ಫ್ಲಿಪ್‌ಕಾರ್ಟ್ ನವೀಕರಿಸಿದ ಫೋನ್ ಸೇಲ್‌: ಸ್ಮಾರ್ಟ್‌ಫೋನ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌!

|

ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣಗಳಲ್ಲಿ ಫ್ಲಿಪ್‌ಕಾರ್ಟ್‌ ಕೂಡ ಸೇರಿದೆ. ಫ್ಲಿಪ್‌ಕಾರ್ಟ್‌ ತನ್ನ ಗ್ರಾಹಕರಿಗಾಗಿ ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಲೇ ಬಂದಿದೆ. ಇದೀಗ ತನ್ನ ್ಪ್ಲಾ ಪ್ಲಾಟ್‌ಫಾರ್ಮ್‌ನಲ್ಲಿ ನವೀಕರಿಸಿದ ಸ್ಮಾರ್ಟ್‌ಫೋನ್‌ ಸೇಲ್‌ ಅನ್ನು ಆಯೋಜಿಸಿದೆ. ನವೀಕರಿಸಿದ ಸ್ಮಾರ್ಟ್‌ಫೋನ್‌ಗಳು ಎಂದರೆ ಗುಣಮಟ್ಟದ ತಪಾಸಣೆ ಮತ್ತು ಅಗತ್ಯ ರಿಪೇರಿಯನ್ನು ಹೊಂದಿರುವ ಹಾಗೂ ಬಳಸುವುದಕ್ಕೆ ಯೋಗ್ಯವಾಗಿರುವ ಡಿವೈಸ್‌ ಗಳಾಗಿವೆ. ಆದರಿಂದ ಈ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್‌ ಡಿಸ್ಕೌಂಟ್‌ ಅನ್ನು ನೀಡಲಾಗ್ತಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ನವೀಕರಿಸಿದ ಸ್ಮಾರ್ಟ್‌ಫೋನ್‌ ಸೇಲ್‌ನಲ್ಲಿ ಬಿಗ್‌ ಆಫರ್‌ ದೊರೆಯುತ್ತಿದೆ. ಇದರಲ್ಲಿ ಆಪಲ್‌, ಸ್ಯಾಮ್‌ಸಂಗ್‌, ಗೂಗಲ್‌, ರಿಯಲ್‌ಮಿ, ಶಿಯೋಮಿ ಸ್ಮಾರ್ಟ್‌ಫೋನ್‌ಗಳು ಡಿಸ್ಕೌಂಟ್‌ನಲ್ಲಿ ಲಭ್ಯವಾಗಲಿದೆ. ಇ್ನು ಈ ನವೀಕರಿಸಿದ ಸ್ಮಾರ್ಟ್‌ಫೋನ್‌ಗಳನ್ನು ವಿವಿಧ ಬೆಲೆ ಬ್ಯಾಂಡ್‌ಗಳಲ್ಲಿ ನೀಡಲಾಗುತ್ತದೆ. ಈ ನವೀಕರಿಸಿದ ಸ್ಮಾರ್ಟ್‌ಫೋನ್‌ಗಳಲ್ಲಿ ವೃತ್ತಿಪರರಿಂದ 47 ಗುಣಮಟ್ಟದ ಪರಿಶೀಲನೆಗಳನ್ನು ನಡೆಸಲಾಗುವುದು ಎಂದು ಫ್ಲಿಪ್‌ಕಾರ್ಟ್ ಹೇಳಿಕೊಂಡಿದೆ. ಹಾಗಾದ್ರೆ ಈ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ಡಿಸ್ಕೌಂಟ್‌ ಪಡೆದಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌

ನವೀಕರಿಸಿದ ಸ್ಮಾರ್ಟ್‌ಫೋನ್‌ಗಳು ಕನಿಷ್ಠ ಅಥವಾ ಯಾವುದೇ ಗೀರುಗಳನ್ನು ಹೊಂದಿರುತ್ತವೆ. ಈ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಖಚಿತವಾದ ಮಾರಾಟಗಾರ ಖಾತರಿಯನ್ನು ಸಹ ನೀಡುತ್ತಾರೆ. ಅಲ್ಲದೆ ಹೆಚ್ಚುವರಿಯಾಗಿ, ಸ್ಮಾರ್ಟ್‌ಫೋನ್‌ಗೆ ಬೇಕಾದ ಮೂಲ ಬಿಡಿಭಾಗಗಳನ್ನು ಸಹ ಒದಗಿಸುತ್ತಾರೆ. ಇನ್ನು ಈ ನವೀಕರಿಸಿದ ಸ್ಮಾರ್ಟ್‌ಫೋನ್‌ಗಳೊಂದಿಗೆ, ಖರೀದಿದಾರರು 12 ತಿಂಗಳವರೆಗಿನ ವಾರಂಟಿಯನ್ನು ಪಡೆಯಬಹುದು. ಜೊತೆಗೆ ಈ ಫೋನ್‌ಗಳು 7 ದಿನಗಳ ರಿಟರ್ನ್ ಪಾಲಿಸಿಯನ್ನು ಸಹ ಹೊಂದಿವೆ.

ಆಪಲ್ ಐಫೋನ್‌ಗಳು

ಆಪಲ್ ಐಫೋನ್‌ಗಳು

ಇನ್ನು ಫ್ಲಿಪ್‌ಕಾರ್ಟ್‌ನ ಈ ಸೇಲ್‌ನಲ್ಲಿ ಆಪಲ್‌ ಕಂಪೆನಿಯ ಐಫೋನ್‌ 6s 64GB ಸ್ಟೋರೇಜ್‌ ಮಾದರಿಯನ್ನು ನೀವು ಕೇವಲ 13,699ರೂ.ಗೆ ಖರೀದಿಸಬಹುದಾಗಿದೆ. ಇದರ 128 GB ರೂಪಾಂತರವು ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ರೂ 15,499 ಬೆಲೆಯಲ್ಲಿ ಲಭ್ಯವಿದೆ. ಇದಲ್ಲದೆ ಐಫೋನ್‌ 7 128GB ಮಾದರಿಯು 14,799 ರೂ.ಗೆ ಮಾರಾಟವಾಗುತ್ತಿದೆ. ಇದು ಹೊಂದಾಣಿಕೆಯ ಚಾರ್ಜರ್ ಮತ್ತು ಕೇಬಲ್ ಜೊತೆಗೆ ಬರುತ್ತದೆ.

ಗೂಗಲ್ ಪಿಕ್ಸೆಲ್

ಗೂಗಲ್ ಪಿಕ್ಸೆಲ್

ಗೂಗಲ್ ಪಿಕ್ಸೆಲ್ 3a XL ಸ್ಮಾರ್ಟ್‌ಫೋನ್‌ 4GB RAM ಮತ್ತು 64GB ವೇರಿಯಂಟ್‌ಗೆ 13,499ರೂ. ಬೆಲೆ ಹೊಂದಿದೆ. ಇನ್ನು ಪಿಕ್ಸೆಲ್ 4 64GB ರೂಪಾಂತರದ ಆಯ್ಕೆಯು 19,999ರೂ. ಬೆಲೆಯಲ್ಲಿ ಮಾರಾಟವಾಗುತ್ತಿದೆ. ಹಾಗೆಯೇ ಪಿಕ್ಸೆಲ್‌ 3XL 128GB ಸ್ಟೋರೇಜ್ ರೂಪಾಂತರದ ಆಯ್ಕೆಯು 25,999ರೂ. ಗಳಿಗೆ ದೊರೆಯಲಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಕಂಪೆನಿಯ ಗ್ಯಾಲಕ್ಸಿ S10 ಸ್ಮಾರ್ಟ್‌ಫೋನ್‌ ನವೀಕರಿಸಿದ ಸ್ಟೋರ್‌ನಲ್ಲಿ 128GB ಸ್ಟೋರೇಜ್‌ಗೆ 24,999 ರೂ.ಗೆ ಮಾರಾಟವಾಗುತ್ತಿದೆ. ಇನ್ನು ಗ್ಯಾಲಕ್ಸಿ S20 128GB ಸ್ಟೋರೇಜ್ ರೂಪಾಂತರಕ್ಕಾಗಿ 36,999ರೂಗಳಲ್ಲಿ ಲಭ್ಯವಿದೆ. ಹಾಗೆಯೇ 128GB ಸ್ಟೋರೇಜ್ ಹೊಂದಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F12 ಅನ್‌ಬಾಕ್ಸ್ಡ್ ಆವೃತ್ತಿಗೆ 13,999ರೂ. ಬೆಲೆಗೆ ಲಭ್ಯವಾಗಲಿದೆ. ಇದಲ್ಲದೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F42 ಸ್ಮಾರ್ಟ್‌ಫೋನ್‌ 128GB ಸ್ಟೋರೇಜ್‌ ಆಯ್ಕೆಗೆ 17,999ರೂ. ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಶಿಯೋಮಿ

ಶಿಯೋಮಿ

ಶಿಯೋಮಿ ಕಂಪೆನಿಯ ರೆಡ್ಮಿ ನೋಟ್‌ 10 64GB ಸ್ಟೋರೇಜ್ ಮಾದರಿಯು 12,999ರೂ.ಗೆ ಮಾರಾಟವಾಗುತ್ತಿದೆ. ಇನ್ನು ರೆಡ್ಮಿ 9 ಪವರ್‌ 64GB ಸ್ಟೋರೇಜ್‌ಗೆ 9,999 ರೂ.ಗೆ ಮಾರಾಟವಾಗುತ್ತಿದೆ. ರೆಡ್ಮಿ ನೋಟ್‌ 10S 128GB ಸ್ಮಾರ್ಟ್‌ಫೋನ್‌ 12,899ರೂ. ಬೆಲೆಯಲ್ಲಿ ಮಾರಾಟವಾಗುತ್ತಿದೆ. ಹಾಗೆಯೇ ರೆಡ್ಮಿ ನೋಟ್‌ 10 ಪ್ರೊ ಮ್ಯಾಕ್ಸ್‌ ಸ್ಮಾರ್ಟ್‌ಫೋನ್‌ 128GB ಸ್ಟೋರೇಜ್ ಹೊಂದಿರುವ ಆಯ್ಕೆಯು 16,199ರೂ.ಬೆಲೆಯಲ್ಲಿ ಸೇಲ್‌ ಆಗುತ್ತಿದೆ. ಇದಲ್ಲದೆ 64GB ಸ್ಟೋರೇಜ್‌ ಆಯ್ಕೆಯ ರೆಡ್ಮಿ 9i ಸ್ಮಾರ್ಟ್‌ಫೋನ್‌ 8,499ರೂ.ಗಳಲ್ಲಿ ಲಭ್ಯವಿರುತ್ತದೆ.

Best Mobiles in India

English summary
Flipkart refurbished sale: get your favourite smartphone for less price

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X