ಭಾರತೀಯರಿಗಾಗಿ ಹೊಸ ಅನುಕೂಲಕರ ಆಯ್ಕೆ ಪರಿಚಯಿಸಿದ ಗೂಗಲ್‌ ಪ್ಲೇ!

|

ಗೂಗಲ್‌ ಪ್ಲೇ ಭಾರತದ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ಗೂಗಲ್‌ ಪ್ಲೇ ತನ್ನದ ಆದ ಯುಪಿಐ ಆಧಾರಿತ ಆಟೋಮ್ಯಾಟಿಕ್‌ ಪೇಮೆಂಟ್‌ ಆಯ್ಕೆಯನ್ನು ಪರಿಚಯಿಸಿದೆ. ಇದರಿಂದ ಅಪ್ಲಿಕೇಶನ್‌ನಲ್ಲಿನ ಚಂದಾದಾರಿಕೆಗಳನ್ನು ಪಾವತಿಸುವುದು ಸುಲಭವಾಗಲಿದೆ. ಗೂಗಲ್‌ ಪ್ಲೇ ಪರಿಚಯಿಸಿರುವ ಹೊಸ ಆಯ್ಕೆಯನ್ನು ಬೆಂಬಲಿಸುವ ಯಾವುದೇ UPI ಅಪ್ಲಿಕೇಶನ್ ಅನ್ನು ಬಳಸಿಕೊಂಡು ಸುಲಭವಾಗಿ ಮರುಪಾವತಿಗಳನ್ನು ಮಾಡಲು ಸಹಾಯ ಮಾಡಲಿದೆ.

ಗೂಗಲ್‌

ಹೌದು, ಗೂಗಲ್‌ ಪ್ಲೇ ಹೊಸ ಆಟೋಮ್ಯಾಟಿಕ್‌ ಪೇಮೆಂಟ್‌ ಆಯ್ಕೆಯನ್ನು ಪರಿಚಯಿಸಿದೆ. ಇದರಿಂದ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಯುಪಿಐ ಅಪ್ಲಿಕೇಶನ್‌ ಬಳಸಿಕೊಂಡು ಚಂದಾದಾರಿಕೆಗಳನ್ನು ಪಾವತಿಸಬಹುದಾಗಿದೆ. ಇದನ್ನು ಆರ್‌ಬಿಐನ ಹೊಸ ಮಾನದಂಡಗಳ ಆಧಾರದ ಮೇಲೆ ಪರಿಚಯಿಸಲಾಗಿದೆ ಎನ್ನಲಾಗಿದೆ. ಏಕೆಂದರೆ ಆರ್‌ಬಿಐನ ಹೊಸ ಮಾನದಂಡಗಳ ಪ್ರಕಾರ ಯಾವುದೇ ಅಪ್ಲಿಕೇಶನ್‌ ಕೂಡ ಬಳಕೆದಾರರ ಅನುಮತಿಯಿಲ್ಲದೆ ಕಾರ್ಡ್ ಮಾಹಿತಿಯನ್ನು ಸಂಗ್ರಹಿಸುವಂತಿಲ್ಲ. ಹಾಗಾದ್ರೆ ಗೂಗಲ್‌ ಪ್ಲೇ ಪರಿಚಯಿಸಿರುವ ಹೊಸ ಆಯ್ಕೆಯ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌

ಗೂಗಲ್‌ ಪ್ಲೇ ತನ್ನದೇ ಆದ ಯುಪಿಐ ಆಧಾರುತ ಆಟೋಮ್ಯಾಟಿಕ್‌ ಪೇಮೆಂಟ್‌ ಆಯ್ಕೆಯನ್ನು ಪರಿಚಯಿಸಿದೆ. ಇದರಿಂದ ಇನ್ಮುಂದೆ ಗೂಗಲ್‌ ಪ್ಲೇ ನಲ್ಲಿ ನೀವು ಯಾವುದೇ ಪಾವತಿ ಮಾಡಬೇಕಾದರೂ ಯುಪಿಐ ಆಯ್ಕೆಗಳನ್ನು ಬಳಸಬಹುದಾಗಿದೆ. ಇಲ್ಲಿಯವರೆಗೆ ಕ್ರೆಡಿಟ್‌ ಕಾರ್ಡ್‌ ಮತ್ತು ಡೆಬಿಟ್‌ ಕಾರ್ಡ್‌ ಗಳ ಆಯ್ಕೆಯನ್ನು ನೀಡಲಾಗ್ತಿತ್ತು. ಆದರೆ ಆರ್‌ಬಿಐ ಹೊಸ ಮಾನದಂಡಗಳ ಪ್ರಕಾರ ಕಾರ್ಡ್‌ಗಳ ಮಾಹಿತಿಯನ್ನು ಸಂಗ್ರಹಿಸುವಂತಿಲ್ಲ. ಇದೇ ಕಾರಣಕ್ಕೆ ಈ ಹೊಸ ಆಯ್ಕೆಯನ್ನು ಪರಿಚಯಿಸಲಾಗಿದೆ.

ಗೂಗಲ್‌

ಇನ್ನು ಗೂಗಲ್‌ ಪ್ಲೇನಲ್ಲಿ UPI ಮೂಲಕ ಡಿಜಿಟಲ್ ಪಾವತಿ ಮಾಡುವ ಮೂಲಕ ಬಳಕೆದಾರರು ಸರಳವಾಗಿ ಪ್ಲಾಟ್‌ಫಾರ್ಮ್‌ನಲ್ಲಿ ವಹಿವಾಟು ಮಾಡಬಹುದು. ಚಂದಾದಾರಿಕೆಯನ್ನು ಹೊಂದಿರುವ ಅಪ್ಲಿಕೇಶನ್‌ಗಳಿಗೆ ಶುಲ್ಕವನ್ನು ಪಾವತಿಸುವುದಕ್ಕೆ ಈ ಆಯ್ಕೆಯು ಅನುಕೂಲಕರವಾಗಿದೆ. ಅಲ್ಲದೆ ಇದರ ಮೂಲಕ UPI ಯ ಅನುಕೂಲತೆಯನ್ನು ಚಂದಾದಾರಿಕೆ-ಆಧಾರಿತ ಖರೀದಿಗಳಿಗೆ ವಿಸ್ತರಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಗೂಗಲ್‌ ಪ್ಲೇ ಹೇಳಿಕೊಂಡಿದೆ.

ಗೂಗಲ್‌ ಪ್ಲೇನ ಹೊಸ ಆಯ್ಕೆಯಿಂದ ಉಪಯೋಗಗಳೇನು?

ಗೂಗಲ್‌ ಪ್ಲೇನ ಹೊಸ ಆಯ್ಕೆಯಿಂದ ಉಪಯೋಗಗಳೇನು?

ಗೂಗಲ್‌ ಪ್ಲೇ ಪರಿಚಯಿಸಿರುವ ಹೊಸ ಆಯ್ಕೆಯಿಂದ ಭಾರತೀಯ ಬಳಕೆದಾರರು ತಮ್ಮ ಚಂದಾದಾರಿಕೆ ಆಧಾರಿತ ಖರೀದಿಗಳಿಗಾಗಿ UPI ಮೂಲಕ ಪಾವತಿ ಮಾಡಬಹುದು. ಇದಕ್ಕಾಗಿ ಯುಪಿಐ ಆಟೋ ಪೇಮೆಂಟ್‌ಗಾಗಿ ಸೆಟ್ಟಿಂಗ್‌ಗಳನ್ನು ಸೆಟ್‌ ಮಾಡಲು ಅವಕಾಶ ಸಿಗಲಿದೆ. ಇದನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಮೂಲಕ UPI 2.0 ಅಡಿಯಲ್ಲಿ ಪರಿಚಯಿಸಲಾಗಿದೆ. ಅದರಂತೆ ಯುಪಿಐ ಆಟೋ ಪೇಮೆಂಟ್‌ ಫೀಚರ್ಸ್‌ ಬೆಂಬಲಿಸುವ ಯಾವುದೇ UPI ಅಪ್ಲಿಕೇಶನ್ ಅನ್ನು ಬಳಸಿಕೊಂಡು ಮರುಪಾವತಿಗಳನ್ನು ಮಾಡಲು ಸಹಾಯ ಮಾಡಲಿದೆ.

ಫೀಚರ್ಸ್‌

ಇನ್ನು ಈ ಫೀಚರ್ಸ್‌ ಅನ್ನು ಬಳಸಲು, ಬಳಕೆದಾರರು ಸಂಬಂಧಪಟ್ಟ ಅಪ್ಲಿಕೇಶನ್‌ಗಳಲ್ಲಿ ನೀವು ಬಯಸುವ ಚಂದಾದಾರಿಕೆ ಪ್ಲಾನ್‌ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ನಂತರ ಕಾರ್ಟ್‌ನಲ್ಲಿ ಪೇಮೆಂಟ್‌ ವಿಧಾನವನ್ನು ಆಯ್ಕೆಮಾಡಬೇಕಾಗುತ್ತದೆ. ಇದರಲ್ಲಿ ನೀವು UPI ಮೂಲಕ ಪಾವತಿಸಿ ಆಯ್ಕೆಯನ್ನು ಟ್ಯಾಪ್‌ ಮಾಡಬೇಕಾಗುತ್ತದೆ. ಇದರ ಮೂಲಕ ನೀವು ಬೆಂಬಲಿತ ಅಪ್ಲಿಕೇಶನ್‌ನಲ್ಲಿ ಖರೀದಿಯನ್ನು ಅನುಮೋದಿಸಬಹುದಾಗಿದೆ.

ಗೂಗಲ್‌

ಗೂಗಲ್‌ ಪ್ರಕಾರ ಗೂಗಲ್‌ ಪ್ಲೇ ನಲ್ಲಿ ಸ್ಥಳೀಯ ಡೆವಲಪರ್‌ಗಳು ತಮ್ಮ ಚಂದಾದಾರಿಕೆ-ಆಧಾರಿತ ವ್ಯವಹಾರಗಳನ್ನು ಬೆಳೆಸಲು ಇದು ಅನುವು ಮಾಡಿಕೊಡಲಿದೆ. ಇದರಿಂದ ಗೂಗಲ್‌ ಪ್ಲೇನಲ್ಲಿ ನೀವು ಪಾವತಿ ಮಾಡುವ ಅವಶ್ಯಕತೆ ಬಿದ್ದರೆ ಯುಪಿಐ ಆಪ್ಲಿಕೇಶನ್‌ಗಳ ಆಯ್ಕೆಯನ್ನು ಬಳಸಲು ಸಾಧ್ಯವಾಗಲಿದೆ. ಇದು ಬಳಕೆದಾರರಿಗೆ ಸುಲಭವಾದ ಮಾರ್ಗ ಕೂಡ ಆಗಿದೆ. ನಿಮ್ಮ ಕಾರ್ಡ್‌ನ ಮಾಹಿತಿಯನ್ನು ನಮೂದಿಸುವುದಕ್ಕಿಂತ ಯುಪಿಐ ಆಧಾರಿತ ಪೇಮೆಂಟ್‌ ಆಯ್ಕೆ ಸೂಕ್ತ ಎನಿಸಲಿದೆ.

Best Mobiles in India

English summary
Google Play adds UPI-based automatic payment option for users in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X