ಗೂಗಲ್‌ ಡ್ರೈವ್‌ನಲ್ಲಿ ಡಾಕ್ಯುಮೆಂಟ್‌ ಗಳನ್ನು PDFಗೆ ಸ್ಕ್ಯಾನ್‌ ಮಾಡುವುದು ಹೇಗೆ?

|

ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ದಾಖಲೆಯನ್ನು ಡಿಜಿಟಲ್‌ ರೂಪದಲ್ಲಿ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಅದರಲ್ಲೂ ಡಿಜಿಟಲ್‌ ಜಗತ್ತಿನಲ್ಲಿ ಪಿಡಿಎಫ್‌ ಫೈಲ್‌ಗಳ ರೂಪದಲ್ಲಿ ಸಾಕಷ್ಟು ದಾಖಲೆಗಳನ್ನು ನಾವು ಕಾಣಬಹುದಾಗಿದೆ. ದಾಖಲೆಗಳು ಪಿಡಿಎಫ್‌ ಮಾದರಿಯಲ್ಲಿ ಇದ್ದರೆ ಬೇರೆಯವರು ಎಡಿಟ್‌ ಮಾಡುವುದು ಕಷ್ಟ. ಇದೇ ಕಾರಣಕ್ಕೆ ಹೆಚ್ಚಿನ ಜನರು ತಮ್ಮ ಫೈಲ್‌ಗಳನ್ನು ಪಿಡಿಎಫ್‌ ರೂಪದಲ್ಲಿ ಇಟ್ಟಿರುತ್ತಾರೆ.

ಪಿಡಿಎಫ್‌

ಹೌದು, ಜನರು ತಮ್ಮ ಪ್ರಮುಖ ದಾಖಲೆಗಳನ್ನು ಪಿಡಿಎಫ್‌ ಮಾದರಿಯಲ್ಲಿ ಶೇಖರಿಸುತ್ತಾರೆ. ಅದರಲ್ಲೂ ಡ್ರೈವಿಂಗ್ ಲೈಸೆನ್ಸ್, ತೆರಿಗೆ ದಾಖಲೆಗಳು, ಸಾಲದ ದಾಖಲೆಗಳು ಅಥವಾ ವಾಹನಗಳ ನೋಂದಣಿ ದಾಖಲೆಗಳ ಡಿಜಿಟಲ್ ನಕಲನ್ನು ಪಿಡಿಎಫ್‌ ಫೈಲ್‌ ಮಾದರಿಯಲ್ಲಿ ಇಡುವುದು ಹೆಚ್ಚು ಸೂಕ್ತವಾಗಿದೆ. ಆನ್‌ಲೈನ್‌ನಲ್ಲಿ ದಾಖಲೆಗಳನ್ನು ಸಲ್ಲಿಸುವಾಗ ಅವುಗಳು ಸಹ ಅಗತ್ಯವಾಗಿರುತ್ತದೆ. ಇದೇ ಕಾರಣಕ್ಕೆ ಗೂಗಲ್‌ ಡ್ರೈವ್‌ ಪಿಡಿಎಫ್‌ ಸ್ಕ್ಯಾನರ್‌ ಕೂಡ ನಿಮ್ಮ ದಾಖಲೆಗಳನ್ನು ಪಿಡಿಎಫ್‌ ಮಾದರಿಗೆ ಬದಲಾಯಿಸುವ ಸಾಮರ್ಥ್ಯ ಹೊಮದಿದೆ. ಹಾಗಾದ್ರೆ ಸಾಮಾನ್ಯ ಫೈಲ್‌ ಹಾಗೂ ಫೋಟೋಗಳನ್ನು ಗೂಗಲ್‌ ಡ್ರೈವ್‌ ಪಿಡಿಎಫ್‌ ಸ್ಕ್ಯಾನರ್ನಲ್ಲಿ ಪಿಡಿಎಫ್‌ಗೆ ಬದಲಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌ ಡ್ರೈವ್ ಪಿಡಿಎಫ್ ಸ್ಕ್ಯಾನರ್

ಗೂಗಲ್‌ ಡ್ರೈವ್ ಪಿಡಿಎಫ್ ಸ್ಕ್ಯಾನರ್

ಆನ್‌ಲೈನ್‌ನಲ್ಲಿ ವರ್ಡ್‌ ಫೈಲ್‌ನಿಂದ ಪಿಡಿಎಫ್‌ಗೆ ಕನ್ವರ್ಟ್‌ ಮಾಡುವ ಹಲವು ಅಪ್ಲಿಕೇಶನ್‌ಗಳಿವೆ.ಈ ಅಪ್ಲಿಕೇಶನ್‌ಗಳು ಬಳಕೆದಾರರು ತಮ್ಮ ಭೌತಿಕ ದಾಖಲೆಗಳನ್ನು ಡಿಜಿಟಲ್ ಆಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಆದರೆ ನೀವು ಆಂಡ್ರಾಯ್ಡ್ ಬಳಕೆದಾರರಾಗಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಎಲ್ಲ ಭಾರಿ ಅಪ್ಲಿಕೇಶನ್‌ಗಳನ್ನು ನೀವು ಡೌನ್‌ಲೋಡ್ ಮಾಡುವ ಅಗತ್ಯವಿಲ್ಲ. ಏಕೆಂದರೆ ಗೂಗಲ್‌ ಡ್ರೈವ್‌ನಲ್ಲಿ ಪಿಡಿಎಫ್‌ ಸ್ಕ್ಯಾನರ್‌ ಲಭ್ಯವಿದೆ. ಗೂಗಲ್‌ ಡ್ರೈವ್‌ನಲ್ಲಿ ಪಿಡಿಎಫ್‌ ಸ್ಕ್ಯಾನ್‌ ಮಾಡೋಕೆ ಈ ಕೆಳಗಿನ ಹಂತಗಳನ್ನು ಅನುಸರಿಸಿ.

ಗೂಗಲ್‌ ಡ್ರೈವ್‌ನಲ್ಲಿ ಡಾಕ್ಯುಮೆಂಟ್‌ ಮತ್ತು ಫೋಟೋಗಳನ್ನು ಪಿಡಿಎಫ್‌ಗೆ ಕನ್ವರ್ಟ್‌ ಮಾಡುವುದು ಹೇಗೆ?

ಗೂಗಲ್‌ ಡ್ರೈವ್‌ನಲ್ಲಿ ಡಾಕ್ಯುಮೆಂಟ್‌ ಮತ್ತು ಫೋಟೋಗಳನ್ನು ಪಿಡಿಎಫ್‌ಗೆ ಕನ್ವರ್ಟ್‌ ಮಾಡುವುದು ಹೇಗೆ?

ಹಂತ 1: ನಿಮ್ಮ Android ಸ್ಮಾರ್ಟ್‌ಫೋನ್‌ನಲ್ಲಿ Google ಡ್ರೈವ್ ಅಪ್ಲಿಕೇಶನ್ ತೆರೆಯಿರಿ.

ಹಂತ 2: ಅಪ್ಲಿಕೇಶನ್‌ನ ಕೆಳಗಿನ ಬಲ ಮೂಲೆಯಲ್ಲಿ, ಸೇರಿಸು ಐಕಾನ್ ಮೇಲೆ ಟ್ಯಾಪ್ ಮಾಡಿ.

ಹಂತ 3: ಈಗ ಸ್ಕ್ಯಾನ್ ಬಟನ್ ಟ್ಯಾಪ್ ಮಾಡಿ.

ಹಂತ 4: ನೀವು ಸ್ಕ್ಯಾನ್ ಮಾಡಲು ಬಯಸುವ ಡಾಕ್ಯುಮೆಂಟ್‌ನ ಫೋಟೋ ತೆಗೆದುಕೊಳ್ಳಿ.

ಹಂತ 5: ಕ್ರಾಪ್ ಬಟನ್ ಬಳಸಿ ಡಾಕ್ಯುಮೆಂಟ್‌ನ ಅನ್ನು ಸೆಟ್‌ ಮಾಡಿ.

ಫೋಟೋ

ಹಂತ 6: ಮತ್ತೆ ಫೋಟೋ ತೆಗೆದುಕೊಳ್ಳಲು ಕರೆಂಟ್‌ ಪೇಜ್‌ ಅನ್ನು ರಿ ಸ್ಕ್ಯಾನ್ ಮಾಡಿ.

ಹಂತ 7: ಮತ್ತೊಂದು ಪೇಜ್‌ ಅನ್ನು ಸ್ಕ್ಯಾನ್ ಮಾಡಲು ಆಡ್‌ ಬಟನ್ ಟ್ಯಾಪ್ ಮಾಡಿ.

ಹಂತ 8: ಈಗ ಡನ್‌ ಗುಂಡಿಯನ್ನು ಟ್ಯಾಪ್ ಮಾಡಿ.

ಹಂತ 9: ಈಗ ಅದನ್ನು ಗೂಗಲ್‌ ಡ್ರೈವ್‌ನಲ್ಲಿ ಎಲ್ಲಿ ಉಳಿಸಬೇಕು ಮತ್ತು ಯಾವ ಫೈಲ್ ಹೆಸರಿನೊಂದಿಗೆ ಡ್ರೈವ್ ಕೇಳುತ್ತದೆ. ಅಗತ್ಯವಿರುವ ಕ್ಷೇತ್ರಗಳನ್ನು ಸೇರಿಸಿ.

ಹಂತ 10: ಕೊನೆಯದಾಗಿ, ನೀವು ಮುಗಿದ ನಂತರ ಸೇವ್‌ ಬಟನ್ ಟ್ಯಾಪ್ ಮಾಡಿ!

ಈ ಮೂಲಕ ಯಾವುದೇ ಹೆಚ್ಚುವರಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡದೆಯೇ ಗೂಗಲ್‌ ಡ್ರೈವ್‌ನಲ್ಲಿ ಪಿಡಿಎಫ್ ಅನ್ನು ಯಶಸ್ವಿಯಾಗಿ ಸ್ಕ್ಯಾನ್ ಮಾಡಬಹುದಾಗಿದೆ.

Best Mobiles in India

English summary
We all know that Google Drive app can be used for storing files and folders online. Apart from that, it can also be used for scanning and saving documents as PDFs.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X