Subscribe to Gizbot

ಭಾರತದ ಐಟಿ ತಜ್ಞ. ಈಗ ಇಂಗ್ಲಿಷ್‌ ಫುಟ್‌ಬಾಲ್ ಆಟಗಾರ..!

Posted By:

ಭಾರತದ ಖ್ಯಾತ ಐಟಿ ತಜ್ಞ ಈಗ ಖ್ಯಾತ ಫುಟ್‌ಬಾಲ್‌ ಆಟಗಾರನಾಗಿ ಬದಲಾಗಿದ್ದಾನೆ.ಮೊನ್ನೆಯ ನಡೆದ ಇಂಗ್ಲಿಷ್ ಪ್ರೀಮಿಯರ್‌ ಫುಟ್‌ಬಾಲ್‌ ಚಾಂಪಿಯನ್‌ ಆದ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಜಯಗಳಿಸಿದ್ದು ಇವನ ಆಟದಿಂದಲೇ.!
ಜಯಗಳಿಸಿದ ದಿನದಿಂದ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಟ್ವೀಟರ್‌ನಲ್ಲಿ ಅಭಿಮಾನಿಗಳಿಂದ ಬರುವ ಮೆಸೇಜ್‌ಗಳಿಗೆ ಲೆಕ್ಕವಿಲ್ಲ. ಹೌದು ಭಾರತದ ಮಾಧ್ಯಮದಲ್ಲೇ ಸುದ್ದಿಯಾಗದ ಈ ಸುದ್ದಿ ಕೇಳಿ ಕನ್‌ಫ್ಯೂಸ್‌ ಆದ್ರಾ? ಕನ್‌ಫ್ಯೂಸ್‌ ಆಗಬೇಡಿ. ಒಂದೇ ಹೆಸರಿನಲ್ಲಿ ಇಬ್ಬರು ವ್ಯಕ್ತಿಗಳಿದ್ದೆರೆ ಏನೆಲ್ಲ ಅನಾಹುತಗಳಾಗುತ್ತವೆ ಎನ್ನುವುದಕ್ಕೆ ಮೊನ್ನೆ ಟ್ವೀಟರ್‌ನಲ್ಲಿ ಘಟನೆಯೊಂದು ನಡೆದಿದೆ.

ಭಾರತದ ಐಟಿ ತಜ್ಞ. ಈಗ ಇಂಗ್ಲಿಷ್‌ ಫುಟ್‌ಬಾಲ್ ಆಟಗಾರ..!


ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ನ ಮ್ಯಾಂಚೆಸ್ಟರ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಸದಸ್ಯ ರಾಬಿನ್ ವ್ಯಾನ್ ಪೆರ್ಸಿ (Robin van Persie ) ಭಾರೀ ಫೆಮಸ್ಸು ಫುಟ್‌ಬಾಲ್‌ ಆಟಗಾರ. ತಮ್ಮ ನೆಚ್ಚಿನ ಡಚ್‌ ಆಟಗಾರನನ್ನು ಅಭಿಮಾನಿಗಳು Robin van Persieಯನ್ನು ಸರಳವಾಗಿ ಆರ್‌ವಿಪಿ(RVP) ಎಂದೇ ಕರೆಯುತ್ತಿದ್ದಾರೆ.

ಮೊನ್ನೆಯಷ್ಟೇ ಇಂಗ್ಲಿಷ್‌ ಪ್ರೀಮಿಯರ್‌ ಫುಟ್‌ಬಾಲ್‌ ಲೀಗ್‌ನ ಪಂದ್ಯದಲ್ಲಿ ರಾಬಿನ್ ಗಳಿಸಿದ ಹ್ಯಾಟ್ರಿಕ್‌ ಗೋಲ್‌ನಿಂದ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಲೀಗ್‌ ಲೀಗ್‌ ಪಂದ್ಯದಲ್ಲಿ ಜಯಗಳಿಸಿತ್ತು. ತಮ್ಮ ನೆಚ್ಚಿನ ಆಟಗಾರ ಟ್ವೀಟರ್‌ನಲ್ಲಿರುವುದನ್ನು ತಿಳಿದಿರುವ ಅಭಿಮಾನಿಗಳು ರಾಬಿನ್ ವ್ಯಾನ್ ಅಕೌಂಟ್‌ಗೆ ಟ್ವೀಟ್‌ ಮಾಡಲಾರಂಭಿಸಿದರು. ಆದರೆ ನಿಜವಾಗಿ ಆರ್‌ವಿಪಿ ಟ್ವೀಟರ್‌ ಅಕೌಂಟ್ ಇರುವುದು @persie_official ಹೆಸರಿನಲ್ಲಿ.ಆದರೆ ಅಭಿಮಾನಿಗಳು @rvp ಹೆಸರಿನಲ್ಲಿರುವ ಟ್ವೀಟರ್ ಅಕೌಂಟ್‌ಗೆ ಟ್ವೀಟ್‌ ಮಾಡಲಾರಂಭಿಸಿದರು.

ಇಲ್ಲೇ ಆಗಿದ್ದು ನೋಡಿ ಎಡವಟ್ಟು. ನಿಜವಾಗಿ @ rvp ಅಕೌಂಟ್‌ ಹೊಂದಿರುವ ವ್ಯಕ್ತಿಯ ಪೂರ್ಣ ಹೆಸರು ರವಿ ವಿಶ್ವೇಶ್ವರಯ್ಯ ಶಾರದ ಪ್ರಸಾದ್‌. ಐಟಿ ಮತ್ತು ಟೆಲಿಕಾಂ ಕ್ಷೇತ್ರದ ತಜ್ಞರಾಗಿರುವ ಇವರು ತನ್ನ ಸ್ನೇಹಿತರಿಗೆ ಸುಲಭವಾಗಿ ತನ್ನ ಪರಿಚಯ ಸಿಗುವಂತೆ ಸರಳವಾಗಿ @rvp ಎಂಬ ಹೆಸರಿನಲ್ಲಿ ಟ್ವೀಟರ್ ಖಾತೆ ತೆರೆದಿದ್ದರು.
ಪ್ರತಿದಿನ ಟ್ವೀಟರ್‌ನಲ್ಲಿ ಸಕ್ರಿಯರಾಗಿರುವ ಶಾರದ ಪ್ರಸಾದ್‌ ಮೊನ್ನೆ ತಮ್ಮ ಟ್ವೀಟರ್ ಅಕೌಂಟ್‌ ತೆರೆದಾಗ ಅಕೌಂಟ್‌ನಲ್ಲಿರುವ ಮೆಸೇಜ್‌ಗಳ ಸಂಖ್ಯೆ ನೋಡಿ ಶಾಕ್‌ ಆದ್ರಂತೆ. ಅವರೇ ಹೇಳುವಂತೆ ಜಯಗಳಿಸಿದ ಸಂತಸಕ್ಕೆ ಶುಭಾಶಯ ತಿಳಿಸಲು ಸುಮಾರು ಹತ್ತು ಸಾವಿರಕ್ಕೂ ಅಧಿಕ ಟ್ವೀಟ್‌ಗಳ ಇವರಿಗೆ ಬಂದಿಂತಂತೆ. ಅಷ್ಟೇ ಅಲ್ಲದೇ ಇವರ ಟ್ವೀಟರ್‌ ಫ್ಯಾನ್‌ಗಳ ಸಂಖ್ಯೆಯೂ ಹೆಚ್ಚಾಗಿದೆಯಂತೆ.
ತಾನು ಇಂಗ್ಲಿಷ್‌ ಪ್ರಿಮಿಯರ್‌ ಫುಟ್‌ವಾಲ್‌ ಆಟಗಾರ ಆರ್‌ವಿಪಿ ಅಲ್ಲ ಎಂದು ಟ್ವೀಟ್‌ ಮಾಡಿದ್ರೂ ಫುಟ್‌ಬಾಲ್‌ ಆಟಗಾರ ಆರ್‌ವಿಪಿಯ ಅಭಿಮಾನಿಗಳು ಇನ್ನೂ ಟ್ವೀಟರ್‌ನಲ್ಲಿ ಮೆಸೇಜ್‌ ಮತ್ತು ಫಾಲೋ ಮಾಡುತ್ತಿದ್ದಾರಂತೆ. ಹೆಸರಿನ ಎಡವಟ್‌ನಿಂದ ಹೆಚ್ಚಾದ ಫ್ಯಾನ್‌ಗಳನ್ನು ಬ್ಲಾಕ್‌ ಮಾಡಲು ಈಗ ಶಾರದ ಪ್ರಸಾದ್‌ ನಿರ್ಧರಿಸಿದ್ದಾರೆ.
ಟ್ವೀಟರ್‌ನಲ್ಲಿ ಒಂದೇ ರೀತಿಯ ಎರಡು ಹೆಸರಿದ್ರೆ ಏನೆಲ್ಲ ಎಡವಟ್ಟಾಗುತ್ತದೆ ಎಂಬುದಕ್ಕೆ ಶಾರದ ಪ್ರಸಾದ್‌ ಉದಾಹರಣೆಯಾಗಿಬಿಟ್ಟಿದ್ದಾರೆ.

ಇದನ್ನು ಓದಿ : ಫೋಟೋ ಎಡಿಟಿಂಗ್‌ ಎಡವಟ್‌ ಫೋಟೋಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot