Subscribe to Gizbot

ಎಲ್‌ಜಿಯ ಹೊಸ ಜಿ ವಾಚ್ ವೀಡಿಯೋವನ್ನು ನೋಡಿರುವಿರಾ?

Posted By:

ಎಲ್‌ಜಿ ಹೊಸ ಜಿ ವಾಚ್ ಪ್ರಚಾರ ವೀಡಿಯೋವನ್ನು ಬಿಡುಗಡೆ ಮಾಡಿದ್ದು ಇದು ಸೂಪರ್ ವೈಶಿಷ್ಟ್ಯಗಳನ್ನು ಹೊಂದಿ ಹೆಚ್ಚು ಚರ್ಚಿತವಾಗಿದೆ. ಇದರಲ್ಲಿ ಹಿನ್ನಲೆ ಸಂಗೀತವಿದ್ದು, ಹಾಗೂ ಆಂಡ್ರಾಯ್ಡ್ ಬೆಂಬಲವನ್ನು ಒದಗಿಸಲಿದೆ.

ನೀರನ್ನು ತಡೆಹಿಡಿಯುವ ಸಾಮರ್ಥ್ಯ ವಾಚ್‌ಗಿದ್ದು ಇದು ಏಕ ಚಾರ್ಜರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಮೆಟಲ್ ವಿನ್ಯಾಸವನ್ನು ಹೊಂದಿರುವ ಜಿ ವಾಚ್‌ಗಳು ತನ್ನ ಬಳಕೆದಾರರಿಗೆ ಸೂಕ್ತವಾಗಿರುವಂತೆ ರಚನೆಯನ್ನು ಹೊಂದಿದೆ.

ಎಲ್‌ಜಿಯ ಹೊಸ ಜಿ ವಾಚ್ ವೀಡಿಯೋವನ್ನು ನೋಡಿರುವಿರಾ?

ಇಷ್ಟಲ್ಲದೆ ಈ ಸೌತ್ ಕೊರಿಯಾ ಕಂಪೆನಿ ಮೂರು ಹೊಸ ಟ್ಯಾಬ್ಲೇಟ್‌ಗಳನ್ನು ಹೊರತಂದಿದ್ದು ಜಿ ಪ್ಯಾಡ್ 7.0, ಜಿ ಪ್ಯಾಡ್ 8.0, ಜಿ ಪ್ಯಾಡ್ 10.1 ಎಂದು ಹೆಸರಿಸಿದೆ. ಸ್ಮಾರ್ಟ್‌ಫೋನ್‌ನಂತೆ ಟ್ಯಾಬ್ಲೆಟ್‌ಗಳು ಒಂದೇ ಗಾತ್ರದಲ್ಲಿರುವುದಿಲ್ಲ ಎಂದು ಎಲ್‌ಜಿ ಇಲೆಕ್ಟ್ರಾನಿಕ್ಸ್‌ನ ಸಿಇಒ ಜಾಂಗ್ - ಸಾಕ್ ಪಾರ್ಕ್ ತಿಳಿಸಿದ್ದಾರೆ. ಈ ಹೊಸ ಡಿವೈಸ್‌ಗಳು ತಮ್ಮ ಗಾತ್ರಕ್ಕನುಗುಣವಾಗಿ ಕಾರ್ಯನಿರ್ವಹಿಸಲಿದ್ದು ಕ್ಯೂ ಪೇರ್ 2.0 ಹಾಗೂ ನಾಕ್‌ ಕೋಡ್‌ನೊಂದಿಗೆ ಗಮನ ಸೆಳೆದಿದೆ.

ಕ್ಯೂ ಪೇರ್ 2.0 ಕ್ಯೂ ಪೇರ್‌ನ ನವೀಕೃತ ಆವೃತಿಯಾಗಿದ್ದು ಟ್ಯಾಬ್ಲೇಟ್ಸ್ ಹಾಗೂ ಸ್ಮಾರ್ಟ್‌ಫೋನ್‌ ನಡುವಣ ಅಧಿಸೂಚನೆಗಳನ್ನು ಇದು ಸಿಂಕ್ ಮಾಡುತ್ತದೆ. ನಾಕ್ ಕೋಡ್ ಮೂಲಕ ಬಳಕೆದಾರರು ಪ್ಯಾಟ್ರನ್ ಅಥವಾ ಟ್ಯಾಪ್ ಬಳಸಿ ತಮ್ಮ ಫೋನ್‌ ಅನ್ನು ಸುರಕ್ಷಿತವಾಗಿರಿಸಬಹುದು. ಮುಂಬರುವ ದಿನಗಳಲ್ಲಿ ಇದರ ಬೆಲೆ ಹಾಗೂ ಇನ್ನಷ್ಟು ಮಾಹಿತಿಗಳು ದೊರೆಯಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot