ಮೀಡಿಯಾಟೆಕ್‌ನಿಂದ ಹೊಸ ಪ್ರೊಸೆಸರ್‌ ಲಾಂಚ್‌!..ವೇಗದ ಡೌನ್‌ಲೋಡ್‌ ಸಾಮರ್ಥ್ಯ!

|

ಜನಪ್ರಿಯ ಪ್ರೊಸೆಸರ್‌ ತಯಾರಕ ಕಂಪೆನಿ ಮೀಡಿಯಾಟೆಕ್‌ ಇದೀಗ ಮತ್ತೊಂದು ಹೊಸ ಪ್ರೊಸೆಸರ್‌ ಬಿಡುಗಡೆ ಮಾಡಿದೆ. ಇದು 5G ಸ್ಮಾರ್ಟ್‌ಫೋನ್‌ಗಳಿಗೆ ಬೆಂಬಲವನ್ನು ನೀಡಲಿದ್ದು, ಮೀಡಿಯಾಟೆಕ್‌ T800 ಚಿಪ್‌ಸೆಟ್ ಎಂದು ಹೆಸರಿಸಲಾಗಿದೆ. ಇನ್ನು ಈ ಪ್ರೊಸೆಸರ್‌ ಇಂಡಸ್ಟ್ರಿಯಲ್ IoT, M2M, ಮತ್ತು ಆಲ್‌ವೇಸ್‌-ಕನೆಕ್ಟೆಡ್‌ PC ಗಳಂತಹ ನವೀನ 5G ಸ್ಮಾರ್ಟ್‌ಫೋನ್ ಮೀರಿದ ಅಪ್ಲಿಕೇಶನ್‌ಗಳನ್ನು ರನ್‌ ಮಾಡಲಿದೆ ಎಂದು ಹೇಳಲಾಗಿದೆ.

ಮೀಡಿಯಾಟೆಕ್‌

ಹೌದು, ಮೀಡಿಯಾಟೆಕ್‌ ಕಂಪೆನಿ ಹೊಸ 5G ಪ್ರೊಸೆಸರ್‌ ಅನ್ನು ಪರಿಚಯಿಸಿದೆ. ಇದು ಬಳಕೆದಾರರು ಎಲ್ಲೇ ಇದ್ದರೂ ಹೆಚ್ಚಿನ ವೇಗದ, ಕಡಿಮೆ-ಸುಪ್ತತೆಯ 5G ಅನ್ನು ಬಳಸುವುದಕ್ಕೆ ಅನುಮತಿಸಲಿದೆ. ಜೊತೆಗೆ ಟ್ರೂಲಿ ಕಂಪ್ಯೂಟಿಂಗ್ ಫ್ರಿಡಂ ಅನ್ನು ನೀಡಲಿದೆ ಎಂದು ಮೀಡಿಯಾಟೆಕ್‌ ಕಾರ್ಪೊರೇಟ್ ಉಪಾಧ್ಯಕ್ಷರಾದ JC Hsu ಹೇಳಿದ್ದಾರೆ. ಅಲ್ಲದೆ ಈ ಪ್ರೊಸೆಸರ್‌ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಅವಧಿಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ. ಹಾಗಾದ್ರೆ ಹೊಸ ಪ್ರೊಸೆಸರ್‌ನ ವಿಶೇಷತೆ ಏನು? ಇದರ ಕಾರ್ಯದಕ್ಷತೆ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪ್ರೊಸೆಸರ್‌

ಮೀಡಿಯಾಟೆಕ್‌ T800 ಸಲ್ಯೂಶನ್‌ ಪ್ರೊಸೆಸರ್‌ 7.9Gbps ​​ವರೆಗಿನ ಡೌನ್‌ಲೋಡ್ ಸ್ಪೀಡ್‌ ಅನ್ನು ಬೆಂಬಲಿಸಲಿದೆ. ಇದು 5G ಅಲ್ಟ್ರಾಸೇವ್ ಪವರ್-ದಕ್ಷತೆಯ ಟೆಕ್ನಾಲಜಿಯನ್ನು ಎಲ್ಲಾ 5G ಕನೆಕ್ಟೆಡ್‌ ಸಲ್ಯೂ‍ಶನ್‌ಗಳಿಗೆ ಬ್ಯಾಟರಿ ಅವಧಿಯನ್ನು ಹೆಚ್ಚಿಸಲಿದೆ. ಅಲ್ಲದೆ ಈ ಪ್ರೊಸೆಸರ್‌ ಬಳಕೆದಾರರಿಗೆ ಬ್ರೌಸ್ ಮಾಡಲು, ಸ್ಟ್ರೀಮ್ ಮಾಡಲು ಮತ್ತು ಗೇಮಿಂಗ್‌ ಅನ್ನು ಹೆಚ್ಚಿನ ಸಮಯ ಆಡುವುದಕ್ಕೆ ಅನುಮತಿಸಲಿದೆ.

ಪ್ರೊಸೆಸರ್‌

ಇದಲ್ಲದೆ ಈ ಪ್ರೊಸೆಸರ್‌ 3GPP ರಿಲೀಸ್‌-16 5G ಸೆಲ್ಯುಲಾರ್ ಮೋಡೆಮ್, FR1 ಟ್ರಾನ್ಸ್‌ಸಿವರ್‌ಗಳು, ಎನ್ವಲಪ್ ಟ್ರ್ಯಾಕಿಂಗ್ (ET) ಚಿಪ್, MLNA, GNSS ರಿಸೀವರ್ ಮತ್ತು ಸಂಬಂಧಿತ PMICಗಳೊಂದಿಗೆ ತೆಳುವಾದ ಮೋಡೆಮ್ ಅನ್ನು ಒಳಗೊಂಡಿದೆ. ಇದರಲ್ಲಿ ತೆಳುವಾದ ಮೋಡೆಮ್ ಅನ್ನು ಅಪ್‌ಗ್ರೇಡ್‌ 4nm ಪ್ರೊಸೆಸ್‌ ನೋಡ್‌ನಲ್ಲಿ ಬಿಲ್ಟ್‌ ಮಾಡಲಾಗಿದೆ. ಅಲ್ಲದೆ PCIe + USB ಹೋಸ್ಟ್ ಇಂಟರ್‌ಫೇಸ್‌ಗಳು ಮತ್ತು ಇತರ ಇನ್‌ಪುಟ್ ಆಯ್ಕೆಗಳನ್ನು ಕೂಡ ಸಂಯೋಜಿಸಲಿದೆ.

ಪ್ರೊಸೆಸರ್‌

ಈ ಪ್ರೊಸೆಸರ್‌ ಸ್ವತಂತ್ರ (SA) ಮತ್ತು ನಾನ್-ಸ್ಟಾಂಡಲೋನ್ (NSA) ಉಪ-6GHz ಮತ್ತು mmWave 5G ಎರಡನ್ನೂ ಕೂಡ ಬೆಂಬಲಿಸುತ್ತದೆ. ಇದರಿಂದ ಭಾರತದಲ್ಲಿ ಹೊಸ 5G ನೆಟ್‌ವರ್ಕ್‌ಗೆ ಇದು ಸೂಕ್ತವಾಗಿದೆ. ಜೊತೆಗೆ ಮಿಕ್ಸೆಡ್ ಡ್ಯುಪ್ಲೆಕ್ಸ್ FDD/TDD ಡ್ಯುಯಲ್ 5G SIM (DSDS) ಅನ್ನು ಸಾಧನ ತಯಾರಕರ ಅಗತ್ಯತೆಗಳ ಆಧಾರದ ಮೇಲೆ ಬೆಂಬಲಿಸಲಿದೆ. ಈ ಪ್ರೊಸೆಸರ್‌ ಒಳಗೊಂಡ ಸ್ಮಾರ್ಟ್‌ಫೋನ್‌ಗಳು ಭಾರತದ 5G ನೆಟ್‌ವರ್ಕ್‌ಗೆ ಸೂಕ್ತ ಎನಿಸಲಿದೆ.

ಮೀಡಿಯಾಟೆಕ್‌

ಇನ್ನು ಇದೇ ವರ್ಷ ಮೀಡಿಯಾಟೆಕ್‌ ಕಂಪೆನಿ ಹೊಸ ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಪ್ರೊಸೆಸರ್‌ ಪರಿಚಯಿಸಿತ್ತು. ಈ ಪ್ರೊಸೆಸರ್‌ ಕೂಡ 5G ಸಂಪರ್ಕವನ್ನು ಬೆಂಬಲಿಸಲಿದೆ. ಈ ಪ್ರೊಸೆಸರ್‌ ಅನ್ನು TSMC ಯ 6nm ಪ್ರಕ್ರಿಯೆಯನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಇದು ನಾಲ್ಕು ಆರ್ಮ್ ಕಾರ್ಟೆಕ್ಸ್-A78 ಪ್ರೊಸೆಸರ್‌ಗಳನ್ನು ಒಳಗೊಂಡಿದೆ. ಅಲ್ಲದೆ ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಪ್ರೊಸೆಸರ್ 3GHz ವರೆಗೆ ಕಾರ್ಯನಿರ್ವಹಿಸುವ 'ಅಲ್ಟ್ರಾ-ಕೋರ್', 2GHz ವರೆಗಿನ ಆಪರೇಟಿಂಗ್ ಫ್ರಿಕ್ವೆನ್ಸಿಯೊಂದಿಗೆ ಆರ್ಮ್ ಕಾರ್ಟೆಕ್ಸ್-A55 ಪ್ರೊಸೆಸರ್‌ ಹೊಂದಿದೆ.

ಕೋರ್‌ಗಳು

ಇದರಲ್ಲಿ ನಾಲ್ಕು ದಕ್ಷತೆಯ ಕೋರ್‌ಗಳು ಮತ್ತು 9-ಕೋರ್ ಆರ್ಮ್ ಮಾಲಿ GPUಯನ್ನು ಒಳಗೊಂಡಿದೆ. ನೀವು ಈ ಪ್ರೊಸೆಸರ್‌ ಅನ್ನು 16GB ವರೆಗೆ 4266Mbps LPDDR4x RAM ಮತ್ತು UFS 3.1 ಪ್ರಕಾರದ ಸ್ಟೋರೇಜ್‌ನೊಂದಿಗೆ ಜೋಡಿಸಬಹುದು. ಈ ಪ್ರೊಸೆಸರ್‌ ಮೀಡಿಯಾಟೆಕ್‌ ಹೈಪರ್‌ ಇಂಜಿನ್‌ 5.0 ನಿಂದ ಬೆಂಬಲಿತವಾಗಿದೆ. ಇನ್ನು ಗೇಮಿಂಗ್-ಸಂಬಂಧಿತ ಆಪ್ಟಿಮೈಸೇಶನ್‌ಗಳಂತಹ ವಿಶೇಷವಾದ AI-VRS, Wi-Fi ಮತ್ತು ಬ್ಲೂಟೂತ್ ಹೈಬ್ರಿಡ್ 2.0, ಜೊತೆಗೆ ಬ್ಲೂಟೂತ್‌ LE Audio ಟೆಕ್ನಾಲಜಿ ಹೊಂದಿದೆ.

Best Mobiles in India

English summary
MediaTek has launched the new T800 chipset solution

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X