Subscribe to Gizbot

ಗೂಗಲ್‌ನಿಂದ ಕ್ರೋಮ್‌ಕಾಸ್ಟ್ ಡೋಂಗಲ್ ರೂ 2,999 ಕ್ಕೆ

Written By:

ಕೊನೆಗೂ ಗೂಗಲ್ ಕ್ರೋಮ್‌ಕಾಸ್ಟ್ ಅನ್ನು ಭಾರತದಲ್ಲಿ ರೂ 2,999 ಕ್ಕೆ ಲಾಂಚ್ ಮಾಡಿದೆ. ಡಾಂಗಲ್ ಆಕಾರದಲ್ಲಿರುವ ಈ ಡಿವೈಸ್ ಸ್ನ್ಯಾಪ್‌ಡೀಲ್‌ನಲ್ಲಿ ಲಭ್ಯವಿದ್ದು ಗೂಗಲ್ ಕ್ರೋಮ್‌ಕಾಸ್ಟ್ ಖರೀದಿಯ ಜೊತೆಗೆ 60ಜಿಬಿ ಬ್ರಾಡ್‌ಬಾಂಡ್ ಡೇಟಾವನ್ನು ಉಚಿತವಾಗಿ ನೀಡುತ್ತಿದೆ. ಇದಕ್ಕಾಗಿ ಏರ್‌ಟೆಲ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.

ಹೆಚ್ಚು ವೇಗದ ಕ್ರೋಮ್‌ಕಾಸ್ಟ್ ಡೋಂಗಲ್ ರೂ 2,999 ಕ್ಕೆ

ಏರ್‌ಟೆಲ್ ಬ್ರಾಡ್‌ಬ್ಯಾಂಡ್ ಚಂದಾದಾರರಿಗೆ 60 ಜಿಬಿ ಉಚಿತ ಡೇಟಾ ಕೂಡ ಲಭ್ಯವಾಗುತ್ತಿದೆ. ಕ್ರೋಮ್‌ಕಾಸ್ಟ್‌ಗಾಗಿ ಸ್ನ್ಯಾಪ್‌ಡೀಲ್ ಎರಡು ತಿಂಗಳ ಉಚಿತ ಚಂದಾದಾರಿಕೆಯನ್ನು ಒದಗಿಸುತ್ತಿದೆ. ಕ್ರೋಮ್‌ಕಾಸ್ಟ್‌ಗೆ ವೈ-ಫೈ ಸಂಪರ್ಕದಲ್ಲಿ 2ಎಮ್‌ಬಿಪಿಎಸ್ ಇಂಟರ್ನೆಟ್ ಸಂಪರ್ಕದ ಅಗತ್ಯವಿದೆ. ನಿಮ್ಮ ಮನೆಯ ವೈಫೈ ಸೆಟಪ್‌ನಲ್ಲಿ ನಿಮ್ಮ ಕ್ರೋಮ್‌ಕಾಸ್ಟ್ ಸಾಮರ್ಥ್ಯವನ್ನು ಪರೀಕ್ಷಿಸಲು 'ಟೆಸ್ಟ್ ಯುವರ್ ಇಂಟರ್ನೆಟ್ ಸ್ಪೀಡ್" ಅನ್ನು ಪ್ರವೇಶಿಸಿ.

ಇದು ವೀಡಿಯೊ ಸೇವೆಗಳಾದ ನೆಟ್‌ಫ್ಲಿಕ್ಸ್, ಯೂಟ್ಯೂಬ್ ಮತ್ತು ಇತರ ವಿಷಯಗಳನ್ನು ಟಿವಿ ಸೆಟ್‌ಗಳ ಎಚ್‌ಡಿಎಮ್‌ಐ ಪೋರ್ಟ್ ಮೂಲಕ ಕ್ರೋಮ್‌ಕಾಸ್ಟ್‌ನಲ್ಲಿ ವೀಕ್ಷಿಸಬಹುದಾಗಿದೆ. ಗೂಗಲ್ ಕ್ರೋಮ್‌ಕಾಸ್ಟ್ ಡೋಂಗಲ್‌ನ ಎರಡನೇ ಆವೃತ್ತಿಯ ಮೇಲೆ ಕೂಡ ಕಾರ್ಯನಿರ್ವಹಿಸುತ್ತಿದೆ.

English summary
This article tells about Google has finally launched the Chromecast in India, priced at Rs. 2,999.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot