ಗೋಪ್ರೋ ಕಂಪೆನಿಯಿಂದ ಹೊಸ ಆಕ್ಷನ್‌ ಕ್ಯಾಮೆರಾ ಸರಣಿ ಬಿಡುಗಡೆ! ಫೀಚರ್ಸ್‌ ಹೇಗಿದೆ?

|

ಭಾರತದಲ್ಲಿ ಗೋಪ್ರೋ ಕಂಪೆನಿ ತನ್ನ ಬಹು ನಿರೀಕ್ಷಿತ ಗೋಪ್ರೋ ಹೀರೋ 11 ಬ್ಲಾಕ್ ಸರಣಿಯ ಕ್ಯಾಮೆರಾಗಳನ್ನು ಘೋಷಿಸಿದೆ. ಈ ಸರಣಿಯಲ್ಲಿ ಒಟ್ಟು ಮೂರು ಕ್ಯಾಮೆರಾಗಳನ್ನು ಪರಿಚಯಿಸಲಾಗಿದೆ. ಇವುಗಳನ್ನು ಹೀರೋ 11 ಬ್ಲ್ಯಾಕ್‌, ಹೀರೋ 11 ಬ್ಲ್ಯಾಕ್‌ ಮಿನಿ ಮತ್ತು ಹೀರೋ11 ಬ್ಲ್ಯಾಕ್‌ ಕ್ರಿಯೆಟರ್‌ ಎಡಿಷನ್‌ ಎಂದು ಹೆಸರಿಸಲಾಗಿದೆ. ಇನ್ನು ಈ ಮೂರು ಕ್ಯಾಮೆರಾಗಳು ಕೂಡ ಬಿಗ್‌ ಸೆನ್ಸಾರ್‌, 10-ಬಿಟ್ ಕಲರ್‌ ಡೆಪ್ತ್‌ ಮತ್ತು ವೀಡಿಯೊ ಸ್ಥಿರೀಕರಣ ಫೀಚರ್ಸ್‌ಗಳನ್ನು ಒಳಗೊಂಡಿವೆ.

ಗೋಪ್ರೋ

ಹೌದು, ಗೋಪ್ರೋ ಕಂಪೆನಿ ಭಾರತದಲ್ಲಿ ಹೊಸ ಗೋಪ್ರೋ ಹೀರೋ 11 ಬ್ಲಾಕ್ ಸರಣಿಯಲ್ಲಿ ಮೂರು ಹೊಸ ಕ್ಯಾಮೆರಾಗಳನ್ನು ಪರಿಚಯಿಸಿದೆ. ಇದರಲ್ಲಿ ಗೋಪ್ರೋ ಚಂದಾದಾರರು ತಮ್ಮ ಫೂಟೇಜ್ ಅನ್ನು ತಮ್ಮ ಗೋಪ್ರೋ ಕ್ಲೌಡ್ ಖಾತೆಗೆ ಅಪ್‌ಲೋಡ್ ಮಾಡುವ ಅವಕಾಶವನ್ನು ಸಹ ನೀಡಲಾಗಿದೆ. ಇದಲ್ಲದೆ ಗೋಪ್ರೋ ಕ್ವಿಕ್‌ ಅಪ್ಲಿಕೇಶನ್ ಮೂಲಕ ಫೋನ್‌ಗೆ ಕಳುಹಿಸಲಾದ ಹೈಲೈಟ್ ವೀಡಿಯೊಗಳಿಗೆ ಆಟೋಮ್ಯಾಟಿಕ ಎಡಿಟ್‌ ಮಾಡಲಾಗುತ್ತದೆ. ಹಾಗಾದ್ರೆ ಗೋಪ್ರೋ ಹೀರೋ 11 ಬ್ಲಾಕ್ ಸರಣಿ ಕ್ಯಾಮೆರಾಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೋಪ್ರೋ ಹೀರೋ11 ಬ್ಲಾಕ್ ಫೀಚರ್ಸ್‌

ಗೋಪ್ರೋ ಹೀರೋ11 ಬ್ಲಾಕ್ ಫೀಚರ್ಸ್‌

ಗೋಪ್ರೋ ಹೀರೋ11 ಬ್ಲಾಕ್ ಕ್ಯಾಮೆರಾವು ಹೊಸ 1/1.9 ಇಂಚಿನ ಸೆನ್ಸಾರ್‌ ಅನ್ನು ಹೊಂದಿದೆ. ಇದು 10-ಬಿಟ್ ಕಲರ್‌ ವೀಡಿಯೊದಲ್ಲಿ 5.3K ರೆಸಲ್ಯೂಶನ್‌ನಲ್ಲಿ ಪ್ರತಿ ಸೆಕೆಂಡಿಗೆ 60 ಫ್ರೇಮ್‌ಗಳಲ್ಲಿ 1 ಬಿಲಿಯನ್ ಬಣ್ಣಗಳನ್ನು ತಲುಪಿಸಲು ಸಾಧ್ಯವಾಗಲಿದೆ. ಇದು ಫೋಟೋಗಳನ್ನು ಸೆರೆಹಿಡಿಯಲು 27MP ಕ್ಯಾಮೆರಾವನ್ನು ಹೊಂದಿದೆ. ಇನ್ನು ಈ ಕ್ಯಾಮೆರಾ 8:7 ರಚನೆಯ ಅನುಪಾತವನ್ನು ಹೊಂದಿದೆ. ಇದರಿಂದ ಬಳಕೆದಾರರು ಹೆಚ್ಚಿನ ದೃಶ್ಯವನ್ನು ಲಂಬವಾಗಿ ಸೆರೆಹಿಡಿಯಲು ಸಾಧ್ಯವಾಗಲಿದೆ.

ಕ್ಯಾಮೆರಾ

ಈ ಕ್ಯಾಮೆರಾ ಬೈಕಿಂಗ್, ಸ್ಕೀಯಿಂಗ್, ಸರ್ಫಿಂಗ್, ಮೋಟಾರ್‌ಸೈಕ್ಲಿಂಗ್ ಆಕ್ಟಿವಿಟಿಗಳನ್ನು ಸೆರೆಹಿಡಿಯಲು ಇದು ಸೂಕ್ತವಾಗಿದೆ. ಇದರಲ್ಲಿ ನೀವು ಗೋಪ್ರೋ ಕ್ವಿಕ್‌ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಕ್ರಾಪ್ ಮಾಡಲು ಅವಕಾಶವಿದೆ. ಇದರಲ್ಲಿನ ಹೊಸ ಸೆನ್ಸಾರ್‌ HyperView ಅನ್ನು ಸಹ ಸಕ್ರಿಯಗೊಳಿಸುತ್ತದೆ. ಇದು 16:9ರಚನೆಯ ಅನುಪಾತದೊಂದಿಗೆ ವೀಡಿಯೊಗಳನ್ನು ತರಲಿದೆ.

ಗೋಪ್ರೋ ಹೀರೋ11 ಬ್ಲಾಕ್ ಕ್ರಿಯೇಟರ್ ಎಡಿಷನ್‌

ಗೋಪ್ರೋ ಹೀರೋ11 ಬ್ಲಾಕ್ ಕ್ರಿಯೇಟರ್ ಎಡಿಷನ್‌

ಗೋಪ್ರೋ ಹೀರೋ11 ಬ್ಲಾಕ್ ಕ್ರಿಯೇಟರ್ ಎಡಿಷನ್‌ ಕ್ಯಾಮೆರಾ ವ್ಲಾಗ್ ಮಾಡುವುದು, ಫಿಲ್ಮ್‌ಮೇಕಿಂಗ್‌ ಮತ್ತು ಲೈವ್ ಸ್ಟ್ರೀಮಿಂಗ್‌ಗೆ ಸೂಕ್ತವಾಗಿದೆ. ಈ ಕ್ಯಾಮೆರಾ ಪ್ರತಿ ಚಾರ್ಜ್‌ಗೆ ನಾಲ್ಕು ಗಂಟೆಗಳ 4K ರೆಕಾರ್ಡಿಂಗ್ ಅನ್ನು ನೀಡಲಿದೆ. ಇದು ಆಪ್ಸನಲ್‌ ಡೈರೆಕ್ಷನಲ್ ಮೈಕ್ರೊಫೋನ್, ಎಕ್ಸಟ್ರನಲ್‌ ಮೈಕ್ ಇನ್‌ಪುಟ್, ಎಕ್ಸಟ್ರನಲ್‌ ಡಿಸ್‌ಪ್ಲೇಗಳಿಗೆ ಕನೆಕ್ಟ್‌ ಮಾಡುವುದಕ್ಕೆ HDMI ಪೋರ್ಟ್ ಅನ್ನು ಕೂಡ ಹೊಂದಿದೆ. ಜೊತೆಗೆ ಹೆಚ್ಚಿನ-ಔಟ್‌ಪುಟ್‌ಗಾಗಿ LED ಲೈಟ್ ಮತ್ತು ಹೆಚ್ಚುವರಿ ಟೂಲ್ಸ್‌ಗಳ್ನು ತೆಗೆದುಕೊಂಡು ಹೋಗಲು ಎರಡು ಕೋಲ್ಡ್ ಶೂ ಮೌಂಟ್‌ಗಳನ್ನು ಸಹ ಒಳಗೊಂಡಿದೆ.

ಗೋಪ್ರೋ ಹೀರೋ11 ಬ್ಲಾಕ್ ಮಿನಿ

ಗೋಪ್ರೋ ಹೀರೋ11 ಬ್ಲಾಕ್ ಮಿನಿ

ಗೋಪ್ರೋ ಹೀರೋ11 ಬ್ಲಾಕ್ ಮಿನಿ ಕೂಡ 1/1.9 ಇಂಚಿನ ಸೆನ್ಸಾರ್‌ ಅನ್ನು ಹೊಂದಿದೆ. ಇದು ಪ್ರತಿ ಸೆಕೆಂಡಿಗೆ 60 ಫ್ರೇಮ್‌ಗಳಲ್ಲಿ 5.3K ರೆಸಲ್ಯೂಶನ್ ಅನ್ನು ನೀಡುತ್ತದೆ. ಈ ಕ್ಯಾಮೆರಾ ಹೆಚ್ಚು ಕಾಂಪ್ಯಾಕ್ಟ್ ಬಾಡಿ ಮತ್ತು ಹೆಲ್ಮೆಟ್ ಮೇಲೆ ಧರಿಸುವುದಕ್ಕೆ ಸೂಕ್ತವಾದ ವಿನ್ಯಾಸವನ್ನು ಹೊಂದಿದೆ. ಆದರೆ ಗೋಪ್ರೋ ಹೀರೋ11 ಬ್ಲ್ಯಾಕ್‌ ನಲ್ಲಿ ಲಭ್ಯವಿರುವ GPS, ವೆಬ್‌ಕ್ಯಾಮ್ ಮೋಡ್, RAW ಫೋಟೋ ಕ್ಯಾಪ್ಚರ್ ಮತ್ತು ನಿಗದಿತ ಕ್ಯಾಪ್ಚರ್‌ನಂತಹ ಕೆಲವು ಅಪ್ಡೇಟ್‌ ಫೀಚರ್ಸ್‌ಗಳನ್ನು ಈ ಕ್ಯಾಮೆರಾದಲ್ಲಿ ನೀಡಲಾಗಿಲ್ಲ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಗೋಪ್ರೋ ಹೀರೋ11 ಬ್ಲ್ಯಾಕ್‌ ಕ್ಯಾಮೆರಾ ಭಾರತದಲ್ಲಿ 51,500ರೂ. ಬೆಲೆಯನ್ನು ಹೊಂದಿದೆ. ಈ ಕ್ಯಾಮೆರಾ ಇಂದಿನಿಂದ ಖರೀದಿಗೆ ಲಭ್ಯವಾಗಲಿದೆ.
ಗೋಪ್ರೋ ಹೀರೋ11 ಬ್ಲಾಕ್ ಕ್ರಿಯೇಟರ್ ಎಡಿಷನ್‌ ಕ್ಯಾಮೆರಾ ಆಕ್ಟೋಬರ್‌ ತಿಂಗಳಲ್ಲಿ ಲಭ್ಯವಾಗಲಿದ್ದು, ಇದರ ಬೆಲೆ 71,500ರೂ. ಆಗಿರಲಿದೆ.
ಗೋಪ್ರೋ ಹೀರೋ11 ಬ್ಲ್ಯಾಕ್‌ ಮಿನಿ ಕ್ಯಾಮೆರಾ ಭಾರತದಲ್ಲಿ 41,500ರೂ. ಬೆಲೆಯನ್ನು ಹೊಂದಿದೆ. ಈ ಕ್ಯಾಮೆರಾ ಭಾರತದಲ್ಲಿ ಈ ವರ್ಷದ ನವೆಂಬರ್‌ನಲ್ಲಿ ಮಾರಾಟವಾಗಲಿದೆ.
ಇನ್ನು ಈ ಎಲ್ಲಾ ಮಾದರಿಗಳು ಪ್ರಮುಖ ಆಫ್‌ಲೈನ್ ಮತ್ತು ಆನ್‌ಲೈನ್ ಚಿಲ್ಲರೆ ಪಾಲುದಾರರ ಮೂಲಕ ಲಭ್ಯವಿರುತ್ತವೆ.

Best Mobiles in India

English summary
GoPro Hero 11 Black Action Camera Series Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X