ಲಾಲಿಪಪ್ ಆವೃತ್ತಿಯುಳ್ಳ ಪ್ಯಾನಸೋನಿಕ್ ಎರಡು ಫೋನ್‌ಗಳು ಮಾರುಕಟ್ಟೆಗೆ

By Shwetha
|

ಪ್ಯಾನಸೋನಿಕ್ ಎಲುಗಾ ಯು, ಎಲುಗಾ ಯು2 ನಂತರದ ಉತ್ಪನ್ನವನ್ನು ತೈವಾನ್ TWD ನಲ್ಲಿ ಲಾಂಚ್ ಮಾಡಿದ್ದು ಇದರ ಬೆಲೆ ರೂ 7,990 ಎಂದು ನಿರ್ಧರಿಸಲಾಗಿದೆ. ಇದರ ಬಿಡುಗಡೆ ಬಗ್ಗೆ ಇನ್ನೂ ಮಾಹಿತಿ ದೊರಕಿಲ್ಲ.

ತೈವಾನ್ ಆನ್‌ಲೈನ್ ಸ್ಟೋರ್‌ನಲ್ಲಿ ಈ ಸ್ಮಾರ್ಟ್‌ಫೋನ್ ಲಭ್ಯವಾಗುತ್ತಿದ್ದು ಪ್ಯಾನಸೋನಿಕ್ ಎಲುಗಾ ಯು2 ಎಂದು ಇದಕ್ಕೆ ನಾಮಕರಣ ಮಾಡಲಾಗಿದೆ. ಫೋನ್ ಸಿಂಗಲ್ ಸಿಮ್ ಹೊಂದಿದ್ದು ಲಾಲಿಪಪ್ 5.0 ಆವೃತ್ತಿಯನ್ನು ಒಳಗೊಂಡಿದೆ. ಇನ್ನು ಎಲುಗಾ 5 ಇಂಚಿನ ಪೂರ್ಣ ಎಚ್‌ಡಿ 720x1280 ಪಿಕ್ಸೆಲ್‌ಗಳೊಂದಿಗೆ ಬಂದಿದ್ದು 64 ಬಿಟ್ ಕ್ವಾಡ್ ಕೋರ್ 1.2GHz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಇದರಲ್ಲಿದೆ ಮತ್ತು ಫೋನ್ 2 ಜಿಬಿ RAM ಅನ್ನು ಒಳಗೊಂಡಿದೆ.

ಲಾಲಿಪಪ್ ಆವೃತ್ತಿಯುಳ್ಳ ಪ್ಯಾನಸೋನಿಕ್ ಎರಡು ಫೋನ್‌ಗಳು ಮಾರುಕಟ್ಟೆಗೆ

ಇನ್ನು ಫೋನ್ ರಿಯರ್ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು ಎಲ್‌ಇಡಿ ಫ್ಲ್ಯಾಶ್ ಅನ್ನು ಒಳಗೊಂಡಿದೆ. ಫೋನ್ ಮುಂಭಾಗ ಕ್ಯಾಮೆರಾ 5 ಮೆಗಾಪಿಕ್ಸೆಲ್ ಆಗಿದ್ದು, ಸಂಗ್ರಹಣಾ ಸಾಮರ್ಥ್ಯ 16 ಜಿಬಿಯಾಗಿದೆ ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದಾಗಿದೆ.

ಲಾಲಿಪಪ್ ಆವೃತ್ತಿಯುಳ್ಳ ಪ್ಯಾನಸೋನಿಕ್ ಎರಡು ಫೋನ್‌ಗಳು ಮಾರುಕಟ್ಟೆಗೆ

ಇನ್ನು ಫೋನ್ ಸಂಪರ್ಕ ವಿಶೇಷತೆಗಳೆಂದರೆ 4ಜಿ ಎಲ್‌ಟಿಇ, ವೈಫೈ, ಬ್ಲ್ಯೂಟೂತ್ ಆಗಿದೆ. ಬ್ಯಾಟರಿ ಸಾಮರ್ಥ್ಯ 2500mAh ಆಗಿದೆ. ಜುಲೈನಲ್ಲಿ ಪ್ಯಾನಸೋನಿಕ್ ಲಾಂಚ್ ಮಾಡಿದ ಎಲುಗಾ ಯು ಬೆಲೆ ರೂ 18,990 ಆಗಿದೆ. ಇದು ಡ್ಯುಯಲ್ ಸಿಮ್ ಅನ್ನು ಹೊಂದಿದ್ದು 5 ಇಂಚಿನ ಐಪಿಎಸ್ ಓಜಿಎಸ್ ಡಿಸ್‌ಪ್ಲೇ, 1.2GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ 2 ಜಿಬಿ RAM ಅನ್ನು ಡಿವೈಸಗ ಹೊಂದಿದೆ. ಇದು ರಿಯರ್ ಕ್ಯಾಮೆರಾ ಆಗಿ 13 ಮೆಗಾಪಿಕ್ಸೆಲ್ ಅನ್ನು ಹೊಂದಿದ್ದು, 2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಒಳಗೊಂಡಿದೆ. ಫೋನ್ ಸಂಗ್ರಹಣಾ ಸಾಮರ್ಥ್ಯ 16 ಜಿಬಿಯಾಗಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದು. ಇನ್ನು ಬ್ಯಾಟರಿ 2500mAh ಆಗಿದೆ.

Best Mobiles in India

English summary
This article tells about Panasonic Eluga U2 With 4G LTE, 64-Bit SoC and Android 5.0 Lollipop Launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X