ನೋಕಿಯಾ 2780 ಫ್ಲಿಪ್ ಫೋನ್‌ ಬಿಡುಗಡೆ! ಆಕರ್ಷಕ ಎನಿಸುವ ಫೀಚರ್ಸ್‌!

|

ಮೊಬೈಲ್‌ ಮಾರುಕಟ್ಟೆಯಲ್ಲಿ ನೋಕಿಯಾ ಕಂಪೆನಿಯ ಫೀಚರ್‌ ಫೋನ್‌ಗಳಿಗೆ ಭಾರಿ ಬೇಡಿಕೆಯಿದೆ. ಸ್ಮಾರ್ಟ್‌ಫೋನ್‌ಗಳ ಅಬ್ಬರದ ನಡುವೆಯೂ ನೋಕಿಯಾ ಫೀಚರ್‌ ಫೋನ್‌ಗಳು ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡಿವೆ. ಅದರ ಮುಂದುವರೆದ ಭಾಗವಾಗಿ ಇದೀಗ ನೋಕಿಯಾ ಕಂಪೆನಿ ಹೊಸ ನೋಕಿಯಾ 2780 ಫ್ಲಿಪ್ ಫೀಚರ್‌ ಫೋನ್ ಬಿಡುಗಡೆ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಎಂಟ್ರಿ ನೀಡಿರುವ ಈ ಫೋನ್‌ ಕ್ವಾಲ್ಕಾಮ್ 215 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ನೋಕಿಯಾ

ಹೌದು, ನೋಕಿಯಾ ಕಂಪೆನಿ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ನೋಕಿಯಾ 2780 ಫ್ಲಿಪ್ ಫೋನ್‌ ಪರಿಚಯಿಸಿದೆ. ಈ ಫೋನ್‌ ಫ್ಲಿಪ್‌ ಫೋನ್‌ ಆಗಿದ್ದು, ಕ್ಲಾಮ್‌ಶೆಲ್ ವಿನ್ಯಾಸ ಮತ್ತು T9 ಕೀಬೋರ್ಡ್ ಅನ್ನು ಹೊಂದಿದೆ. ಇದನ್ನು ದೈನಂದಿನ ಬಳಕೆಯ ಸಮಯದಲ್ಲಿ ಉಬ್ಬುಗಳು ಮತ್ತು ನಾಕ್‌ಗಳನ್ನು ಮೀರಿಸುವಂತೆ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಈ ಫೀಚರ್‌ ಫೋನ್‌ 1,450mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಫೀಚರ್‌ ಫೋನ್‌ ಏನೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ನೋಕಿಯಾ 2780 ಫ್ಲಿಪ್ ಫೋನ್‌

ನೋಕಿಯಾ 2780 ಫ್ಲಿಪ್ ಫೋನ್‌ 2.7 ಇಂಚಿನ TFT ಡಿಸ್‌ಪ್ಲೇಯನ್ನು ಹೊಂದಿದೆ. ಇದರ ಹೊರಭಾಗದಲ್ಲಿ 1.77 ಇಂಚಿನ ಸೆಕೆಂಡರಿ ಡಿಸ್‌ಪ್ಲೇಯನ್ನು ಸಹ ನೀಡಲಾಗಿದೆ. ಸೆಕೆಂಡರಿ ಡಿಸ್‌ಪ್ಲೇಯಲ್ಲಿ ನೀವು ಟೈಂ, ಕಾಲರ್‌ ಐಡಿ ಮತ್ತು ನ್ಯೂ ಅಪ್ಡೇಟ್‌ಗಳನ್ನು ನೋಡಲು ಸಾಧ್ಯವಾಗಲಿದೆ. ಇನ್ನು ಈ ಫ್ಲಿಪ್ ಫೋನ್ ಕ್ಲಾಮ್‌ಶೆಲ್ ವಿನ್ಯಾಸ ಮತ್ತು T9 ಕೀಬೋರ್ಡ್ ಅನ್ನು ಹೊಂದಿದೆ. ಇದು ದೈನಂದಿನ ಬಳಕೆಯ ಸಮಯದಲ್ಲಿ ಉಬ್ಬುಗಳು ಮತ್ತು ನಾಕ್‌ಗಳನ್ನು ಮೀರಿಸುವ ವಿನ್ಯಾಸವನ್ನು ಪಡೆದುಕೊಂಡಿದೆ.

ವೇಗವನ್ನು

ನೋಕಿಯಾ 2780 ಫ್ಲಿಪ್ ಫೋನ್‌ ಕ್ವಾಲ್ಕಾಮ್ 215 ಪ್ರೊಸೆಸರ್‌ ವೇಗವನ್ನು ಪಡೆದಿದ್ದು, KaiOS 3.1 ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 1.3 GHz ನಲ್ಲಿ ಚಾಲನೆಯಲ್ಲಿರುವ ಕ್ವಾಡ್-ಕೋರ್ CPU ಮತ್ತು 150 Mbps ಗರಿಷ್ಠ ಡೌನ್‌ಲಿಂಕ್ ವೇಗದೊಂದಿಗೆ X5 LTE ಮೋಡೆಮ್ ಅನ್ನು ಒಳಗೊಂಡಿರುತ್ತದೆ. ಹಾಗೆಯೇ 4GB RAM ಮತ್ತು 512MB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದಲ್ಲದೆ ಸೆಕೆಂಡರಿ ಸ್ಕ್ರೀನ್‌ ಮೇಲೆ ಎಲ್‌ಇಡಿ ಫ್ಲ್ಯಾಷ್‌ ಒಳಗೊಂಡಿರುವ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾವನ್ನು ಕೂಡ ನೀಡಲಾಗಿದೆ.

ನೋಕಿಯಾ

ನೋಕಿಯಾ 2780 ಫ್ಲಿಪ್ ಫೋನ್‌ 1,450mAh ಸಾಮರ್ಥ್ಯದ ರಿಮೂವಬಲ್‌ ಬ್ಯಾಟರಿಯನ್ನು ಒಳಗೊಂಡಿದೆ. ಇದು ಶ್ರವಣ ಸಹಾಯದ ಹೊಂದಾಣಿಕೆ ಮತ್ತು ಕರೆಗಳಲ್ಲಿ ಸಂದೇಶಗಳನ್ನು ಕಳುಹಿಸಲು ಅನುಮತಿಸುವ ರಿಯಲ್‌ ಟೈಂ ಟೆಕ್ಸ್ಟ್‌ನಂತಹ ಫೀಚರ್ಸ್‌ಗಳನ್ನು ನೀಡುತ್ತಾ ಬಂದಿದೆ. ಗೂಗಲ್ ಮ್ಯಾಪ್‌, ಯೂಟ್ಯೂಬ್ ಮತ್ತು ವೆಬ್ ಬ್ರೌಸರ್ ಕೂಡ ಒಳಗೊಂಡಿದೆ. ಇನ್ನು ಈ ಫೀಚರ್ಸ್‌ ಫೋನ್‌ ವೈಫೈ, MP3 ಮತ್ತು FM ರೇಡಿಯೊ ಬೆಂಬಲದೊಂದಿಗೆ ಬರಲಿದೆ.

ನೋಕಿಯಾ 2780

ನೋಕಿಯಾ 2780 ಫ್ಲಿಪ್ ಫೋನ್‌ ಕನೆಕ್ಟಿವಿಟಿ ಆಯ್ಕೆಗಳಲ್ಲಿ FM ರೇಡಿಯೋ ಮತ್ತು ವೈಫೈ 802.11 b/g/n ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ $80 (ಅಂದಾಜು 6,609ರೂ.) ಬೆಲೆಯಲ್ಲಿ ಬರಲಿದೆ. ಇದು ಕೆಂಪು ಮತ್ತು ನೀಲಿ ಬಣ್ಣಗಳ ಆಯ್ಕೆಯಲ್ಲಿ ನೀಡಲಾಗುತ್ತದೆ. ಇದು ಇದೇ ನವೆಂಬರ್ 15 ರಿಂದ US ನಲ್ಲಿ ಮಾರಾಟವಾಗಲಿದೆ.

ನೋಕಿಯಾ

ಇನ್ನು ನೋಕಿಯಾ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ನೋಕಿಯಾ G60 5G ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್‌ 695 5G SoC ಪ್ರೊಸೆಸರ್‌ ವೇಗವನ್ನು ಪಡೆದುಕೊಂಡಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 20W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 2 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ ಎಂದು ಹೇಳಲಾಗಿದೆ.

Best Mobiles in India

English summary
Nokia 2780 Flip With KaiOS 3.1 Launched: Specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X