ಆಂಡ್ರಾಯ್ಡ್ 12 ಪಬ್ಲಿಕ್‌ ಬೀಟಾ ಆವೃತ್ತಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?

|

ಟೆಕ್‌ ದೈತ್ಯ ಗೂಗಲ್‌ನ ಬಹು ನಿರೀಕ್ಷಿತ IO 2021 ಈವೆಂಟ್‌ ನಲ್ಲಿ ಗೂಗಲ್ ಬಹಳಷ್ಟು ಹೊಸ ಸಂಗತಿಗಳನ್ನು ಘೋಷಿಸಿರೋದು ನಿಮಗೆಲ್ಲಾ ತಿಳಿದೆ ಇದೆ. ಈ ಒಂದು ಕಾರ್ಯಕ್ರಮದಲ್ಲಿ ಆಂಡ್ರಾಯ್ಡ್ 12 ಒಎಸ್‌ ಅನ್ನು ಅನಾವರಣ ಮಾಡಿದೆ. ಇದು ಇತ್ತೀಚಿನ ವರ್ಷಗಳಲ್ಲಿ ಆಂಡ್ರಾಯ್ಡ್ ಮರುವಿನ್ಯಾಸವೆಂದು ಹೇಳಲಾಗಿದೆ. ಇವುಗಳು ಬಳಕೆದಾರರ ಜೀವನವನ್ನು ಸುಲಭ ಮತ್ತು ಉತ್ತಮಗೊಳಿಸುವಂತಹ ಅಪ್‌ಡೇಟ್ ಕಾಣಿಸಿಕೊಳ್ಳಲಿವೆ.

ಆಂಡ್ರಾಯ್ಡ್ 12

ಹೌದು, ಆಂಡ್ರಾಯ್ಡ್ 12 ಅನ್ನು ಗೂಗಲ್ ಐ / ಒ ಈವೆಂಟ್‌ನಲ್ಲಿ ಅನಾವರಣಗೊಳಿಸಲಾಗಿದ್ದು, ಇದು ಅತ್ಯುತ್ತಮ ಮರುವಿನ್ಯಾಸವನ್ನು ಹೊಂದಿದೆ. ಆಂಡ್ರಾಯ್ಡ್ 12 ಹೊಸ ವಿನ್ಯಾಸ, ಫೀಚರ್ಸ್‌ಗಳು, ಭದ್ರತಾ ನವೀಕರಣಗಳನ್ನು ಪಡೆದುಕೊಂಡಿದೆ. ಸದ್ಯ ಆಂಡ್ರಾಯ್ಡ್ 12 ರ ಮೊದಲ ಸಾರ್ವಜನಿಕ ಬೀಟಾ ಆವೃತ್ತಿಯನ್ನು ಗೂಗಲ್ ಬಿಡುಗಡೆ ಮಾಡಿದೆ. ಈ ವರ್ಷದ ಕೊನೆಯಲ್ಲಿ ಸ್ಥಿರ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ. ಸದ್ಯ ಬೀಟಾ ಆವೃತ್ತಿ ಪಿಕ್ಸೆಲ್‌ 5ಫೋನ್‌ನಲ್ಲಿ ಲಭ್ಯವಿದೆ. ನಿಮ್ಮ ಪಿಕ್ಸೆಲ್‌ ಫೋನ್‌ನಲ್ಲಿ ಆಂಡ್ರಾಯ್ಡ್ 12 ಬೀಟಾ 1 ಅನ್ನು ಡೌನ್‌ಲೋಡ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್

ಇನ್ನು ಗೂಗಲ್ ತನ್ನ ಆಂಡ್ರಾಯ್ಡ್ 12 ಸಾರ್ವಜನಿಕ ಬೀಟಾ ಆವೃತ್ತಿಯನ್ನು ಪಿಕ್ಸೆಲ್ 5, ಪಿಕ್ಸೆಲ್ 4 ಎ, ಪಿಕ್ಸೆಲ್ 4 ಎ (5 ಜಿ), ಪಿಕ್ಸೆಲ್ 4, ಪಿಕ್ಸೆಲ್ 3 ಎ, ಪಿಕ್ಸೆಲ್ 3 ಎ ಎಕ್ಸ್ಎಲ್, ಪಿಕ್ಸೆಲ್ 3 ಮತ್ತು ಪಿಕ್ಸೆಲ್ 3 ಎಕ್ಸ್ಎಲ್ ನಲ್ಲಿ ಲಭ್ಯಗೊಳಿಸಿದೆ. ಆಸುಸ್, ಒನ್‌ಪ್ಲಸ್, ಒಪ್ಪೊ, ರಿಯಲ್ಮೆ, ಶಾರ್ಪ್, ಟೆಕ್ನೋ, ಟಿಸಿಎಲ್, ವಿವೊ, ಶಿಯೋಮಿ ಮತ್ತು ZTEಯಿಂದ ಆಯ್ದ ಸ್ಮಾರ್ಟ್‌ಫೋನ್ ಮಾದರಿಗಳಲ್ಲಿ ಇದು ಲಭ್ಯವಿದೆ. ಅಲ್ಲದೆ ನಿಮ್ಮ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 12 ಸಾರ್ವಜನಿಕ ಬೀಟಾ ಡೌನ್‌ಲೋಡ್‌ ಮಾಡಲು ಯೋಗ್ಯವಿದೆಯಾ ಅಂತಾ ಆಂಡ್ರಾಯ್ಡ್‌ ಬೀಟಾ ಪ್ರೋಗ್ರಾಂ ವೆಬ್‌ಸೈಟ್‌ಗೆ ಬೇಟಿ ಚೆಕ್‌ ಮಾಡಬಹುದು. ಇನ್ನು ಗೂಗಲ್‌ ಹೇಳಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಆಂಡ್ರಾಯ್ಡ್‌ 12 ನ್ನು ಡೌನ್‌ಲೋಡ್‌ ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಆಂಡ್ರಾಯ್ಡ್ 12 ಪಬ್ಲಿಕ್‌ ಬೀಟಾ ಆವೃತ್ತಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಆಂಡ್ರಾಯ್ಡ್ 12 ಪಬ್ಲಿಕ್‌ ಬೀಟಾ ಆವೃತ್ತಿಯನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಹಂತ:1 ಮೊದಲನೆಯದಾಗಿ ನೀವು ಆಂಡ್ರಾಯ್ಡ್ ಬೀಟಾ ಪ್ರೋಗ್ರಾಂ ವೆಬ್‌ಸೈಟ್‌ಗೆ ಭೇಟಿ ನೀಡುವುದು ಮತ್ತು ನಿಮ್ಮ Google ಖಾತೆಯೊಂದಿಗೆ ಸೈನ್ ಇನ್ ಮಾಡುವುದು.

ಹಂತ:2 ಸಾರ್ವಜನಿಕ ಬೀಟಾಕ್ಕೆ ಅರ್ಹವಾದ ನಿಮ್ಮ ಡಿವೈಸ್‌ಗಳ ಪಟ್ಟಿಯನ್ನು Google ತೋರಿಸುತ್ತದೆ.

ಹಂತ:3 ‘ಆಪ್ಟ್-ಇನ್' ಬಟನ್ ಕ್ಲಿಕ್ ಮಾಡುವ ಮೂಲಕ ಸ್ಮಾರ್ಟ್‌ಫೋನ್ ಆಯ್ಕೆಮಾಡಿ.

ಹಂತ:4 ನಂತರ ನೀವು ನಿಯಮಗಳು ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಬೇಕು ಮತ್ತು ‘ದೃಡೀಕರಿಸಿ ಮತ್ತು ನೋಂದಾಯಿಸಿ' ಕ್ಲಿಕ್ ಮಾಡಿ.

ಹಂತ:5 ಇದನ್ನು ಮಾಡಿದ ನಂತರ, ನಿಮ್ಮ ಫೋನ್‌ನಲ್ಲಿ ಸೆಟ್ಟಿಂಗ್‌ಗಳ ಮೆನು ತೆರೆಯಿರಿ ಮತ್ತು ಸಾಫ್ಟ್‌ವೇರ್ ನವೀಕರಣಗಳಿಗೆ ಹೋಗಿ.

ಹಂತ:6 ಇಲ್ಲಿ, ಡೌನ್‌ಲೋಡ್ ಮಾಡಲು ಮತ್ತು ಸ್ಥಾಪಿಸಲು ಲಭ್ಯವಿರುವ ಇತ್ತೀಚಿನ ಆಂಡ್ರಾಯ್ಡ್ 12 ಸಾರ್ವಜನಿಕ ಬೀಟಾ ನವೀಕರಣವನ್ನು ನೀವು ನೋಡುತ್ತೀರಿ.

ಆಂಡ್ರಾಯ್ಡ್

ನವೀಕರಣವು ತಕ್ಷಣ ಗೋಚರಿಸದಿರಬಹುದು ಮತ್ತು ಅದು ನಿಮ್ಮ ಫೋನ್‌ನಲ್ಲಿ ತೋರಿಸಲು ಕೆಲವು ನಿಮಿಷಗಳವರೆಗೆ ಕಾಯಬೇಕಾಗಬಹುದು. ಆಂಡ್ರಾಯ್ಡ್ 12 ಬೀಟಾ 1 ಅನ್ನು ಸ್ಥಾಪಿಸುವ ಮೊದಲು ನಿಮ್ಮ ಫೋನ್ ಅನ್ನು ಬ್ಯಾಕಪ್ ಮಾಡುವುದು ಸೂಕ್ತವಾಗಿದೆ ಏಕೆಂದರೆ ಪ್ರಕ್ರಿಯೆಯಲ್ಲಿ ಕೆಲವು ಡೇಟಾ ಕಳೆದುಹೋಗಬಹುದು. ನೀವು ಆಂಡ್ರಾಯ್ಡ್ 11 ಗೆ ಹಿಂತಿರುಗಲು ಬಯಸಿದರೆ ನೀವು ಅದೇ ಹಂತಗಳನ್ನು ಅನುಸರಿಸಬಹುದು. ಆದರೆ ವೆಬ್‌ಸೈಟ್‌ನಿಂದ ‘ಹೊರಗುಳಿಯಿರಿ' ಆಯ್ಕೆಮಾಡಿ, ಮತ್ತು ಸೆಟ್ಟಿಂಗ್‌ಗಳ ಮೆನು ಅಡಿಯಲ್ಲಿ ನವೀಕರಣವನ್ನು ಪರಿಶೀಲಿಸಬೇಕಾಗುತ್ತದೆ. ಹೀಗೆ ಮಾಡುವುದರಿಂದ ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ಅನ್ನು ಆಂಡ್ರಾಯ್ಡ್‌12ಗೆ ಅಪ್ಡೇಟ್‌ ಮಾಡಬಹುದಾಗಿದೆ.

Best Mobiles in India

English summary
The first public beta of Android 12 is now available for Pixel phones, and select modes from other brands. Here's how to download and install Android 12 Beta 1.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X