ಟ್ವಿಟರ್‌ನಲ್ಲಿ ನಿಮ್ಮ ಟ್ವೀಟ್‌ಗಳನ್ನು ಸೆಕ್ಯುರ್‌ ಮಾಡುವುದಕ್ಕೆ ಹೀಗೆ ಮಾಡಿ?

|

ಮೈಕ್ರೋಬ್ಲಾಗಿಂಗ್‌ ಸೈಟ್‌ ಟ್ವಿಟರ್‌ ಜನಪ್ರಿಯ ಸೊಶೀಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಎನಿಸಿಕೊಂಡಿದೆ. ಪ್ರಸ್ತುತ ದಿನಗಳಲ್ಲಿ ಹೆಚ್ಚಿನ ಜನರು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಟ್ವಿಟರ್‌ ಕೂಡ ತನ್ನ ಬಳಕೆದಾರರಿಗೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಈ ಪೈಕಿ ನಿಮ್ಮ ಟ್ವೀಟ್‌ಗಳು ಅಥವಾ ಟ್ಯಾಗ್‌ಗಳನ್ನು ಕೆಲವರು ನೋಡದಂತೆ ಮಾಡುವುದಕ್ಕೆ ಅವಕಾಶ ನೀಡಿರುವುದು ಕೂಡ ಸೇರಿದೆ.

ಟ್ವಿಟರ್‌

ಹೌದು, ಟ್ವಿಟರ್‌ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ ನೀವು ನಿಮ್ಮ ಟ್ವೀಟ್‌ಗಳನ್ನು ಬೇರೆಯವರು ನೋಡದಂತೆ ಮಾಡುವುದಕ್ಕೆ ಅವಕಾಶವಿದೆ. ನಿಮ್ಮ ಅನುಯಾಯಿಗಳು ಮಾತ್ರ ನಿಮ್ಮ ಟ್ವಿಟ್‌ಗಳನ್ನು ವೀಕ್ಷಿಸಲು ಸಾಧ್ಯವಾಗುವಂತೆ ಮಾಡಬಹುದು. ಈ ಬಗ್ಗೆ ಟ್ವಿಟ್ಟರ್ ಟ್ವೀಟ್ ಮೂಲಕ ಮಾಹಿತಿ ನೀಡಿದೆ. ನಿಮ್ಮ ಟ್ವೀಟ್‌ಗಳನ್ನು ನೋಡುವುದು ಅಥವಾ ಫೋಟೋಗಳಲ್ಲಿ ನಿಮ್ಮನ್ನು ಟ್ಯಾಗ್ ಮಾಡುವುದು ನಿಮಗೆ ಇಷ್ಟವಿಲ್ಲದಿದ್ದರೆ ನಿಮ್ಮನ್ನು ಟ್ಯಾಗ್ ಮಾಡುವವರನ್ನು ಮಿತಿಗೊಳಿಸಬಹುದು. ಹಾಗಾದ್ರೆ ಟ್ವಿಟರ್‌ನಲ್ಲಿ ಟ್ಯಾಗ್‌ ಮಾಡುವವರನ್ನು ಮಿತಿಗೊಳಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಟ್ವಿಟರ್‌

ಸಾಮಾನ್ಯವಾಗಿ ನೀವು ಟ್ವಿಟರ್‌ಗೆ ಸೈನ್ ಅಪ್ ಮಾಡಿದಾಗ, ನಿಮ್ಮ ಟ್ವೀಟ್‌ಗಳು ಡೀಫಾಲ್ಟ್ ಆಗಿ ಎಲ್ಲರಿಗೂ ನೋಡುವುದಕ್ಕೆ ಲಭ್ಯವಿರುತ್ತವೆ. ಆದರೆ ನಿಮ್ಮ ಟ್ವೀಟ್‌ಗಳನ್ನು ನೀವು ಸೆಕ್ಯುರ್‌ ಮಾಡುವುದಕ್ಕೆ ಕೆಲವು ಆಯ್ಕೆಗಳಿವೆ. ಇದಕ್ಕಾಗಿ ನೀವು ನಿಮ್ಮ ಖಾತೆ ಸೆಟ್ಟಿಂಗ್‌ಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಟ್ವಿಟರ್‌ ನೀಡಿರುವ ಮಾಹಿತಿ ಪ್ರಕಾರ ನಿಮ್ಮ ಟ್ವೀಟ್‌ಗಳನ್ನು ನೀವು ರಕ್ಷಿಸಲು ಬಯಸಿದರೆ, ಹೊಸ ಜನರು ನಿಮ್ಮನ್ನು ಅನುಸರಿಸಲು ಬಯಸಿದರೆ ಅವರ ರಿಕ್ವೆಸ್ಟ್‌ ಅನ್ನು ರಿಮೋವ್‌ ಮಾಡಬಹುದಾಗಿದೆ.

ನಿಮ್ಮ ಟ್ವೀಟ್‌ಗಳನ್ನು ನೀವು ಸೆಕ್ಯುರ್‌ ಮಾಡಿದರೆ ಏನಾಗಲಿದೆ?

ನಿಮ್ಮ ಟ್ವೀಟ್‌ಗಳನ್ನು ನೀವು ಸೆಕ್ಯುರ್‌ ಮಾಡಿದರೆ ಏನಾಗಲಿದೆ?

* ಟ್ವಿಟರ್‌ನಲ್ಲಿ ಹೊಸ ಜನರು ನಿಮ್ಮನ್ನು ಅನುಸರಿಸಲು ಬಯಸಿದಾಗ ಅವರ ರಿಕ್ವೆಸ್ಟ್‌ ಅನ್ನು ರಿಮೋವ್‌ ಮಾಡಬಹುದು.
* ಇದರಿಂದ ನಿಮ್ಮ ಟ್ವೀಟ್‌ಗಳಿಗೆ ಶಾಶ್ವತ ಲಿಂಕ್‌ಗಳನ್ನು ಒಳಗೊಂಡಂತೆ ನಿಮ್ಮ ಟ್ವೀಟ್‌ಗಳು ನಿಮ್ಮ ಅನುಯಾಯಿಗಳಿಗೆ ಮಾತ್ರ ಗೋಚರಿಸುತ್ತವೆ.
* ನಿಮ್ಮ ಅನುಯಾಯಿಗಳು ರೀಟ್ವೀಟ್ ಐಕಾನ್ ಅನ್ನು ರಿಟ್ವೀಟ್ ಮಾಡಲು ಅವಕಾಶವಿರುವುದಿಲ್ಲ.
* ಸಂರಕ್ಷಿತ ಟ್ವೀಟ್‌ಗಳು ಥರ್ಡ್-ಪಾರ್ಟಿ ಸರ್ಚ್ ಇಂಜಿನ್‌ಗಳಲ್ಲಿ ಕಾಣಿಸುವುದಿಲ್ಲ.
* ನಿಮ್ಮ ಸಂರಕ್ಷಿತ ಟ್ವೀಟ್‌ಗಳನ್ನು ನೀವು ಮತ್ತು ನಿಮ್ಮ ಅನುಯಾಯಿಗಳು ಮಾತ್ರ ಟ್ವಿಟರ್‌ನಲ್ಲಿ ಸರ್ಚ್‌ ಮಾಡಬಹುದಾಗಿದೆ.
* ನಿಮ್ಮನ್ನು ಫಾಲೋ ಮಾಡದ ಖಾತೆಗೆ ನೀವು ಕಳುಹಿಸುವ ರಿಪ್ಲೇಗಳನ್ನು ಆ ಅಕೌಂಟ್‌ ನೋಡಲು ಸಾದ್ಯವಾಗುವುದಿಲ್ಲ.

ನಿಮ್ಮ ಟ್ವೀಟ್‌ಗಳನ್ನು ಸೆಕ್ಯುರ್‌ ಮಾಡುವುದು ಹೇಗೆ?

ನಿಮ್ಮ ಟ್ವೀಟ್‌ಗಳನ್ನು ಸೆಕ್ಯುರ್‌ ಮಾಡುವುದು ಹೇಗೆ?

ಹಂತ:1 ಮೊದಲನೆಯದಾಗಿ ನೀವು ನಿಮ್ಮ Twitter ಖಾತೆಯಲ್ಲಿ ಸೆಟ್ಟಿಂಗ್‌ಗಳ ಆಯ್ಕೆಗೆ ಹೋಗಿ,
ಹಂತ:2 ನಂತರ ಗೌಪ್ಯತೆ ಮತ್ತು ಸೆಕ್ಯುರ್‌ ವಿಭಾಗಕ್ಕೆ ಹೋಗಿ.
ಹಂತ:3 ಇದರಲ್ಲಿ ಪ್ರೇಕ್ಷಕರು ಮತ್ತು ಟ್ಯಾಗಿಂಗ್ ಮೇಲೆ ಕ್ಲಿಕ್ ಮಾಡಿ.
ಹಂತ:4 ಇಲ್ಲಿ ನೀವು "ನಿಮ್ಮ ಟ್ವೀಟ್‌ಗಳನ್ನು ರಕ್ಷಿಸಿ" ಎಂದು ಹೇಳುವ ಆಯ್ಕೆಯನ್ನು ಕಾಣಬಹುದು.

ಟ್ವೀಟ್‌

ಇಲ್ಲಿ ನೀವು ನಿಮ್ಮ ಟ್ವೀಟ್‌ಗಳನ್ನು ರಕ್ಷಿಸಿ ಆಯ್ಕೆಯ ಕೆಳಗೆ ಲಭ್ಯವಿರುವ ಫೋಟೋ ಟ್ಯಾಗಿಂಗ್ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಫೋಟೋಗಳಲ್ಲಿ ನಿಮ್ಮನ್ನು ಯಾರು ಟ್ಯಾಗ್ ಮಾಡಬಹುದು ಅನ್ನೊದನ್ನು ಕಂಟ್ರೋಲ್‌ ಮಾಡಬಹುದು. ಅಲ್ಲಿಂದ ನೀವು "ಯಾರಾದರೂ ನಿಮ್ಮನ್ನು ಟ್ಯಾಗ್ ಮಾಡಬಹುದು" ಅಥವಾ "ನೀವು ಅನುಸರಿಸುವ ಜನರು ಮಾತ್ರ ನಿಮ್ಮನ್ನು ಟ್ಯಾಗ್ ಮಾಡಬಹುದು" ಎಂಬ ಆಯ್ಕೆಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಹೀಗೆ ಮಾಡುವ ಮೂಲಕ ನಿಮ್ಮ ಟ್ವಿಟ್‌ಗಳನ್ನ ನೀವು ಸೆಕ್ಯುರ್‌ ಮಾಡಬಹುದಾಗಿದೆ.

ಟ್ವಿಟರ್‌ ಬ್ಲೂ

ಇದಲ್ಲದೆ ಟ್ವಿಟರ್‌ ಇತ್ತೀಚಿಗಷ್ಟೇ ತನ್ನ ಬಳಕೆದಾರರಿಗೆ ಚಂದಾದರಿಕೆ ಸೇವೆ ನೀಡುವ ಟ್ವಿಟರ್‌ ಬ್ಲೂ ಪರಿಚಯಿಸಿದೆ. ಈ ಚಂದಾದಾರಿಕೆ ಸೇವೆಯು ಟ್ವೀಟ್‌ಗಳನ್ನು ರದ್ದುಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಯಾವುದೇ ಜಾಹೀರಾತುಗಳಿಲ್ಲದೆ ಕೆಲವು ಸುದ್ದಿ ಲೇಖನಗಳನ್ನು ಓದಬಹುದಾದ ಫೀಚರ್ಸ್‌ಗಳ ಸೇರ್ಪಡೆಗೆ ಮುಂದಾಗಿದೆ. ಇದರೊಂದಿಗೆ ಟ್ವಿಟರ್‌ ಬ್ಲೂ ಚಂದಾದಾರಿಕೆ ಮೂಲಕ ತನ್ನ ಆದಾಯದ ಮೂಲಗಳನ್ನು ವೈವಿಧ್ಯಗೊಳಿಸಲು ನೋಡುತ್ತಿದೆ. ಈ ಚಂದಾದಾರಿಕೆ ಸೇವೆಯು undo ಬಟನ್ ಸೇರಿದಂತೆ ಹೊಸ ಫೀಚರ್ಸ್‌ಗಳನ್ನು ಸೇರಿಸುತ್ತಿದೆ. ಇದು ಟ್ವೀಟ್‌ಗಳನ್ನು ಕಳುಹಿಸುವ ಮೊದಲು undo ಮಾಡಲು ನಿಮಗೆ ಅನುಮತಿಸಲಿದೆ.

Best Mobiles in India

English summary
Twitter users can protect their tweets and make them visible only to their followers by changing the settings under "Audience and tagging".to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X