ಅಮೆಜಾನ್‌ ಪೇ ಬ್ಯಾಲೆನ್ಸ್‌ ನಿಮ್ಮ ಬ್ಯಾಂಕ್‌ ಖಾತೆ ಸೇರಬೇಕಾದ್ರೆ ಹೀಗೆ ಮಾಡಿ!

|

ಅಮೆಜಾನ್‌ ಪೇ ಅಪ್ಲಿಕೇಶನ್‌ ಜನಪ್ರಿಯ ಯುಪಿಐ ಪಾವತಿ ಅಪ್ಲಿಕೇಶನ್‌ಗಳಲ್ಲಿ ಒಂದೆನಿಸಿಕೊಂಡಿದೆ. ಅಮೆಜಾನ್‌ ಸೈಟ್‌ನಲ್ಲಿ ಶಾಪಿಂಗ್‌ ಮಾಡುವ ಹೆಚ್ಚಿನ ಮಂದಿ ಅಮೆಜಾನ್‌ ಪೇ ಮೂಲಕ ರಿವಾರ್ಡ್‌ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಅಮೆಜಾನ್‌ ಪೇ ಎಲ್ಲಾ ರೀತಿಯ ಪಾವತಿಗಳನ್ನು ಮಾಡಲು ಪೂರ್ಣ ಪ್ರಮಾಣದ ಪಾವತಿ ಆಯ್ಕೆಯಾಗಿ ಉಳಿದುಕೊಂಡಿದೆ. ಇನ್ನು ಅಮೆಜಾನ್‌ ಪೇ ಬಳಸಿ ನೀವು ಚಲನಚಿತ್ರಗಳನ್ನು ಬುಕ್ ಮಾಡಬಹುದು, ಬಿಲ್‌ಗಳನ್ನು ಪಾವತಿಸುವುದಕ್ಕೆ ಕೂಡ ಅವಕಾಶ ಲಭ್ಯವಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಪೇ ಬ್ಯಾಲೆನ್ಸ್‌ ಮೂಲಕ ಅಮೆಜಾನ್‌ನಲ್ಲಿ ಶಾಪಿಂಗ್‌ ಮಾಡುವುದು ಸುಲಭವಾಗಿದೆ. ಅದೇ ರೀತಿ ಅಮೆಜಾನ್‌ ಪೇ ಬ್ಯಾಲೆನ್ಸ್‌ ಅನ್ನು ಸುಲಭವಾಗಿ ಹಿಂಪಡೆಯುವುದಕ್ಕೆ ಕೂಡ ಅವಕಾಶವಿದೆ. ಆದರೆ ಹೆಚ್ಚಿನ ಜನರರಿಗೆ ಅಮೆಜಾನ್‌ ಪೇ ಬ್ಯಾಲೆನ್ಸ್‌ ಹಿಂಪಡೆಯುವುದು ಹೇಗೆ ಅನ್ನೊದು ಇನ್ನು ತಿಳಿದಿಲ್ಲ. ಹಾಗಾದ್ರೆ ಅಮೆಜಾನ್‌ ಪೇ ಬ್ಯಾಲೆನ್ಸ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್‌

ಅಮೆಜಾನ್‌ ಪೇ ಬ್ಯಾಲೆನ್ಸ್‌ ಅನ್ನು ನಿಮ್ಮ ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಳ್ಳಬೇಕಾದರೆ ನೀವು ಕೆವೈಸಿಯನ್ನು ಪೂರ್ಣಗೊಳಿಸುವುದು ಅವಶ್ಯಕವಾಗಿದೆ. ನೀವು ನಿಮ್ಮ ಕೆವೈಸಿ ದಾಖಲೆಗಳನ್ನು ಸಂಪೂರ್ಣವಾಗಿ ನಮೂದಿಸಿದ ನಂತರವಷ್ಟೇ ನಿಮ್ಮ ಅಮೆಜಾನ್‌ ಪೇ ಬ್ಯಾಲೆನ್ಸ್‌ ಅನ್ನು ಬ್ಯಾಂಕ್‌ ಖಾತೆಗೆ ವರ್ಗಾಯಿಸಲು ಸಾಧ್ಯವಾಗಲಿದೆ. ನೀವು ನಿಮ್ಮ KYC ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ ಅಮೆಜಾನ್‌ ಪೇ ಬ್ಯಾಲೆನ್ಸ್‌ ವರ್ಗಾಯಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.

ಅಮೆಜಾನ್ ಪೇ ಬ್ಯಾಲೆನ್ಸ್ ಅನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವುದು ಹೇಗೆ?

ಅಮೆಜಾನ್ ಪೇ ಬ್ಯಾಲೆನ್ಸ್ ಅನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಮೆಜಾನ್‌ ಅಪ್ಲಿಕೇಶನ್ ತೆರೆಯಿರಿ.
ಹಂತ:2 ನಂತರ ಅಮೆಜಾನ್‌ ಪೇ ಆಯ್ಕೆಯನ್ನು ಟ್ಯಾಪ್ ಮಾಡಿ.
ಹಂತ:3 ಅಮೆಜಾನ್‌ ಪೇ ಬ್ಯಾಲೆನ್ಸ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲು, ಮನಿ ಸೆಂಡ್‌ ಟ್ಯಾಪ್ ಮಾಡಿ.
ಹಂತ:4 ಪೇ ಬ್ಯಾಲೆನ್ಸ್ ಹಣವನ್ನು ವರ್ಗಾಯಿಸಲು ಬಯಸುವ ಬ್ಯಾಂಕ್ ಅನ್ನು ಆಯ್ಕೆಮಾಡಿ.
ಹಂತ:5 SMS ಕಳುಹಿಸುವ ಮೂಲಕ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳನ್ನು ಪರಿಶೀಲಿಸಿ

ಬ್ಯಾಂಕ್‌ಗೆ

ಹಂತ:6 ಇದೀಗ ಬ್ಯಾಂಕ್‌ಗೆ ಟ್ಯಾಪ್ ಮಾಡಿ.
ಹಂತ:7 ನಂತರ IFSC ಕೋಡ್, ಖಾತೆ ಸಂಖ್ಯೆ ಮತ್ತು ಖಾತೆದಾರರ ಹೆಸರನ್ನು ನಮೂದಿಸಿ.
ಹಂತ:8 ಪೇ ನೌ ಬಟನ್ ಒತ್ತಿರಿ.
ಹಂತ:9 ಇದೀಗ ಹಣ ವರ್ಗಾವಣೆಗಾಗಿ ಎಲ್ಲಾ ಆಯ್ಕೆಗಳನ್ನು ಕಾಣಬಹುದು, ಇದೀಗ ಅಮೆಜಾನ್‌ ಪೇ ಬ್ಯಾಲೆನ್ಸ್ ಅನ್ನು ಆಯ್ಕೆ ಮಾಡಿ.
ಹಂತ:10 ಕೊನೆಯದಾಗಿ, ಕಂಟಿನ್ಯೂ ಟ್ಯಾಪ್ ಮಾಡಿ.

ಇದೀಗ, ನಿಮ್ಮ ಅಮೆಜಾನ್‌ ಪೇ ಬ್ಯಾಲೆನ್ಸ್ ಅನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಅಗತ್ಯವಿದ್ದರೆ ನೀವು ಅದನ್ನು ನಗದು ರೂಪದಲ್ಲಿ ಹಿಂತೆಗೆದುಕೊಳ್ಳಬಹುದು.

ಅಮೆಜಾನ್‌

ಇನ್ನು ಅಮೆಜಾನ್‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಅಮೆಜಾನ್‌ ಪೇ ಲೇಟರ್‌ ಸೇವೆ ಕೂಡ ನೀಡುತ್ತಿದೆ. ಇದರ ಮೂಲಕ ನೀವು ಹಣವಿಲ್ಲದೆ ಹೊದರು ಕೂಡ ಅಮೆಜಾನ್‌ನಲ್ಲಿ ಶಾಪಿಂಗ್‌ ಮಾಡುವುದಕ್ಕೆ ಸಹಾಯ ಮಾಡಲಿದೆ. ಆದರೆ ನೀವು ಶಾಪಿಂಗ್‌ ಮಾಡಿದ ಮೊತ್ತವನ್ನು ಇಎಂಐ ರೂಪದಲ್ಲಿ ಪಾವತಿ ಮಾಡಬೇಕಾಗುತ್ತದೆ. ಅಮೆಜಾನ್‌ ಪೇ ಲೇಟರ್‌ ಅಮೆಜಾನ್.ಇನ್‌ನಲ್ಲಿ ಇಎಂಐ ಬಳಸಿ ಖರೀದಿಸುವುದಕ್ಕೆ ಸಂಪೂರ್ಣ ಡಿಜಿಟಲ್ ಪ್ರಕ್ರಿಯೆಯ ಮೂಲಕ ತ್ವರಿತ ಕ್ರೆಡಿಟ್ ನೀಡುವ ಮಾರ್ಗವಾಗಿದೆ. ಅಂದ್ರೆ ಅಮೆಜಾನ್ ಪೇ ಲೇಟರ್ ಗ್ರಾಹಕರಿಗೆ ಅಮೆಜಾನ್ ಇಂಡಿಯಾದಲ್ಲಿ ಪಟ್ಟಿ ಮಾಡಲಾದ ಯಾವುದೇ ಉತ್ಪನ್ನಗಳ ಮೇಲೆ ತ್ವರಿತ ಶೂನ್ಯ-ಬಡ್ಡಿ ಸಾಲವನ್ನು ಪಡೆಯುವ ಆಯ್ಕೆಯನ್ನು ನೀಡುತ್ತದೆ. ಗ್ರಾಹಕರು ಮುಂದಿನ ತಿಂಗಳು ಅಥವಾ ಇಎಂಐಗಳಲ್ಲಿ 3 ರಿಂದ 12 ತಿಂಗಳುಗಳಲ್ಲಿ ಪಾವತಿ ಮಾಡಬಹುದು.

Best Mobiles in India

English summary
How to Transfer Amazon Pay balance to bank account?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X