Subscribe to Gizbot

ಟ್ವೀಟರ್‌ನಲ್ಲಿ ಮೊದಲ ಟ್ವೀಟ್‌‌ ಪತ್ತೆ ಮಾಡಿ

Posted By:

ಟ್ವೀಟರ್‌ನಲ್ಲಿ ನಿಮ್ಮ ಪ್ರಥಮ ಟ್ವೀಟ್‌‌ನ್ನು ಪತ್ತೆ ಮಾಡಬಹುದು.ಪ್ರಥಮ ಟ್ವೀಟ್‌ಗೆ ಎಂಟು ವರ್ಷ‌ವಾಗುತ್ತಿರುವ ಹಿನ್ನೆಲೆಯಲ್ಲಿ ಟ್ವೀಟರ್‌ ತನ್ನ ಬಳಕೆದಾರರ ಪ್ರಥಮ ಟ್ವೀಟ್‌ನ್ನು ಪತ್ತೆಮಾಡಲು ಹೊಸ ಟೂಲ್‌ನ್ನು ತಯಾರಿಸಿದೆ.ಬಳಕೆದಾರರು ಈ ಟೂಲ್‌ ಮೂಲಕ ಪ್ರಥಮ ಟ್ವೀಟ್‌,ಜೊತೆಗೆ ಟ್ವೀಟರ್‌ನಲ್ಲಿರುವ ಇತರ ಸ್ನೇಹಿತರ ಪ್ರಥಮ ಟ್ವೀಟ್‌‌ನ್ನು ಪತ್ತೆ ಮಾಡಬಹುದಾಗಿದೆ.

ಎಂಟು ವರ್ಷದ ಹಿಂದೆ ಮಾರ್ಚ್‌ 22 ರಂದು ಜ್ಯಾಕ್ ಡಾರ್ಸೆ 'just setting up my twttr' ಎಂಬ ಸಂದೇಶವನ್ನು ಟ್ವೀಟರ್‌ನಲ್ಲಿ ಟ್ವೀಟ್ ಮಾಡಿದ್ದರು. ಬಿಜ್ ಸ್ಟೋನ್(@biz),ಇವಾನ್ ವಿಲಿಯಮ್ಸ್(@ev)ಮತ್ತುಜ್ಯಾಕ್ ಡಾರ್ಸೆ (@jack) ಸ್ಥಾಪಿಸಿದ ಟ್ವೀಟರ್‍ ಕಂಪೆನಿ ಇಂದು ಬಿಲಿಯನ್‌ ಡಾಲರ್‌ ವಹಿವಾಟು ನಡೆಸುವ ಕಂಪೆನಿಯಾಗಿ ಬೆಳೆದಿದೆ.

ಕಳೆದ ನವೆಂಬರ್‌ನಲ್ಲಿ ಅಮೆರಿಕದ ಷೇರು ಪೇಟೆಗೆ ಪ್ರವೇಶಿಸಿರುವ ಟ್ವೀಟರ್‌ ಹೂಡಿಕೆದಾರರಿಗೆ ಭರ್ಜರಿ ಲಾಭವನ್ನು ನೀಡಿದೆ. ಭಾರತೀಯ ಮೂಲದ ಹೂಡಿಕೆದಾರ ಸುಹೇಲ್‌ ರಿಜ್ವಿ(Suhail Rizvi) ಟ್ವೀಟರ್‌ ಷೇರುಪೇಟೆಗೆ ಕಾಲಿಟ್ಟ ಒಂದೇ ದಿನದಲ್ಲಿ 3.8 ಬಿಲಿಯನ್‌ ಡಾಲರ್‌(ಅಂದಾಜು 23,500 ಕೋಟಿ)ಗಳಿಸುವ ಮೂಲಕ ಟ್ವೀಟರ್‌ ಬಿಲಿಯನೇರ್‌‌ ಆಗಿ ಹೊರ ಹೊಮ್ಮಿದ್ದಾರೆ. 2011ರಿಂದಲೇ ಹಂತಹಂತವಾಗಿ ಟ್ವೀಟರ್‌ನಲ್ಲಿ ಷೇರುಗಳನ್ನು ಖರೀದಿಸುತ್ತಿದ್ದ ಸುಹೇಲ್‌ ರಿಜ್ವಿ ಈಗ ಶೇ.15ರಷ್ಟು ಟ್ವೀಟರ್‌‌ ಷೇರು ಹೊಂದುವ ಮೂಲಕ ಟ್ವೀಟರ್‌ನ ದೊಡ್ಡ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ.

ಮೈಕ್ರೋಬ್ಲಾಗಿಂಗ್‌ ತಾಣಗಳಲ್ಲಿ ಜನಪ್ರಿಯವಾಗುತ್ತಿರುವ ಟ್ವೀಟರ್‌‌ನಲ್ಲಿ ಹೊಸದಾಗಿ ಟ್ವೀಟರ್‌ ಅಕೌಂಟ್‌ ಕ್ರಿಯೆಟ್‌ ಮಾಡುವ ಬಳಕೆದಾರರಿಗಾಗಿ ಇಲ್ಲಿ ಕೆಲವು ಟ್ವೀಟರ್‌ನಲ್ಲಿ ಬಳಸುವ ಪದಗಳ ಮಾಹಿತಿಯನ್ನು ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

1


ಕನ್ನಡ ಗಿಝ್‌ಬಾಟ್‌ನ ಪ್ರಥಮ ಟ್ವೀಟ್‌

2


ಎಂಟು ವರ್ಷದ ಹಿಂದೆ ಮಾರ್ಚ್‌ 22 ರಂದು ಜ್ಯಾಕ್ ಡಾರ್ಸೆ ಟ್ವೀಟರ್‌ನಲ್ಲಿ ಕಳುಹಿಸಿದ ಸಂದೇಶ.

ಟ್ವೀಟ್‌

ಟ್ವೀಟರ್‌ ಪದ ಪರಿಚಯ

140 ಅಕ್ಷರದ ಮಿತಿಯೊಳಗೆ ಟ್ವೀಟರ್‌ನಲ್ಲಿ ಕಳುಹಿಸುವ ಸಂದೇಶ.

 Follow

ಟ್ವೀಟರ್‌ ಪದ ಪರಿಚಯ


ಟ್ವೀಟರ್‌ನಲ್ಲಿ ಯಾವುದೇ ಅಕೌಂಟ್‌ ಇಷ್ಟಪಟ್ಟರೆ ಅವರ ಅನುಮತಿಯಿಲ್ಲದೇ Follow ಬಟನ್‌ ಕ್ಲಿಕ್‌ ಮಾಡಿ ಫಾಲೋ ಮಾಡಬಹುದು. ಫಾಲೋ ಮಾಡಿದ ಬಳಿಕ ನಿಮ್ಮ ಫೀಡ್‌ನಲ್ಲಿ ಫಾಲೋ ಮಾಡಿರುವ ಅಕೌಂಟ್‌ನ ಟ್ವೀಟ್‌‌ಗಳು ಕಾಣುತ್ತಿರುತ್ತದೆ.

RT

RT


ರೀ ಟ್ವೀಟ್‌‌, ಬೇರೆ ಅಕೌಂಟ್‌ನಿಂದ ಬಂದಿರುವ ಟ್ವೀಟ್‌ನ್ನು ನೇರವಾಗಿ ನಿಮ್ಮ ಫಾಲೋವರ್‌ಗಳಿಗೆ ಶೇರ್‌ ಮಾಡುವ ಟ್ವೀಟ್‌

 DM

ಟ್ವೀಟರ್‌ ಪದ ಪರಿಚಯ


ಡಿಎಂ ಅಥವಾ ಡೈರೆಕ್ಟ್‌ ಮೆಸೇಜ್‌- ಫಾಲೋ ಮಾಡುತ್ತಿರುವ ವ್ಯಕ್ತಿಗೆ ನೇರವಾಗಿ ಕಳುಹಿಸುವ ಮೆಸೇಜ್‌‌.ಈ ಮೆಸೇಜ್‌ ಎಲ್ಲಾ ಫಾಲೋವರ್‌ಗಳಿಗೆ ಶೇ‌ರ್‌ ಅಗುವುದಿಲ್ಲ.

'@'

ಟ್ವೀಟರ್‌ ಪದ ಪರಿಚಯ


ಸಾರ್ವಜನಿಕವಾಗಿ ನಿಮ್ಮ ಟ್ವೀಟ್‌ನ್ನು ನಿಮ್ಮ ಅಕೌಂಟ್‌ನಲ್ಲಿರುವ ಫಾಲೋವರ್‌ಗಳಿಗೆ ಅಥವಾ ಟ್ವೀಟರ್‌ನಲ್ಲಿರುವ ಇತರ ಅಕೌಂಟ್‌ನ ಫಾಲೋವರ್‌ಗಳಿಗೆ ಕಳುಹಿಸುವ ಟ್ವೀಟ್‌. ಈ ಟ್ವೀಟ್‌‌ಗಳನ್ನು ಬಳಕೆದಾರರ ನೋಟಿಫಿಕೇಶನ್‌ನಲ್ಲಿ ನೋಡಬಹುದು.

 #:

ಟ್ವೀಟರ್‌ ಪದ ಪರಿಚಯ


ಯಾವುದೋ ಒಂದು ವಿಚಾರಕ್ಕೆ ಸಂಬಂಧಿಸಿದಂತೆ ಟ್ವೀಟರ್‌ನಲ್ಲಿರುವ ಎಲ್ಲಾ ಬಳಕೆದಾರರಿಗೆ ನಿಮ್ಮ ಟ್ವೀಟ್‌‌ ಕಾಣಲು ಬಳಸುವ ಟ್ಯಾಗ್‌. ಈ ಹ್ಯಾಶ್‌ ಟ್ಯಾಗ್‌ನ ಮೇಲೆ ಕ್ಲಿಕ್‌ ಮಾಡಿದರೆ ಟ್ವೀಟರ್‌ನಲ್ಲಿ ಯಾರೆಲ್ಲಾ ಆ ಟ್ಯಾಗ್‌ನ್ನು ಬಳಸಿದ್ದಾರೆ ಅವರ ಟ್ವೀಟ್‌ಗಳು ನೋಡಬಹುದು.

 Trends:

ಟ್ವೀಟರ್‌ ಪದ ಪರಿಚಯ


ಟ್ವೀಟರ್‌ನಲ್ಲಿ ಬಹುತೇಕ ಜನ ಒಂದೇ ಸಮಯದಲ್ಲಿ ಒಂದೇ ವಿಚಾರಕ್ಕೆ ಸಂಬಂಧಿಸಿದಂತೆ ಹ್ಯಾಶ್‌ ಟ್ಯಾಗ್‌ ಮೂಲಕ ಟ್ವೀಟ್‌ ಮಾಡುತ್ತಿದ್ದರೆ ಆ ವಿಚಾರ ಟ್ರೆಂಡ್‌ ಆಗಿ ಪರಿವರ್ತನೆಯಾಗುತ್ತದೆ. ಈ ಟ್ವೀಟರ್‌ನಲ್ಲಿ ಒಂದು ಪ್ರದೇಶದ ಟ್ರೆಂಡ್‌ ಮಾತ್ರ ಬೇಕಿದ್ದಲ್ಲಿದೇಶ/ ಮಹಾನಗರ ಸೆಟ್‌‌ ಮಾಡಿ ಆ ಪ್ರದೇಶದ ಟ್ರೆಂಡಿಂಗ್‌ ಟ್ವೀಟ್‌ಗಳನ್ನು ವೀಕ್ಷಿಸಬಹುದು.

 Promoted tweet:

ಟ್ವೀಟರ್‌ ಪದ ಪರಿಚಯ

ಟ್ವೀಟರ್‌ ಜಾಹೀರಾತು ರೂಪದಲ್ಲಿ ಬರುವ ಟ್ವೀಟ್‌ಗಳು. ಸ್ವತಃ ಟ್ವೀಟರ್‌ ಕಂಪೆನಿಯೇ ಈ ಟ್ವೀಟ್‌ಗಳನ್ನು ಕಳುಹಿಸುತ್ತಿರುತ್ತದೆ.

 Favorite:

ಟ್ವೀಟರ್‌ ಪದ ಪರಿಚಯ


ಬಳಕೆದಾರರ ಟ್ವೀಟ್‌ ಇಷ್ಟವಾದಲ್ಲಿ ಅದನ್ನು Favorite ಬಟನ್‌ ಒತ್ತುವ ಮೂಲಕ ಶಾಶ್ವತವಾಗಿ ಟ್ವೀಟರ್‌ನ ನಿಮ್ಮ Favorite ವಿಭಾಗದಲ್ಲಿ ಸಂಗ್ರಹಿಸಬಹುದು.

 ಸೋಷಿಯಲ್‌ ಮೀಡಿಯಾ ಭಾಷೆಗಳು

ಸೋಷಿಯಲ್‌ ಮೀಡಿಯಾ ಭಾಷೆಗಳು


IMHO = In my humble opnion.
AYFKMWTS = Are you f---ing kidding me with this s---?
GTFOOH = Get the f--- out of here
OH = Overheard.
NFW = No f---ing way
IRL = In real life
NSFW = Not safe for work.

 ಸೋಷಿಯಲ್‌ ಮೀಡಿಯಾ ಭಾಷೆಗಳು

ಸೋಷಿಯಲ್‌ ಮೀಡಿಯಾ ಭಾಷೆಗಳು

FML = F--- my life.
FWIW = For what it's worth.
QOTD = quote of the day
BTW = By the way
BFN = Bye for now
AFAIK = As far as I know'
TY = Thank you
YW = You're welcome

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot