ಹೊಸ ಅಪ್ಡೇಟ್‌ ಪರಿಚಯಿಸಿದ ಜಿಯೋ ಪೇಜಸ್!..ವಿಶೇಷತೆ ಏನು?

|

ರಿಲಯನ್ಸ್ ಜಿಯೋ ತನ್ನ ಜಿಯೋ ಪೇಜಸ್ ಅಪ್ಲಿಕೇಶನ್‌ನ ಹೊಸ ಆವೃತ್ತಿ 2.0.3 ಅನ್ನು ಆಂಡ್ರಾಯ್ಡ್‌ನಲ್ಲಿ ಪರಿಚಯಿಸಿದೆ. ಈ ಅಪ್ಡೇಟ್‌ನಲ್ಲಿ ಹೊಸ ಭಾಷೆಗಳು ಮತ್ತು ಹೆಚ್ಚಿನ ರಸಪ್ರಶ್ನೆಗಳು ಸೇರಿದಂತೆ ಹಲವಾರು ಹೊಸ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇಲ್ಲಿಯವರೆಗೆ, ಜಿಯೋ ಪೇಜಸ್ ಬಳಕೆದಾರರು ಒಟ್ಟು 12 ಭಾಷೆಗಳಲ್ಲಿ ವಿಷಯವನ್ನು ಬ್ರೌಸ್ ಮಾಡಬಹುದು ಮತ್ತು ಇಂಗ್ಲಿಷ್ ಮತ್ತು 11 ಪ್ರಾದೇಶಿಕ ಭಾಷೆಗಳಾದ ಹಿಂದಿ, ಗುಜರಾತಿ, ಮರಾಠಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಬಂಗಾಳಿ ಭಾಷೆಗಳನ್ನು ಒಳಗೊಂಡಿತ್ತು. ಆದರೆ ಈಗ, ಕಂಪನಿಯು ಇನ್ನೂ ಮೂರು ಭಾರತೀಯ ಭಾಷೆಗಳಿಗೆ ಪ್ಲಾಟ್‌ಫಾರ್ಮ್‌ಗೆ ಬೆಂಬಲವನ್ನು ಸೇರಿಸಿದೆ.

ಜಿಯೋ ಪೇಜಸ್

ಹೌದು, ಜಿಯೋ ಪೇಜಸ್‌ ತನ್ನ ಹೊಸ ಅಪ್ಡೇಟ್‌ ಅನ್ನು ಪರಿಚಯಿಸಿದೆ. ಈ ಅಪ್ಡೇಟ್‌ ಮೂಲಕ ಭಾರತದ ಮೂರು ಹೊಸ ಭಾಷೆಗಳಿಗೆ ಈ ಪ್ಲಾಟ್‌ಫಾರ್ಮ್‌ ಬೆಂಬಲಿಸಲಿದೆ. ಇದರಲ್ಲಿ ಅಸ್ಸಾಮೀಸ್, ಒಡಿಯಾ ಮತ್ತು ಪಂಜಾಬಿ ಭಾಷೆಗಳು ಸೇರಿವೆ. ಇನ್ನುಳಿದಂತೆ ಈ ಹೊಸ ಅಪ್ಡೇಟ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ಗಳನ್ನು ಪರಿಚಯಿಸಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪೇಜಸ್‌

ಜಿಯೋ ಪೇಜಸ್‌ ಅಪ್ಲಿಕೇಶನ್‌ ಹೊಸ ಅಪ್ಡೇಟ್‌ನಲ್ಲಿ ಹೆಚ್ಚಿನ ಭಾಷೆಗಳಿಗೆ ಬೆಂಬಲದ ಹೊರತಾಗಿ, ಹೊಸ ಗೇಮ್ಸ್‌ ಮತ್ತು ರಸಪ್ರಶ್ನೆಗಳಿಗೆ ಸಹ ಅವಕಾಶವನ್ನು ನೀಡಿದೆ. ಇದಲ್ಲದೆ ಬಳಕೆದಾರರು ಈಗ ಇತಿಹಾಸ, ರಾಜಕೀಯ, ಜಿಕೆ, ಮಠ, ಮತ್ತು ಐಪಿಎಲ್ ನಂತಹ 16 ಕ್ಕೂ ಹೆಚ್ಚು ವಿಭಾಗಗಳಿಂದ ರಸಪ್ರಶ್ನೆಗಳನ್ನು ಆಡಬಹುದು. ಇನ್ನು ಈ ಅಪ್ಲಿಕೇಶನ್‌ನಲ್ಲಿ ಭಾಷೆಯ ಆದ್ಯತೆಯನ್ನು ಬದಲಾಯಿಸಲು, ಜಿಯೋ ಅಪ್ಲಿಕೇಶನ್‌ ಮೆನು> ಸೆಟ್ಟಿಂಗ್ಸ್‌> ಆದ್ಯತೆ> ಅಪ್ಲಿಕೇಶನ್ ಭಾಷೆಯನ್ನು ಆರಿಸಿ> ನಿಮ್ಮ ಆದ್ಯತೆಯ ಭಾಷೆಯನ್ನು ಆರಿಸಿ. ಈ ಮೂಲಕ ಭಾಷೆಗಳನ್ನು ಆಯ್ಕೆ ಮಾಡಬಹುದಾಗಿದೆ.

ರಿಲಯನ್ಸ್

ಈ ಅಪ್‌ಡೇಟ್‌ನೊಂದಿಗೆ ರಿಲಯನ್ಸ್ ಜಿಯೋ ಜಿಯೋ ಪೇಜಸ್ ಅಪ್ಲಿಕೇಶನ್‌ನಲ್ಲಿ ರೀಡರ್ ಮೋಡ್ ಅನ್ನು ಪರಿಚಯಿಸಿದೆ. ಈ ಫೀಚರ್ಸ್‌ ಒಟ್ಟಾರೆ ವೀಕ್ಷಣೆಯನ್ನು ಸರಳಗೊಳಿಸುತ್ತದೆ ಮತ್ತು ಫಾಂಟ್‌ಗಳನ್ನು ದೊಡ್ಡದಾಗಿಸುತ್ತದೆ. ಇದು ವೆಬ್ ಪುಟಗಳಿಂದ ಎಲ್ಲ ಗೊಂದಲಗಳನ್ನು ಸಹ ತೆಗೆದುಹಾಕುತ್ತದೆ. ಅಲ್ಲದೆ ಬಳಕೆದಾರರು ಪಠ್ಯದ ಬಣ್ಣ, ಆರಾಮದಾಯಕ ಓದುವ ಅನುಭವಕ್ಕಾಗಿ ಫಾಂಟ್ ಗಾತ್ರವನ್ನು ಬದಲಾಯಿಸಲು ಸೆಟ್ಟಿಂಗ್‌ಗಳ ಆಯ್ಕೆಗಳನ್ನು ಪಡೆಯುತ್ತಾರೆ.

ಪೇಜಸ್‌

ಇದಲ್ಲದೆ ಜಿಯೋ ಪೇಜಸ್‌ ಹೊಸ ಆಫ್‌ಲೈನ್ ವೀಕ್ಷಣೆ ಮೋಡ್ ಅನ್ನು ಸಹ ಪ್ರಾರಂಭಿಸಿದೆ. ಇದು ವೆಬ್‌ಪುಟಗಳನ್ನು ಪಿಡಿಎಫ್ ಅಥವಾ ಪ್ರಿಂಟ್‌ ಆಗಿ ಉಳಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಬಳಕೆದಾರರು ತಮ್ಮ ಆಯ್ಕೆಯ ವೆಬ್‌ಪುಟವನ್ನು ಪಿಡಿಎಫ್ ಆಗಿ ಸೇವ್‌ ಮಾಡಬಹುದಾಗಿದೆ. ಬಳಕೆದಾರರು ತಮ್ಮ ಪ್ರಿಂಟರ್‌ ಕನೆಕ್ಟ್‌ ಮಾಡುವ ಮೂಲಕ ಯಾವುದೇ ವೆಬ್‌ಪುಟವನ್ನು JioPages ನಿಂದ ಪ್ರಿಂಟ್‌ ಮಾಡಬಹುದು. ಈ ಫೀಚರ್ಸ್‌ ಅನ್ನು ಬಳಸಲು ಈ ಹಂತಗಳನ್ನು ಅನುಸರಿಸಿ: ನಿಮ್ಮ ಆಯ್ಕೆಯ ವೆಬ್‌ಪುಟಕ್ಕೆ ಹೋಗಿ> ಕೆಳಗಿನ ಮೆನುಗೆ ಹೋಗಿ> ‘ಪಿಡಿಎಫ್ / ಪ್ರಿಂಟ್' ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

Best Mobiles in India

Read more about:
English summary
Reliance Jio on rolled out the version 2.0.3 of its JioPages app on Android.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X