ಬರಲಿದೆ ಗೂಗಲ್‌ ಪಿಕ್ಸೆಲ್‌ ಫೋಲ್ಡ್‌: ಲೀಕ್‌ ಆಯ್ತು ಬೆಲೆ, ಫೀಚರ್ಸ್‌ ವಿವರ!

|

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಫೋಲ್ಡೆಬಲ್‌ ಫೋನ್‌ಗಳಿಗೆ ವಿಶೇಷ ಸ್ಥಾನವಿದೆ. ಪ್ರೀಮಿಯಂ ಫೀಚರ್ಸ್‌ ಹಾಗೂ ಆಕರ್ಷಕ ವಿನ್ಯಾಸದಿಂದಾಗಿ ಸ್ಮಾರ್ಟ್‌ಫೋನ್‌ ಪ್ರಿಯರ ಗಮನಸೆಳೆದಿವೆ. ಈಗಾಗಲೇ ಸ್ಯಾಮ್‌ಂಗ್‌, ಮೊಟೊ ಕಂಪೆನಿಗಳು ಫೋಲ್ಡೆಬಲ್‌ ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿವೆ. ಇದೀಗ ಇದೇ ಹಾದಿಯಲ್ಲಿ ಗೂಗಲ್‌ ಕಂಪೆನಿ ಕೂಡ ಹೊಸ ಫೋಲ್ಡ್‌ ಸ್ಮಾರ್ಟ್‌ಫೋನ್‌ ಪರಿಚಯಿಸಲು ಮುಂದಾಗಿದೆ. ಗೂಗಲ್‌ ತನ್ನ ಪಿಕ್ಸೆಲ್‌ ಸರಣಿಯಲ್ಲಿ ಹೊಸ ಫೋಲ್ಡ್‌ ಫೋನ್‌ ಪರಿಚಯಿಸುವ ತಯಾರಿ ನಡೆಸಿದೆ ಎಂದು ವರದಿಯಾಗಿದೆ.

ಗೂಗಲ್‌ ಫೋಲ್ಡ್‌ ಫೋನ್‌

ಹೌದು, ಗೂಗಲ್‌ ಫೋಲ್ಡ್‌ ಫೋನ್‌ ಪರಿಚಯಿಸಲಿದೆ ಎಂಬ ವರದಿ ಬಹಳ ದಿನಗಳಿಂದ ಹರಿದಾಡ್ತಿದೆ. ಇದೀಗ ಈ ಸುದ್ದಿಗೆ ಇಂಬು ನೀಡುವಂತೆ ಗೂಗಲ್‌ ಪಿಕ್ಸೆಲ್‌ ಫೋಲ್ಡ್‌ ಸ್ಮಾರ್ಟ್‌ಫೋನ್‌ ವಿನ್ಯಾಸ ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ. ಅಲ್ಲದೆ ಪಿಕ್ಸೆಲ್ ಫೋಲ್ಡ್ ಮುಂದಿನ ವರ್ಷ ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ. ಸದ್ಯ ಗೂಗಲ್‌ ಪಿಕ್ಸೆಲ್ ಫೋಲ್ಡ್‌ನ ವಿನ್ಯಾಸ, ಬೆಲೆ ಮತ್ತು ಇತರ ವಿವರಗಳು ಸೋರಿಕೆಯಾಗಿವೆ. ಹಾಗಾದ್ರೆ ಗೂಗಲ್‌ ಪಿಕ್ಸೆಲ್‌ ಫೋಲ್ಡ್‌ ವಿನ್ಯಾಸ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಪಿಕ್ಸೆಲ್‌ ಫೋಲ್ಡ್‌ ಫೋನ್‌ ಹೇಗಿರಲಿದೆ?

ಗೂಗಲ್‌ ಪಿಕ್ಸೆಲ್‌ ಫೋಲ್ಡ್‌ ಫೋನ್‌ ಹೇಗಿರಲಿದೆ?

ಗೂಗಲ್ ಪಿಕ್ಸೆಲ್ ಫೋಲ್ಡ್ ಸ್ಮಾರ್ಟ್‌ಫೋನ್‌ ಮುಂದಿನ ವರ್ಷ ಅಂದರೆ ಮೇ 2023 ರಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಅದರಲ್ಲೂ ಈ ಸ್ಮಾರ್ಟ್‌ಫೋನ್‌ ಗೂಗಲ್‌ನ ವಾರ್ಷಿಕ ಸಮ್ಮೇಳನ ಗೂಗಲ್‌ I/O ಸಮಯದಲ್ಲಿ ಲಾಂಚ್‌ ಆಗುವ ಸಾಧ್ಯತೆಯಿದೆ. ಈ ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಗೆ ಪೈಪೋಟಿ ನೀಡಲಿದೆ ಎಂದು ವರದಿಯಾಗಿದೆ. ಅಲ್ಲದೆ ಗೂಗಲ್‌ ಪಿಕ್ಸೆಲ್‌ ಫೋಲ್ಡ್‌ $1799 (ಅಂದಾಜು 1,45,900ರೂ) ಬೆಲೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

ಗೂಗಲ್

ಇನ್ನು ಗೂಗಲ್ ಫೋಲ್ಡಬಲ್ ಫೋನ್‌ನ ವಿನ್ಯಾಸ ಕೂಡ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಅದರಂತೆ ಗೂಗಲ್‌ ಪಿಕ್ಸೆಲ್ ಫೋಲ್ಡ್ ಸ್ಮಾರ್ಟ್‌ಫೋನ್‌ ಪಿಕ್ಸೆಲ್ 7 ಸರಣಿಯ ಮಾದರಿಯಲ್ಲಿಯೇ ವೈಸರ್ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿರಲಿದೆ. ಅಲ್ಲದೆ ಹಿಂಭಾಗದಲ್ಲಿ ಟ್ರಿಪಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿರಬಹುದು ಎನ್ನಲಾಗಿದೆ. ಜೊತೆಗೆ ಕ್ಯಾಮೆರಾ ಮಾಡ್ಯೂಲ್‌ನ ಎಡಭಾಗದಲ್ಲಿ LED ಫ್ಲ್ಯಾಷ್ ಮಾಡ್ಯೂಲ್ ಮತ್ತು ಮೈಕ್ರೊಫೋನ್‌ಗಳನ್ನು ನೀಡಲಾಗುತ್ತದೆ ಎಂದು ವರದಿಯಾಗಿದೆ.

ಗೂಗಲ್‌

ಇದಲ್ಲದೆ ಗೂಗಲ್‌ ಪಿಕ್ಸೆಲ್ ಫೋಲ್ಡ್ ಗ್ಲಾಸ್‌ ಮತ್ತು ಮೆಟಲ್‌ ನಿರ್ಮಾಣವನ್ನು ಹೊಂದಿರಬಹುದು. ಈ ಫೋಲ್ಡಬಲ್ ಫೋನ್‌ನ ಡಿಸ್‌ಪ್ಲೇಯು 8 ಇಂಚಿನ ಗಾತ್ರದಲ್ಲಿರಲಿದೆ. ಇದು ಸ್ಯಾಮ್‌ಸಂಗ್‌ ಗ್ಯಾಲಕ್ಸಿ Z ಫೋಲ್ಡ್‌ 4 ಅನ್ನು ಹೋಲುತ್ತದೆ. ಇದಲ್ಲದೆ ಮೇಲಿನ ಬಲ ಮೂಲೆಯಲ್ಲಿ ಇನರ್‌ ಡಿಸ್‌ಪ್ಲೇಯಲ್ಲಿ ಪಿಕ್ಸೆಲ್ ಫೋಲ್ಡ್ 9.5 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಜೊತೆಗೆ ಡ್ಯುಯಲ್ ಸ್ಪೀಕರ್‌ಗಳನ್ನು ಹೊಂದಿದ್ದು, ಒಂದು ಕಟೌಟ್ ಮೇಲ್ಭಾಗದಲ್ಲಿ ಮತ್ತು ಇನ್ನೊಂದು ಕೆಳಭಾಗದಲ್ಲಿರಲಿದೆ.

ಪಿಕ್ಸೆಲ್‌

ಗೂಗಲ್‌ ಪಿಕ್ಸೆಲ್‌ ಫೋಲ್ಡ್‌ ಸ್ಮಾರ್ಟ್‌ಫೋನ್‌ ಬಲ ಅಂಚಿನಲ್ಲಿ ಪವರ್ ಮತ್ತು ವಾಲ್ಯೂಮ್ ಬಟನ್‌ಗಳನ್ನು ಹೊಂದಿರುವ ಸಾಧ್ಯತೆಯಿದೆ. ಇದರಲ್ಲಿ ಪವರ್ ಬಟನ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ನಂತೆ ಬಳಸುವುದಕ್ಕೆ ಅವಕಾಶ ನೀಡಲಿದೆ. ಈ ಸ್ಮಾರ್ಟ್‌ಫೋನ್‌ ಟೆನ್ಸರ್‌ G2 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.

ಸ್ಮಾರ್ಟ್‌ಫೋನ್‌

ಈ ಸ್ಮಾರ್ಟ್‌ಫೋನ್‌ ಚಾಕ್ ಮತ್ತು ಅಬ್ಸಿಡಿಯನ್ ಕಲರ್‌ ಆಯ್ಕೆಗಳಲ್ಲಿ ಬರುವ ಸಾಧ್ಯತೆಯಿದೆ. ಇದಲ್ಲದೆ ಇದರ ಕವರ್ ಡಿಸ್ಪ್ಲೇ ತೆಳುವಾದ ಬೆಜೆಲ್‌ಗಳನ್ನು ಹೊಂದಿರಲಿದ್ದು, ಮೇಲ್ಭಾಗದ ಮಧ್ಯದಲ್ಲಿ ಹೋಲ್-ಪಂಚ್ ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ ಮುಂದಿನ ವರ್ಷ ಮಾರುಕಟ್ಟೆಗೆ ಬರುವ ನಿರೀಕ್ಷೆಯಿದ್ದು, ಅಧಿಕೃತ ವಿವರಗಳು ಮುಂದಿನ ದಿನಗಳಲ್ಲಿ ಬಹಿರಂಗವಾಗುವ ಸಾಧ್ಯತೆಯಿದೆ.

Best Mobiles in India

English summary
Google Pixel Fold looks incredible in its first major design leak

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X