ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್ ಇದೇ ಜನವರಿ 20 ರಿಂದ ಪ್ರಾರಂಭ!

|

ಇ-ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ವಿಶೇಷ ಆಫರ್‌, ಡಿಸ್ಕೌಂಟ್‌ಗಳಿಂದ ಆನ್‌ಲೈನ್‌ ಶಾಪಿಂಗ್ ಪ್ರಿಯರನ್ನು ಆಕರ್ಷಿಸಿದೆ. ಅದರಲ್ಲಿಯೂ ವಿಶೇಷ ದಿನಗಳು, ಹಬ್ಬ ಹರಿದಿನಗಗಳು ಅಲ್ಲದೆ ಮಂತ್ ಎಂಡ್ ಸೇಲ್‌, ಬಿಗ್ ಬಿಲಿಯನ್ ಸೇಲ್‌ ಸಂದರ್ಭಗಳಲ್ಲಿ ಹೆಚ್ಚಿನ ರಿಯಾಯಿತಿ ಕೊಡುಗೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತದೆ. ಇದೀಗ ಫ್ಲಿಪ್‌ಕಾರ್ಟ್‌ ಬಿಗ್ ಸೇವಿಂಗ್‌ ಡೇಸ್‌ ಸೇಲ್‌ ದಿನಾಂಕವನ್ನ ಘೋಷಿಸಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ ಮತ್ತು ಇತರ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ದೊರೆಯಲಿದೆ.

ಫ್ಲಿಪ್‌ಕಾರ್ಟ್

ಹೌದು, ಜನಪ್ರಿಯ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ ಅನ್ನು ಇದೇ ಜನವರಿ 20 ರಿಂದ ಆಯೋಜಿಸುವುದಾಗಿ ಘೋಷಿಸಿದೆ. ಈ ಸೇಲ್‌ ಜನವರಿ 20 ರಿಂದ ಪ್ರಾರಂಭವಾಗಿ ಜನವರಿ 24 ರವರೆಗೆ ಎಲ್ಲಾ ಗ್ರಾಹಕರಿಗೆ ಮುಂದುವರಿಯುತ್ತದೆ ಎಂದು ಹೇಳಿದೆ. ಇನ್ನು ಈ ಸೇಲ್‌ನಲ್ಲಿ ನೋ ಕಾಸ್ಟ್‌ ಇಎಂಐ ಆಯ್ಕೆಗಳು, ವಿನಿಮಯ ಕೊಡುಗೆಗಳು ಮತ್ತು ರಕ್ಷಣೆ ಯೋಜನೆಗಳು ಇರುತ್ತವೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್‌ ಸೇಲ್‌ ‌ಎಚ್‌ಡಿಎಫ್‌ಸಿ ಕಾರ್ಡ್ ಹೊಂದಿರುವವರಿಗೆ ಹೆಚ್ಚುವರಿ ರಿಯಾಯಿತಿಯನ್ನು ನೀಡಲಿದೆ. ಇನ್ನುಳಿದಂತೆ ಈ ಸೇಲ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ ಆಫರ್‌ಗಳು

ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ ಆಫರ್‌ಗಳು

ಫ್ಲಿಪ್ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ ಜನವರಿ 19 ರಂದು ಬೆಳಿಗ್ಗೆ 12 ಗಂಟೆಗೆ ಫ್ಲಿಪ್ಕಾರ್ಟ್ ಪ್ಲಸ್ ಸದಸ್ಯರಿಗೆ ಮತ್ತು ಜನವರಿ 20 ರಂದು ಪ್ಲಸ್ ಅಲ್ಲದ ಸದಸ್ಯರಿಗೆ ಪ್ರಾರಂಭವಾಗಲಿದೆ. ಇನ್ನು ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ರಿಯಾಯಿತಿ ದೊರೆಯಲಿದೆ. ಇನ್ನು ರಿಯಾಯಿತಿ ಪಡೆಯುವ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ F41 ರೂ.15,499, ಐಫೋನ್ ಎಕ್ಸ್‌ಆರ್ ರೂ, 44,999, ಮೋಟೋ G 5G ರೂ.20,999, ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S20 + ಸೇರಿವೆ. ಕಂಪನಿಯು ಈ ಸಾಧನಗಳಲ್ಲಿ ನಿಖರವಾದ ರಿಯಾಯಿತಿಯನ್ನು ಹಂಚಿಕೊಂಡಿಲ್ಲ ಆದರೆ ನೋ ಕಾಸ್ಟ್‌ ಇಎಂಐ ಆಯ್ಕೆಗಳು, ಮೊಬೈಲ್ ಪ್ರೊಟೆಕ್ಷನ್‌ ಪ್ಲಾನ್‌ ಮತ್ತು ಆಸಕ್ತ ವ್ಯಾಪಾರಿಗಳಿಗೆ ವಿನಿಮಯ ಕೊಡುಗೆಗಳು ಇರುವುದಿಲ್ಲ ಎಂದು ಬಹಿರಂಗಪಡಿಸಿದೆ.

ರಿಯಲ್‌ಮಿ

ಇನ್ನು ರಿಯಲ್‌ಮಿ ವಾಚ್ ಎಸ್ ಪ್ರೊ ರೂ. 9,999, ರಿಯಲ್‌ಮಿ ವಾಚ್ ಎಸ್ ರೂ. 4,999, ಮತ್ತು ರಿಯಲ್‌ಮಿ ವಾಚ್ ರೂ.3,999 ಸೇರಿದಂತೆ ರಿಯಲ್‌ಮಿ ಸ್ಮಾರ್ಟ್ ವಾಚ್ ಮಾದರಿಗಳಲ್ಲಿ ಶಾಪರ್‌ಗಳು 50% ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಹೆಡ್‌ಫೋನ್‌ಗಳು ಮತ್ತು ಸ್ಪೀಕರ್‌ಗಳನ್ನು 70% ರಿಯಾಯಿತಿ ದರದಲ್ಲಿ ಖರೀದಿಸಬಹುದು ಮತ್ತು ಫ್ಲಿಪ್‌ಕಾರ್ಟ್‌ನ ಕೆಲವು ಹೆಚ್ಚು ಮಾರಾಟವಾಗುವ ಲ್ಯಾಪ್‌ಟಾಪ್ ಮಾದರಿಗಳನ್ನು 30% ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಟಿವಿಗಳು ಮತ್ತು ಉಪಕರಣಗಳಲ್ಲಿ ಗ್ರಾಹಕರು ಶೇಕಡಾ 75% ರಿಯಾಯಿತಿ ಪಡೆಯಬಹುದು.

ಫ್ಲಿಪ್‌ಕಾರ್ಟ್

ಇದಲ್ಲದೆ ಹೆಚ್ಚುವರಿಯಾಗಿ, ಮಾರಾಟದ ದಿನಗಳಲ್ಲಿ ಬೆಳಿಗ್ಗೆ 12, ಬೆಳಿಗ್ಗೆ 8 ಮತ್ತು ಸಂಜೆ 4 ಗಂಟೆಗೆ ಹೊಸ ಒಪ್ಪಂದ ಇರುತ್ತದೆ. ಕಡಿಮೆ ಬೆಲೆಗಳು ಮುಂಜಾನೆ 2 ರವರೆಗೆ ಲಭ್ಯವಿರುತ್ತವೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ. ಆಸಕ್ತ ಶಾಪರ್‌ಗಳು ಸೂಪರ್‌ಕಾಯಿನ್‌ಗಳನ್ನು ಪಾವತಿಗಳನ್ನು ಮಾಡಲು ಮತ್ತು ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು ಮತ್ತು ಅವರ ಖರೀದಿಯಲ್ಲಿ 2,000 ಬೋನಸ್ ನಾಣ್ಯಗಳನ್ನು ಪಡೆಯಬಹುದು. ಇನ್ನು ಎಚ್‌ಡಿಎಫ್‌ಸಿ ಕಾರ್ಡ್‌ಗಳು ಮತ್ತು ಇಎಂಐ ವಹಿವಾಟುಗಳಲ್ಲಿ, ಬಿಗ್ ಸೇವಿಂಗ್ ಡೇಸ್ ಸೇಲ್‌ ಸಮಯದಲ್ಲಿ ಫ್ಲಿಪ್‌ಕಾರ್ಟ್ 10% ಹೆಚ್ಚುವರಿ ರಿಯಾಯಿತಿಯನ್ನು ನೀಡುತ್ತಿದೆ.

Most Read Articles
Best Mobiles in India

English summary
Flipkart Big Saving Days Sale to Start January 20, Discounts on Mobiles, Tablets, TVs, Other Electronics.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X