ಬಳಕೆದಾರರಿಗೆ ಹೊಸ ಸೆಟ್ಟಿಂಗ್ಸ್‌ ಪೇಜ್‌ ಪರಿಚಯಿಸಿದ ಗೂಗಲ್‌ ಅಸಿಸ್ಟೆಂಟ್‌!

|

ಗೂಗಲ್‌ನ ಜನಪ್ರಿಯ ಸೇವೆಗಳಲ್ಲಿ ಗೂಗಲ್‌ ಅಸಿಸ್ಟೆಂಟ್‌ ಕೂಡ ಒಂದು. ಗೂಗಲ್‌ ಅಸಿಸ್ಟೆಂಟ್‌ ಸ್ಮಾರ್ಟ್‌ ಹೋಮ್‌ ಹಾಗೂ ಸ್ಮಾರ್ಟ್‌ ಡಿವೈಸ್‌ಗಳಲ್ಲಿ ನೀವು ಹೇಳಿದ ಕೆಲಸವನ್ನು ನಿರ್ವಹಿಸಲಿದೆ. ಇದೇ ಕಾರಣಕ್ಕೆ ಗೂಗಲ್‌ ಕೂಡ ಗೂಗಲ್‌ ಅಸಿಸ್ಟೆಂಟ್‌ನಲ್ಲಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಗೂಗಲ್‌ ಅಸಿಸ್ಟೆಂಟ್‌ ಹೊಸದಾಗಿ ಸೆಟ್ಟಿಂಗ್‌ ಪೇಜ್‌ ಅನ್ನು ಪರಿಚಯಿಸಿದೆ. ಇದರಿಂದ ವಿಭಿನ್ನ ಆಜ್ಞೆಗಳಿಗೆ ವಿಭಿನ್ನ ಕ್ರಿಯೆಗಳನ್ನು ಹೊಂದಿಸುವ ಮೂಲಕ ನೀವು ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳನ್ನು ಬದಲಾಯಿಸಬಹುದಾಗಿದೆ.

ಗೂಗಲ್‌ ಅಸಿಸ್ಟೆಂಟ್‌

ಹೌದು, ಗೂಗಲ್‌ ಅಸಿಸ್ಟೆಂಟ್‌ ಹೊಸ ಸೆಟ್ಟಿಂಗ್ಸ್‌ ಪೇಜ್‌ ಅನ್ನು ಪರಿಚಯಿಸಿದೆ. ಇದು ನಿಮ್ಮನ್ನು ಎಂಡ್‌ಲೆಸ್ಲಿ ಸ್ಕ್ರಾಲ್ ಮಾಡುವುದಕ್ಕೆ ಅವಕಾಶ ನೀಡುತ್ತದೆ. ಸದ್ಯ ಗೂಗಲ್‌ ಅಸಿಸ್ಟೆಂಟ್‌ ಸೆಟ್ಟಿಂಗ್ಸ್‌ ಪೇಜ್‌ ಯಾವುದೇ ರೀತಿಯ ಫಿಲ್ಟರ್‌ಗಳನ್ನು ಹೊಂದಿಲ್ಲ, ಆದರೆ ಇದು ಒಂದೊಂದಾಗಿ ಪಟ್ಟಿ ಮಾಡಲಾದ ಎಲ್ಲಾ ಆಯ್ಕೆಗಳನ್ನು ಹೊಂದಿದೆ. ಇದಕ್ಕಾಗಿ ಶೀಘ್ರದಲ್ಲೇ ಹೆಚ್ಚು ಸಂಘಟಿತ ವಿನ್ಯಾಸವನ್ನು ನೀಡುವ ಅಪ್ಡೇಟ್‌ ಅನ್ನು ಪರಿಚಯಿಸಲು ಗೂಗಲ್‌ ಮುಂದಾಗಿದೆ. ಹಾಗಾದ್ರೆ ಗೂಗಲ್‌ ಅಸಿಸ್ಟೆಂಟ್‌ ಪರಿಚಯಿಸಿರುವ ಹೊಸ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸಂಘಟಿತ ಸೆಟ್ಟಿಂಗ್‌ಗಳು

ಸಂಘಟಿತ ಸೆಟ್ಟಿಂಗ್‌ಗಳು

ಗೂಗಲ್‌ ಅಸಿಸ್ಟೆಂಟ್‌ ಸೆಟ್ಟಿಂಗ್ಸ್‌ ಅನುಭವವನ್ನು ಸುಧಾರಿಸಲು ಗೂಗಲ್‌ ಬಹುಶಃ ಕಾರ್ಯನಿರ್ವಹಿಸುತ್ತಿದೆ. ಅದರಂತೆ APK ಯ ಇತ್ತೀಚಿನ ಆವೃತ್ತಿಯಲ್ಲಿ ಹಲವಾರು ಕೋಡ್‌ಗಳು ಕಂಡುಬಂದಿವೆ. ಇದೀಗ ಹೊಸ ಅಸಿಸ್ಟೆಂಟ್‌ ಅನ್ನ ಉತ್ತಮ ಮತ್ತು ಹೆಚ್ಚು ಸಂಘಟಿತ ಆಯ್ಕೆಗಳೊಂದಿಗೆ ಗುರುತಿಸಲಾಗಿದೆ. ಇನ್ನು ಗೂಗಲ್ ಅಸಿಸ್ಟೆಂಟ್ ತನ್ನ ಸೆಟ್ಟಿಂಗ್‌ಗಳಲ್ಲಿ ಹೊಸದಾಗಿ ಮೂರು ಮುಖ್ಯ ವಿಭಾಗಗಳನ್ನು ಪಡೆಯುತ್ತಿದೆ. ಇದರಲ್ಲಿ ನಿಮ್ಮ ಅಸಿಸ್ಟೆಂಟ್ ಅನ್ನು ಕಸ್ಟಮೈಸ್ ಮಾಡಿ, ಕೆಲಸಗಳನ್ನು ಮಾಡಿ ಮತ್ತು ಅಪ್ಲಿಕೇಶನ್‌ಗಳು ಮತ್ತು ಸೇವೆಗಳನ್ನು ನಿರ್ವಹಿಸಿ ವಿಭಾಗಗಳು ಸೇರಿವೆ.

ಹೋಮ್

ಇದಲ್ಲದೆ ಹೋಮ್ ಕಂಟ್ರೋಲ್‌ಗಳು, ಪೇರೆಂಟಲ್ ಕಂಟ್ರೋಲ್‌ಗಳು, ಫೇಸ್ ಮ್ಯಾಚ್, ಫ್ಯಾಮಿಲಿ ಬೆಲ್ ಮತ್ತು ನಿಯೋಜಿಸಬಹುದಾದ ರಿಮೈಂಡರ್‌ಗಳನ್ನು ಈಗ ಹೋಮ್ ಮತ್ತು ಫ್ಯಾಮಿಲಿ ಟ್ಯಾಬ್‌ನಲ್ಲಿ ಗ್ರೂಪ್‌ ಮಾಡಲಾಗಿದೆ. ಈ ಕೆಲವು ಆಯ್ಕೆಗಳು ಸೆಟ್ಟಿಂಗ್‌ಗಳಿಗೆ ಹೊಸ ಸೇರ್ಪಡೆಗಳಾಗಿವೆ. ಇದಲ್ಲದೆ, ಫೋಟೋಗಳು, ಕ್ಯಾಲೆಂಡರ್, ಸಂವಹನ, ಸಂಗೀತ, ಸುದ್ದಿ, ಫೋಟೋಗಳು, ಪಾಡ್‌ಕಾಸ್ಟ್‌ಗಳು, ರೇಡಿಯೋ ಮತ್ತು ವೀಡಿಯೊಗಳು ಈಗ ಆದ್ಯತೆಯ ಅಪ್ಲಿಕೇಶನ್‌ಗಳು ಮತ್ತು ಸೇವೆಗಳ ಟ್ಯಾಬ್ ಅಡಿಯಲ್ಲಿ ನಿಮಗೆ ಲಭ್ಯವಾಗಲಿದೆ.

ಗೂಗಲ್‌

ಇನ್ನು ಗೂಗಲ್‌ ಅಸಿಸ್ಟೆಂಟ್‌ನ ಸೆಟ್ಟಿಂಗ್ಸ್‌ ಪೇಜ್‌ನ ಹೊಸ ಆರ್ಗನೈಸ್ಡ್‌ ಲೇಔಟ್ ಬಿಗ್‌ ಅಪ್‌ಗ್ರೇಡ್‌ನಂತೆ ತೋರುತ್ತಿದೆ. ಇದು ನೀವು ಸೆಟ್ಟಿಂಗ್‌ಗಳಲ್ಲಿ ಸೆಟ್‌ ಮಾಡಲು ಸಿದ್ಧರಿರುವುದನ್ನು ತ್ವರಿತವಾಗಿ ಕಂಡುಹಿಡಿಯಲು ಅವಕಾಶ ನೀಡಲಿದೆ. ಈ ಹೊಸ ಸೆಟ್ಟಿಂಗ್‌ಗಳ ಲೇಔಟ್ ಉತ್ತಮವಾಗಿದ್ದರೂ, ಪಬ್ಲಿಕ್‌ ರೋಲ್‌ಔಟ್ ಟೈಮ್‌ಲೈನ್ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಇದು ಆಂಡ್ರಾಯ್ಡ್‌ ಡಿವೈಸ್‌ಗಳಲ್ಲಿ ಶೀಘ್ರದಲ್ಲೇ ಲಭ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಗೂಗಲ್‌

ಇದಲ್ಲದೆ ಗೂಗಲ್‌ ತನ್ನ ಬಳಕೆದಾರರ ಕೆಮ್ಮು ಮತ್ತು ಗೊರಕೆಗಳನ್ನು ಟ್ರ್ಯಾಕ್‌ ಮಾಡಲು ಮುಂದಾಗಿದೆ. ಇದಕ್ಕಾಗಿ ಹೊಸ ಫೀಚರ್ಸ್‌ಗಳನ್ನು ಅಭಿವೃದ್ದಿಪಡಿಸುತ್ತಿದೆ. ಪ್ರಸ್ತುತ ಈ ಫೀಚರ್ಸ್‌ಗಳು ಸ್ಲೀಪ್‌ ಆಡಿಯೋ ಕಲೆಕ್ಷನ್‌ ವೀಬಾಗದ ಉದ್ಯೋಗಿಗಳಿಗೆ ಸೀಮಿತವಾಗಿದೆ. ಅಧ್ಯಯನದಲ್ಲಿ ಭಾಗವಹಿಸುವವರು ಆಂಡ್ರಾಯ್ಡ್‌ ಫೋನ್‌ನೊಂದಿಗೆ ಪೂರ್ಣ ಸಮಯದ ಗೂಗಲ್‌ ಉದ್ಯೋಗಿಯಾಗಿದ್ದರೆ ಮಾತ್ರ ಈ ಫೀಚರ್ಸ್‌ ಲಭ್ಯವಾಗಲಿದೆ. ಅಂದರೆ ಈ ಅಧ್ಯಯನದಲ್ಲಿ ಭಾಗವಹಿಸುವ ವ್ಯಕ್ತಿ, ತನ್ನ ಪ್ರತಿಸ್ಪರ್ಧಿ ಕಂಪನಿಗೆ ಕೆಲಸ ಮಾಡುವುದಿಲ್ಲ ಎಂದು ಖಚಿತವಾಗಿರುವವರಿಗೆ ಮಾತ್ರ.ಇನ್ನು ಗೂಗಲ್‌ನ ಹೆಲ್ತ್‌ ಸೆನ್ಸಾರ್‌ ಟೀಂ ಆಂಡ್ರಾಯ್ಡ್ ಡಿವೈಸ್‌ಗಳಿಗಾಗಿ ಅಪ್ಡೇಟ್‌ ಸೆನ್ಸಾರ್‌ ಕ್ಯಾಪಬ್ಲಿಟಿಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದೆ

Best Mobiles in India

Read more about:
English summary
Google Assistant is getting three main sections in its settings

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X