Flipkart Electronics Sale: ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌!

|

ಜನಪ್ರಿಯ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಫ್ಲಿಪ್‌ಕಾರ್ಟ್‌ ಆನ್‌ಲೈನ್‌ ಗ್ರಾಹಕರಿಗೆ ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಸದ್ಯ ಇಂದಿನಿಂದ ಫ್ಲಿಪ್‌ಕಾರ್ಟ್‌ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್‌ ಪ್ರಾರಂಭವಾಗಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ. ಮೇ 21 ರವರೆಗೆ ನಡೆಯುವ ಐದು ದಿನಗಳ ಈ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಫ್ 62 ಮತ್ತು ಗ್ಯಾಲಕ್ಸಿ ಎಫ್ 41 ಮಾದರಿಗಳ ಮೇಲೆ ಭಾರಿ ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ನಲ್ಲಿ ಇಂದಿನಿಂದ ಎಲೆಕ್ಟ್ರಾನಿಕ್ಸ್ ಸೇಲ್‌ ಆರಂಭವಾಗಲಿದೆ. ಈ ಸೇಲ್‌ ಮೇಳದಲ್ಲಿ ರಿಯಲ್‌ಮಿ ನಾರ್ಜೊ 30 ಪ್ರೊ 5ಜಿ. ರಿಯಲ್‌ಮಿ ಸಿ 25, ಪೊಕೊ X3, ಒಪ್ಪೊ ಎ53, ಮತ್ತು ರೆಡ್ಮಿ ನೋಟ್ 9 ಸೇರಿದಂತೆ ಫೋನ್‌ಗಳಲ್ಲಿ ಪ್ರಿಪೇಯ್ಡ್ ರಿಯಾಯಿತಿಗಳಿವೆ. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದ ಇನ್‌ಸ್ಟಂಟ್‌ ಡಿಸ್ಕೌಂಟ್‌ ಸಹ ಲಭ್ಯವಾಗಲಿದೆ. ಹಾಗಾದರೆ ಫ್ಲಿಪ್‌ಕಾರ್ಟ್‌ನ ಈ ಸೇಲ್‌ ಮೇಳದಲ್ಲಿ ಆಫರ್‌ನಲ್ಲಿ ಲಭ್ಯವಿರುವ ಫೋನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಎಲೆಕ್ಟ್ರಾನಿಕ್ಸ್

ಫ್ಲಿಪ್‌ಕಾರ್ಟ್‌ನಲ್ಲಿ ಲೈವ್ ಆಗಿರುವ ‘ಎಲೆಕ್ಟ್ರಾನಿಕ್ಸ್ ಸೇಲ್' ಅಡಿಯಲ್ಲಿ 16,999 ರೂ. ಮೂಲ ಬೆಲೆ ಹೊಂದಿರುವ ರಿಯಲ್‌ಮಿ ನಾರ್ಜೊ 30 ಪ್ರೊ 5G ಸ್ಮಾರ್ಟ್‌ಫೋನ್‌ ಅನ್ನು ಆರಂಭಿಕ ಬೆಲೆ. 15,499, ರೂ. ಗೆ ಖರೀದಿಸಬಹುದಾಗಿದೆ. ಜೊತೆಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ F62 ಸ್ಮಾರ್ಟ್‌ಫೋನ್‌ ಸಹ ರಿಯಾಯಿತಿ ದರದಲ್ಲಿ ಕೇವಲ 17,999 ರೂ. ಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್ ಮೂಲಬೆಲೆ 23,999.ರೂ ಆಗಿದೆ. ಇದಲ್ಲದೆ, ಫ್ಲಿಪ್ಕಾರ್ಟ್ ಸೇಲ್‌ನಲ್ಲಿ 14,499ರೂ ಬೆಲೆಯ ಸ್ಯಾಮ್ಸಂಗ್ ಗ್ಯಾಲಕ್ಸಿ F41 ಅನ್ನು 12,999, ರೂ.ಗೆ ಖರೀದಿಸಬಹುದಾಗಿದೆ.

ಗೂಗಲ್

ಇನ್ನು ಗೂಗಲ್ ಪಿಕ್ಸೆಲ್ 4A ಸ್ಮಾರ್ಟ್‌ಫೋನ್‌ ಕೂಡ ರಿಯಾಯಿತಿ ದರದಲ್ಲಿ ದೊರೆಯಲಿದೆ. ಅಲ್ಲದೆ ಎಲ್ಜಿ ವಿಂಗ್ ಸ್ಮಾರ್ಟ್‌ಫೋನ್‌ ಅನ್ನು 35,970ರೂ,ಗೆ ಖರೀದಿಸಬಹುದಾಗಿದೆ. ಇದಲ್ಲದೆ ರಿಯಲ್‌ಮಿ X3 ಸೂಪರ್‌ಜೂಮ್ ಸ್ಮಾರ್ಟ್‌ಫೋನ್‌ 21,999 ರೂ. ಐಫೋನ್ XR 40,999 ರೂ.ಗೆ ದೊರೆಯಲಿದೆ. ಇನ್ನು ರಿಯಾಯಿತಿ ದರದಲ್ಲಿ ಐಫೋನ್ ಎಸ್ಇ, ಮೊಟೊರೊಲಾ ರೇಜರ್ ( 2019), ಮತ್ತು ಒಪ್ಪೋ ಎಫ್ 17 ಪ್ರೊ. ಸ್ಮಾರ್ಟ್‌ಫೋನ್‌ಗಳನ್ನು ಸಹ ಖರೀದಿಸಬಹುದಾಗಿದೆ.

ರಿಯಾಯಿತಿಯ

ನಿಯಮಿತ ರಿಯಾಯಿತಿಯ ಜೊತೆಗೆ, ಪೊಕೊ X3 ಸ್ಮಾರ್ಟ್‌ಫೋನ್‌ 14,999ರೂ, ಒಪ್ಪೊ ಎ 53 (2020) 12,990,ರೂ ಮತ್ತು ಆಸುಸ್ ಆರ್ಒಜಿ ಫೋನ್ 5 ನಲ್ಲಿ ತಮ್ಮ ಪ್ರಿಪೇಯ್ಡ್ ಆದೇಶದ ಮೇಲೆ ರಿಯಾಯಿತಿಯನ್ನು ನೀಡಲಾಗಿದೆ. ಇದರ ಜೊತೆಗೆ ಐಫೋನ್ 12, ಐಫೋನ್ 12 ಮಿನಿ 58,999,ರೂ ಮತ್ತು ಐಫೋನ್ 12 ಪ್ರೊಗಳಲ್ಲಿ ಪ್ರಿಪೇಯ್ಡ್ ರಿಯಾಯಿತಿ ದೊರೆಯಲಿದೆ. ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ವಹಿವಾಟಿನ ಮೇಲೆ ಶೇಕಡಾ 12 ರಷ್ಟು ತ್ವರಿತ ರಿಯಾಯಿತಿ ನೀಡಲು ಫ್ಲಿಪ್‌ಕಾರ್ಟ್ ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದಿದೆ.

Most Read Articles
Best Mobiles in India

English summary
Flipkart has partnered with HDFC Bank to offer up to 12 percent instant discount.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X