ಅಕ್ಟೋಬರ್ 1ಕ್ಕೆ ಪ್ರಧಾನಿ ಮೋದಿಯಿಂದ ಭಾರತದಲ್ಲಿ 5G ಸೇವೆ ಬಿಡುಗಡೆ! ವರದಿ

|

ಭಾರತದಲ್ಲಿ 5G ನೆಟ್‌ವರ್ಕ್‌ ಸೇವೆ ಪ್ರಾರಂಭವಾಗುವುದಕ್ಕೆ ದಿನಕ್ಕೆ ಫಿಕ್ಸ್‌ ಆಗಿದೆ. ಇದೇ ಆಕ್ಟೋಬರ್‌ 1 ರಂದು ನಡೆಯುವ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ 5G ಸೇವೆಗಳನ್ನು ಪ್ರಾರಂಭಿಸಲಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಭಾರತದಲ್ಲಿ 5G ನೆಟ್‌ವರ್ಕ್‌ ಹರಾಜು ಪ್ರಕ್ರಿಯೆ ಮುಗಿದಿದ್ದು, ಜಿಯೋ, ಏರ್‌ಟೆಲ್‌, ವಿ ಟೆಲಿಕಾಂಗಳು 5G ನೆಟ್‌ವರ್ಕ್‌ ಪ್ರಾರಂಭಿಸುವುದಕ್ಕೆ ಸಿದ್ಧತೆ ನಡೆಸಿವೆ.

ಆಕ್ಟೋಬರ್‌

ಹೌದು, ಆಕ್ಟೋಬರ್‌ 1, 2022 ರಂದು ಪ್ರಧಾನಿ ಮೋದಿ ಭಾರತದಲ್ಲಿ 5G ಸೇವೆಯನ್ನು ಲಾಂಚ್‌ ಮಾಡಲಿದ್ದಾರೆ ಎಂದು ವರದಿಯಾಗಿದೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾರತದ 5G ಸೇವೆ ಲಾಂಚ್‌ ಆಗಲಿದೆ ಎಂದು ಈಗಾಗಲೇ ವರದಿಯಾಗಿದೆ. ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಪ್ರದರ್ಶನ ಎಂದು ರಾಷ್ಟ್ರೀಯ ಬ್ರಾಡ್‌ಬ್ಯಾಂಡ್ ಮಿಷನ್ ಟ್ವೀಟ್‌ನಲ್ಲಿ ಬರೆದು ನಂತರ ಆ ಟ್ವಿಟ್‌ ಅನ್ನು ಡಿಲೀಟ್‌ ಮಾಡಲಾಗಿದೆ. ಹಾಗಾದ್ರೆ ಭಾರತದಲ್ಲಿ 5G ಸೇವೆ ಇದೇ ಆಕ್ಟೋಬರ್‌ 1ಕ್ಕೆ ಪ್ರಾರಂಭವಾಗಲಿದೆಯಾ ? ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಮೋದಿ

ಇಂಡಿಯಾ ಮೊಬೈಲ್ ಕಾಂಗ್ರೆಸ್ (IMC) ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ 5G ಸೇವೆಯನ್ನು ಪ್ರಾರಂಭಿಸಲಿದ್ದಾರೆ ಎಂದು ಹೇಳಲಾಗಿದೆ. ಇಂಡಿಯಾ ಮೊಬೈಲ್‌ ಕಾಂಗ್ರೆಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ದೂರಸಂಪರ್ಕ ಇಲಾಖೆ, ಸಂವಹನ ಸಚಿವಾಲಯ ಮತ್ತು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ​​ಆಫ್ ಇಂಡಿಯಾ (COAI) ಜಂಟಿಯಾಗಿ ನಡೆಸುವ ವಾರ್ಷಿಕ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ ಎಂದು ಹೇಳಿದೆ. ಈ ಮಾಹಿತಿಯ ಪ್ರಕಾರ ಅದೇ ದಿನದಂದು ದೇಶದಲ್ಲಿ 5G ಸೇವೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ.

ಭಾರತದಲ್ಲಿ

ಭಾರತದಲ್ಲಿ ಪ್ರಧಾನಿ ಮೋದಿ ಅಧಿಕೃತವಾಗಿ 5G ಸೇವೆಯನ್ನು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಟೆಲಿಕಾಂ ಕಂಪೆನಿಗಳು ದೇಶದ ಪ್ರಮುಖ ನಗರಗಳಲ್ಲಿ 5G ಸೇವೆಗಳನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಈಗಾಗಲೇ ಜಿಯೋ, ಏರ್‌ಟೆಲ್‌ ಟೆಲಿಕಾಂಗಳು 5G ಸೇವೆ ಪರಿಚಯಿಸುವುದಕ್ಕಾಗಿ ಮುಂಚೂಣಿಯಲ್ಲಿ ಹೆಜ್ಜೆ ಹಾಕುತ್ತಿವೆ. ಆದರೆ ದೇಶದಲ್ಲಿ ಯಾವ ಟೆಲಿಕಾಂ ಮೊದಲು 5G ಸೇವೆ ಪರಿಚಯಿಸಲಿದೆ ಅನ್ನೊದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಗಲಿದೆ.

ಭಾರತದಲ್ಲಿ ಜಿಯೋ 5G ಸೇವೆಗಳು

ಭಾರತದಲ್ಲಿ ಜಿಯೋ 5G ಸೇವೆಗಳು

ಜಿಯೋ ಕಂಪೆನಿ ಈಗಾಗಲೇ ಭಾರತದಲ್ಲಿ ತನ್ನ 5G ಸೇವೆಗಳ ರೋಲ್ ಔಟ್ ವೇಳಾಪಟ್ಟಿಯನ್ನು ಹಂಚಿಕೊಂಡಿದೆ. ಇತ್ತೀಚಿಗೆ ನಡೆದ ರಿಲಯನ್ಸ್ ಇಂಡಸ್ಟ್ರೀಸ್‌ ಲಿಮಿಟೆಡ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಇದರ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಅದರಲ್ಲೂ ಜಿಯೋ ಕಂಪನಿಯ ಅಧ್ಯಕ್ಷ ಮುಕೇಶ್ ಅಂಬಾನಿ ಭಾರತದಲ್ಲಿ ದೀಪಾವಳಿ ಹಬ್ಬದ ನಂತರ ಅಂದರೆ ಅಕ್ಟೋಬರ್ 24 ರಿಂದ ಜಿಯೋ ತನ್ನ 5G ಸೇವೆಗಳನ್ನು ಪ್ರಾರಂಭಿಸಲಿದೆ ಎಂದು ಹೇಳಿದ್ದಾರೆ.

ಜಿಯೋ

ಇನ್ನು ಜಿಯೋ ಅಕ್ಟೋಬರ್ 24 ರಂದು 5G ಸೇವೆಯನ್ನು ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಸೇರಿದಂತೆ ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಮಾತ್ರ ಪ್ರಾರಂಭಿಸಲಿದೆ. ನಂತರದ ದಿನಗಳಲ್ಲಿ ತನ್ನ 5G ನೆಟ್‌ವರ್ಕ್ ಅನ್ನು ದೇಶದ ಇತರ ನಗರಗಳಿಗೆ ವಿಸ್ತರಿಸಲಿದೆ. ಇದಲ್ಲದೆ ಡಿಸೆಂಬರ್ 2023 ರೊಳಗೆ ಇಡೀ ದೇಶದಾದ್ಯಂತ ಜಿಯೋ 5G ಸೇವೆಯನ್ನು ಪ್ರಾರಂಬಿಸಲಿದೆ ಎಂದು ಹೇಳಲಾಗಿದೆ.

ಏರ್‌ಟೆಲ್‌ 5G ಸೇವೆ

ಏರ್‌ಟೆಲ್‌ 5G ಸೇವೆ

ಇನ್ನು ಏರ್‌ಟೆಲ್‌ ಕಂಪೆನಿ ಸೆಪ್ಟೆಂಬರ್‌ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ 5G ಸೇವೆಗಳನ್ನು ಪ್ರಾರಂಭಿಸುವುದಾಗಿ ಹೇಳಿದೆ. ಅಲ್ಲದೆ ಇದೇ ವರ್ಷದ ಡಿಸೆಂಬರ್ ವೇಳೆಗೆ, ದೇಶದ ಪ್ರಮುಖ ಮಹಾನಗರಗಳಲ್ಲಿ 5G ನೆಟ್‌ವರ್ಕ್‌ ಸೇವೆಯನ್ನು ವಿಸ್ತರಿಸಲಿದೆ. ಇದಲ್ಲದೆ ಏರ್‌ಟೆಲ್‌ ಭಾರತದಲ್ಲಿ ತನ್ನ 5G ಸೇವೆಗಳನ್ನು ಡಿಸೆಂಬರ್ 2023 ರ ವೇಳೆಗೆ ದೇಶದ ಎಲ್ಲಾ ನಗರ ಭಾಗಗಳಲ್ಲಿ ಪರಿಚಯಿಸಲಿದೆ. ಜೊತೆಗೆ 2024ರ ಮಾರ್ಚ್ ವೇಳೆಗೆ ದೇಶದ ಎಲ್ಲಾ ವಲಯಗಳಲ್ಲಿಯೂ 5G ಸೇವೆ ಪರಿಚಯಿಸುವುದಾಗಿ ಏರ್‌ಟೆಲ್‌ ಟೆಲಿಕಾಂ ಹೇಳಿಕೊಂಡಿದೆ.

Best Mobiles in India

Read more about:
English summary
Prime Minister Modi to launch 5G services in India during IMC: Report

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X