ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಯಾಮ್‌ಸಂಗ್‌ ಪೇ ಆ್ಯಪ್‌ ತೆಗೆದುಹಾಕಲು ಹೀಗೆ ಮಾಡಿ!

|

ಸ್ಯಾಮ್‌ಸಂಗ್‌ ಕಂಪನಿಯ ಸ್ಮಾರ್ಟ್‌ಫೋನ್‌ಗಳು ಬಳಕೆದಾರರ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದೆ. ಸ್ಮಾರ್ಟ್‌ಫೋನ್‌ ಪ್ರಿಯರ ಆಶಯಕ್ಕೆ ತಕ್ಕಂತೆ ಸ್ಯಾಮ್‌ಸಂಗ್‌ ಕೂಡ ತನ್ನ ಸ್ಮಾರ್ಟ್‌ಫೋನ್‌ಗಳನ್ನು ವಿಶೇಷ ವಿನ್ಯಾಸದೊಂದಿಗೆ ಪರಿಚಯಿಸುತ್ತಾ ಬಂದಿದೆ. ಇನ್ನು ಸ್ಮಾರ್ಟ್‌ಫೋನ್‌ಗಳಲ್ಲಿ ಸಾಮಾನ್ಯವಾಗಿ ಅನೇಕ ಪ್ರೀ-ಇನ್‌ಸ್ಟಾಲ್‌ ಅಪ್ಲಿಕೇಶನ್‌ಗಳನ್ನು ಕಾಣಬಹುದಾಗಿದೆ. ಇವುಗಳು ಉಪಯುಕ್ತತೆ ಹಾಗೂ ಬಳಕೆದಾರರ ಅನುಕೂಲತೆಯನ್ನು ಸುಧಾರಿಸಲು ನೀಡಲಾಗಿರುತ್ತದೆ. ಆದರೆ ಕೆಲವು ಅಪ್ಲಿಕೇಶನ್‌ಗಳು ನಿಮಗೆ ಬೇಡವೆನಿಸುವುದು ಕೂಡ ಸಹಜ.

ಪ್ರಿ-ಇನ್‌ಸ್ಟಾಲ್‌

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಿ-ಇನ್‌ಸ್ಟಾಲ್‌ ಆಗಿರುವ ಅಪ್ಲಿಕೇಶನ್‌ಗಳಲ್ಲಿ ಕೆಲವು ನ ಇಮಗೆ ಅವಶ್ಯಕತೆ ಎನಿಸುವುದಿಲ್ಲ. ಇಂತಹ ಅಪ್ಲಿಕೇಶನ್‌ಗಳನ್ನು ತೆಗೆದುಹಾಕುವುದು ಹೇಗೆ ಅನ್ನೊದನ್ನ ತಿಳಿಯದೆ ಹಾಗೇ ಬಿಟ್ಟುಬಿಡುತ್ತಾರೆ. ಈ ಸಾಲಿನಲ್ಲಿ ಸ್ಯಾಮ್‌ಸಂಗ್‌ ಪೇ ಅಪ್ಲಿಕೇಶನ್‌ ಕೂಡ ಒಂದು. ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರಿ-ಇನ್‌ಸ್ಟಾಲ್‌ ಆಗಿರುವ ಸ್ಯಾಮ್‌ಸಂಗ್‌ ಪೇ ಅಪ್ಲಿಕೇಶನ್‌ ನಿಮಗೆ ಬೇಡ ಎನಿಸಿದರೆ ಅದನ್ನು ತೆಗೆದುಹಾಕುಲು ಸ್ಯಾಮ್‌ಸಂಗ್‌ ಸಂಸ್ಥೆ ಅವಕಾಶ ನೀಡಿದೆ. ಹಾಗಾದ್ರೆ ಸ್ಯಾಮ್‌ಸಂಗ್‌ ಪೇ ಅಪ್ಲಿಕೇಶನ್‌ ಅನ್ನು ತೆಗೆದುಹಾಕುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಯಾಮ್‌ಸಂಗ್‌

ಇಂದಿನ ದಿನಗಳಲ್ಲಿ ಹಲವು ಯುಪಿಐ ಅಪ್ಲಿಕೇಶನ್‌ಗಳು ಲಭ್ಯವಿರುವುದರಿಂದ ಸ್ಯಾಮ್‌ಸಂಗ್‌ ಪೇ ಅಪ್ಲಿಕೇಶನ್‌ ಅವಶ್ಯಕತೆ ಎನಿಸುವುದಿಲ್ಲ. ಹೆಚ್ಚಿನ ಜನರು ಈ ಅಪ್ಲಿಕೇಶನ್‌ ಅನ್ನು ಬಳಸುವುದಕ್ಕೆ ಹೋಗುವುದಿಲ್ಲ. ಆದರಿಂದ ಸ್ಯಾಮ್‌ಸಂಗ್‌ ಪೇ ಅಪ್ಲಿಕೇಶನ್‌ ಬೇಡ ಎನಿಸಿದರೆ ಅದನ್ನು ತೆಗೆದುಹಾಕುವುದಕ್ಕೆ ಇದೀಗ ಅವಕಾಶ ನೀಡಲಾಗಿದೆ. ಇತ್ತೀಚಿನ ಆಂಡ್ರಾಯ್ಡ್‌ಆವೃತ್ತಿಗಳಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಯಾಮ್‌ಸಂಗ್‌ ಪೇ ಅಪ್ಲಿಕೇಶನ್‌ ತೆಗೆದುಹಾಕುವುದನ್ನು ಸರಳಗೊಳಿಸಲಾಗಿದೆ.

ಸ್ಯಾಮ್‌ಸಂಗ್‌ ಪೇ ಅಪ್ಲಿಕೇಶನ್‌ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಸ್ಯಾಮ್‌ಸಂಗ್‌ ಪೇ ಅಪ್ಲಿಕೇಶನ್‌ ಅನ್ನು ನಿಷ್ಕ್ರಿಯಗೊಳಿಸುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸ್ಯಾಮ್‌ಸಂಗ್‌ ಪೇ ಅಪ್ಲಿಕೇಶನ್ ತೆರೆಯಿರಿ.

ಹಂತ:2 ನಂತರ ಎಡ ಮೂಲೆಯಲ್ಲಿ ಮೂರು-ಸಾಲಿನ ಮೆನು ಐಕಾನ್ ಮೇಲೆ ಟ್ಯಾಪ್ ಮಾಡಿ.

ಹಂತ:3 ಇದೀಗ ಸೆಟ್ಟಿಂಗ್ಸ್‌ ಟ್ಯಾಬ್‌ಗೆ ಹೋಗಿ.
ಹಂತ:4 ಇದರಲ್ಲಿ ಯೂಸ್‌ ಫೇವರಿಟ್‌ ಕಾರ್ಡ್ಸ್‌ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:5 ನಂತರ ಲಾಕ್ ಸ್ಕ್ರೀನ್, ಹೋಮ್ ಸ್ಕ್ರೀನ್ ಮತ್ತು ಸ್ಕ್ರೀನ್ ಆಫ್ ಮಾಡಲು ಟಾಗಲ್ ಆಫ್ ಮಾಡಿ.

ಸ್ಯಾಮ್‌ಸಂಗ್‌ ಅಪ್ಲಿಕೇಶನ್‌ ಅನ್ನು ನೀವು ಆಫ್ ಮಾಡಿದಾಗ, ಪಾವತಿ ಟರ್ಮಿನಲ್ ಅನ್ನು ಟ್ಯಾಪ್ ಮಾಡಿದಾಗ ಮಾತ್ರ ಅದನ್ನು ಬಳಸಬಹುದು.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋನ್‌ನಿಂದ ಸ್ಯಾಮ್‌ಸಂಗ್‌ ಪೇ ಅನ್ನು ತೆಗೆದುಹಾಕಲು ಹೀಗೆ ಮಾಡಿ?

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಫೋನ್‌ನಿಂದ ಸ್ಯಾಮ್‌ಸಂಗ್‌ ಪೇ ಅನ್ನು ತೆಗೆದುಹಾಕಲು ಹೀಗೆ ಮಾಡಿ?

ಹಂತ:1 ಮೊದಲಿಗೆ ಸ್ಯಾಮ್‌ಸಂಗ್‌ ಪೇ ಐಕಾನ್‌ ಅನ್ನು ಒತ್ತಿ ಹಿಡಿದುಕೊಳ್ಳಿ.
ಹಂತ:2 ಇದೀಗ ಅನ್‌ಇನ್‌ಸ್ಟಾಲ್ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ಇದೀಗ ಅನ್‌ಇನ್‌ಸ್ಟಾಲ್ ಮಾಡಲು ಬಯಸುತ್ತೀರಿ ಎಂಬುದನ್ನು ಖಚಿತಪಡಿಸಲು ಸರಿ ಬಟನ್ ಒತ್ತಿರಿ.

ಹೀಗೆ ಮಾಡುವುದರ ಮೂಲಕ ಸ್ಯಾಮ್‌ಸಂಗ್‌ ಪೇ ಅಪ್ಲಿಕೇಶನ್‌ ಅನ್ನು ನಿಮ್ಮ ಗ್ಯಾಲಕ್ಸಿ ಫೋನ್‌ಗಳಲ್ಲಿ ತೆಗೆದುಹಾಕಬಹುದಾಗಿದೆ.

ಸ್ಯಾಮ್‌ಸಂಗ್‌

ಇದಲ್ಲದೆ ಸ್ಯಾಮ್‌ಸಂಗ್‌ ಕಂಪೆನಿ ಇತ್ತೀಚಿಗೆ ತನ್ನ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಿಗಾಗಿ ಹೊಸ ಕ್ಯಾಮೆರಾ ಅಸಿಸ್ಟೆಂಟ್‌ ಅಪ್ಲಿಕೇಶನ್ ಪರಿಚಯಿಸಿದೆ. ಇದು ಬಳಕೆದಾರರ ಅನುಭವವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಅಂದರೆ ವೈಯಕ್ತೀಕರಣ ಅಪ್ಲಿಕೇಶನ್‌ಗಳ ಕಂಪನಿಯ ಗುಡ್ ಲಾಕ್ ಸೂಟ್‌ನ ಒಂದು ಭಾಗವಾಗಿದೆ. ಇದರಿಂದ ನೀವು ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ನಲ್ಲಿ ಕ್ಯಾಮೆರಾವನ್ನು ಬಳಸುವಾಗ ಅಪ್ಡೇಟೆಡ್‌ ಫೀಚರ್ಸ್‌ಗಳು ಲಭ್ಯವಾಗಲಿವೆ.

ಆಟೋ ಮೋಡ್‌

ಇದು ಆಟೋ ಮೋಡ್‌ ಮೂಲಕ ಬಳಕೆದಾರರ ಗ್ರಾಹಕೀಕರಣವನ್ನು ಸುಧಾರಿಸಲು ಸಹಾಯ ಮಾಡಲಿದೆ. ಪ್ರಸ್ತುತ ಈ ಅಪ್ಲಿಕೇಶನ್ ಭಾರತ, ದಕ್ಷಿಣ ಕೊರಿಯಾ ಮತ್ತು ಇತರ ಕೆಲವು ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಇದನ್ನು ಗ್ಯಾಲಕ್ಸಿ ಸ್ಟೋರ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ, ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ಆಟೋಮ್ಯಾಟಿಕ್‌ HDR ಅನ್ನು ನಿಷ್ಕ್ರಿಯಗೊಳಿಸುವ ಅಥವಾ ಸಕ್ರಿಯಗೊಳಿಸುವುದಕ್ಕೆ ಅವಕಾಶ ನೀಡಲಿದೆ.

Best Mobiles in India

English summary
How to remove Samsung Pay from your Galaxy smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X