Subscribe to Gizbot

ಕೇಬಲ್ ಟಿವಿಗೆ ಬ್ರೇಕ್ ಹಾಕಲು ಬರುತ್ತಿರುವುದು 'ಜಿಯೋ ಡಿಟಿಹೆಚ್' ಅಲ್ಲ 'ಜಿಯೋ ಹೋಮ್' ಟಿವಿ!!

Written By:

ಜಿಯೋ ಬಗ್ಗೆ ದಿನಕ್ಕೊಂದು ವದಂತಿಗಳು ಹರಿದಾಡುತ್ತಿರುತ್ತವೆ ಎನ್ನುವುದಕ್ಕೆ ಜಿಯೋ ಎಂದೂ ಕೂಡ ಸ್ಪಷ್ಟನೆಯನ್ನು ನೀಡುವುದಿಲ್ಲ. ಆದರೆ, ವದಂತಿಗಳನ್ನು ಸಹ ನಿಜ ಮಾಡುವ ರೀತಿಯಲ್ಲಿ ಹೊಸ ಯೋಜನೆಯನ್ನು ತರುತ್ತದೆ. ಇಂತಹುದೇ ಒಂದು ವದಂತಿಯನ್ನು ನೀವು ನಂಬುವುದಾದರೆ, ಜಿಯೋ ಹೋಮ್ ಟಿವಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ.!!

ಹೌದು, ಭಾರತದ ದೂರಸಂಪರ್ಕ ದೈತ್ಯ ಟೆಲಿಕಾಂ ಕಂಪೆನಿ ಜಿಯೋವಿನ ಮುಂದಿನ ದೊಡ್ಡ ಯೋಜನೆ ಡಿಟಿಹೆಚ್ ಬದಲಿಗೆ ಜಿಯೋ ಹೋಮ್ ಟಿವಿಯಾಗಿರಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಡಿಟಿಹೆಚ್ ಅನ್ನು ತರುವುದಕ್ಕಿಂತಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಟಿವಿ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಜಿಯೋ ಮುಂದಾಗಿದೆ ಎಂದು ಹೇಳಲಾಗಿದೆ.

ಬರುತ್ತಿರುವುದು 'ಜಿಯೋ ಡಿಟಿಹೆಚ್' ಅಲ್ಲ 'ಜಿಯೋ ಹೋಮ್' ಟಿವಿ!!

ಎನಹಾನ್ಸ್ ಮಲ್ಟಿಮೀಡಿಯಾ ಬ್ರಾಡ್ಕಾಸ್ಟ್ ಮಲ್ಟಿಕಾಸ್ಟ್ ತಂತ್ರಜ್ಞಾನ ಆಧರಿಸಿ ಜಿಯೋ ಅತ್ಯಂತ ಕಡಿಮೆ ಬೆಲೆಯಲ್ಲಿ ಟಿವಿ ಸೇವೆಗಳನ್ನು ಒದಗಿಸಲಿದೆ ಎಂದು ಹೇಳಲಾಗುತ್ತಿದ್ದು, ಹಾಗಾದರೆ, ಜಿಯೊ ಡಿಟಿಎಚ್ ಸೇವೆಗೆ ಬದಲಾಗಿ ಬರುತ್ತಿರುವ ಜಿಯೋ ಹೋಮ್ ಟಿವಿ ಹೇಗಿರಲಿದೆ? ಜಿಯೋ ಹೋಮ್ ಟಿವಿ ವಿಶೇಷತೆಗಳೇನು? ಜಿಯೋ ವಿಧಿಸುವ ದರಗಳೆಷ್ಟು ಎಂಬುದನ್ನು ಮುಂದೆ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಿಯೋ ಹೋಮ್ ಟಿವಿ!!

ಜಿಯೋ ಹೋಮ್ ಟಿವಿ!!

ಡಿಟಿಹೆಚ್ ಅನ್ನು ತರುವುದಕ್ಕಿಂತಲೂ ಅತ್ಯಾಧುನಿಕ ತಂತ್ರಜ್ಞಾನವನ್ನು ಟಿವಿ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಜಿಯೋ ಹೋಮ್ ಟಿವಿಯನ್ನು ಪ್ರಾರಂಭಿಸಿದೆ ಎನ್ನಲಾಗಿದೆ. ಟೆಲಿಕಾಂ ಟಾಕ್ ವರದಿ ಮಾಡಿರುವ ಪ್ರಕಾರ, ಸ್ಟ್ರೀಮಿಂಗ್ ಮಾಡಲು ಇತ್ತೀಚಿಗೆ ಪರೀಕ್ಷಿಸಲಾಗಿರುವ ಜಿಯೋ ಬ್ರಾಡ್ಕಾಸ್ಟ್ ಅಪ್ಲಿಕೇಶನ್ನಿನ ಮಾರ್ಪಡಿಸಿದ ಆವೃತ್ತಿ ಇದೆಂದು ಹೇಳಲಾಗಿದೆ.

ಇಂಟರ್ನೆಟ್ ಸಂಪರ್ಕ ಬೇಕಿಲ್ಲ.!

ಇಂಟರ್ನೆಟ್ ಸಂಪರ್ಕ ಬೇಕಿಲ್ಲ.!

ಜಿಯೋ ಪ್ರಾರಂಭಿಸಲಿರುವ ಜಿಯೋ ಹೋಮ್ ಟಿವಿ ಸೇವೆ ಇಎಮ್ಎಂಎಸ್ಎಸ್ ಹೈಬ್ರಿಡ್ ತಂತ್ರಜ್ಞಾನವಾಗಿದೆ. ಇಂಟರ್ನೆಟ್ ಮತ್ತು DTH ಕೇಬಲ್ ಅವಶ್ಯಕತೆಯೂ ಇಲ್ಲದೇ ಕೇವಲ ಮೊಬೈಲ್ ಟವರ್ ಸಿಗ್ನಲ್ ಮೂಲಕ ಈ ಸೇವೆಯನ್ನು ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ.!!

ಜಿಯೋ ಹೋಮ್ ಟಿವಿ ದರಗಳೆಷ್ಟು?

ಜಿಯೋ ಹೋಮ್ ಟಿವಿ ದರಗಳೆಷ್ಟು?

ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ, ಜಿಯೋ ಹೋಮ್ ಟಿವಿ ಎಸ್‌ಡಿ (ಸ್ಟ್ಯಾಂಡರ್ಡ್ ಡೆಫಿನಿಶನ್) ಚಾನಲ್‌ಗಳನ್ನು ಜಿಯೋ ಪ್ರತಿ ತಿಂಗಳಿಗೆ ಕೇವಲ 200 ರೂಪಾಯಿಗಳಿಗೆ ನೀಡಲಿದೆ ಮತ್ತು ಎಸ್‌ಡಿ (ಸ್ಟ್ಯಾಂಡರ್ಡ್ ಡೆಫಿನಿಶನ್) ಮತ್ತು ಹೆಚ್‌ಡಿ (ಹೈ ಡೆಫಿನಿಶನ್) ಎರಡೂ ರೂಪದ ಚಾನೆಲ್‌ಗಳನ್ನು ಪ್ರತಿ ತಿಂಗಳು ಕೇವಲ 400 ರೂಪಾಯಿಗಳಿಗೆ ನೀಡಲಿದೆ.

Jio Fi ಬಳಸಿ 2G ಮತ್ತು 3G ಗ್ರಾಹಕರು ಕಾಲ್ ಮಾಡುವುದು ಹೇಗೆ?
ಕೇಬಕ್ ಟಿವಿಗೆ ಬ್ರೇಕ್!!

ಕೇಬಕ್ ಟಿವಿಗೆ ಬ್ರೇಕ್!!

ಎಸ್‌ಡಿ (ಸ್ಟ್ಯಾಂಡರ್ಡ್ ಡೆಫಿನಿಶನ್) ಮತ್ತು ಹೆಚ್‌ಡಿ (ಹೈ ಡೆಫಿನಿಶನ್) ಎರಡೂ ರೂಪದ ಚಾನೆಲ್‌ಗಳನ್ನು ಪ್ರತಿ ತಿಂಗಳು ಕೇವಲ 400 ರೂ.ಗೆ ನೀಡಲು ಜಿಯೋ ಮುಂದಾಗಿರುವುದು ಕೇಬಲ್ ಟಿವಿಗೆ ದೊಡ್ಡ ಹೊಡೆತ ನೀಡುವುದು ಪಕ್ಕಾ ಆಗಿದೆ. ಜಿಯೋ ಹೋಮ್ ಟಿವಿಯಿಂದ ಕೇವಲ 200 ರೂಪಾಯಿಗಳಿಗೆ ಎಲ್ಲರಿಗೂ ಟಿವಿ ಸೌಲಭ್ಯವಂತೂ ದೊರೆಯುತ್ತದೆ .!

ಜಿಯೋ ಹೋಮ್ ಟಿವಿ ಬಿಡುಗಡೆ?

ಜಿಯೋ ಹೋಮ್ ಟಿವಿ ಬಿಡುಗಡೆ?

ಮೊದಲೇ ಹೇಳಿದಂತೆ ಜಿಯೋ ಹೋಮ್ ಟಿವಿ ಬಗ್ಗೆ ಈ ವರೆಗೂ ಯಾವುದೇ ಸ್ಪಷ್ಟವಾದ ಮಾಹಿತಿಯನ್ನು ಜಿಯೋ ನೀಡಿಲ್ಲ. ಆದರೆ, ಜಿಯೊದಿಂದ ಸ್ಪಷ್ಟವಾದ ದೃಢೀಕರಣ ರಿಲಯನ್ಸ್ ಇಂಡಸ್ಟ್ರೀಸ್‌ನ ಮೂರನೇ ತ್ರೈಮಾಸಿಕ ವರದಿಯ ಮೂಲಕ ಬರುತ್ತದೆ ಎಂದು ಮಾಧ್ಯಮವರದಿಗಳಿಂದ ತಿಳಿದುಬಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Jio Home TV, if rumours are to be believed, is set to be the telecom giant's next big project that will reportedly offer a fresh change in the Indian Direct-to-Home (DTH) space. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot