಡಿಯೊಗಳನ್ನು ಬಿಡುಗಡೆ ಮಾಡಲು ಪ್ಲ್ಯಾನ್‌ ರೂಪಿಸಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ನ ಹೊಸ ಮಾದರಿಯ ಮ್ಯೂಸಿಕ್‌ ಅಪ್‌ ಅನ್ನು ಪರಿಚಯಿಸಲಿದೆ. ಈ ಮೂಲಕ ಬಳಕೆದಾರರು ತಮ್ಮ ಪೇಜ್‌ನಲ್ಲಿ ಹೊಸ ಮ್ಯೂಸಿಕ್‌ ವೀಡಿಯೊಗಳನ್ನು ಸೇರಿಸುವ ಫೀಚರ್ಸ್‌ ಅನ್ನು ಪರಿಚಯಿಸಲಿದೆ. ಇದರ ಬಗ್ಗೆ ಫೇಸ್‌ಬುಕ್ ಕಲಾವಿದರ ಅಧಿಕೃತ ಪುಟಗಳಿಗೆ ಮಾಹಿತಿ ನೀಡುತ್ತಿದೆ ಎಂದು ವರದಿ ಆಗಿದೆ. ಪೇಜ್‌ ಮಾಲಿಕರು ಈ ಫೀಚರ್ಸ್‌ ಅನ್ನು ಆನ್‌ ಮಾಡಿದರೆ ಕಲಾವಿದರ ಅಧಿಕೃತ ಮ್ಯೂಸಿಕ್‌ ವೀಡಿಯೊಗಳು ಫೇಸ್‌ಬುಕ್‌ನಲ್ಲಿ ತೋರಿಸಲಾಗುತ್ತದೆ. ಈ ಫೀಚರ್ಸ್‌ ಬಗ್ಗೆ ಪ್ರತಿಕ್ರಿಯಿಸಲು ಪೇಜ್‌ ಮಾಲಿಕರಿಗೆ ಆಗಸ್ಟ್ 1ರ ತನಕ ಗಡುವು ನೀಡಲಾಗಿದೆ. ಅಷ್ಟಕ್ಕೂ ಈ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್

ಸದ್ಯ ಫೇಸ್‌ಬುಕ್ ತನ್ನ ಬಳಕೆದಾರರು ಹಾಗೂ ಪೇಸ್‌ಬುಕ್‌ ಪೇಜ್‌ನಲ್ಲಿ ತಮ್ಮದೇ ಆದ ಅದಿಕೃತ ವೀಡಿಯೋಗಳನ್ನ ಪೋಸ್ಟ್‌ ಮಾಡುವ ಕಲಾವಿದರಿಗಾಗಿ ಮ್ಯೂಸಿಕ್‌ ವೀಡಿಯೋ ಆಪ್‌ ಅನ್ನು ಪರಿಚಯಿಸಲಿದೆ. ಇದಲ್ಲದೆ ಪೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ ಮಾಡಲಾದ ಮ್ಯೂಸಿಕ್‌ ವಿಡಿಯೋಗಳನ್ನ ಯೂಟ್ಯೂಬ್‌ ನಲ್ಲಿ ಪ್ರಕಟಿಸಲಿದೆ ಎಂದು ಹೇಳಲಾಗ್ತಿದೆ. ಇದಕ್ಕಾಗಿ ಹೊಸ ಪೇಜ್‌ ಅನ್ನು ಪೇಸ್‌ಬುಕ್‌ ಕ್ರಿಯೆಟ್‌ ಮಾಡಿದ್ದು, ಇದನ್ನು ಆರ್ಟಿಸ್ಟ್‌ ನೇಮ್‌ ಎಂದು ಕರೆಯಲಾಗುತ್ತದೆ. ಈ ಪುಟವು ಬಳಕೆದಾರರಿಗಾಗಿ ಫೇಸ್‌ಬುಕ್ ವಾಚ್‌ನಲ್ಲಿ ಕಾಣಲಿದ್ದು, ಈ ಜಾಗದಲ್ಲಿ ಹೊಸ ಮ್ಯೂಸಿಕ್‌ ವೀಡಿಯೊ ವಿಭಾಗವನ್ನು ಸಹ ರಚಿಸಬಹುದಾಗಿದೆ.

ಫೇಸ್‌ಬುಕ್

ಇನ್ನು ಫೇಸ್‌ಬುಕ್‌ನಲ್ಲಿ ಹೊಸ ಮ್ಯೂಸಿಕ್‌ ವೀಡಿಯೊವನ್ನು ಅಪ್‌ಲೋಡ್ ಮಾಡಿದಾಗಲೆಲ್ಲಾ ಕಲಾವಿದರ ಫಾಲೋವರ್ಸ್‌ಗಳಿಗೆ ನೊಟಿಫಿಕೇಶನ್‌ ತಲುಪಲಿದೆ. ಅಲ್ಲದೆ ಈ ಪೇಜ್‌ನ ಮಾಲೀಕರು ಮ್ಯೂಸಿಕ್‌ ವೀಡಿಯೋಗಳನ್ನ ಅಪ್‌ಲೋಡ್ ಮಾಡುವ ಅಗತ್ಯವಿಲ್ಲ ಈ ಕೆಲಸವನ್ನ ಫೇಸ್‌ಬುಕ್ ಮಾಡುಲಿದೆ. ಅಲ್ಲದೆ, ಇದು ಕಲಾವಿದರ ಮ್ಯೂಸಿಕ್ ವೀಡಿಯೊ ಮಾತ್ರವಲ್ಲ, ಅದು ಪೇಸ್‌ಬುಕ್‌ನ ವಿಡಿಯೋಗಳು ಕೂಡ ಆಗಿರುತ್ತದೆ. ಅಮದರೆ ಪೇಸ್‌ಬುಕ್‌ ಕಲಾವಿದರ ಅದಿಕೃತ ವಿಡಿಯೋಗಳನ್ನ ಪೇಸ್‌ಬುಕ್‌ ತಂತಾನೆ ಪ್ರಕಟಿಸುತ್ತದೆ.

ಫೇಸ್‌ಬುಕ್‌

ಫೇಸ್‌ಬುಕ್‌ನಲ್ಲಿ ನಿರ್ದಿಷ್ಟ ಕಲಾವಿದರ ಪುಟಕ್ಕಾಗಿ ಮ್ಯೂಸಿಕ್‌ ವೀಡಿಯೊಗಳು ಪ್ರತ್ಯೇಕ ವೀಡಿಯೊಗಳ ಟ್ಯಾಬ್‌ನಲ್ಲಿ ಗೋಚರಿಸುತ್ತವೆ. ಕಲಾವಿದರು ಈ ಮ್ಯೂಸಿಕ್‌ ವೀಡಿಯೊಗಳ ಮೇಲೆ ನಿಯಂತ್ರಣ ಹೊಂದಿರುತ್ತಾರೆ ಮತ್ತು ಅವರು ಹೆಸರು, ವಿವರಣೆ ಮತ್ತು ಥಂಬ್‌ನೇಲ್‌ಗಳಂತಹ ವಿಷಯಗಳನ್ನು ತೆಗೆದುಹಾಕಬಹುದು ಅಥವಾ ಎಡಿಟ್‌ ಮಾಡುವ ಅವಾಕಶವನ್ನು ಸಹ ನೀಡಲಾಗಿದೆ. ಇದಲ್ಲದೆ ಮ್ಯೂಸಿಕ್ ವೀಡಿಯೊಗಳಿಗೆ ಪರವಾನಗಿ ನೀಡಲು ಫೇಸ್‌ಬುಕ್ ಯುನಿವರ್ಸಲ್ ಮೀಡಿಯಾ ಗ್ರೂಪ್, ಸೋನಿ ಮ್ಯೂಸಿಕ್ ಮತ್ತು ವಾರ್ನರ್ ಮ್ಯೂಸಿಕ್ ಗ್ರೂಪ್‌ನೊಂದಿಗೆ ಮಾತುಕತೆ ನಡೆಸಿದೆ ಎಂದು ಹೇಳಲಾಗಿದ್ದು, ರೆಕಾರ್ಡ್ ಲೇಬಲ್‌ಗಳು ಯೂಟ್ಯೂಬ್‌ಗೆ ಪರ್ಯಾಯವನ್ನು ಹುಡುಕುತ್ತಇದ್ದು ಇದಕ್ಕೆ ಪೇಸ್‌ಬುಕ್‌ ಹೊಸ ಹೆಜ್ಜೆ ಇಟ್ಟಿದೆ. ಈ ಆನ್‌ಬೋರ್ಡ್‌ನಲ್ಲಿ ಈ ಲೇಬಲ್‌ಗಳೊಂದಿಗೆ ಫೇಸ್‌ಬುಕ್ ಸಾಕಷ್ಟು ಮ್ಯೂಸಿಕ್‌ ವೀಡಿಯೊಗಳನ್ನು ತೆರೆಯಲಿದ್ದು, ಯುಟ್ಯೂಬ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಲಿದೆಯೆ ಅನ್ನೊದನ್ನ ಕಾದು ನೋಡಬೇಕಿದೆ.

Best Mobiles in India

English summary
Facebook will start showing officially licensed music videos on its platform starting next month.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X