ಟ್ವೀಟರ್‌ನಲ್ಲಿ ಆರ್‌ಬಿಐ ಖಾತೆ ತೆರೆಯಲು ರಾಜನ್ ಚಿಂತನೆ

Written By:

ರಿಸರ್ವ್ ಬ್ಯಾಂಕ್‌ನ ಗವರ್ನರ್ ಆಗಿ ನೇಮಕವಾದ ಬಳಿಕ ದೇಶದ ಅರ್ಥವ್ಯವಸ್ಥೆಯನ್ನು ಬಲಪಡಿಸಲು ಯತ್ನಿಸುತ್ತಿರುವ ರಘುರಾಮ್‌ ರಾಜನ್‌, ಈಗ ಆರ್‌‌ಬಿಐಗೆ ಸಂಬಂಧಿಸಿದ ಸುದ್ದಿಗಳು ಜನರಿಗೆ ಸುಲಭವಾಗಿ ತಲುಪುವಂತಾಗಲು ಸೋಶಿಯಲ್‌ ಮೀಡಿಯಾವನ್ನು ಬಳಸಲು ಮುಂದಾಗುತ್ತಿದ್ದಾರೆ.ಈ ಸಂಬಂಧ ಆರ್‌ಬಿಐ ಹೆಸರಿನಲ್ಲಿ ಟ್ವೀಟರ್ ಖಾತೆ ತೆರೆಯಲು ರಾಜನ್‌ ಚಿಂತಿಸಿದ್ದಾರೆ.

ಈ ಹಿಂದೆ ಆರ್‌ಬಿಐ ಫೇಸ್‌ಬುಕ್‌ನಲ್ಲಿ ಲೈಕ್‌ ಪಡೆದುಕೊಳ್ಳುವ ಸಂಸ್ಥೆಯಲ್ಲ ಎಂದು ರಘುರಾಮ್‌ ರಾಜನ್‌ ಹೇಳಿದ್ದರು. ಹೀಗಾಗಿ ಫೇಸ್‌ಬುಕ್‌ ಬದಲಾಗಿ ಜನರೊಂದಿಗೆ ಸುಲಭವಾಗಿ ಸಂವಹನ ಮಾಡಲು ಟ್ವೀಟರ್‌ ಉತ್ತಮ ವೇದಿಕೆ ಎನ್ನುವ ಕಾರಣಕ್ಕೆ ಟ್ವೀಟರ್‌ನತ್ತ ಗವರ್ನರ್‌ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

 ಟ್ವೀಟರ್‌ನಲ್ಲಿ ಆರ್‌ಬಿಐ ಖಾತೆ ತೆರೆಯಲು ರಾಜನ್ ಚಿಂತನೆ

ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್‌ ಕಳೆದ ವರ್ಷದ ಮಾರ್ಚ್‌ನಲ್ಲಿ ಟ್ವೀಟರ್‌ ಖಾತೆ ತೆರದಿದ್ದು, ಬ್ಯಾಂಕಿಗೆ ಸಂಬಂಧಿಸಿದ ಮಾಹಿತಿಯನ್ನು ಜನರಿಗೆ ತಿಳಿಸುತ್ತಿದೆ. ರಾಘುರಾಮ್‌ ರಾಜನ್‌ರಿಗೆ ಇದೇ ಪ್ರೇರಣೆಯಾಗಿದೆ ಎನ್ನಲಾಗಿದೆ.

ಈಗಾಲೇ ಕೇಂದ್ರ ಸರ್ಕಾರದ ಅನೇಕ ಸಚಿವಾಲಯಗಳು ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿದ್ದು ಟ್ವೀಟರ್‌ ಮತ್ತು ಫೇಸ್‌ಬುಕ್‌ ಮೂಲಕ ಜನರಿಗೆ ಮಾಹಿತಿ ನೀಡುತ್ತಿದೆ.ಇದು ಸಹ ರಾಜನ್‌ ಮತ್ತು ಆರ್‌ಬಿಐ ಅಧಿಕಾರಿಗಳಿಗೆ ಪ್ರೇರಣೆಯಾಗಿದೆ ಎಂದು ಹೇಳಲಾಗುತ್ತಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot