ಪ್ರವಾಸಕ್ಕೆ ಹೋಗುವ ಮುನ್ನ ಚಾರ್ಜರ್‌ ಮರೆಯಬೇಡಿ..! ಚಾರ್ಜರ್‌ ಮೂಲಕವೂ ಹ್ಯಾಕಿಂಗ್‌..!

By Gizbot Bureau
|

ಮುಂದಿನ ಬಾರಿ ನೀವು ವಿದೇಶಕ್ಕೆ ಪ್ರವಾಸಕ್ಕಾಗಿ ಬ್ಯಾಗ್‌ಗಳನ್ನು ಪ್ಯಾಕ್ ಮಾಡುವಾಗ, ಸ್ಮಾರ್ಟ್‌ಫೋನ್‌ ಮತ್ತಿತರ ಸಾಧನಗಳಿಗಾಗಿ ಹೆಚ್ಚುವರಿ ಪವರ್ ಬ್ಯಾಂಕ್‌ ಮತ್ತು ಚಾರ್ಜಿಂಗ್‌ ಅಡಾಪ್ಟರ್‌ಗಳನ್ನು ಪ್ಯಾಕ್‌ ಮಾಡುವುದನ್ನು ಮರೆಯಬೇಡಿ. ಆದರೆ, ನಾವೀಗ ಮಾತನಾಡುತ್ತಿರುವುದು ನಿಮ್ಮ ಸ್ಮಾರ್ಟ್‌ಫೋಣ್‌ ಸ್ವಿಚ್‌ಆಫ್‌ ಅಗುತ್ತೆ ಎಂಬ ಭಯದಲ್ಲಿ ಅಲ್ಲ. ಬದಲಾಗಿ, ವಿಮಾನ ನಿಲ್ದಾಣ, ಹೊಟೇಲ್‌, ಬಸ್ ನಿಲ್ದಾಣ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಕಂಡುಬರುವ ಸಾರ್ವಜನಿಕ ಯುಎಸ್‌ಬಿ ಚಾರ್ಜಿಂಗ್ ಕೇಂದ್ರಗಳಲ್ಲಿ ನಿಮ್ಮ ಸಾಧನ ಚಾರ್ಜ್‌ ಮಾಡುವ ಬಗ್ಗೆ ಆತಂಕದಲ್ಲಿ.

ಹೌದು, ನಿಮ್ಮ ಸ್ಮಾರ್ಟ್‌ಫೋನ್ ಚಾರ್ಜ್ ಮಾಡಲು ನೀವು ಯಾವಾಗಲೂ ಕಂಪನಿಯ ಅಡಾಪ್ಟರ್ ಮತ್ತು ಯುಎಸ್‌ಬಿ ಕೇಬಲ್‌ ಬಳಸಿ. ಏಕೆಂದರೆ, ಇದರಿಂದ ಜ್ಯೂಸ್ ಜಾಕಿಂಗ್‌ ಅಥವಾ ಯುಎಸ್‌ಬಿ ಚಾರ್ಜಿಂಗ್ ಹಗರಣ ನಡೆಯಬಹುದು.

ಮಾಲ್‌ವೇರ್‌ ಇನ್‌ಸ್ಟಾಲ್‌

ಮಾಲ್‌ವೇರ್‌ ಇನ್‌ಸ್ಟಾಲ್‌

ಹ್ಯಾಕರ್‌ಗಳು ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳಲ್ಲಿ ಮಾಲ್‌ವೇರ್‌ನ್ನು ಸ್ಥಾಪಿಸಿರುತ್ತಾರೆ. ಯಾರಾದರೂ ಫೋನ್ ಅನ್ನು ಚಾರ್ಜ್ ಮಾಡಲು ಪ್ಲಗ್ ೦ಮಾಡಿದಾಗ, ransomware ಇನ್‌ಸ್ಟಾಲ್‌ ಮಾಡಬಹುದಾಗಿದ್ದು, ಪಾಸ್‌ವರ್ಡ್‌ಗಳು ಸೇರಿ ವೈಯಕ್ತಿಕ ಮಾಹಿತಿಯನ್ನು ಕದಿಯುವ ಸಾಧ್ಯತೆ ದಟ್ಟವಾಗಿದೆ.

ಜ್ಯೂಸ್‌ ಜಾಕಿಂಗ್‌

ಜ್ಯೂಸ್‌ ಜಾಕಿಂಗ್‌

ಪ್ರಯಾಣಿಕರು ವಿಮಾನ ನಿಲ್ದಾಣ, ಹೊಟೇಲ್‌ ಮತ್ತು ಇತರ ಸ್ಥಳಗಳಲ್ಲಿ ಸಾರ್ವಜನಿಕ ಯುಎಸ್‌ಬಿ ಪವರ್ ಚಾರ್ಜಿಂಗ್ ಕೇಂದ್ರಗಳನ್ನು ಬಳಕೆ ಮಾಡುವುದನ್ನು ನಿಲ್ಲಿಸಬೇಕು. ಏಕೆಂದರೆ, ಅವುಗಳು ಅಪಾಯಕಾರಿ ಮಾಲ್‌ವೇರ್ ಹೊಂದಿರಬಹುದು. ಯುಎಸ್‌ಬಿ ಚಾರ್ಜರ್ ಹಗರಣದಲ್ಲಿ, ಇದನ್ನು ಸಾಮಾನ್ಯವಾಗಿ "ಜ್ಯೂಸ್ ಜಾಕಿಂಗ್" ಎಂದು ಕರೆಯಲಾಗುತ್ತದೆ.

ಸುಲಭ ಹ್ಯಾಕಿಂಗ್‌

ಸುಲಭ ಹ್ಯಾಕಿಂಗ್‌

ಅಪರಾಧಿಗಳು ಮಾಲ್‌ವೇರ್‌ನ್ನು ಚಾರ್ಜಿಂಗ್ ಕೇಂದ್ರಗಳು ಅಥವಾ ಕೇಬಲ್‌ಗಳಲ್ಲಿ ಲೋಡ್ ಮಾಡಿ ನಿಲ್ದಾಣಗಳಲ್ಲಿ ಪ್ಲಗ್ ಇನ್ ಮಾಡುತ್ತಾರೆ. ಇದರಿಂದಾಗಿ ಹ್ಯಾಕರ್‌ಗಳು ಸ್ಮಾರ್ಟ್‌ಫೋನ್‌ಗಳು ಅಥವಾ ಮತ್ತು ಅನುಮಾನಾಸ್ಪದ ಬಳಕೆದಾರರ ಇತರ ಎಲೆಕ್ಟ್ರಾನಿಕ್ ಸಾಧನಗಳಿಗೆ ವೈರಸ್‌ ತಗುಲಿಸಬಹುದು. ಮಾಲ್‌ವೇರ್ ಸಾಧನವನ್ನು ಲಾಕ್ ಮಾಡಬಹುದು ಅಥವಾ ಡೇಟಾ ಮತ್ತು ಪಾಸ್‌ವರ್ಡ್‌ಗಳನ್ನು ನೇರವಾಗಿ ಹ್ಯಾಕರ್‌ಗೆ ರಫ್ತು ಮಾಡಬಹುದು ಎಂದು ಲಾಸ್ ಏಂಜಲೀಸ್ ಕೌಂಟಿ ಡಿಸ್ಟ್ರಿಕ್ಟ್ ಅಟಾರ್ನಿ ಕಚೇರಿ ಹೇಳಿದೆ.

ಸಾರ್ವಜನಿಕ ಜಾಗದಲ್ಲಿ ಚಾರ್ಜಿಂಗ್‌ ಬೇಡ

ಸಾರ್ವಜನಿಕ ಜಾಗದಲ್ಲಿ ಚಾರ್ಜಿಂಗ್‌ ಬೇಡ

ಚಾರ್ಜರ್ ತರಲು ಮರೆತವರ ಗಮನ ಸೆಳೆಯಲು ಸ್ಕ್ಯಾಮರ್‌ಗಳು ಸಾರ್ವಜನಿಕ ನಿಲ್ದಾಣಗಳಲ್ಲಿ ಚಾರ್ಜಿಂಗ್ ಕೇಬಲ್ ಅನ್ನು ನೇತುಹಾಕಿರುತ್ತಾರೆ. ಆದ್ದರಿಂದ, ಕೇಬಲ್ ಹೊಂದಿರುವ ಯಾವುದೇ ಚಾರ್ಜಿಂಗ್ ಪೋರ್ಟ್ ನಿಮಗೆ ಕಂಡರೆ ನಿಮ್ಮ ಫೋನ್ ಪ್ಲಗ್ ಮಾಡಬೇಡಿ ಎಂದು ಸೂಚಿಸಲಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಯುಎಸ್‌ಬಿ ಚಾರ್ಜರ್ ಹಗರಣವು ransomware ದಾಳಿಗೆ ಕಾರಣವಾಗುತ್ತದೆ.

ಹಣ ಗಳಿಸಲು ಈ ದಾರಿ

ಹಣ ಗಳಿಸಲು ಈ ದಾರಿ

ಜ್ಯೂಸ್‌ ಜಾಕಿಂಗ್‌ ಮೂಲಕ ನಿಮ್ಮ ಫೋನ್‌ನ್ನು ಲಾಕ್ ಮಾಡಲಾಗತ್ತದೆ. ಮತ್ತು ಅನ್‌ಲಾಕ್ ಮಾಡಲು ಶುಲ್ಕ ಪಾವತಿಸಬೇಕಾಗುತ್ತದೆ. ಇಲ್ಲದಿದ್ದರೆ ನೀವು ಫೋನ್‌ನ್ನು ಬಳಸಲಾಗುವುದಿಲ್ಲ. ಆ ಶುಲ್ಕ ಕೆಲವೊಮ್ಮೆ ಸಾಕಷ್ಟು ಹೆಚ್ಚಾಗಬಹುದು. ಅದಲ್ಲದೇ, ನೀವು ಶುಲ್ಕ ಪಾವತಿಸಿದ ನಂತರವೂ ನಿಮ್ಮ ಫೋನ್‌ನ್ನು ಸ್ಪ್ಯಾಮರ್‌ಗಳು ಅನ್‌ಲಾಕ್ ಮಾಡುತ್ತಾರೆ ಎಂಬ ಭರವಸೆ ಸಿಗಲ್ಲ.

Best Mobiles in India

Read more about:
English summary
Never Make This Smartphone Mistake While Travelling

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X