Subscribe to Gizbot

ನೂತನ "ಜಿಯೋ ಫ್ಲೈಟ್" ಆಫರ್ ನೀಡಿದ ಅಂಬಾನಿ!! ಏನಿದು?

Written By:

ಜಿಯೋ ನೀಡಿರುವ ಈ ಆಫರ್ ಬಗ್ಗೆ ನೀವು ತಿಳಿದರೆ, ಏನ್ರಿ ಇದು ಟೆಲಿಕಾಂನವರು ಈ ತರನೂ ಆಫರ್ ಬಿಡ್ತಾರಾ ಎಂದು ತಲೆಕೆಡಿಸಿಕೊಳ್ಳುತ್ತೀರಾ.! ಹೌದು, ಟೆಲಿಕಾಂನಲ್ಲಿಯೇ ಯಾರು ನೀಡದ ಆಫರ್ ಒಂದನ್ನು ಮುಖೇಶ್ ಅಂಬಾನಿ ನೀಡಿದ್ದಾರೆ.!!

ರಿಲಾಯನ್ಸ್ ಜಿಯೋ ಬಳಕೆದಾರರಿಗೆ ಇದು ಮತ್ತೊಂದು ಸಂತಸದ ಸುದ್ದಿಯಾಗಿದ್ದು, ವಿಮಾನಪ್ರಯಾಣಿಕರು ಜಿಯೋ ಸಿಮ್ ಹೊಂದಿದ್ದರೆ ಏರ್‌ ಏಷ್ಯಾ ಕಂಪೆನಿಯಿಂದ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಯಾನಕ್ಕೆ ರಿಯಾಯಿತಿ ಪಡೆಯಬಹುದಾಗಿದೆ.!!

ನೂತನ

ಓದಿರಿ: ಏಪ್ರಿಲ್ 15ರ ನಂತರವೂ ಜಿಯೋ ಉಚಿತ ಸೇವೆ ಕೊನೆಯಾಗಿಲ್ಲ ಏಕೆ?

ವರದಿಯ ಪ್ರಕಾರ, ಜಿಯೋ ಬಳಕೆದಾರರು ವಿಮಾನಪ್ರಯಾಣಕ್ಕೆ ಜೂನ್ 20ರಿಂದ ಸೆಪ್ಟೆಂಬರ್ 30ರ ವರೆಗೂ ಏರ್‌ ಏಷ್ಯಾ ಕಂಪೆನಿಯ ಮೊಬೈಲ್ ಅಪ್ಲಿಕೇಷನ್ ಮೂಲಕ ರಿಯಾಯಿತಿ ದರದಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ. ಈ ಮೂಲಕ ಜಿಯೋ ಬಳಕೆದಾರರು ಪ್ರತಿ ಟೆಕೆಟ್‌ಗೆ 15% ಡಿಸ್ಕೌಂಟ್ಸ್ ಪಡೆಯಬಹುದಾಗಿದೆ.!!

ನೂತನ

ಉಚಿತ ಕರೆ ಮತ್ತು ಡೇಟಾ ಜೊತೆಯಲ್ಲಿ ಇನ್ನು ಹೆಚ್ಚಿನ ಕೊಡುಗೆಗಳನ್ನು ನೀಡುವುದಾಗಿ ಅಂಬಾನಿ ಈ ಮೊದಲೇ ಘೋಷಿಸಿದ್ದರು. ಅದರಂತೆ ಇದೀಗ ವಿಮಾನಯಾನದಲ್ಲಿಯೂ ಆಫರ್ ನೀಡುವ ಮೂಲಕ ಜಿಯೋವಿನ ಹೊಸ ಆಫರ್‌ಗೆ ನಾಂದಿ ಹಾಡಿದ್ದಾರೆ.

English summary
Reliance Jio subscribers will now be able to get 15% discount on AirAsia tickets. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot